ಉಚಿತ ಶಿಕ್ಷಣ ಮತ್ತು ಆರೋಗ್ಯ ಬಡಜನರ ಸುಸ್ಥಿರ ಅಭಿವೃದ್ಧಿಗೆ ಪೂರಕ
ಇತ್ತೀಚಿನ ದಿನಗಳಲ್ಲಿ ಬಡ ಕುಟುಂಬಗಳ ಉಳಿತಾಯ ಕಡಿಮೆಯಾಗಿ, ಸಾಲಗಳು ದುಪ್ಪಟ್ಟಾಗುತ್ತಿವೆ. ದುಡಿದ ಹಣದಲ್ಲಿ ಹೆಚ್ಚು ಆರೋಗ್ಯ ಮತ್ತು ಶಿಕ್ಷಣಕ್ಕೆ ಖರ್ಚು ಮಾಡಬೇಕಾಗುತ್ತಿದೆ.
ಇತ್ತೀಚಿನ ದಿನಗಳಲ್ಲಿ ಬಡ ಕುಟುಂಬಗಳ ಉಳಿತಾಯ ಕಡಿಮೆಯಾಗಿ, ಸಾಲಗಳು ದುಪ್ಪಟ್ಟಾಗುತ್ತಿವೆ. ದುಡಿದ ಹಣದಲ್ಲಿ ಹೆಚ್ಚು ಆರೋಗ್ಯ ಮತ್ತು ಶಿಕ್ಷಣಕ್ಕೆ ಖರ್ಚು ಮಾಡಬೇಕಾಗುತ್ತಿದೆ.
ಚಿತ್ರದುರ್ಗ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಲ್ಲಿ 65 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಒಟ್ಟು ಆರು ದರ್ಜೆಯ ಎಲ್ಲಾ ಹುದ್ದೆಗಳಿಗೂ ದುಬಾರಿ ಶುಲ್ಕ ವಿಧಿಸಿರುವುದು ಸರಿಯಲ್ಲ.
ಕನ್ನಡ-ಕನ್ನಡಿಗ-ಕರ್ನಾಟಕ ಇವುಗಳಿಗೆ ಸಂಬಂಧಿಸಿದಂತೆ ಜಲ ಸಂಪನ್ಮೂಲದ ಬಳಕೆ, ವಿದ್ಯುಚ್ಛಕ್ತಿಯ ಉತ್ಪಾದನೆ ಮತ್ತು ಬಳಕೆ, ಶಿಕ್ಷಣದ ಭಾಷೆ ಮತ್ತು ಬುದ್ಧಿವಂತಿಕೆ, ಉದ್ಯೋಗ ವ್ಯವಸ್ಥೆಗಳು ಮುಂತಾಗಿ ಎಲ್ಲಾ ಕ್ಷೇತ್ರಗಳಲ್ಲೂ ಕನ್ನಡಿಗರಿಗೆ ಆಗುತ್ತಿರುವ ಅನ್ಯಾಯಗಳ ಸರಪಳಿಗೆ ಸಂಬಂಧಿಸಿದ ಕೆಲವು ವಿಚಾರಗಳನ್ನು ನಿಮ್ಮ ತೀವ್ರ ಅವಗಾಹನೆಗೆಂದು ತಿಳಿಸಲಿಚ್ಚಿಸುತ್ತೇನೆ.
ಇಂದಿನ ಯಾಂತ್ರಿಕ ಜೀವನದಲ್ಲಿನ ಜಂಜಾಟದಲ್ಲಿ ಮಹಾ ನಗರಗಳಲ್ಲಿ ಗಂಡ-ಹೆಂಡತಿಯರಿಬ್ಬರೂ ಒಟ್ಟಿಗೆ ದುಡಿದು ಸಂಸಾರ ಸಾಗಿಸುವ ಕಾಲವಿದು. ಅವರು ತಮ್ಮ ಮಕ್ಕಳನ್ನು ಸಾಕಲು ಮನೆಯ ಕೆಲಸ ಮಾಡಲು ಸಹಾಯಕರನ್ನು ಇಟ್ಟುಕೊಂಡು ಕುಟುಂಬವನ್ನು ನಿರ್ವಹಿಸಬೇಕು.
ದಾವಣಗೆರೆ ನಗರದ ಎಂಸಿಸಿ ಎ ಬ್ಲಾಕ್ನ ಖಾಲಿ ನಿವೇಶನದಲ್ಲಿ ಭಾರೀ ಕಸದ ರಾಶಿ ಬಿದ್ದಿದೆ. ಆದರೂ ಪಾಲಿಕೆ ಸಿಬ್ಬಂದಿ ಸ್ವಚ್ಛತಾ ಕ್ರಮ ತೆಗೆದುಕೊಂಡಿಲ್ಲ.
ಹೊಸ ಮದ್ಯದ ಅಂಗಡಿಗಳನ್ನು ತೆರೆಯಲು ರಾಜ್ಯ ಸರ್ಕಾರ ಎಲ್ಲಾ ರೀತಿಯಿಂದಲೂ ಉತ್ಸುಕವಾಗಿರುವುದು ನಿಜಕ್ಕೂ ದುರಂತ. ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳಲ್ಲಿ ಇಂದಿಗೂ ಕೂಡ ಮದ್ಯ ವ್ಯಸನಿಗಳು ಹೆಚ್ಚಾಗಿ, ಕುಟುಂಬವನ್ನು ನಿರ್ವಹಿಸಲಾರದಷ್ಟು ದುಸ್ಥಿತಿಗೆ ತಲುಪಿ, ಹೆಣ್ಣು ಮಕ್ಕಳಂತೂ ರೋಸಿ ಹೋಗಿದ್ದಾರೆ
ಕರ್ನಾಟಕದಲ್ಲಿ ಹಳ್ಳಿ, ನಗರ, ಪಟ್ಟಣಗಳಲ್ಲಿ ಮತ್ತೆ ಸಾವಿರ ಮದ್ಯದಂಗಡಿ? ಅಬಕಾರಿ ಇಲಾಖೆ ತಯಾರಿ. ಪ್ರಸಕ್ತ ಸಾಲಿನ ಬಜೆಟ್ ನಲ್ಲಿ ನಿಗದಿಪಡಿಸಿರುವ ಗುರಿಯನ್ನು ಮೀರಿ ವರಮಾನ ಸಂಗ್ರಹಕ್ಕೆ ಯೋಜನೆ- ಅಬಕಾರಿ ಸಚಿವರ ಹೇಳಿಕೆ. ವರಮಾನ ಹೆಚ್ಚಿಸುವುದು ಸರ್ಕಾರದ ಕೆಲಸ ಒಳ್ಳೆಯದೇ.
ಕಳೆದೆರಡು ದಿನದ ಹಿಂದೆ ಕೆಲಸದ ಮೇಲೆ ದಾವಣಗೆರೆ ಜಿಲ್ಲಾ ಪಂಚಾಯ್ತಿ ಕಾರ್ಯಾ ಲಯಕ್ಕೆ ಬೇಟಿ ನೀಡಿದ್ದೆ – ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯವರ ಕಛೇರಿಗೆ ಹೊಂದಿಕೊಂಡಂತಿರುವ ಕಾರಿಡಾರ್ನಲ್ಲಿ, ಪುಟ್ಟದೊದು ಗ್ರಂಥ ಭಂಡಾರ ಹಾಗೂ ಕುಳಿತು ಓದಲು ನಾಲ್ಕು ಖುರ್ಚಿಗಳನ್ನು ಇಡಲಾಗಿತ್ತು.
ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಾದ ಅನ್ನಭಾಗ್ಯ, ಗೃಹಲಕ್ಷ್ಮಿ ಮುಂತಾದ ಯೋಜನೆಗಳಿಗೆ ಪಡಿತರ ಚೀಟಿ ಕಡ್ಡಾಯ ಮಾಡಿರುವುದರಿಂದ, ಸೆಪ್ಟೆಂಬರ್ ಒಂದರಿಂದ ಹತ್ತರವರೆಗೆ ಪಡಿತರ ಚೀಟಿ ತಿದ್ದುಪಡಿ ಮಾಡಲು ಅವಕಾಶ ನೀಡಲಾಗಿದೆ.
ಹೊನ್ನಾಳಿ ತಾಲ್ಲೂಕಿನ ತರಗನಹಳ್ಳಿ ಗ್ರಾಮದಲ್ಲಿದ್ದ ಸರ್ಕಾರಿ ಸ್ವಾಮ್ಯದ ಎಂಎಸ್ ಐ ಎಲ್ ಬಾರ್ ನ ಪರವಾನಗಿಯನ್ನು ರದ್ದು ಮಾಡುವಂತೆ ಗ್ರಾಮಸ್ಥರು ಪ್ರತಿಭಟನೆ ನಡೆಸಿ ಬಾರ್ಗೆ ಬೀಗ ಹಾಕುವ ಮಹತ್ವದ ನಿರ್ಣಯ ತೆಗೆದುಕೊಂಡಿರುವುದು ಶ್ಲ್ಯಾಘನೀಯ.
ದಿನನಿತ್ಯವೂ ಎಂದಿನಂತೆ ಸ್ವಾತಂತ್ರ್ಯ ದಿನಾಚರಣೆಯಂದು ಬೆಳಗಿನ ಜಾವ ವಾಕಿಂಗ್ ಹೋಗಿದ್ದ ಸಂದರ್ಭದಲ್ಲಿ, ಅಲ್ಲಿಯೇ ಸಮೀಪದಲ್ಲಿದ್ದ ಖಾಸಗಿ ಶಾಲಾ ಶಿಕ್ಷಕಿಯೊಬ್ಬರು ಹಿಂದಿಯಲ್ಲಿ ಸ್ವಾತಂತ್ರ್ಯ ದಿವಸದ ಹೋರಾಟದ ಹಿನ್ನೆಲೆಯ ಕುರಿತು ಭಾಷಣ ಮಾಡುತ್ತಿದ್ದರು.
ಬೀದಿ ನಾಯಿಗಳ ಹಾವಳಿಯಿಂದ ಸಾರ್ವಜನಿಕರು ತತ್ತರಿಸಿ ಹೋಗಿದ್ದು, ರಾತ್ರಿ ಆಯಿತೆಂದರೆ ದ್ವಿಚಕ್ರ ವಾಹನದಲ್ಲಿ ಹೋಗುವ ಸವಾರರು ನಾಯಿಗಳ ದಾಳಿಯಿಂದ ಪ್ರತಿದಿನ ಸರತಿ ಸಾಲಿನಂತೆ ಕೆಳಗೆ ಬಿದ್ದು ಆಸ್ಪತ್ರೆ ಕಡೆ ಧಾವಿಸುವುದು ಸಾಮಾನ್ಯವಾಗಿದೆ.