Category: ಹರಪನಹಳ್ಳಿ

Home ಸುದ್ದಿಗಳು ಹರಪನಹಳ್ಳಿ

ಹಳೇ ವಿದ್ಯಾರ್ಥಿಗಳಿಗೆ ಬುಕ್, ಪೆನ್ನು ವಿತರಣೆ, ಶಿಕ್ಷಕರಿಗೆ ಸನ್ಮಾನ

ಹರಪನಹಳ್ಳಿ : ಶತಮಾನ ಪೂರೈಸಿದ ಪಟ್ಟಣದ ಮೇಗಳಪೇಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 2001-2002ನೇ ಸಾಲಿನ ಹಳೆಯ ವಿದ್ಯಾರ್ಥಿಗಳಿಂದ ಮಕ್ಕಳಿಗೆ ನೋಟ್ ಬುಕ್, ಪೆನ್ನ್ ವಿತರಣೆ ಮಾಡಿ ಕಲಿಸಿದ ಶಿಕ್ಷಕರಿಗೆ ಸನ್ಮಾನಿಸಿ, ಗೌರವಿಸಲಾಯಿತು.

ಕೆರೆಗಳ ಸಂರಕ್ಷಣೆಗೆ ಪ್ರತಿಯೊಬ್ಬರೂ ಮುಂದಾಗಬೇಕು

ಹರಪನಹಳ್ಳಿ : ನಮ್ಮ ಕೆರೆ, ನಮ್ಮ ಹಕ್ಕಾಗಿದ್ದು, ಕೆರೆಗಳ ಸಂರಕ್ಷಣೆಗೆ ಪ್ರತಿಯೊಬ್ಬರೂ ಮುಂದಾಗಬೇಕು ಎಂದು ಪೊಲೀಸ್‌ ವೃತ್ತ ನಿರೀಕ್ಷಕ ನಾಗರಾಜ ಎಂ. ಕಮ್ಮಾರ ಹೇಳಿದರು. 

ಹರಪನಹಳ್ಳಿಯಲ್ಲಿ ಹುಂಡಿ ಹಣ ಕಳ್ಳತನ

ಹರಪನಹಳ್ಳಿ : ತಾಲ್ಲೂಕಿನ ಅರೆಮಜ್ಜಿಗೇರಿ ಗ್ರಾಮದ ಶ್ರೀ ಬಳ್ಳಾರಿ ದುರುಗಮ್ಮ ದೇವಸ್ಥಾನದ ಹುಂಡಿ ಹಣ ಕಳ್ಳತನವಾಗಿರುವ ಘಟನೆ ಶನಿವಾರ ರಾತ್ರಿ ನಡೆದಿದೆ.

ಅಲ್ಪಸಂಖ್ಯಾತರ ಮೊರಾರ್ಜಿ ವಸತಿ ಶಾಲೆ ಕಟ್ಟಡದ ಸ್ಥಳಕ್ಕೆ ಗೃಹ ಮಂಡಳಿ ಅಧಿಕಾರಿಗಳ ಭೇಟಿ: ಪರಿಶೀಲನೆ

ಹರಪನಹಳ್ಳಿ : ತಾಲ್ಲೂಕಿನ ಶೃಂಗಾರತೋಟದ ಸಮೀಪದಲ್ಲಿ ನಿರ್ಮಾಣ ಹಂತದಲ್ಲಿರುವ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆ ಕಟ್ಟಡದ ಸ್ಥಳಕ್ಕೆ ಕರ್ನಾಟಕ ಗೃಹ ಮಂಡಳಿ ಮುಖ್ಯ ಅಭಿಯಂತರ ಎಸ್.ಶರಣಯ್ಯ ನೇತೃತ್ವದ ತಂಡ ಶುಕ್ರವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಹರಪನಹಳ್ಳಿಯಲ್ಲಿ ವಿಕಾಸ ಬ್ಯಾಂಕ್ 10ನೇ ಶಾಖೆ ಉದ್ಘಾಟನೆ

ಹರಪನಹಳ್ಳಿ : ಸಹಕಾರ ಕ್ಷೇತ್ರದ ಸಂವರ್ಧನೆ ಕಾರ್ಯಕ್ಕೆ ವಿಕಾಸ ಬ್ಯಾಂಕ್ ತನ್ನದೇ ಆದ ಕೊಡುಗೆಯನ್ನು ನೀಡಿದೆ ಎಂದು ತೆಗ್ಗಿನ ಮಠ ಸಂಸ್ಥಾನದ ಪೀಠಾಧ್ಯಕ್ಷ ಶ್ರೀ ವರಸದ್ಯೋಜಾತ ಶಿವಾಚಾರ್ಯ ಸ್ವಾಮೀಜಿ ಮೆಚ್ಚುಗೆ ವ್ಯಕ್ತಪಡಿಸಿದರು.

ಕಲ್ಯಾಣ ಕರ್ನಾಟಕ ಕಲಾವಿದರ ಒಕ್ಕೂಟದಿಂದ ಸಂಗೀತ ಸೌರಭ

ಹರಪನಹಳ್ಳಿ : ಹರಪನಹಳ್ಳಿ ಕಲ್ಯಾಣ ಕರ್ನಾಟಕ ಕಲಾವಿದರ ಒಕ್ಕೂಟದ ವತಿಯಿಂದ 68ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ  ಸಂಗೀತ ಸೌರಭ ಕಾರ್ಯಕ್ರಮ ಹಾಗೂ ಸನ್ಮಾನ ಸಮಾರಂಭವನ್ನು ಶಾಸಕರಾದ ಎಂ.ಪಿ. ಲತಾ ಮಲ್ಲಿಕಾರ್ಜುನ್ ಉದ್ಘಾಟಿಸಿದರು.

ಕೈಮುಗಿದು ಏರು ಇದು ಕನ್ನಡದ ತೇರು

ಹರಪನಹಳ್ಳಿ : ಸರ್ಕಾರಿ ಬಸ್‍ನಲ್ಲಿ ವಿವಿಧ ಕಲಾವಿದರು, ಕನ್ನಡ ಪುಸ್ತಕಗಳು, ಶಿಕ್ಷಣ ಸಂಸ್ಥೆಗಳ ಪರಿಚಯ, ಯುವ ಸಾಹಿತಿಗಳ ಮಾಹಿತಿ, ತಳಿರು ತೋರಣ, ಬಾಳೆಕಂಬದಿಂದ ಸಿಂಗಾರ, ಕನ್ನಡ ಧ್ವಜದ ಹಾರಾಟ, ಕನ್ನಡ ಹಾಡುಗಳ ನಿನಾದ ಇದು  68ನೇ ಕನ್ನಡ ರಾಜ್ಯೋತ್ಸವ ಅಂಗವಾಗಿ ಪಟ್ಟಣದಲ್ಲಿ ರಾಜ್ಯ ರಸ್ತೆ ಸಾರಿಗೆ  ಬಸ್ಸೊಂದರಲ್ಲಿ  ಕಂಡು ಬಂದ ದೃಶ್ಯ.

ಉದ್ಯೋಗದಲ್ಲಿ ಕನ್ನಡಕ್ಕೆ ಮೀಸಲಾತಿ ನೀಡಬೇಕು

ಹರಪನಹಳ್ಳಿ : ವಿಭಿನ್ನ ಭಾಷೆ, ಸಂಸ್ಕೃತಿ ಹೊಂದಿರುವ ಭಾರತ ದೇಶದಲ್ಲಿ ಕನ್ನಡ ಇತಿಹಾಸ ಹೊಂದಿರುವ ಏಕೈಕ ಭಾಷೆಯಾಗಿದೆ. ಕರ್ನಾಟಕದಲ್ಲಿ ಅನೇಕ ಭಾಷೆಗಳಿದ್ದರೂ ಕನ್ನಡವೇ ಆಡಳಿತ ಭಾಷೆಯಾಗಿದೆ. ಎಂದು ಕನ್ನಡ ಸಾಹಿತ್ಯ ಪರಿಷತ್‌ ತಾಲ್ಲೂಕು ಘಟಕದ ಅಧ್ಯಕ್ಷ ಕೆ.ಉಚ್ಚೆಂಗೆಪ್ಪ ಹೇಳಿದರು.

ಜಗಳೂರು : ಎಂಟು ಜ್ಞಾನಪೀಠ ಪ್ರಶಸ್ತಿ ಪಡೆದ ಶ್ರೀಮಂತ ಭಾಷೆ ಕನ್ನಡ

ಜಗಳೂರು : 8 ಜ್ಞಾನಪೀಠ ಪ್ರಶಸ್ತಿ ಪಡೆದ ಶ್ರೀಮಂತ ಭಾಷೆ ಕನ್ನಡ. ಗತವೈಭವದ ಇತಿಹಾಸ ಅರಿತು ನಾಡಿನ ರಕ್ಷಣೆಗೆ ಮುಂದಾಗೋಣ ಎಂದು  ಶಾಸಕ ಬಿ.ದೇವೇಂದ್ರಪ್ಪ ಕರೆ ನೀಡಿದರು.

ಕಲೆ, ಸಾಹಿತ್ಯ, ಭಾಷೆಯಲ್ಲಿಯೂ ಪ್ರಥಮ ಸ್ಥಾನದಲ್ಲಿರುವ ಕರ್ನಾಟಕ

ಹರಪನಹಳ್ಳಿ : ಕನ್ನಡಕ್ಕೆ ತನ್ನದೇ ಆದ ಐತಿಹಾಸಿಕ ಹಿನ್ನೆಲೆ ಇದ್ದು ಕಲೆ, ಸಾಹಿತ್ಯ, ಭಾಷೆಯಲ್ಲಿಯೂ ಕರ್ನಾಟಕ ಪ್ರಥಮ ಸ್ಥಾನದಲ್ಲಿದೆ ಎಂದು ಶಾಸಕರಾದ ಶ್ರೀಮತಿ ಎಂ.ಪಿ.ಲತಾ ಮಲ್ಲಿಕಾರ್ಜುನ್ ಹೇಳಿದರು.

ರಾಮನ ಚರಿತ್ರೆ ಇಡೀ ಜಗತ್ತಿಗೇ ಪರಿಚಯಿಸಿದ ಕೀರ್ತಿ ಮಹರ್ಷಿ ವಾಲ್ಮೀಕಿಗೆ ಸಲ್ಲುತ್ತದೆ

ಹರಪನಹಳ್ಳಿ : ಮಹರ್ಷಿ ವಾಲ್ಮೀಕಿ, ಬಸವಣ್ಣ, ಕನಕದಾಸರು, ಪುರಂದರದಾಸರು, ಅಂಬೇಡ್ಕರ್‌ ಸೇರಿದಂತೆ ಇತರ ಮಹನೀಯರ ಬಗ್ಗೆ ವಿದ್ಯಾರ್ಥಿಗಳು ಅರಿತುಕೊಳ್ಳಬೇಕು. ರಾಮನ ಚರಿತ್ರೆ ಇಡೀ ಜಗತ್ತಿಗೆ ಪರಿಚಯಿಸಿದ ಕೀರ್ತಿ ಮಹರ್ಷಿ ವಾಲ್ಮೀಕಿ ಅವರಿಗೆ ಸಲ್ಲುತ್ತದೆ

ಎತ್ತರ ಜಿಗಿತ ಸ್ಪರ್ಧೆ : ಎ.ಬಿ.ನಾಗರಾಜ್‌ ರಾಜ್ಯಮಟ್ಟಕ್ಕೆ ಆಯ್ಕೆ

ಹರಪನಹಳ್ಳಿ : ಜಿಲ್ಲಾಮಟ್ಟದ ಪ್ರಾಥಮಿಕ ಶಾಲಾ ಆಟೋಟಗಳ ವಿಭಾಗದ ಎತ್ತರ ಜಿಗಿತ ಸ್ಪರ್ಧೆಯಲ್ಲಿ ತಾಲ್ಲೂಕಿನ ಕಡಬಗೇರಿ ಹಿರಿಯ ಪ್ರಾಥಮಿಕ ಶಾಲೆಯ 7ನೇ ತರಗತಿ ವಿದ್ಯಾರ್ಥಿ ಎ.ಬಿ.ನಾಗರಾಜ್‌ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾನೆ.

error: Content is protected !!