Category: ಚಿತ್ರದಲ್ಲಿ ಸುದ್ದಿ

Home ಚಿತ್ರದಲ್ಲಿ ಸುದ್ದಿ

`ಶ್ರೀ ಮಹರ್ಷಿ ವಾಲ್ಮೀಕಿ ವೃತ್ತ’ ಹೊಸ ನಾಮಫಲಕ ಅಳವಡಿಕೆ

ಮಲೇಬೆನ್ನೂರು : ಭಾನುವಳ್ಳಿ ಗ್ರಾಮದ ಏಕಲವ್ಯ ಯುವಕ ಸಂಘದ ವತಿಯಿಂದ ವಾಲ್ಮೀಕಿ ಜಯಂತಿಯ ಪ್ರಯುಕ್ತ ಭಾನುವಳ್ಳಿ ಗ್ರಾಮದ ಮದಕರಿನಾಯಕ ವೃತ್ತದ ಬಳಿ ಇರುವ ಹಳೆ ನಾಮಫಲಕವನ್ನು ತೆರವುಗೊಳಿಸಿ ಆದಿಕವಿ  `ಶ್ರೀ ಮಹರ್ಷಿ ವಾಲ್ಮೀಕಿ ವೃತ್ತ’
ಎಂಬ ಹೊಸ ನಾಮಫಲಕವನ್ನು ಅಳವಡಿಸಲಾಯಿತು.

ಬೆಳೆ ಹಾನಿ ಪರಿಹಾರಕ್ಕೆ ಮನವಿ

ಮಲೇಬೆನ್ನೂರು : ಭಾರೀ ಮಳೆಯಿಂದಾಗಿ ಹರಿಹರ ತಾಲ್ಲೂಕಿನಲ್ಲಿ ಭತ್ತದ ಬೆಳೆ ಹಾನಿಯಾಗಿ ರೈತರಿಗೆ ತೊಂದರೆ ಆಗಿರುವ ಬಗ್ಗೆ ಮುಖ್ಯಮಂತ್ರಿಗಳು ಮತ್ತು ಕೃಷಿ ಹಾಗೂ ಕಂದಾಯ ಸಚಿವರುಗಳಿಗೆ ಮತ್ತು ಜಿಲ್ಲಾಧಿಕಾರಿಗಳ ವರದಿ ಸಮೇತ ತಿಳಿಸಿ, ಹೆಚ್ಚಿನ ಪರಿಹಾರ ನೀಡು ವಂತೆ ಮನವಿ ಮಾಡುವುದಾಗಿ ಮಾಜಿ ಶಾಸಕ ಬಿ.ಪಿ. ಹರೀಶ್ ತಿಳಿಸಿದ್ದಾರೆ.

ಶಂಕರ ವಿಹಾರ ಬಡಾವಣೆಯಲ್ಲಿ ಪುನೀತ್‌ರಾಜ್‌ಕುಮಾರ್‌ ಪುಣ್ಯಸ್ಮರಣೆ

ನಗರದ ಶಂಕರ ವಿಹಾರ ಬಡಾವಣೆಯ `ಬಿ’ ಬ್ಲಾಕ್‌ನಲ್ಲಿ ನಟ ಪುನೀತ್ ರಾಜಕುಮಾರ್ ಅವರ ಪುಣ್ಯಸ್ಮರಣೆಯನ್ನು ಬಡಾವಣೆಯ ಹೆಣ್ಣುಮಕ್ಕಳು ಸೇರಿ ಮಾಡಿದ್ದು ವಿಶೇಷ.

ಸಂಕ್ಲೀಪುರ : ಮಹಿಳೆಗೆ ನೆರವು

ಮಲೇಬೆನ್ನೂರು : ಸಂಕ್ಲೀಪುರ ಗ್ರಾಮದ ಶ್ರೀ ಮಾಯಾಂಬಿಕೆ ಮಹಿಳಾ ಸ್ವ-ಸಹಾಯ ಸಂಘದ ಸದಸ್ಯೆ ಜಯ್ಯಮ್ಮ ಅವರಿಗೆ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಂಪೂರ್ಣ ಸುರಕ್ಷಾದಿಂದ ಮಂಜೂರಾದ 40 ಸಾವಿರ ರೂಗಳ ಚೆಕ್ ಯೋಜನಾಧಿಕಾರಿ ವಸಂತ್ ದೇವಾಡಿಗ ವಿತರಿಸಿದರು.

15ನೇ ವಾರ್ಡ್‌ನಲ್ಲಿ ಪುನೀತ್‌ಗೆ ಶ್ರದ್ಧಾಂಜಲಿ

ನಗರದ 15ನೇ ವಾರ್ಡ್ ನ ದೇವರಾಜ ಅರಸು ಬಡಾವಣೆಯಲ್ಲಿ ಪುನೀತ್ ರಾಜ್‌ಕುಮಾರ್ ಅವರ ಶ್ರದ್ಧಾಂಜಲಿ ಕಾರ್ಯಕ್ರಮವನ್ನು ಮೇಣದ ಬತ್ತಿ ಹಿಡಿದು ಬಡಾವಣೆಯ ಮಕ್ಕಳೊಂದಿಗೆ ಶ್ರದ್ಧಾಂಜಲಿ ಸಲ್ಲಿಸಿ, ಮೌನಾಚರಣೆ ಮಾಡಲಾಯಿತು.

ಕಣ್ಮನ ಸೆಳೆಯುತ್ತಿರುವ ಸೂಳೆಕೆರೆ

ಏಷ್ಯಾ ಖಂಡದಲ್ಲೆಯೇ 2 ನೇ ಅತಿ ದೊಡ್ಡ ಕೆರೆ ಎಂಬ ಹೆಗ್ಗಳಿಕೆ ಪಡೆದಿರುವ ಸೂಳೆಕೆರೆ ತುಂಬಿ ತುಳುಕುತ್ತಿದ್ದು, ಪ್ರವಾಸಿಗರ ಕಣ್ಮನ ಸೆಳೆಯುತ್ತಿದೆ.

ಸೇವಾಲಾಲ್ ಮರಿಯಮ್ಮ ಮೂರ್ತಿ ಪ್ರತಿಷ್ಠಾಪನೆ

ಹರಪನಹಳ್ಳಿ ತಾಲ್ಲೂಕಿನ ಕಂಚಿಕೆರೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಹಳ್ಳಿಕೇರಿ ಕೋಡಿ ತಾಂಡಾದಲ್ಲಿ ಸೇವಾಲಾಲ್ ಮರಿಯಮ್ಮ ದೇವರ ಮೂರ್ತಿ ಪ್ರತಿಷ್ಠಾಪನೆ ನೆರವೇರಿಸಲಾಯಿತು.

ಸಾಯಿಬಾಬಾ ಮಂದಿರದಲ್ಲಿ ಪೂಜೆ ಸಲ್ಲಿಸಿದ ಶಾಸಕ ರವೀಂದ್ರನಾಥ

ನಗರದ ಎಂ.ಸಿ.ಸಿ. ಎ ಬ್ಲಾಕ್‌ನಲ್ಲಿರುವ ಶ್ರೀ ಸಾಯಿಬಾಬಾ ಮಂದಿರಕ್ಕೆ ನವರಾತ್ರಿ ಮೊದಲ ದಿನದಂದು ಭೇಟಿ ನೀಡಿದ್ದ ಹಿರಿಯ ಶಾಸಕ  ಎಸ್.ಎ ರವೀಂದ್ರನಾಥ್ ಅವರು ದರ್ಶನ ಪಡೆದು, ವಿಶೇಷ ಪೂಜೆ ಸಲ್ಲಿಸಿದರು.

ನರಸಗೊಂಡನಹಳ್ಳಿಯಲ್ಲಿ ಶ್ರವಣ ದೋಷ ತಪಾಸಣೆ

ಲಯನ್ಸ್‌ ಕ್ಲಬ್‌ ದಾವಣಗೆರೆ ಹಾಗೂ ಲಯನ್ಸ್‌ ಕ್ವೆಸ್ಟ್‌ ವಾಕ್ ಮತ್ತು ಶ್ರವಣ ಕೇಂದ್ರಗಳ ಆಶ್ರಯದಲ್ಲಿ ಹರಿಹರ ತಾಲ್ಲೂಕು ನರಸಗೊಂಡನಹಳ್ಳಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆ ಆವರಣದಲ್ಲಿ ಉಚಿತ ಶ್ರವಣ ದೋಷ ತಪಾಸಣೆ ಶಿಬಿರವನ್ನು ನಡೆಸಲಾಯಿತು.

error: Content is protected !!