
ಭಾನುವಳ್ಳಿ ಗ್ರಾ.ಪಂ. ಅಧ್ಯಕ್ಷರಾಗಿ ವೆಂಕಟೇಶ್ ರೆಡ್ಡಿ
ಮಲೇಬೆನ್ನೂರು : ಭಾನುವಳ್ಳಿ ಗ್ರಾ.ಪಂ. ಅಧ್ಯಕ್ಷರಾಗಿ ವೆಂಕಟೇಶ್ ರೆಡ್ಡಿ ಅವರು ಸೋಮವಾರ ನಡೆದ ಚುನಾವಣೆಯಲ್ಲಿ ಆಯ್ಕೆಯಾಗಿದ್ದಾರೆ. ಎಂ.ಕೆ. ಪಾಟೀಲ್ ಅವರ ರಾಜೀನಾಮೆಯಿಂದಾಗಿ ಅಧ್ಯಕ್ಷ ಸ್ಥಾನ ತೆರವಾಗಿತ್ತು.
ಮಲೇಬೆನ್ನೂರು : ಭಾನುವಳ್ಳಿ ಗ್ರಾ.ಪಂ. ಅಧ್ಯಕ್ಷರಾಗಿ ವೆಂಕಟೇಶ್ ರೆಡ್ಡಿ ಅವರು ಸೋಮವಾರ ನಡೆದ ಚುನಾವಣೆಯಲ್ಲಿ ಆಯ್ಕೆಯಾಗಿದ್ದಾರೆ. ಎಂ.ಕೆ. ಪಾಟೀಲ್ ಅವರ ರಾಜೀನಾಮೆಯಿಂದಾಗಿ ಅಧ್ಯಕ್ಷ ಸ್ಥಾನ ತೆರವಾಗಿತ್ತು.
ಹರಿಹರ : ಇಲ್ಲಿನ ವಿದ್ಯಾನಗರದ ನಿವಾಸಿ, ಹಿರಿಯ ಸಾಹಿತಿ ಜೆ. ಕಲೀಂಬಾಷ (74) ಅವರು ಸೋಮ ವಾರ ಮಧ್ಯಾಹ್ನ 1.30ಕ್ಕೆ ನಿಧನರಾದರು. ಪತ್ನಿ, ಇಬ್ಬರು ಪುತ್ರರು, ಪುತ್ರಿಯರನ್ನು ಅಗಲಿದ್ದಾರೆ.
ಮಲೇಬೆನ್ನೂರು : ಯಲವಟ್ಟಿಯ ಶ್ರೀ ಗುರುಸಿದ್ಧಾಶ್ರಮದಲ್ಲಿ ಪ್ರತಿ ತಿಂಗಳು ಅಮಾವಾಸ್ಯೆ ದಿನದಂದು ನಡೆಯುವ ಸತ್ಸಂಗ ಕಾರ್ಯಕ್ರಮ ವನ್ನು ಆನ್‌ಲೈನ್‌ನಲ್ಲಿ ವೀಕ್ಷಣೆ ಮಾಡುತ್ತಿದ್ದ ಕೆನಡಾ ದೇಶದಲ್ಲಿರುವ ಹೈದರಾಬಾದ್ ಮೂಲಕ ಶ್ರೀಮತಿ ಗೀತಾ ಮತ್ತು ಶ್ರೀನಿವಾಸ್ ಯಲಮಂಚಿ ದಂಪತಿ ಶ್ರೀಮಠದಲ್ಲಿ ಜರುಗಿದ ಮೌನಿ ಅಮಾವಾಸ್ಯೆ ಸತ್ಸಂಗ ಕಾರ್ಯಕ್ರಮದ ದಾಸೋಹಿಗಳಾಗಿ ಗಮನ ಸೆಳೆದರು.
ಮಲೇಬೆನ್ನೂರು : ಹರಿಹರ ತಾಲ್ಲೂಕು ರಾಜನಹಳ್ಳಿ ಗ್ರಾಮ ಪಂಚಾಯತಿಯ ನೂತನ ಅಧ್ಯಕ್ಷರಾಗಿ ಶ್ರೀಮತಿ ಹೇಮಾವತಿ ಪರಶುರಾಮ ಮತ್ತು ಉಪಾಧ್ಯಕ್ಷರಾಗಿ ಎ.ಕೆ ನಾಗೇಂದ್ರಪ್ಪ ಅವರು ಶನಿವಾರ ನಡೆದ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಹರಿಹರ : ನಗರದ ಹೊರವಲಯದ ಗುತ್ತೂರು ಗ್ರಾಮದ ಲಲಿತಮ್ಮ ಬಡಾವಣೆಯ ಪ್ರಕಾಶ್ ಎಂಬುವವರ ಮನೆಯಲ್ಲಿ ಗ್ಯಾಸ್ ಸಿಲಿಂಡರ್ ರೆಗುಲೇಟರ್ ಪೈಪು ಸೋರಿಕೆಯಿಂದ ಬೆಂಕಿ ಅನಾಹತ ಸಂಭವಿಸಿದ ಘಟನೆ ನಡೆದಿದೆ.
ಹರಿಹರ : 2024ರ ಮಳೆಗಾಲದಲ್ಲಿ ಮಳೆ, ಗಾಳಿಗೆ ತಾಲ್ಲೂಕಿನಲ್ಲಿ ವಿದ್ಯುತ್ ಮಾರ್ಗಗಳಿಗೆ 4 ಕೋಟಿ ರೂ.ಗಳಿಗೂ ಅಧಿಕ ಮೊತ್ತದ ನಷ್ಟ ಉಂಟಾಗಿದೆ
ಮಲೇಬೆನ್ನೂರು : ಎಸ್ಸೆಸ್ಸೆಲ್ಸಿ ಪರೀಕ್ಷೆಗೆ 50 ದಿನ ಬಾಕಿ ಇದ್ದು, ತಮ್ಮ ಮಕ್ಕಳ ಕಲಿಕೆ ಬಗ್ಗೆ ಪೋಷಕರಾದ ತಾವು ನಿತ್ಯ ನಿಗಾ ವಹಿಸಿ, ಅವರನ್ನು ಪ್ರೋತ್ಸಾಹಿಸಿ ಎಂದು ಹರಿಹರದ ರಾಮಕೃಷ್ಣ ಆಶ್ರಮದ ಶ್ರೀ ಸ್ವಾಮಿ ಶಾರದೇಶಾನಂದ ಮಹಾರಾಜ್ ಹೇಳಿದರು.
ಹರಿಹರ-ಶಿವಮೊಗ್ಗ ರಸ್ತೆಯಿಂದ ಬೆಳ್ಳೂಡಿ ಗ್ರಾಮದ ಮುಖ್ಯ ವೃತ್ತದವರೆಗೆ ಸಿಸಿ ರಸ್ತೆ ನಿರ್ಮಾಣಕ್ಕೆ ಅನದಾನ ನೀಡುವಂತೆ ಸೋಮವಾರ ಕಾಗಿನೆಲೆ ಕನಕ ಗುರುಪೀಠದ ಶ್ರೀ ನಿರಂಜಾನಂದ ಪುರಿ ಸ್ವಾಮೀಜಿ ಅವರ ನೇತೃತ್ವದ ನಿಯೋಗವು ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ಅವರನ್ನು ಭೇಟಿ ಮಾಡಿ, ಮನವಿ ಮಾಡಿದರು.
ಮಲೇಬೆನ್ನೂರು : ರಾಜನಹಳ್ಳಿಯ ವಾಲ್ಮೀಕಿ ಗುರುಪೀಠದಲ್ಲಿ ಫೆ. 8 ಮತ್ತು 9ರಂದು ಜರುಗಲಿರುವ 7ನೇ ವರ್ಷದ ವಾಲ್ಮೀಕಿ ಜಾತ್ರೆ ಅಂಗವಾಗಿ ಶ್ರೀಮಠದಲ್ಲಿ ಮಂಗಳವಾರ ಡಾ. ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿ ಹಂದರಗಂಬ ಪೂಜೆ ನೆರವೇರಿಸುವ ಮೂಲಕ ಜಾತ್ರೆಯ ಸಿದ್ಧತೆಗಳಿಗೆ ನಿನ್ನೆ ಚಾಲನೆ ನೀಡಿದರು.
ಮಲೇಬೆನ್ನೂರು : ರಾಜನಹಳ್ಳಿಯ ವಾಲ್ಮೀಕಿ ಗುರುಪೀಠದಲ್ಲಿ ಫೆಬ್ರವರಿ 8 ಮತ್ತು 9 ರಂದು ನಡೆಯುವ ವಾಲ್ಮೀಕಿ ಜಾತ್ರೆಗೆ ಲಕ್ಷಾಂತರ ಜನ ಬರುವುದರಿಂದ ಅವರಿಗೆ ಅಗತ್ಯ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಎಲ್ಲಾ ಇಲಾಖೆಗಳ ಅಧಿಕಾರಿಗಳು ಅಚ್ಚುಕಟ್ಟಾಗಿ, ಶಿಸ್ತು ಬದ್ಧವಾಗಿ, ಶ್ರದ್ಧೆಯಿಂದ ಕೆಲಸ ಮಾಡಬೇಕೆಂದು ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರ ಸ್ವಾಮಿ ತಿಳಿಸಿದರು.
ಮಲೇಬೆನ್ನೂರು : ಸಮೀಪದ ಇಂಗಳಗೊಂದಿ ಗ್ರಾಮದ ಬಳಿ ತುಂಗಭದ್ರಾ ನದಿ ತಟದಲ್ಲಿ ಅಕ್ರಮವಾಗಿ ಸಂಗ್ರಹಿಸಿದ್ದ 200 ಟನ್ ನಷ್ಟು ಮರಳನ್ನು ಸೋಮವಾರ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿ ಕವಿತಾ ಅವರ ನೇತೃತ್ವದಲ್ಲಿ ಮಲೇಬೆನ್ನೂರು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಹರಿಹರ : ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆಯ ಪ್ರಯುಕ್ತ ಇಂದು ಆರೈಕೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ಪ್ರೀತಿ ಆರೈಕೆ ಟ್ರಸ್ಟ್ ದಾವಣಗೆರೆ ಇವರ ವತಿಯಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಮೆಬಲ್ ಕಿಡ್ಸ್ ಪ್ರಿ – ಸ್ಕೂಲ್ ಮತ್ತು ಡೇ ಕೇರ್, ಹರಿಹರದಲ್ಲಿ ಇಂದು ನೆರವೇರಿಸಲಾಯಿತು.