Tag: ಜಗಳೂರು

Home ಜಗಳೂರು

ವಾಲ್ಮೀಕಿ ಜಾತ್ರಾ ಸಮಿತಿ ಅಧ್ಯಕ್ಷರಾಗಿ ಜಗಳೂರು ಶಾಸಕ ಬಿ. ದೇವೇಂದ್ರಪ್ಪ

ಜಗಳೂರು : ರಾಜನಹಳ್ಳಿಯ ವಾಲ್ಮೀಕಿ ಗುರುಪೀಠದಲ್ಲಿ 2025ರ ಫೆಬ್ರವರಿ 8 ಮತ್ತು 9 ರಂದು ಜರುಗಲಿರುವ 7ನೇ ವರ್ಷದ ವಾಲ್ಮೀಕಿ ಜಾತ್ರೆಯ ಜಾತ್ರಾ ಸಮಿತಿ ಅಧ್ಯಕ್ಷರನ್ನಾಗಿ ಜಗಳೂರು ಶಾಸಕ ಚಿಕ್ಕಮ್ಮನಹಟ್ಟಿ ಬಿ. ದೇವೇಂದ್ರಪ್ಪ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ.

ಅಧಿಕಾರಿಗಳ ತಪ್ಪಿಗೆ ಸಾರ್ವಜನಿಕರಿಗೆ ಏಕೆ ಶಿಕ್ಷೆ ?

ಜಗಳೂರು : ರಾಜ್ಯಾದ್ಯಂತ ಹಲವು ವರ್ಷಗಳಿಂದ ಇ-ಖಾತಾ ಸಮಸ್ಯೆ ಸಾರ್ವಜನಿಕರನ್ನು ಕಾಡುತ್ತಿದೆ. ಗ್ರಾಮೀಣ ಪ್ರದೇಶದ ಈ ಖಾತಾ ಸಮಸ್ಯೆ ಒಂದು ತರಹದ್ದಾದರೆ, ಪಟ್ಟಣ ಪ್ರದೇಶದ ನಿವೇಶನಗಳ ಇ-ಖಾತಾ ಸಮಸ್ಯೆಯೇ ಮತ್ತೊಂದು ರೀತಿಯದ್ದಾಗಿದೆ.

ಜಗಳೂರು : ಡ್ರೋನ್ ಬಳಸಿ ಔಷಧಿ ಸಿಂಪಡಿಸಿದರೆ ಉತ್ಪಾದನಾ ವೆಚ್ಚ ಕಡಿಮೆ

ಜಗಳೂರು : ತಾಲ್ಲೂಕಿನಲ್ಲಿ ಪ್ರಸ್ತುತ ಸಾಲಿನಲ್ಲಿ 6,900 ಹೆಕ್ಟೇರ್‌ ಕಡಲೆ ಬೆಳೆಯ ವಿಸ್ತೀರ್ಣವಿದ್ದು, ಇದಕ್ಕೆ ಡ್ರೋನ್‌ ಮೂಲಕ ಔಷಧ ಸಿಂಪಡಣೆ ಮಾಡಿದರೆ ಸಮಯ ಮತ್ತು ನೀರಿನ ಉಳಿತಾಯ ಮಾಡುವ ಜತೆಗೆ ಕಡಿಮೆ ಶ್ರಮ ವಿನಿಯೋಗಿಸಬಹುದು

ಈರುಳ್ಳಿ ಬೆಲೆ ಹೆಚ್ಚುವ ಸಾಧ್ಯತೆ

ಜಗಳೂರು : ಪ್ರಾಕೃತಿಕ ವಿಕೋಪದಿಂದ ಈ ವರ್ಷ ಈರುಳ್ಳಿ ಬೆಳೆಯ ಬೆಲೆ ಹೆಚ್ಚುವ ಸಾಧ್ಯತೆಯಿದೆ ಎಂದು ಐಸಿಎಆರ್-ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ತೋಟಗಾರಿಕೆ ವಿಜ್ಞಾನಿ ಎಂ.ಜಿ. ಬಸವನಗೌಡ ಅಭಿಪ್ರಾಯಪಟ್ಟರು.

ಗ್ರಾಮಗಳಿಗೆ ಭೇಟಿ ನೀಡಿದ ಜಿಲ್ಲಾಡಳಿತ : ಗ್ರಾಮಸ್ಥರ ಸಮಸ್ಯೆಗಳಿಗೆ ಪರಿಹಾರ

ಜಗಳೂರು : ಸಂಸದರಾದ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರ ಸೂಚನೆ ಮೇರೆಗೆ ದಾವಣಗೆರೆ ಜಿಲ್ಲಾಡಳಿತ ಜಗಳೂರು ತಾಲ್ಲೂಕಿನ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಗ್ರಾಮಸ್ಥರ ಸಮಸ್ಯೆಗಳಿಗೆ ಪರಿಹಾರ ನೀಡಿತು.

ಜಗಳೂರು : ತೆರಿಗೆ ಬಾಕಿ ಉಳಿಸಿ ಕೊಂಡವರ ವಿರುದ್ದ ಕ್ರಮಕ್ಕೆ ಸೂಚನೆ

ಜಗಳೂರು : ಪಟ್ಟಣದಲ್ಲಿ ತಾಲ್ಲೂಕು ಪಂಚಾಯಿತಿಯ 29 ಮಳಿಗೆಗಳಿದ್ದು ತೆರಿಗೆ ಕಟ್ಟದೇ ಮೂರು ಬಾರಿ ನೋಟಿಸ್ ನೀಡಿದರೂ ಬಾಕಿ ಉಳಿಸಿಕೊಂಡಿರುವ ಮಾಲೀಕರಿಗೆ ತಕ್ಷಣವೇ ಪೊಲೀಸ್ ಮತ್ತು ತಹಶೀಲ್ದಾರ್ ಅವರ ನೆರವು ಪಡೆದು ಮಳಿಗೆ ಮಾಲೀಕರ ಅಂಗಡಿಗಳನ್ನು ಬಂದ್ ಮಾಡಿಸಿ. ಸ್ಥಳದಲ್ಲೇ ತೆರಿಗೆ ಕಟ್ಟಿದವರನ್ನು ಬಿಟ್ಟು ಉಳಿದವರನ್ನು ಖಾಲಿ ಮಾಡಿಸಿ.

ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ, ಜಲೋತ್ಸವ ಕಾರ್ಯಕ್ರಮದ ಯಶಸ್ಸಿಗೆ ಕೈಜೋಡಿಸಲು ಕರೆ

ಜಗಳೂರು : ಬರುವ ಜನವರಿ 11, 12, 13ರಂದು ಪಟ್ಟಣದಲ್ಲಿ ಮೂರು ದಿನಗಳ ಕಾಲ ನಡೆಯಲಿರುವ ಜಿಲ್ಲಾ ಸಾಹಿತ್ಯ ಸಮ್ಮೇಳನ‌ ಹಾಗೂ ಜಲೋತ್ಸವ ಕಾರ್ಯಕ್ರಮದ ಯಶಸ್ಸಿಗೆ ಎಲ್ಲರೂ ಸ್ವಯಂ ಪ್ರೇರಿತರಾಗಿ ಕೈಜೋಡಿಸಿ, ಸಹಕರಿಸಬೇಕು

ಜಗಳೂರಿನಲ್ಲಿ ಕಮ್ಯುನಿಸ್ಟ್ ಪ್ರತಿಭಟನೆ

ಜಗಳೂರು :  ಪಟ್ಟಣದ ತಾಲ್ಲೂಕು ಕಛೇರಿ ಮುಂಭಾಗ  ಇಂದು ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ಹಾಗೂ ಕೋಮುವಾದ, ಹಿಂಸಾಚಾರ ಖಂಡಿಸಿ ಭಾರತ ಕಮ್ಯುನಿಸ್ಟ್ ಪಕ್ಷದ ಕಾರ್ಯಕರ್ತರು ತಹಶೀಲ್ದಾರ್  ಅವರ ಮುಖಾಂತರ ರಾಷ್ಟ್ರಪತಿಗೆ ಮನವಿ ಸಲ್ಲಿಸಿದರು.

ಕಳ್ಳನ ಬಂಧನ : 3.96 ಲಕ್ಷ ರೂ. ಮೌಲ್ಯದ ಸ್ವತ್ತು ವಶ

ಜಗಳೂರು : ಕಲ್ಯಾಣ ಮಂಟಪದಲ್ಲಿ ಕಳ್ಳತನ ಮಾಡುತ್ತಿದ್ದ ಓರ್ವ ಆರೋಪಿಯನ್ನು ಸೆರೆ ಹಿಡಿದ ಜಗಳೂರು ಪೊಲೀಸರು, 3.96 ಲಕ್ಷ ರೂ.ಮೌಲ್ಯದ ಸ್ವತ್ತನ್ನು ವಶ ಪಡಿಸಿಕೊಳ್ಳುವ ಜತೆಗೆ ಕಳ್ಳನನ್ನು ಬಂಧಿಸಿದ್ದಾರೆ.

ಪುಣ್ಯದ ಕೆಲಸಗಳಿಂದ ಜೀವನ ಸಾರ್ಥಕ : ಮಲ್ಲಿಕಾರ್ಜುನ ಶ್ರೀ

ಜಗಳೂರು : ಪಂಚಭೂತಗಳಿಂದ ರಚಿತವಾದ ದೇಹ, ಜೀವ, ತೊರೆದ ಮೇಲೆ ಅದೇ ಪಂಚಭೂತಗಳಲ್ಲಿ ವಿಲೀನವಾಗಲಿದೆ. ಮನುಷ್ಯ ಜೀವನ ಸಾರ್ಥಕ ಗೊಳಿಸಲು ಇದ್ದಾಗಲೇ ಪುಣ್ಯದ ಕೆಲಸ ಮಾಡಿ ಎಂದು ಬೆಂಗಳೂರು ಸರ್ಪ ಭೂಷಣ ಮಠದ ಪೀಠಾಧ್ಯಕ್ಷರು ಶ್ರೀ ಮಲ್ಲಿಕಾರ್ಜುನ ದೇವರು ಹೇಳಿದರು.

ಅನುದಾನ ತಾರತಮ್ಯಕ್ಕೆ ಆಕ್ಷೇಪ : ಸಭೆ ಮುಂದಕ್ಕೆ

ಜಗಳೂರು : ವಾರ್ಡ್‌ ಅಭಿವೃದ್ಧಿಗೆ ಅನುದಾನ ನೀಡುವಲ್ಲಿ  ತಾರತಮ್ಯ  ಮಾಡಲಾಗಿದೆ ಎಂದು ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದ್ದರಿಂದ‌ ಪಟ್ಟಣ ಪಂಚಾಯಿತಿಯಲ್ಲಿ ಇಂದು ನಡೆಯಬೇಕಿದ್ದ  ಸಾಮಾನ್ಯ ಸಭೆ ಸದಸ್ಯರ ವಾಗ್ವಾದ, ಗೊಂದಲದಿಂದ ಮುಂದೂಡಲಾಯಿತು.

error: Content is protected !!