ಬಿ.ಎ ವಿದ್ಯಾರ್ಥಿಗಳಿಗೆ ಸ್ವಾಗತ – ಪ್ರತಿಭಾ ಪುರಸ್ಕಾರ ಸಮಾರಂಭ
ಮಲೇಬೆನ್ನೂರು : ಇಲ್ಲಿನ ಶ್ರೀ ಬೀರಲಿಂಗೇಶ್ವರ ಪ್ರಥಮ ದರ್ಜೆ ಮಹಾವಿದ್ಯಾಲಯದಲ್ಲಿ ಈಚೆಗೆ ಬಿ.ಎ ವಿರ್ದ್ಯಾಥಿಗಳಿಗೆ ಸ್ವಾಗತ ಮತ್ತು ಅಂತಿಮ ವರ್ಷದ ವಿರ್ದ್ಯಾಥಿಗಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭ ನಡೆಯಿತು.
ಮಲೇಬೆನ್ನೂರು : ಇಲ್ಲಿನ ಶ್ರೀ ಬೀರಲಿಂಗೇಶ್ವರ ಪ್ರಥಮ ದರ್ಜೆ ಮಹಾವಿದ್ಯಾಲಯದಲ್ಲಿ ಈಚೆಗೆ ಬಿ.ಎ ವಿರ್ದ್ಯಾಥಿಗಳಿಗೆ ಸ್ವಾಗತ ಮತ್ತು ಅಂತಿಮ ವರ್ಷದ ವಿರ್ದ್ಯಾಥಿಗಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭ ನಡೆಯಿತು.
ಮಲೇಬೆನ್ನೂರು : ಶ್ರೀನಿವಾಸನಗರ ಕ್ಯಾಂಪ್‌ನ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಶನಿವಾರ ಬೆಂಗಳೂರಿನ ಉದ್ಯಮಿ ಶ್ರೀಮತಿ ಸಾವಿತ್ರಮ್ಮ ಮಂಜುನಾಥ್ ಇವರು ಶಾಲಾ ಬ್ಯಾಗ್ ಹಾಗೂ ನೋಟ್ ಪುಸ್ತಕಗಳನ್ನು ವಿತರಿಸಿದರು.
ಹರಿಹರ : ನಗರದ ಹೊಸಭರಂಪುರ ಬಡಾವಣೆಯಲ್ಲಿರುವ ಗ್ರಾಮದೇವತೆ ಊರಮ್ಮ ದೇವಿ ಕಾರ್ತಿಕೋತ್ಸವ ನಡೆಯಿತು.ಪ್ರಧಾನ ಅರ್ಚಕ ನಾಗರಾಜ ವಿಶೇಷ ಪೂಜೆ ಸಲ್ಲಿಸಿದರು. ಸಂಜೆ ಊರಮ್ಮ ದೇವಿ ಮೆರವಣಿಗೆ ನಡೆಯಿತು. ನಂತರ ಪ್ರಸಾದ ವಿತರಣೆ ಮಾಡಲಾಯಿತು.
ಹರಿಹರ : ಕನ್ನಡ ನಾಡು- ನುಡಿ, ನೆಲ-ಜಲಕ್ಕೆ ಸಂಬಂಧಿಸಿದ ಕಾರ್ಯಕ್ರಮಕ್ಕೆ ಸಾರ್ವಜನಿಕರ ಪ್ರೋತ್ಸಾಹ ಮತ್ತು ಪಾಲ್ಗೊಳ್ಳುವಿಕೆ ಹೆಚ್ಚಾದಷ್ಟು ಕನ್ನಡ ಸಮಾರಂಭಗಳು ಯಶಸ್ವಿಯಾ ಗುತ್ತವೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಿ. ವಾಮದೇವಪ್ಪ ಅಭಿಪ್ರಾಯಪಟ್ಟರು.
ಮಲೇಬೆನ್ನೂರು : ಕೊಕ್ಕನೂರು ಗ್ರಾಮದ ಶ್ರೀ ಪವನದೇವ ಕಲ್ಯಾಣ ಮಂಟಪದಲ್ಲಿ ಜಿಲ್ಲಾ ನೊಳಂಬ ವೀರಶೈವ ಲಿಂಗಾಯತ ಸಂಘ ಹಾಗೂ ನಂದಿಗುಡಿ ಸಂಸ್ಥಾನ ಕೃಪಾಪೋಷಿತ ವೀರಶೈವ ವಿದ್ಯಾವರ್ಧಕ ಸಂಘದ ವತಿಯಿಂದ ಉಚಿತ ಆರೋಗ್ಯ ತಪಾಸಣೆ ಮತ್ತು ಚಿಕಿತ್ಸಾ ಶಿಬಿರವನ್ನು ಉದ್ಘಾಟಿಸಲಾಯಿತು.
ಹರಿಹರ : ನಗರದ ಗಾಂಧಿ ಮೈದಾನದಲ್ಲಿ ವಕೀಲರ ಸಂಘದ ವತಿಯಿಂದ ಮೂರನೇ ಬಾರಿಗೆ ಎರಡು ದಿನಗಳ ಕಾಲ ನಡೆಯುತ್ತಿರುವ ಅಂತರ ಜಿಲ್ಲಾ ಮಟ್ಟದ ಲೋ ಟೆನ್ನಿಸ್ ಬಾಲ್ ಕ್ರಿಕೆಟ್ ಟೂರ್ನಮೆಂಟನ್ನು ದಾವಣಗೆರೆ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಎನ್. ರಾಜೇಶ್ವರಿ ಹೆಗಡೆ ಚಾಲನೆ ನೀಡಿದರು.
ಹರಿಹರ : ಗ್ರಂಥಾಲಯದಲ್ಲಿ ಓದುಗರ ಸಂಖ್ಯೆ ಹೆಚ್ಚಿಸಲು ಸರ್ಕಾರ ಸದಸ್ಯತ್ವ ಅಭಿಯಾನ, ವಿಶೇಷ ಪುಸ್ತಕಗಳ ಸಂಗ್ರಹದಂತಹ ಹಲವಾರು ಕಾರ್ಯ ಕ್ರಮಗಳನ್ನು ಆಯೋಜಿಸುತ್ತಿದೆ ಎಂದು ಜಿಲ್ಲಾ ಮುಖ್ಯ ಗ್ರಂಥಾಲಯಾಧಿಕಾರಿ ಪಿ.ಆರ್.ತಿಪ್ಪೇಸ್ವಾಮಿ ತಿಳಿಸಿದರು.
ಹರಿಹರ ತಾಲ್ಲೂಕಿನ ಸಾರಥಿ ಮತ್ತು ಉಕ್ಕಡಗಾತ್ರಿ ಗ್ರಾಮದಲ್ಲಿ ಇಂದು ಶನಿವಾರ ಬೆಳಿಗ್ಗೆಯಿಂದ ಸಂಜೆಯವರೆಗೆ ಗ್ರಾಮ ಪಂಚಾಯತಿ ಉಪ ಚುನಾವಣೆ ನಡೆಯಲಿದ್ದು, ಸಿಬ್ಬಂದಿಗಳು ಮತದಾನದ ಡಬ್ಬಿಗಳು ಹಾಗೂ ದಾಖಲೆಗಳನ್ನು ತಹಶೀಲ್ದಾರ್ ಕಚೇರಿಯಿಂದ ಚುನಾವಣೆ ನಡೆಯುವ ಮತಗಟ್ಟೆ ಸ್ಥಳಕ್ಕೆ ತೆಗೆದುಕೊಂಡು ಹೋದರು.
ಮಲೇಬೆನ್ನೂರು ಲಯನ್ಸ್ ಕ್ಲಬ್ ಮತ್ತು ದಾವಣಗೆರೆಯ ಬಾಪೂಜಿ ದಂತ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಆಸ್ಪತ್ರೆ ವತಿಯಿಂದ ಗುರುವಾರ ಹಮ್ಮಿಕೊಂಡಿದ್ದ ಉಚಿತ ದಂತ ತಪಾಸಣೆ ಮತ್ತು ಚಿಕಿತ್ಸಾ ಶಿಬಿರವನ್ನು ದಂತ ವೈದ್ಯರಾದ ಡಾ. ಗಜಾಲ್ ಸುಲ್ತಾನ್ ಅವರು ದೀಪ ಬೆಳಗಿಸಿ ಉದ್ಘಾಟಿಸಿದರು.
ಮಲೇಬೆನ್ನೂರು : ನಾವು ಮಾಡಿದ ಆಸ್ತಿಯನ್ನು ಅಪಹರಿಸಲು ಅನೇಕರು ಪ್ರಯತ್ನಿಸಬಹುದು. ಆದರೆ, ನಾವು ಗಳಿಸಿದ ವಿದ್ಯೆಯನ್ನು ಯಾರೂ ಅಪಹರಿಸಲು ಸಾಧ್ಯವಿಲ್ಲ ಎಂದು ಧಾರವಾಡದ ಅಕ್ಷರ ತಾಯಿ ಲೂಸಿ ಸಾಲ್ಡಾನ ಅಭಿಪ್ರಾಯಪಟ್ಟರು.
ಹರಿಹರ : ನಗರದಲ್ಲಿ ಬರುವ ಮಾರ್ಚ್ ತಿಂಗಳಲ್ಲಿ ನಡೆಯವ ಗ್ರಾಮದೇವತೆ ಊರಮ್ಮ ದೇವಿ ಜಾತ್ರಾ ಮಹೋತ್ಸವದ ಅಂಗವಾಗಿ ನಗರದಾದ್ಯಂತ ಸಂಚರಿಸಿದ ಡಬ್ಬಿ ಗಡಿಗೆಯಲ್ಲಿ ಸಂಗ್ರಹವಾದ ಹಣವನ್ನು ಎಣಿಕೆ ಮಾಡಲಾಯಿತು.
ಮಲೇಬೆನ್ನೂರು : ದಾವಣಗೆರೆಯಲ್ಲಿ ನಾಳೆ ಹಮ್ಮಿಕೊಂಡಿರುವ `ರಾಜ್ಯ ಸಹಕಾರಿ ಸಮಾವೇಶ’ಕ್ಕೆ ಹರಿಹರ ತಾಲ್ಲೂಕಿನಿಂದ ಸಹಕಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಸಮಾವೇಶದ ಸ್ವಾಗತ ಸಮಿತಿ ಕಾರ್ಯದರ್ಶಿ ಜಿಗಳಿ ಇಂದೂಧರ್ ಮನವಿ ಮಾಡಿದ್ದಾರೆ.