Category: ಸುದ್ದಿ ಸಂಗ್ರಹ

Home ಸುದ್ದಿ ಸಂಗ್ರಹ

ನಗರದಲ್ಲಿ ಇಂದು ಸಿಪಿಐ ಕಾರ್ಯಗಾರ

ದಾವಣಗೆರೆ ಜಿಲ್ಲೆಯ ಭಾರತ ಕಮ್ಯುನಿಸ್ಟ್ ಪಕ್ಷದ ಶಾಖಾ ಕಾರ್ಯದರ್ಶಿಗಳಿಗೆ ಮತ್ತು ಸಹ ಕಾರ್ಯದರ್ಶಿ ಗಳಿಗೆ ಒಂದು ದಿನದ ಶಾಖಾ ನಿರ್ವಹಣಾ ಕಾರ್ಯಾಗಾರ ನಡೆಯಲಿದೆ ಎಂದು ಸಿಪಿಐ ಜಿಲ್ಲಾ ಕಾರ್ಯದರ್ಶಿ ಕಾಂ. ಆವರಗೆರೆ ಚಂದ್ರು ತಿಳಿಸಿದ್ದಾರೆ. 

ಕೋಡಿ ಕ್ಯಾಂಪ್‌ ಕೊಟ್ಟೂರೇಶ್ವರ ಸ್ವಾಮಿ ಮಠದಲ್ಲಿ ಇಂದು ಮಹಾಲಯ ಅಮಾವಾಸ್ಯೆ

ಕೊಟ್ಟೂರು ಶ್ರೀ ಗುರುಬಸವರಾಜೇಂದ್ರ ಸ್ವಾಮಿ ಪಾದಯಾತ್ರೆ ಟ್ರಸ್ಟ್‌ ವತಿಯಿಂದ ದಾವಣಗೆರೆ ಬಳಿಯ ಮಾಗಾನಹಳ್ಳಿ ಕೋಡಿ ಕ್ಯಾಂಪ್‌ ಬಳಿ ಇರುವ ಶ್ರೀ ಗುರು ಕೊಟ್ಟೂರೇಶ್ವರ ಮಹಾಸ್ವಾಮಿಗಳಿಗೆ ನಾಗರ ಅಮಾವಾಸ್ಯೆ ಪ್ರಯುಕ್ತ ಇಂದು ಬೆಳಿಗ್ಗೆ 6.30ಕ್ಕೆ ಅಭಿಷೇಕ, ವಿಶೇಷ ಪೂಜೆ ನಡೆಯಲಿದೆ.

ನಗರದಲ್ಲಿ ನಾಳೆ ದಾವಣಗೆರೆ ಪ್ರೀಮಿಯರ್ ಲೀಗ್ – 2024

ಜನಪ್ರಿಯ ಕ್ರಿಕೆಟ್ ಕ್ಲಬ್ ವತಿಯಿಂದ ಪ್ರೀಮಿಯರ್ ಲೀಗ್ – 2024 ಪಂದ್ಯಗಳನ್ನು ಎರಡನೇ ಬಾರಿಗೆ ನಾಳೆ ದಿನಾಂಕ 3ರ ಗುರುವಾರದಿಂದ 6ರವರೆಗೆ 4 ದಿನಗಳ ಕಾಲ ದಾವಣಗೆರೆಯ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಸಲಾಗುವುದು.

ಗಂಗನರಸಿಯಲ್ಲಿ ಇಂದು ಮಹಾಲಯ ಅಮಾವಾಸ್ಯೆ ವಿಶೇಷ ಪೂಜೆ

ಹರಿಹರ ತಾಲ್ಲೂಕು ಗಂಗನರಸಿ ಗ್ರಾಮದ ಶ್ರೀ ಗೋಣಿ ಬಸವೇಶ್ವರ ಹೊರ ಮಠದಲ್ಲಿ ಮಹಾಲಯ ಅಮಾವಾಸ್ಯೆಯ ವಿಶೇಷ ಪೂಜಾ ಕಾರ್ಯಕ್ರಮಗಳು ಇಂದು ಬೆಳಿಗ್ಗೆ 11ಕ್ಕೆ ನಡೆಯಲಿವೆ.

ನಿಟುವಳ್ಳಿಯಲ್ಲಿ ನಾಳೆ ಯುವ ಸಂಸತ್ ಸ್ಪರ್ಧೆ

ಜಿಲ್ಲಾ ಮಟ್ಟದ ಪ್ರೌಢಶಾಲಾ ವಿದ್ಯಾರ್ಥಿಗಳ ಯುವ ಸಂಸತ್ ಸ್ಪರ್ಧೆಯನ್ನು ನಾಡಿದ್ದು ದಿನಾಂಕ 3 ರ ಗುರುವಾರ ಬೆಳಿಗ್ಗೆ 10 ಗಂಟೆಗೆ  ನಿಟುವಳ್ಳಿಯಲ್ಲಿನ ಆರ್.ಎಂ.ಎಸ್.ಎ. ಪ್ರೌಢಶಾಲೆಯಲ್ಲಿ ಆಯೋಜಿಸಲಾಗಿದೆ ಎಂದು ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಕೊಟ್ರೇಶ್ ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ನಾಳೆ ಪಿಎಸ್‍ಐ ಪರೀಕ್ಷೆ

ಕರ್ನಾಟಕ ಪರೀಕ್ಷಾ ಪ್ರಾಧಿಕಾರ ದಿಂದ ನಾಡಿದ್ದು ದಿನಾಂಕ 3 ರಂದು ಪಿಎಸ್‍ಐ ಪರೀಕ್ಷೆ ನಡೆಯಲಿದ್ದು, ನಗರದ 11 ಕೇಂದ್ರಗಳಲ್ಲಿ 6,512 ಅಭ್ಯರ್ಥಿಗಳು ಪರೀಕ್ಷೆ ಬರೆಯಲಿದ್ದು ಪರೀಕ್ಷೆಯಲ್ಲಿ ಯಾವುದೇ ದೂರು, ಅಕ್ರಮಗಳು ನಡೆಯದಂತೆ ಕಟ್ಟೆಚ್ಚರ ವಹಿಸುವಂತೆ ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ನಗರದಲ್ಲಿ ಇಂದು ಮಾಂಸ ಮಾರಾಟ, ಪ್ರಾಣಿ ವಧೆ ನಿಷೇಧ

ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಮಾಂಸದ ಉದ್ಯಮ ನಡೆಸುತ್ತಿರುವ ಉದ್ದಿಮೆದಾರರು ಮಹಾತ್ಮ ಗಾಂಧಿ ಜಯಂತಿ ಪ್ರಯುಕ್ತ ಪ್ರಾಣಿ ವಧೆ, ಪ್ರಾಣಿ ಮಾಂಸ ಹಾಗೂ ಮೀನಿನ ಮಾಂಸ ಮಾರಾಟವನ್ನು ಇಂದು ನಿಷೇಧಿಸಲಾಗಿದೆ. 

ನಗರದಲ್ಲಿ ಇಂದು ನಿವೃತ್ತ ನೌಕರರಿಂದ ಕಪ್ಪು ಪಟ್ಟಿ ಧರಿಸಿ ಧರಣಿ ಸತ್ಯಾಗ್ರಹ

ಕರ್ನಾಟಕ ನಿವೃತ್ತ ನೌಕರರ ವೇದಿಕೆ ವತಿಯಿಂದ ವಿಶ್ವ ಹಿರಿಯ ನಾಗರಿಕರ ದಿನಾಚರಣೆಯಂದು ನಾಳೆ ದಿನಾಂಕ 1 ರಂದು ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗ ನಿವೃತ್ತ ನೌಕರರಿಂದ ಕಪ್ಪು ಪಟ್ಟಿ ಧರಿಸಿ ಒಂದು ದಿನದ ಸಾಂಕೇತಿಕ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ

ದುಷ್ಕರ್ಮಿಗಳನ್ನು ಬಂಧಿಸಲು ಮಡಿವಾಳ ಸಮಾಜದ ಒತ್ತಾಯ

ಚನ್ನಗಿರಿ ತಾಲ್ಲೂಕು ಸಾರಥಿ ಗ್ರಾಮದ ಮಡಿವಾಳರ ಅಣ್ಣಪ್ಪ ಎಂಬುವವನಿಗೆ ಚಾಕು ಇರಿದ ದುಷ್ಕರ್ಮಿಗಳನ್ನು ಕೂಡಲೇ ಬಂಧಿಸಬೇಕು. ಇಲ್ಲವಾದಲ್ಲಿ ನಗರದ ಎಸ್ಪಿ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಗುವುದು ಎಂದು ಜಿಲ್ಲಾ ಮಡಿವಾಳರ ಸಂಘದ ಅಧ್ಯಕ್ಷ ಯರಬಳ್ಳಿ ಉಮಾಪತಿ ಹೇಳಿದರು.

ಎಂಬ್ರಾಯಿಡರಿ, ಆರಿ ವರ್ಕ್ ಉಚಿತ ತರಬೇತಿಗೆ ಅರ್ಜಿ ಆಹ್ವಾನ

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಟ್ರಸ್ಟ್ ಮತ್ತು ಕೆನರಾ ಬ್ಯಾಂಕ್‍ನ ಸಹಯೋಗದಲ್ಲಿ ನಡೆಸುತ್ತಿ ರುವ ರುಡ್‍ಸೆಟ್ ಸಂಸ್ಥೆಯ ವತಿಯಿಂದ ಎಂಬ್ರಾಯ್ಡರಿ, ಆರಿ ವರ್ಕ್ ಮತ್ತು ಫ್ಯಾಬ್ರಿಕ್ ಪೇಟಿಂಗ್ ಕುರಿತ 30 ದಿನಗಳ ಉಚಿತ ತರಬೇತಿಗೆ ಅರ್ಜಿ ಆಹ್ವಾನಿಸಲಾಗಿದೆ. 

ಗ್ರಾಮಾಂತರ ಕೈಗಾರಿಕಾ ಇಲಾಖೆಯಿಂದ ವಿವಿಧ ಸೌಲಭ್ಯಗಳಿಗೆ ಅರ್ಜಿ ಆಹ್ವಾನ

ಟೈಲರಿಂಗ್, ಹ್ಯಾಂಡ್ ಎಂಬ್ರಾಯ್ಡರಿ, ಡೊಮೆಸ್ಟಿಕ್ ಎಲೆಕ್ಟ್ರಿಷಿಯನ್, ಮೋಟಾರ್ ರೀವೈಂಡಿಂಗ್, ಮೊಬೈಲ್ ರಿಪೇರಿ, ಬ್ಯೂಟಿ ಥೆರಪಿಸ್ಟ್, ಕಂಪ್ಯೂಟರ್, ಎಫ್.ಟಿ.ಸಿ.ಪಿ. ತರಬೇತಿ ನೀಡಿ ಉಚಿತವಾಗಿ 5 ಸಾವಿರ ರೂ. ಮೌಲ್ಯದ ಉಪಕರಣಗಳ ಕಿಟ್ ನೀಡಲು ಅರ್ಜಿ ಆಹ್ವಾನಿಸಲಾಗಿದೆ.  

error: Content is protected !!