ಹರಿಹರ, ಫೆ. 26- ಹರಿ ಹರ ತಾಲ್ಲೂಕು ಕಮಲಾಪುರ ಗ್ರಾಮದ ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ (ಎಸ್‌ಡಿಎಂಸಿ) ಅಧ್ಯಕ್ಷರಾಗಿ ಗಣೇಶ್ ಕಮಲಾಪುರ ಆಯ್ಕೆಯಾಗಿದ್ದಾರೆ.
ಉಪಾಧ್ಯಕ್ಷರಾಗಿ ಮಂಜುಳ, ಸದಸ್ಯರಾಗಿ ಕೆ.ಎಸ್. ಈಶ್ವರಪ್ಪ, ಮಹಾಂತೇಶ್ ಕಣ್ಣಾಳರ, ಪ್ರಿಯಾ, ಶೃತಿ, ಜಿ.ಬಿ. ಗಂಗಾಧರ, ಹೊನ್ನಪ್ಪ, ಶಿವಕುಮಾರ್ ಬಾವಿಕಟ್ಟಿ, ನಿಜಲಿಂಗಪ್ಪ, ಗಂಗಮ್ಮ, ಸೌಮ್ಯ, ಶಿಲ್ಪಾ, ದೇವಕ್ಕ, ಹಳದಮ್ಮ, ಹನುಮಂತಪ್ಪ, ಎಂ.ಬಿ. ಪ್ರಶಾಂತ್, ನಾಗರತ್ನ ಆಯ್ಕೆಗೊಂಡರು.
ಆಯ್ಕೆ ಪ್ರಕ್ರಿಯೆಯಲ್ಲಿ ಬಿ.ಆರ್.ಪಿ. ಸಿ.ಕೆ. ಮಹೇಶ್, ಸಿಆರ್‌ಪಿ ಸುನೀತ ಸೇರಿದಂತೆ, ಗ್ರಾಮದ ಮುಖಂಡರಾದ ಈಶ್ವರಪ್ಪ, ಹಾಲಸಿದ್ಧಪ್ಪ, ಬಸವನ ಗೌಡ, ಚಂದ್ರಶೇಖರಪ್ಪ, ದೊಡ್ಡಬಸಪ್ಪ, ಮೂಕಪ್ಪ, ರಾಮಣ್ಣ, ಬಿ.ರಮೇಶ್, ಚನ್ನಪ್ಪ, ಎಂ. ಸುರೇಶ್, ಎಂ. ರವಿಕುಮಾರ್, ಗ್ರಾ.ಪಂ. ಸದಸ್ಯರಾದ ಮಲ್ಲಿಕಾರ್ಜುನ್, ರಮೇಶ್ ಕಣ್ಣಾಳರ, ಮುಖ್ಯ ಶಿಕ್ಷಕ ಮಂಜುನಾಥ್, ಶಿಕ್ಷಕರಾದ ಪ್ರಭುಗೌಡ ಪಾಟೀಲ್, ರಾಮನಗೌಡ ಪ್ಯಾಟಿ ಮತ್ತಿತರರಿದ್ದರು.