Category: ಸುದ್ದಿಗಳು

Home ಸುದ್ದಿಗಳು

ಹರಿಹರ ವಿಠ್ಠಲ ರುಕ್ಮಿಣಿ ದೇವಸ್ಥಾನದಲ್ಲಿ ಏಕಾದಶಿ ವಿಶೇಷ ಪೂಜೆ

ಹರಿಹರ : ಹಿರಿಯರು, ಧಾರ್ಮಿಕ ಗುರುಗಳು, ಶರಣರು ಮತ್ತು ಸಂತರು ಹೇಳಿ ಕೊಟ್ಟ ಸಂಪ್ರದಾಯ ಹಾಗೂ ಪರಂಪರೆಯನ್ನು ಮುಂದುವರೆಸಿ ಕೊಂಡು ಹೋದಾಗ ಮಾತ್ರ ಮುಂದಿನ ಯುವ ಪೀಳಿಗೆಗೆ ಸಂಸ್ಕಾರ, ಸಂಸ್ಕೃತಿ ಮತ್ತು ಆಚಾರ- ವಿಚಾರಗಳನ್ನು ತಿಳಿಯಲು ಸಹಕಾರಿಯಾಗುತ್ತದೆ

ನುಡಿ ಜಾತ್ರೆಗೆ ಮಧುವಣಗಿತ್ತಿಯಂತೆ ಸಜ್ಜಾದ ಜಗಳೂರು

ಜಗಳೂರಿನಲ್ಲಿ ಇಂದಿನಿಂದ  ಮೂರು ದಿನ ನಡೆಯಲಿರುವ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಹಾಗೂ ಜಲೋತ್ಸವ ಕಾರ್ಯಕ್ರಮಕ್ಕೆ ಝಗಮಗಿಸುತ್ತಾ ಜಗಳೂರು ಮದುವಣಗಿತ್ತಿಯಂತೆ ಶೃಂಗಾರಗೊಂಡಿದೆ.

ಏಕಾದಶಿ: ಹರಿಹರೇಶ್ವರನ ದರ್ಶನಕ್ಕೆ ಭಕ್ತರ ಸಾಲು

ಹರಿಹರ : ನಗರದ ಶ್ರೀ ಹರಿಹರೇಶ್ವರ ದೇವಸ್ಥಾನದಲ್ಲಿ ವೈಕುಂಠ ಏಕಾದಶಿ ಪ್ರಯುಕ್ತ ಬೆಳಗಿನ ಜಾವದಲ್ಲಿ ಶ್ರೀ ಹರಿಹರೇಶ್ವರ ಸ್ವಾಮಿ  ಮತ್ತು ಲಕ್ಷ್ಮೀ ದೇವಿಗೆ ವಿಶೇಷ ಅಭಿಷೇಕ, ಅಲಂಕಾರ, ನೈವೇದ್ಯ, ತುಳಸಿ ಅರ್ಚನೆ, ವಿಷ್ಣು ಸಹಸ್ರ ನಾಮ ಮಹಾಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ ನಡೆಯಿತು. 

ಭಾನುವಳ್ಳಿಯಲ್ಲಿ ಸಂಭ್ರಮದ ವೈಕುಂಠ ಏಕಾದಶಿ

ಮಲೇಬೆನ್ನೂರು : ಭಾನುವಳ್ಳಿ ಗ್ರಾಮದ ಆರಾಧ್ಯ ದೈವ ಶ್ರೀ ಲಕ್ಷ್ಮೀ ನಾರಾಯಣ ಸ್ವಾಮಿ ದೇವಸ್ಥಾನದಲ್ಲಿ ವೈಕುಂಠ ಏಕಾದಶಿ ಪ್ರಯುಕ್ತ ಮಾಡಲಾಗಿದ್ದ ವಿಶೇಷ ಪೂಜೆ, ಅಲಂಕಾರ ಭಕ್ತರ ಗಮನ ಸೆಳೆಯಿತು.

ಜಿಗಳಿಯಲ್ಲಿ ಇಂದು ಭಕ್ತರ ಸಭೆ

ಮಲೇಬೆನ್ನೂರು ಸಮೀಪದ ಜಿಗಳಿ ಗ್ರಾಮದ ಶ್ರೀ ರಂಗನಾಥ ಸ್ವಾಮಿ ದೇವಸ್ಥಾನದಲ್ಲಿ ಇಂದು ಬೆಳಿಗ್ಗೆ 10 ಗಂಟೆಗೆ ಗ್ರಾಮಸ್ಥರ ಹಾಗೂ ರಂಗನಾಥ ಸ್ವಾಮಿಯ ಸದ್ಭಕ್ತರ ಸಭೆಯನ್ನು ಕರೆಯಲಾಗಿದೆ.

ಪಲ್ಲಾಗಟ್ಟೆಯಲ್ಲಿ ನಾಳೆ ಅಯ್ಯಪ್ಪ ಸ್ವಾಮಿ ಪಡಿಪೂಜೆ, ಅನ್ನ ಸಂತರ್ಪಣೆ

ಜಗಳೂರು : ತಾಲ್ಲೂಕಿನ ಪಲ್ಲಾಗಟ್ಟೆಯ ಅಯ್ಯಪ್ಪಸ್ವಾಮಿ ಸೇವಾ ಸಮಿತಿ ವತಿಯಿಂದ 25ನೇ ವರ್ಷದ ಶಬರಿಮಲೈ ಯಾತ್ರೆ ಪ್ರಯುಕ್ತ ಅಯ್ಯಪ್ಪ ಸ್ವಾಮಿ ಪಡಿ ಪೂಜೆ ಹಾಗೂ ಅನ್ನ ಸಂತರ್ಪಣೆ ಕಾರ್ಯಕ್ರಮವನ್ನು ನಾಡಿದ್ದು ದಿನಾಂಕ 12ರ ಭಾನುವಾರ ಸಂಜೆ 6 ಗಂಟೆಗೆ ಗ್ರಾಮದ ಎಲ್‌ಐಸಿ ರಂಗಮಂದಿರದಲ್ಲಿ ನಡೆಸಲಾಗುವುದು

ಮನುಕುಲದ ಅಭಿವೃದ್ಧಿಗೆ ಇತಿಹಾಸದ ದಾಖಲೆಗಳೇ ಮಾರ್ಗಸೂಚಿ

ಹರಿಹರ : ಮನುಕುಲದ ಅಭಿವೃದ್ಧಿಗೆ ಇತಿಹಾಸದ ದಾಖಲೆಗಳೇ ಮಾರ್ಗಸೂಚಿ ಯಾಗಿದ್ದು, ಇತಿಹಾಸ ಎಂಬುದು ಮಾನವನ ಎಲ್ಲಾ ಬಗೆಯ ಚಟುವಟಿಕೆಗಳಿಗೆ ಸಂಬಂಧಿಸಿದ ಅಧ್ಯಯನದ ಅಂಗವಾಗಿದೆ 

ಯಲವಟ್ಟಿ ಕೃಷಿ ಪತ್ತಿನ ಸಂಘದ ಅಧ್ಯಕ್ಷರಾಗಿ ಡಿ. ಬಸವನಗೌಡ, ಉಪಾಧ್ಯಕ್ಷರಾಗಿ ಖಲಂದರ್ ಸಾಬ್

ಮಲೇಬೆನ್ನೂರು : ಯಲವಟ್ಟಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಡಿ. ಬಸವನಗೌಡ ಮತ್ತು ಉಪಾಧ್ಯಕ್ಷರಾಗಿ ಖಲಂದರ್ ಸಾಬ್ ಅವರು ಬುಧವಾರ ನಡೆದ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಅಂತಾರಾಷ್ಟ್ರೀಯ ಕರಾಟೆ : ವಿಕಾಸ್‌ಗೆ ದ್ವಿತೀಯ ಸ್ಥಾನ

ಅಂತರಾಷ್ಟ್ರೀಯ ಮುಕ್ತ ಕರಾಟೆ ಚಾಂಪಿಯನ್‍ಶಿಪ್ ಸ್ಪರ್ಧೆಯಲ್ಲಿ ತಾಲ್ಲೂಕಿನ ಕುಂಚೂರು ಕೆರೆ ತಾಂಡಾದ ನಾಗರಾಜನಾಯ್ಕ ಅವರ ಪುತ್ರ 7ನೇ ತರಗತಿ ವಿದ್ಯಾರ್ಥಿವಿಕಾಸ್ ದ್ವಿತೀಯ ಸ್ಥಾನ ಪಡೆಯುವ ಮೂಲಕ ತಾಲ್ಲೂಕಿನ ಕೀರ್ತಿ ಹೆಚ್ಚಿಸಿದ್ದಾನೆ.

ವಾಲ್ಮೀಕಿ ಜಾತ್ರೆ ಸಮಿತಿ ಅಧ್ಯಕ್ಷ ಹಿರೇಮೇಗಳಗೇರಿ ಲಕ್ಕಳ್ಳಿ ಹನುಮಂತಪ್ಪ ಅವರಿಗೆ ಸನ್ಮಾನ

ಹರಪನಹಳ್ಳಿ : ಹರಿಹರ ತಾಲ್ಲೂಕು  ರಾಜನಹಳ್ಳಿಯಲ್ಲಿ ಫೆಬ್ರವರಿ 8 ಮತ್ತು 9ರಂದು ಜರುಗುವ ವಾಲ್ಮೀಕಿ ಜಾತ್ರಾ ಸಮಿತಿ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಹಿರೆಮೇಗಳಗೇರಿ ಲಕ್ಕಳ್ಳಿ ಹನುಮಂತಪ್ಪ ಅವರನ್ನು  ಶಾಸಕರಾದ ಎಂ.ಪಿ.ಲತಾ ಮಲ್ಲಿಕಾರ್ಜುನ್ ಸನ್ಮಾನಿಸಿದರು.  

error: Content is protected !!