Category: ಹರಿಹರ

ಮಲೇಬೆನ್ನೂರು ; ಅಂಬೇಡ್ಕರ್‌ ಮಹಾಪರಿನಿರ್ವಾಣ

ಮಲೇಬೆನ್ನೂರು : ಪಟ್ಟಣದ ಮುಖ್ಯ ವೃತ್ತದಲ್ಲಿ ಮತ್ತು ಎ.ಕೆ. ಕಾಲೋನಿಯಲ್ಲಿ ಸಂವಿಧಾನ ಶಿಲ್ಪಿ ಡಾ. ಬಿ.ಆರ್‌.ಅಂಬೇಡ್ಕರ್‌ ಅವರ 68ನೇ ಮಹಾಪರಿನಿರ್ವಾಣ ದಿನವನ್ನು ಎ.ಕೆ. ಕಾಲೋನಿಯ ಯುವಕರು ಶ್ರದ್ಧಾ-ಭಕ್ತಿಯಿಂದ ಆಚರಿಸಿದರು.

ಉಕ್ಕಡಗಾತ್ರಿ; ಮೌಢ್ಯ ವಿರೋಧಿ ದಿನ

ಮಲೇಬೆನ್ನೂರು : ಉಕ್ಕಡಗಾತ್ರಿ ಗ್ರಾಮದ ರುದ್ರಭೂಮಿಯಲ್ಲಿ ಮಾನವ ಬಂಧುತ್ವ ವೇದಿಕೆಯಿಂದ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ 86ನೇ ಪರಿನಿರ್ವಾಣ ದಿನದ ಪ್ರಯುಕ್ತ ಮೌಢ್ಯ ವಿರೋಧಿ ದಿನವನ್ನಾಗಿ ಆಚರಿಸಲಾಯಿತು. 

ಹರಿಹರ : ಕಳಚಿ ಬಿದ್ದ ಸ್ವಾಗತ ಕಮಾನಿನ ಆರ್‌ಸಿಸಿ

ಹರಿಹರ : ನಿರ್ಮಾಣ ಹಂತದಲ್ಲಿದ್ದ ಸ್ವಾಗತ ಕಮಾನಿನ ಆರ್‌ಸಿಸಿ ಕಳಚಿ ಬಿದ್ದ ಘಟನೆ ತಾಲ್ಲೂಕಿನ ದೀಟೂರು ಗ್ರಾಮದ ಬಳಿ ನಡೆದಿದೆ. ಬುಧವಾರ ನಡೆದ ಈ ಘಟನೆಯಲ್ಲಿ ಒಬ್ಬ ಕಾರ್ಮಿಕನಿಗೆ ಸಣ್ಣಪುಟ್ಟ ಗಾಯವಾಗಿದ್ದು, ಉಳಿದ ಕಾರ್ಮಿಕರು ಅಪಾಯದಿಂದ ಪಾರಾಗಿದ್ದಾರೆ.

ಹರಿಹರ : ದಾವಿವಿಯ ಸಿಂಡಿಕೇಟ್ ಸದಸ್ಯ ಪ್ರಶಾಂತ್‌ಗೆ ಸನ್ಮಾನ

ಹರಿಹರ : ನಗರದ ಶ್ರೀಶೈಲ ಮಹಾಪೀಠದ ಶ್ರೀ ಜಗದ್ಗುರು ಪಂಚಾಚಾರ್ಯ ವಿಶ್ವಧರ್ಮ ವಿದ್ಯಾಪೀಠದ ಕಾರ್ಯದರ್ಶಿ ಆರ್.ಟಿ.ಪ್ರಶಾಂತ್ ದುಗ್ಗತ್ತಿಮಠ ಅವರು ದಾವಣಗೆರೆ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರಾಗಿ ನೇಮಕಗೊಂಡಿದ್ದು, ಅವರನ್ನು ಹರಿಹರ ತಾಲ್ಲೂಕಿನ ನೌಕರರ ಸಂಘದ ವತಿಯಿಂದ ಸನ್ಮಾನಿಸಲಾಯಿತು.

ಹರಿಹರ ಮಲ್ಟಿಪರ್ಪಸ್, ಮೆಕ್ಯಾನಿಕ್ ಸಂಘದ ಅಧ್ಯಕ್ಷರಾಗಿ ಶೇಖ್ ಮೆಹಬೂಬ

ಹರಿಹರ : ತಾಲ್ಲೂಕಿನ ಮಲ್ಟಿಪರ್ಪಸ್ ಹಾಗೂ ಮೆಕ್ಯಾನಿಕ್ ಸಂಘದ ಅಧ್ಯಕ್ಷರಾಗಿ ಶೇಖ್ ಕಮ್ಯೂನಿಕೇಶನ್ಸ್ ಮಾಲೀಕ ಶೇಖ್ ಮೆಹಬೂಬ್ ಕಣವಿ  ಆಯ್ಕೆಯಾಗಿದ್ದಾರೆ.

ಮುಖ್ಯ ಶಿಕ್ಷಕ ಸಿದ್ದಪ್ಪ ನಿವೃತ್ತಿ – ಬೀಳ್ಕೊಡುಗೆ ವಿದ್ಯಾರ್ಥಿನಿಯರಿಂದ ಪೂರ್ಣಕುಂಭ ಸ್ವಾಗತ

ಹರಿಹರ : ನಗರದ ಹೊರವಲಯದ ಗುತ್ತೂರು ಸರ್ಕಾರಿ ಪ್ರೌಢಶಾಲೆ ಮುಖ್ಯ ಶಿಕ್ಷಕ ಟಿ.ಸಿದ್ದಪ್ಪನವರು ಸೇವಾ ನಿವೃತ್ತಿ ಹೊಂದಿದ ಪ್ರಯುಕ್ತ ಶಾಲೆಯಲ್ಲಿ ಬೀಳ್ಕೊಡುಗೆ ಸಮಾರಂಭವು ಸಡಗರ, ಸಂಭ್ರಮದಿಂದ ನಡೆಯಿತು.

ಹರಿಹರ `ರಿಪಬ್ಲಿಕ್ ಆಫ್ ಬಳ್ಳಾರಿ’ ಆಗುತ್ತಿದೆಯೇ ?

ಹರಿಹರ : ತಾಲ್ಲೂಕಿನ ವಿವಿಧ ಗ್ರಾಮ ಗಳ ಪಟ್ಟಾ ಹಾಗೂ ಸರ್ಕಾರಿ ಜಮೀನುಗಳಲ್ಲಿ ನಡೆಯುತ್ತಿರುವ ಅವ್ಯಾಹತ ಅಕ್ರಮ ಮಣ್ಣು ಗಣಿಗಾರಿಕೆಯನ್ನು ತಡೆಯಲು ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಇಂದು (ಪ್ರೊ.ಬಿ.ಕೃಷ್ಣಪ್ಪ ಸ್ಥಾಪಿತ)  ಶಿರಸ್ತೇದಾರರಿಗೆ ಮನವಿ ಸಲ್ಲಿಸಿತು.

ವಕ್ಫ್‌ ರದ್ದುಗೊಳಿಸುವಂತೆ ಯತ್ನಾಳ್‌ ಬಣದ ಮನವಿ

ಮಲೇಬೆನ್ನೂರು : ನವದೆಹಲಿಯಲ್ಲಿ ಬೀಡು ಬಿಟ್ಟಿರುವ ಶಾಸಕ ಬಸವನಗೌಡ ಪಾಟೀಲ್‌ ಯತ್ನಾಳ ಬಣದವರು ಮಂಗಳವಾರ ಸಂಸದೀಯ ಜಂಟಿ ಸದನ ಸಮಿತಿಯ ಅಧ್ಯಕ್ಷರಾದ ಜಗದಾಂಬಿಕ ಪಾಲ್‌ ಅವರನ್ನು ಭೇಟಿ ಮಾಡಿ ವಕ್ಫ್‌ ಕಾಯ್ದೆ ರದ್ದುಪಡಿಸುವಂತೆ ಮನವಿ ಪತ್ರ ಸಲ್ಲಿಸಿದ್ದಾರೆ.

ಪ್ರಾಥಮಿಕ ಶಿಕ್ಷಣ ಗುಣಮಟ್ಟದಲ್ಲಿ ದೊರೆತರೆ ಮಕ್ಕಳಿಗೆ ಉತ್ತಮ ಅಡಿಪಾಯ ದೊರೆಯುತ್ತದೆ

ಮಲೇಬೆನ್ನೂರು : ವಿಜ್ಞಾನ ಮತ್ತು ಗಣಿತ ವಿಷಯಗಳಲ್ಲಿ ವಿದ್ಯಾರ್ಥಿಗಳ ಕಲಿಕೆಯಲ್ಲಿ ಹಿನ್ನಡೆ ಕಂಡು ಬಂದಿದ್ದು ಪ್ರಾಥಮಿಕ ಶಾಲಾ ಶಿಕ್ಷಕರು ಈ ಕೊರತೆ ನೀಗಿಸಬೇಕೆಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಸುರೇಶ್ ಬಿ.ಇಟ್ನಾಳ್ ಸೂಚನೆ ನೀಡಿದರು.

ಜುಮ್ಮಾ ಮಸೀದಿಯ ನೂತನ ಆಡಳಿತ ಮಂಡಳಿಗೆ ಅಧಿಕಾರ ಹಸ್ತಾಂತರ

ಮಲೇಬೆನ್ನೂರು : ಇಲ್ಲಿನ ಜುಮ್ಮಾ ಮಸೀದಿಗೆ ನೂತನ ವಾಗಿ ಆಯ್ಕೆಯಾಗಿರುವ ಆಡಳಿತ ಮಂಡಳಿಯ ಪದಾಧಿಕಾರಿಗಳಿಗೆ ಜಿಲ್ಲಾ ವಕ್ಫ್‌ ಅಧಿಕಾರಿ ಸೈಯದ್‌ ವತಾಜಮ್‌ ಪಾಷಾ ಅವರು ಶನಿವಾರ ಅಧಿಕಾರ ವಹಿಸಿಕೊಟ್ಟರು.

ಹರಿಹರ ಹಿಂದೂ ರುದ್ರಭೂಮಿ ಅವ್ಯವಸ್ಥೆ

ಹರಿಹರ : ನಗರದ ಹಿಂದೂ ರುದ್ರಭೂಮಿ ಬಳಿ ವಿದ್ಯುತ್ ಕಂಬಕ್ಕೆ ಅಡ್ಡಲಾಗಿ ಬೆಳೆದಿದ್ದ ಮರಗಳನ್ನು ಕಡಿದು ಎಲ್ಲೆಂದರಲ್ಲಿ ಹಾಕಿರುವುದರಿಂದ ಅಲ್ಲಿ ಶವ ಸಂಸ್ಕಾರ ನಡೆಸಲು ತೊಂದರೆ ಪಡುವಂತಾಗಿದೆ. 

error: Content is protected !!