ಬುದ್ದಿಮಾಂದ್ಯ ಮಹಿಳೆ ಮೇಲೆ ಅತ್ಯಾಚಾರ ; ಬಂಧನ
ಬುದ್ಧಿಮಾಂದ್ಯ ಮಹಿಳೆ ಮೇಲೆ ಇಬ್ಬರು ಅತ್ಯಾಚಾರವೆಸಗಿರುವ ಘಟನೆ ತಾಲ್ಲೂಕಿನ ಮ್ಯಾಸಗೊಂಡನಹಳ್ಳಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಮ್ಯಾಸರಹಳ್ಳಿ ಪ್ರಭು ಮತ್ತು ಆತನ ಸ್ನೇಹಿತ ಕುಂದುವಾಡ ಕಿರಣ್ ಎಂಬುವವರೇ ಅತ್ಯಾಚಾರ ವೆಸಗಿರುವ ಆರೋಪಿಗಳು ಎನ್ನಲಾಗಿದೆ.
ಬುದ್ಧಿಮಾಂದ್ಯ ಮಹಿಳೆ ಮೇಲೆ ಇಬ್ಬರು ಅತ್ಯಾಚಾರವೆಸಗಿರುವ ಘಟನೆ ತಾಲ್ಲೂಕಿನ ಮ್ಯಾಸಗೊಂಡನಹಳ್ಳಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಮ್ಯಾಸರಹಳ್ಳಿ ಪ್ರಭು ಮತ್ತು ಆತನ ಸ್ನೇಹಿತ ಕುಂದುವಾಡ ಕಿರಣ್ ಎಂಬುವವರೇ ಅತ್ಯಾಚಾರ ವೆಸಗಿರುವ ಆರೋಪಿಗಳು ಎನ್ನಲಾಗಿದೆ.
ಕೆಲಸ ಮುಗಿಸಿಕೊಂಡು ಮನೆಗೆ ತೆರಳುತ್ತಿದ್ದ ಪಾದಚಾರಿ ಮೇಲೆ ಸ್ಟೀಲ್ ಕಂಪನಿಯ ಬಸ್ ಹರಿದ ಪರಿಣಾಮ ಆತ ಸ್ಥಳದಲ್ಲೇ ಧಾರುಣವಾಗಿ ಸಾವಿಗೀಡಾಗಿರುವ ಘಟನೆ ನಗರದ ವೀರ ರಾಣಿ ಕಿತ್ತೂರು ಚನ್ನಮ್ಮ (ಅರುಣ ಸರ್ಕಲ್) ವೃತ್ತದಲ್ಲಿ ಇಂದು ರಾತ್ರಿ ಸಂಭವಿಸಿದೆ.
ಚಾಲಕನ ನಿಯಂತ್ರಣ ತಪ್ಪಿದ ಖಾಸಗಿ ಬಸ್ಸೊಂದು ರಸ್ತೆ ಬದಿಯ ವಿದ್ಯುತ್ ಟ್ರಾನ್ಸ್ಫಾರ್ಮರ್ಗೆ ಡಿಕ್ಕಿ ಹೊಡೆದು, ಪಲ್ಟಿಯಾದ ಪರಿಣಾಮ ಸುಮಾರು 25ಕ್ಕೂ ಹೆಚ್ಚು ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ನಗರದ ಹೊರ ವಲಯದ ಎಲೆಬೇತೂರು ಗ್ರಾಮದ ಬಳಿ ಇಂದು ಸಂಭವಿಸಿದೆ.
ಹೆಣ್ಣು ಮಗು ಜನಿಸಿದೆ ಎಂದು ಮಗುವನ್ನು ಎತ್ತಿಕೊಂಡು ಮೇಲಿಂದ ನೆಲಕ್ಕೆ ಬಿಟ್ಟು ಕೊಂದು ಹಾಕಿದ್ದ ತಂದೆಗೆ ಜನರು ಮನಬಂದಂತೆ ಥಳಿಸಿ ಮೆರವಣಿಗೆ ಮಾಡಿರುವ ಘಟನೆ ನಗರದ ಅಖ್ತರ್ ರಜಾಕ್ ವೃತ್ತದ ಬಳಿ ನಡೆದಿದೆ.
ದಂಡ ಹಾಕಿದ ಹಿನ್ನೆಲೆಯ ಸಂಚಾರಿ ಪೊಲೀಸರ ಜೊತೆ ಬೈಕ್ ಸವಾರನೊಬ್ಬ ಜಗಳ ತೆಗೆದ ಘಟನೆ ನಗರದ ರೇಣುಕಾ ಮಂದಿರದ ಬಳಿ ಇಂದು ನಡೆದಿದೆ.
ಕಾರು – ದ್ವಿಚಕ್ರ ವಾಹನದ ಮಧ್ಯೆ ನಡೆದ ಅಪಘಾತದಲ್ಲಿ ವೈದ್ಯಕೀಯ ವಿದ್ಯಾರ್ಥಿನಿ ಧಾರುಣವಾಗಿ ಸಾವನ್ನಪ್ಪಿರುವ ಘಟನೆ ನಗರದ ಎಂಸಿಸಿ ಬಿ ಬ್ಲಾಕ್ನ ಈಜುಕೊಳದ ಬಳಿ ಗುರುವಾರ ನಡೆದಿದೆ.
ಹರಿಹರ ನಗರದಲ್ಲಿ ಸರಣಿ ಕಳ್ಳತನ ನಡೆದಿದ್ದು, 6 ಲಕ್ಷ ರೂ. ನಗದು ಸೇರಿದಂತೆ, ಬಂಗಾರ ಮತ್ತು ಬೆಳ್ಳಿಯ ಆಭರಣಗಳು ಕಳ್ಳರು ದೋಚಿಕೊಂಡು ಪರಾರಿಯಾಗಿದ್ದಾರೆ.
ಅಪ್ರಾಪ್ತ ಬಾಲಕಿಯರಿಗೆ ವಿವಾಹ ಮಾಡಿಸಿದ್ದ ಆರೋಪದಡಿ ತಂದೆ, ಮಗಳು ಸೇರಿ ಮೂವರಿಗೆ ಇಲ್ಲಿನ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಲಯ 3 ವರ್ಷಗಳ ಜೈಲು ಶಿಕ್ಷೆ ಹಾಗೂ ತಲಾ 6 ಸಾವಿರ ದಂಡ ವಿಧಿಸಿ ತೀರ್ಪು ನೀಡಿದೆ.
ಚಿಕಿತ್ಸೆಗೆ ತೆರಳಿದ್ದ ವೃದ್ಧೆ ಕೊರಳಲ್ಲಿದ್ದ 1.20 ಲಕ್ಷ ರೂ. ಮೌಲ್ಯದ ಚಿನ್ನದ ಸರ ಕಳ್ಳತನವಾಗಿದ್ದು, ಈ ಬಗ್ಗೆ ಖಾಸಗಿ ಆಸ್ಪತ್ರೆಯ ಮೂವರು ಸಿಬ್ಬಂದಿ ವಿರುದ್ಧ ಇಲ್ಲಿನ ಬಡಾವಣೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಕಂಪನಿ ನೇಮಕಾತಿ ಅಧಿಕಾರಿ ಸೋಗಿನಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ವಿದ್ಯಾರ್ಥಿನಿಗೆ ಸುಮಾರು 2.29 ಲಕ್ಷ ಹಣವನ್ನು ಆನ್ ಲೈನ್ ಮುಖೇನ ವಂಚಿಸಿರುವ ಬಗ್ಗೆ ಇಲ್ಲಿನ ಸಿಇಎನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದೇವಸ್ಥಾನದಿಂದ ಮನೆಗೆ ಸಾಗುತ್ತಿದ್ದ ಒಂಟಿ ಮಹಿಳೆಯ ಮೇಲೆ ಹಾಡಹಗಲೇ ಹಲ್ಲೆ ನಡೆಸಿ, ಡಕಾಯಿತಿ ಮಾಡಿದ್ದ ಏಳು ಮಂದಿ ದರೋಡೆಕೋರರನ್ನು ಬಂಧಿಸುವಲ್ಲಿ ಚನ್ನಗಿರಿ ಮತ್ತು ಸಂತೇಬೆನ್ನೂರು ಪೊಲೀಸರು ಯಶಸ್ವಿಯಾಗಿದ್ದು, ಘಟನೆ ನಡೆದ ಒಂದು ಗಂಟೆಯಲ್ಲೇ ಪ್ರಕರಣವನ್ನು ಬೇಧಿಸಿದ್ದಾರೆ.
ಕ್ರಿಕೆಟ್ ಬೆಟ್ಟಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇಲ್ಲಿನ ಗ್ರಾಮಾಂತರ ಪೊಲೀಸರು ಇಬ್ಬರನ್ನು ಬಂಧಿಸಿ, 5 ಸಾವಿರ ನಗದು ವಶಪಡಿಸಿಕೊಂಡಿದ್ದಾರೆ.