ಅಪಾಯಕಾರಿ ಶಬ್ಧಮಾಲಿನ್ಯ ತಡೆಗಟ್ಟಿ..!
ಶಬ್ದ ಮಾಲಿನ್ಯ ದಿನೇ ದಿನೇ ಹೆಚ್ಚುತ್ತಿದ್ದು, ಇದರಿಂದ ಜನಸಾಮಾನ್ಯರಿಗೆ ಬಹಳ ತೊಂದರೆ ಉಂಟಾಗುತ್ತಿದೆ. ಪರೀಕ್ಷಾ ಸಂದರ್ಭದಲ್ಲಿ ವಿದ್ಯಾರ್ಥಿಗಳು ಓದಿನ ಕಡೆಗೆ ಗಮನಹರಿಸಲಾಗದೆ, ಉತ್ತಮ ಅಂಕಗಳ ಪಡೆಯದೆ, ಖಿನ್ನತೆಗೆ ಒಳಗಾಗುತ್ತಿದ್ದಾರೆ.
ಶಬ್ದ ಮಾಲಿನ್ಯ ದಿನೇ ದಿನೇ ಹೆಚ್ಚುತ್ತಿದ್ದು, ಇದರಿಂದ ಜನಸಾಮಾನ್ಯರಿಗೆ ಬಹಳ ತೊಂದರೆ ಉಂಟಾಗುತ್ತಿದೆ. ಪರೀಕ್ಷಾ ಸಂದರ್ಭದಲ್ಲಿ ವಿದ್ಯಾರ್ಥಿಗಳು ಓದಿನ ಕಡೆಗೆ ಗಮನಹರಿಸಲಾಗದೆ, ಉತ್ತಮ ಅಂಕಗಳ ಪಡೆಯದೆ, ಖಿನ್ನತೆಗೆ ಒಳಗಾಗುತ್ತಿದ್ದಾರೆ.
ನಗರದ ಗಡಿಯಾರ ಕಂಬದ ಹತ್ತಿರ ಚನ್ನಗಿರಿ ವಿರೂಪಾಕ್ಷಪ್ಪ ಕಾಂಪ್ಲೆಕ್ಸ್ ಕಾರ್ನರ್ ರಸ್ತೆ ಮಧ್ಯದಲ್ಲಿ ಪೈಪ್ ಹಾಕಿರುತ್ತಾರೆ. ಇದನ್ನು ಏಕೆ ಹೀಗೆ ರಸ್ತೆ ಮಧ್ಯೆ ಹಾಕಲಾಗಿದೆ ಎಂಬುದು ಗೊತ್ತಾಗುತ್ತಿಲ್ಲ.
ಪಾನ್ ಗೆ ಆಧಾರ್ ಜೋಡಣೆ ಮಾಡಲು ಇದೇ ತಿಂಗಳ 31ರ ಒಳಗೆ 1000 ರೂಪಾಯಿ ಶುಲ್ಕ ಪಾವತಿಸಿ ನವೀಕರಣಗೊಳಿಸಬೇಕು, ಇಲ್ಲದಿದ್ದರೆ ನಿಷ್ಕ್ರಿಯಗೊಳಿಸಲಾಗುವುದು ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ರಾಜಕಾರಣಿಗಳ ಮನೆ, ಕಚೇರಿಗಳ ಮೇಲೆ ಲೋಕಾಯುಕ್ತ ದಾಳಿಯಾಗಿ ಅಪಾರ ಪ್ರಮಾಣದ ನಗದು ಸಿಕ್ಕಾಗ ಅಥವಾ ಆದಾಯ ದುಪ್ಪಟ್ಟಾಗಿದೆ ಎಂದಾಗ, ಮುನ್ನೆಲೆಗೆ ಬರುವ ವಿಷಯವೆಂದರೆ ಅದುವೇ ಕೃಷಿಯಿಂದ ಬಂದ ಆದಾಯ ಎಂಬ ಮಾತು.
`ವೃದ್ಧರಾಗಬಾರದು ನಾವು ಹಿರಿಯರಾಗಬೇಕು’ ಎಂಬ ಮಾತಿದೆ. ಈ ಮಾತು ಎಷ್ಟು ಸತ್ಯ ಅಲ್ವಾ ? ವೃದ್ಧಾಪ್ಯ ಅನೇಕ ಸಮಸ್ಯೆಗಳ ಸುಳಿಯಲ್ಲಿ ನಮ್ಮನ್ನು ಸಿಲುಕಿಸಿದರೆ, ಹಿರಿತನ ನಮ್ಮನ್ನು ಮಾದರಿ ವ್ಯಕ್ತಿಯನ್ನಾಗಿಸುತ್ತದೆ.
ಚುನಾವಣೆಗೆ ಇನ್ನೇನು ಕೆಲವೇ ತಿಂಗಳುಗಳು ಬಾಕಿ ಇರುವಂತೆಯೇ, ಎಲ್ಲಾ ರಾಜಕೀಯ ಪಕ್ಷಗಳು ಕಾಲಿಗೆ ಚಕ್ರ ಕಟ್ಟಿಕೊಂಡು, ಅಬ್ಬರದ ಪ್ರಚಾರ ನಡೆಸುತ್ತಿವೆ. ಪೈಪೋಟಿಗೆ ಬಿದ್ದಂತೆ, ಪುಕ್ಕಟೆ ಯೋಜನೆಗಳನ್ನು ಘೋಷಿಸುತ್ತಿದ್ದಾರೆ.
ದಾವಣಗೆರೆಯ ನಿಜಲಿಂಗಪ್ಪ ಬಡಾವಣೆಯ 1ನೇ ಮುಖ್ಯರಸ್ತೆಯಲ್ಲಿ ಆದ ಸ್ಮಾರ್ಟ್ ಸಿಟಿ ಯುಜಿಡಿ ಕೆಲಸದಡಿಯಲ್ಲಿ ಆದ ಮಳೆನೀರಿನ ಕಾಲುವೆ ಇದು. ಆದರೆ ಇದರಲ್ಲಿ ಹೀಗೆ ಕೊಚ್ಚೆ ಹರಿಯುತ್ತಿದೆ.
ಈ ಮುಂಚೆ ಅಶೋಕ ರಸ್ತೆಯಲ್ಲಿ ಅಂಚೆ ಕಚೇರಿ ಇತ್ತು. ನಂತರ, ಆ ಕಚೇರಿಯನ್ನು ಶ್ರೀ ಮುರುಘಾ ಮಠದ ಹಿಂದಿನ ರಸ್ತೆಗೆ ಸ್ಥಳಾಂತರ ಮಾಡಿದರು.
ಕಳೆದ ವಾರ ಅನ್ಯ ಕೆಲಸದ ನಿಮಿತ್ತ ದಾವಣಗೆರೆಯಿಂದ ಶಿವಮೊಗ್ಗಕ್ಕೆ ತೆರಳಬೇಕೆಂದು, ದಾವಣಗೆರೆಯ ಕೆಎಸ್ಆರ್ಟಿಸಿ ಬಸ್ ನಿಲ್ದಾಣಕ್ಕೆ ಸ್ವಲ್ಪ ತಡವಾಗಿಯೇ ಹೋಗಿದ್ದ ಕಾರಣ ಬಸ್‌ನ ಹಿಂಬದಿಯಲ್ಲಿ ಸೀಟು ಸಿಕ್ಕಿತು.
ಇಡೀ ಆಂಜನೇಯ ಬಡಾವಣೆ ಕಸದ ಗೂಡಾಗಿದೆ. ಎಲ್ಲಾ ರಸ್ತೆಗಳಲ್ಲೂ, ಖಾಲಿ ಇರುವ ಸೈಟ್‌ಗಳಲ್ಲೂ, ಪಾರ್ಕ್ ನಲ್ಲೂ ಕಸದ ರಾಶಿ ಬಿದ್ದಿದೆ. ಅಂಗಡಿಗಳ ಹತ್ತಿರ, ವಾಚನಾಲಯದ ಬಳಿ, ದೇವಸ್ಥಾನದ ಹತ್ತಿರವೂ ಕಸ ಎಂದರೆ ಕಸ.
ಮದ್ಯ ವ್ಯಸನಿ ಅಲ್ಲದ ಆಟೋ ಚಾಲಕ ಅಥವಾ ಕೂಲಿ ಕಾರ್ಮಿಕನು ಕೂಡ ಉತ್ತಮ ವರ. ಅಂತಹವರಿಗೆ ಹೆಣ್ಣಿನ ಪೋಷಕರು ಧಾರಾಳವಾಗಿ ಧಾರೆ ಎರೆದು ಕೊಡಬಹುದು ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿರುವ ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ರಾಜ್ಯ ಸಚಿವ ಕೌಶಲ್ ಕಿಶೋರ್ ಅವರ ಅಭಿಪ್ರಾಯ ಸರಿಯಾಗಿಯೇ ಇದೆ.
ಮದುವೆಯ ಧಿರಿಸಿನಲ್ಲಿ 50 ಮದುಮಕ್ಕಳು ಭಾಜಾ, ಭಜಂತ್ರಿ ಸಮೇತ ಕುದುರೆಗಳ ಸವಾರಿ ಮಾಡ್ತಾ ಸಾಗಿ ಬಂದದ್ದು ಸೊಲ್ಲಾಪುರ ಜಿಲ್ಲಾಧಿಕಾರಿ ಕಚೇರಿಗೆ… ನಮಗೆ ವಧುಗಳನ್ನು ಹುಡುಕಿಕೊಡಿ ಎಂದು ಕೇಳಲು… ಇದಕ್ಕೆ ಕಾರಣ ಭ್ರೂಣ ಹತ್ಯೆ ಪಿಡುಗು ನಿವಾರಣೆ ಕುರಿತು ಗಮನ ಸೆಳೆಯುವ ದೆಸೆಯಿಂದ…. ಎಂದು ಮೇಲ್ನೋಟಕ್ಕೆ ಎಂದು ನನ್ನ ಅಭಿಪ್ರಾಯ.