Category: ಹರಿಹರ

ಅಧಿಕ ಮತಗಳ ಅಂತರಿಂದ ಶ್ರೀನಿವಾಸ್ ಗೆಲುವು : ವಿಶ್ವಾಸ

ಹರಿಹರ : ಇಂದು ನಡೆದ ಆಗ್ನೇಯ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ತಾಲ್ಲೂಕಿನಲ್ಲಿ ಆಗ್ನೇಯ ಶಿಕ್ಷಕರ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಡಿ.ಟಿ. ಶ್ರೀನಿವಾಸ್ ಅವರು ಅಧಿಕ ಮತಗಳ ಅಂತರದಿಂದ ಗೆಲ್ಲುತ್ತಾರೆ ಎಂಬ ವಿಶ್ವಾಸ ಹೊಂದಿರುವುದಾಗಿ ಕಾಂಗ್ರೆಸ್ ಪಕ್ಷದ ಮುಖಂಡ ನಂದಿಗಾವಿ ಶ್ರೀನಿವಾಸ್ ಹೇಳಿದರು.

ಜಿಗಳಿಯಲ್ಲಿ ಸ.ಹಿ.ಪ್ರಾ.ಶಾಲೆಯಲ್ಲಿ ಪಠ್ಯಪುಸ್ತಕ, ಸಮವಸ್ತ್ರ ವಿತರಣೆ

ಮಲೇಬೆನ್ನೂರು : ಜಿಗಳಿ ಗ್ರಾಮದ ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ವಿದ್ಯಾರ್ಥಿಗಳಿಗೆ ಸರ್ಕಾರದ ಉಚಿತ ಪಠ್ಯಪುಸ್ತಕ ಮತ್ತು ಸಮವಸ್ತ್ರಗಳನ್ನು ವಿತರಿಸಲಾಯಿತು.

ಮೋಟಾರ್‌ ಬಳಕೆಯಿಂದ ಹಲವೆಡೆ ನೀರು ಸ್ಥಗಿತ

ಹರಿಹರ ಬೆಂಕಿನಗರ ಹಾಗೂ ಇಂದ್ರಾನಗರ ಸೇರಿದಂತೆ, ಕೆಲವು ಬಡಾವಣೆಗಳಲ್ಲಿ  ಜಲಸಿರಿ ನಲ್ಲಿಗೆ  ಮೋಟಾರು ಬಳಕೆ ಮಾಡುತ್ತಿರುವ ಪರಿಣಾಮ ಹಲವು ಮನೆಗಳಿಗೆ ನೀರು ತಲುಪದೇ ಇರುವುದರಿಂದ ನಿವಾಸಿಗಳು ತೊಂದರೆ ಪಡುತ್ತಿದ್ದಾರೆ.

ಜಗತ್ತಿನಲ್ಲಿ ತಂಬಾಕು ಎರಡನೇ ದೊಡ್ಡ ಕ್ಯಾನ್ಸರ್

ಮಲೇಬೆನ್ನೂರು : ಇವತ್ತಿನ ಯುವ ಪೀಳಿಗೆ ಬರೀ ತಂಬಾಕು, ಗುಟ್ಕಾ ಮಾತ್ರ ಸೇವನೆ ಮಾ ತ್ತಿಲ್ಲ. ಜೊತೆಗೆ ಗಾಂಜಾ, ಹೆರಾಯಿನ್ ಸೇರಿದಂತೆ ವಿವಿಧ ಮಾದಕಗಳ ಸೇವನೆಯಿಂದ ಬದುಕನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ

ಹರಿಹರ: ಎ.ಕೆ.ಭೂಮೇಶ್‌ರಿಗೆ ವಯೋ ನಿವೃತ್ತಿ

ಹರಿಹರ : ನಗರದ ಜಾನುವಾರು ಇಲಾಖೆಯ ಅಧಿಕಾರಿ ಮತ್ತು ತಾಲ್ಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎ‌.ಕೆ. ಭೂಮೇಶ್ ರವರು ಹಲವಾರು ವರ್ಷಗಳ ಕಾಲ ನಗರದ ಪಶುಪಾಲನಾ ಇಲಾಖೆಯಲ್ಲಿ ಕರ್ತವ್ಯವನ್ನು ನಿರ್ವಹಿಸಿ ಮೊನ್ನೆ ವಯೋ ನಿವೃತ್ತಿ ಹೊಂದಿದ್ದರಿಂದ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಅವರಿಗೆ ಹಾಗೂ ಅವರ ಧರ್ಮಪತ್ನಿ ಅವರಿಗೆ ಸನ್ಮಾನಿಸಿ ಗೌರವಿಸುವುದರೊಂದಿಗೆ ಬೀಳ್ಕೊಟ್ಟರು. 

ಸರ್ಕಾರದಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಮೊದಲ ಆದ್ಯತೆ ಸಿಕ್ಕಾಗ ಮಾತ್ರ ಶಾಲೆ, ಶಿಕ್ಷಕರ ಸಮಸ್ಯೆಗೆ ಪರಿಹಾರ

ಮಲೇಬೆನ್ನೂರು : ಶಿಕ್ಷಕರ ಸಮಸ್ಯೆಗಳಿಗೆ ಡಿ.ಟಿ. ಶ್ರೀನಿವಾಸ್ ಅವರು ಸರ್ಕಾರದ ಮಟ್ಟದಲ್ಲಿ ಹೋರಾಟ ಮಾಡಿ ಪರಿಹಾರ ಒದಗಿಸಲಿದ್ದಾರೆಂಬ ನಂಬಿಕೆ ನಮಗಿದೆ ಎಂದು ಕರ್ನಾಟಕ ಗಡಿಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರೂ ಆದ ವಿಧಾನಪರಿಷತ್ ಮಾಜಿ ಸದಸ್ಯ ಸೋಮಣ್ಣ ಬೇವಿನಮರದ ಹೇಳಿದರು.

ವಿದ್ಯಾರ್ಥಿನಿ ಯಶೋಧಗೆ ನೆರವು ನೀಡಿದ ಶಿಕ್ಷಕಿಯರು

ಮಲೇಬೆನ್ನೂರು : ಕುಂಬಳೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು 50 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಮತ್ತು ಕೆ.ಕಾಮರಾಜ್ ಅವರು ತಮ್ಮ 60ನೇ ವರ್ಷದ ಜನ್ಮದಿನದ ಅಂಗವಾಗಿ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಹಮ್ಮಿಕೊಂಡಿದ್ದರು.

ಶಿಕ್ಷಕ ಜಿ.ಆರ್.ನಾಗರಾಜ್ ವಯೋನಿವೃತ್ತಿ : ಬೀಳ್ಕೊಡುಗೆ

ಮಲೇಬೆನ್ನೂರು : ದಾಗಿನಕಟ್ಟೆ ಗ್ರಾಮದ ವಾಲ್ಮೀಕಿ ಪ್ರೌಢ ಶಾಲೆಯಲ್ಲಿ ಕಳೆದ 29 ವರ್ಷಗಳಿಂದ ಸಮಾಜ ವಿಷಯದ ಶಿಕ್ಷಕ ಜಿಗಳಿಯ ಜಿ.ಆರ್.ನಾಗರಾಜ್ ಅವರು ಮೇ 31 ರಂದು ವಯೋನಿವೃತ್ತಿ ಹೊಂದಿದರು.

ಮಲೇಬೆನ್ನೂರು : ವಿವಿಧೆಡೆ ಸಂಭ್ರಮದ ಶಾಲಾ ಪ್ರಾರಂಭೋತ್ಸವ

ಮಲೇಬೆನ್ನೂರು : ಶುಕ್ರವಾರ ಮಲೇಬೆ ನ್ನೂರು ಸೇರಿದಂತೆ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮಗಳು ಸಂಭ್ರಮದಿಂದ ನಡೆದವು.

10ಕ್ಕೂ ಹೆಚ್ಚು ಮನೆಗಳ ನೀರಿನ ತೊಟ್ಟಿಯಲ್ಲಿ ಲಾರ್ವಾ ಪತ್ತೆ

ಮಲೇಬೆನ್ನೂರು : ಜಿ.ಬೇವಿನಹಳ್ಳಿ ಗ್ರಾಮದಲ್ಲಿ ಡೆಂಗ್ಯೂ ರೋಗದ ಲಕ್ಷಣಗಳು ಕಂಡು ಬಂದ ಹಿನ್ನೆಲೆಯಲ್ಲಿ ಮಂಗಳವಾರ ಟಿಹೆಚ್ಓ ಡಾ. ಖಾದರ್ ನೇತೃತ್ವದ ಆರೋಗ್ಯ ಇಲಾಖೆಯ ತಂಡ ಲಾರ್ವಾ ಸಮೀಕ್ಷೆ ನಡೆಸಿತು.

error: Content is protected !!