Category: ಜಗಳೂರು

ಪರೀಕ್ಷಾ ಕೇಂದ್ರ ವಿಳಾಸದ ಎಡವಟ್ಟು ಹಿನ್ನೆಲೆ

ಜಗಳೂರು : ಪಟ್ಟಣದ ಸರ್ಕಾರಿ ಪಿಯುಸಿ ಕಾಲೇಜು ಮುಂಭಾಗ ಭಾನುವಾರ ಗ್ರಾಮ ಆಡಳಿತ ಅಧಿಕಾರಿಗಳ ಆಯ್ಕೆಗೆ ನಡೆದ ಕನ್ನಡ ಕಡ್ಡಾಯ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಕೆಇಎ ಪ್ರವೇಶ ಪತ್ರದಲ್ಲಿ ಮಾಡಿದ ಪರೀಕ್ಷಾ ಕೇಂದ್ರ ವಿಳಾಸದ ಎಡವಟ್ಟಿನಿಂದ ಉದ್ಯೋಗ ಆಕಾಂಕ್ಷಿ ಅಭ್ಯರ್ಥಿಗಳು ಪರೀಕ್ಷೆಯಿಂದ ವಂಚಿತರಾಗಿ ಅಳಲು ತೋಡಿಕೊಂಡರು.

ಜಗಳೂರು : ಪ್ರೀತಿ, ಆರೈಕೆ ಟ್ರಸ್ಟ್ ನಿಂದ ಆರೋಗ್ಯ ಜಾಗೃತಿ ಶಿಬಿರ

ಜಗಳೂರು : ತಾಲ್ಲೂಕಿನ ಹೊಸಕೆರೆ ಗ್ರಾಮದಲ್ಲಿ ಪ್ರೀತಿ, ಆರೈಕೆ ಟ್ರಸ್ಟ್ ವತಿಯಿಂದ ಗ್ರಾಮೀಣ ಭಾಗದಲ್ಲಿ ಆರೋಗ್ಯ ದಾಸೋಹದ ಮೂಲಕ ಆರೋಗ್ಯ ಜಾಗೃತಿ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.

ಎನ್.ಟಿ. ಎರಿಸ್ವಾಮಿಯವರಿಗೆ ರಾಜ್ಯಮಟ್ಟದ ಲೋಹಿಯಾ ಪ್ರಶಸ್ತಿ

ಜಗಳೂರು : ಬೆಂಗಳೂರಿನ ಬುದ್ದ, ಬಸವ, ಗಾಂಧಿ ಸಾಂಸ್ಕೃತಿಕ ಪ್ರತಿಷ್ಠಾನದ ವತಿಯಿಂದ ಸಿದ್ಧನಹಳ್ಳಿ ಶ್ರೀಮತಿ ಪದ್ಮ ಸಿದ್ದೇಗೌಡ ನೆನಪಿನಲ್ಲಿ ಕೊಡ ಮಾಡುವ  ರಾಜ್ಯ ಮಟ್ಟದ ಲೋಹಿಯ ಪ್ರಶಸ್ತಿಗೆ ಜಗಳೂರಿನ ಹಿರಿಯ ಸಾಹಿತಿ ಹಾಗೂ ನಿವೃತ್ತ ಲೀಡ್ ಬ್ಯಾಂಕ್ ವಿಭಾಗೀಯ ವ್ಯವಸ್ಥಾಪಕ ಎನ್.ಟಿ. ಎರಿ ಸ್ವಾಮಿ ಆಯ್ಕೆಯಾಗಿದ್ದಾರೆ.

ಜಗಳೂರು : ಗ್ರಾಮ ಆಡಳಿತಾಧಿಕಾರಿಗಳ ಅನಿರ್ದಿಷ್ಟಾವಧಿ ಧರಣಿ, ಪ್ರತಿಭಟನೆ

ಜಗಳೂರು : ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ರಾಜ್ಯ ಸಂಘದ ಕರೆಯ ಮೇರೆಗೆ ಇಂದು ಪಟ್ಟಣದ ತಾಲ್ಲೂಕು ಕಛೇರಿ ಮುಂಭಾಗ ತಾಲ್ಲೂಕಿನ ಗ್ರಾಮ ಆಡಳಿತಾಧಿಕಾರಿಗಳು ಪ್ರತಿಭಟನೆ ನಡೆಸಿದರು.

ರೈತರ ಹಿತ ಕಾಪಾಡುವುದೇ ಬ್ಯಾಂಕಿನ ಆದ್ಯತೆ

ಜಗಳೂರು : ರೈತರ ಹಿತ ಕಾಪಾಡುವುದೇ ನಮ್ಮ ಬ್ಯಾಂಕ್‌ನ ಮೂಲ ಉದ್ದೇಶವಾಗಿದೆ ಎಂದು ತಾಲ್ಲೂಕು ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ಅಧ್ಯಕ್ಷ ಜಿ.ಎಸ್. ವೀಣಾ ಗೋಗುದ್ದು ರಾಜು ಹೇಳಿದರು. 

ಪರಿಸರ ಸ್ವಚ್ಛತೆ ಪ್ರತಿಯೊಬ್ಬ ನಾಗರಿಕನ ಕರ್ತವ್ಯ : ನ್ಯಾ. ಆರ್. ಚೇತನ್

ಜಗಳೂರು : ‘ಪರಿಸರ ಸ್ವಚ್ಛತೆ ಪ್ರತಿಯೊಬ್ಬ ನಾಗರೀಕನ ಆದ್ಯ ಕರ್ತವ್ಯ’ ಎಂದು ಜೆಎಂಎಫ್‌ಸಿ ಮತ್ತು ಸಿವಿಲ್ ನ್ಯಾಯಾಧೀಶ ಆರ್. ಚೇತನ್ ಹೇಳಿದರು.

ಈರುಳ್ಳಿ ಬೆಳೆಗೆ ನೇರಳೆ ಎಲೆ ಮಚ್ಚೆ ರೋಗ ಬಾಧೆ

ಜಗಳೂರು : ಈ ವರ್ಷ ಅತೀ ಹೆಚ್ಚು ಮಳೆಯಿಂದಾಗಿ ಈರುಳ್ಳಿಯಲ್ಲಿ ನೇರಳೆ ಎಲೆ ಮಚ್ಚೆ ರೋಗದ ಬಾಧೆ ತೀವ್ರವಾಗಿದ್ದು, ಗಡ್ಡೆಗಳ ಬೆಳವಣಿಗೆಯೂ ಸಹ ಕುಂಠಿತವಾಗಿದೆ ಎಂದು ಐಸಿಎಆರ್-ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ತೋಟಗಾರಿಕೆ ವಿಜ್ಞಾನಿ ಎಂ.ಜಿ. ಬಸವನಗೌಡ   ತಿಳಿಸಿದರು.  

ಕಮ್ಯುನಿಸ್ಟ್ ಪಕ್ಷಕ್ಕೆ ತುಂಬಲಾರದ ನಷ್ಟ

ಜಗಳೂರು : ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ಪ್ರಗತಿಪರ ಸಂಘಟನೆಗಳ ವತಿಯಿಂದ  ಮೊನ್ನೆ ನಿಧನರಾದ ಮಾಜಿ ಸಂಸದ, ಕಮ್ಯುನಿಸ್ಟ್ ಪಕ್ಷದ ಹಿರಿಯ ನಾಯಕ   ಸೀತಾರಾಂ ಯೆಚೂರಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. 

ಈದ್ ಮಿಲಾದ್ ಸೌಹಾರ್ದತೆಯ ಪ್ರತೀಕ

ಜಗಳೂರು : ಪ್ರವಾದಿ ಮಹಮ್ಮದ್ ಪೈಗಂಬರ್ ಜನ್ಮದಿನವಾದ ಇಂದು ಈದ್ ಮಿಲಾದ್ ಹಬ್ಬವು ಸಾಮರಸ್ಯ, ಸೌಹಾ ರ್ದತೆಯ ಪ್ರತೀಕವಾಗಿದೆ ಎಂದು ಶಾಸಕ ಬಿ.ದೇವೇಂದ್ರಪ್ಪ ಹೇಳಿದರು.

ಪೌರ ಕಾರ್ಮಿಕರೊಂದಿಗೆ ಸಾರ್ವಜನಿಕರು ಸ್ವಚ್ಛತೆಗೆ ಸಹಕರಿಸಬೇಕು : ಜಗಳೂರು ಶಾಸಕ ದೇವೇಂದ್ರಪ್ಪ

ಜಗಳೂರು : ಸಾರ್ವಜನಿಕರೂ ಸಹ  ಸ್ವಚ್ಛತೆ ಕಾಪಾಡಲು ಪೌರ ಕಾರ್ಮಿಕರೊಂದಿಗೆ ಕೈಜೋಡಿಸಬೇಕು ಎಂದು ಶಾಸಕ ಬಿ. ದೇವೇಂದ್ರಪ್ಪ ಕರೆ ನೀಡಿದರು.

error: Content is protected !!