ವಿ.ವಿ.ಎಸ್ ಶಾಲೆ ವಿದ್ಯಾರ್ಥಿನಿ ವಿದ್ಯಾಗೆ `ಬಾಲ ಗೌರವ ಪ್ರಶಸ್ತಿ’
ಕರ್ನಾಟಕ ರಾಜ್ಯ ಬಾಲ ವಿಕಾಸ ಅಕಾಡೆಮಿ ವತಿಯಿಂದ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ವಿವಿಧ ಕ್ಷೇತ್ರದಲ್ಲಿ ವಿಶೇಷ ಸಾಧನೆಗೈದ 18 ವರ್ಷದೊಳಗಿನ ಮಕ್ಕಳಿಗೆ ನೀಡುವ 2021ನೇ ಸಾಲಿನ `ಬಾಲ ಗೌರವ ಪ್ರಶಸ್ತಿ’ಗೆ ಪಟ್ಟಣದ ವಿ.ವಿ.ಎಸ್ ಪ್ರೌಢಶಾಲೆಯ 9ನೇ ತರಗತಿ ವಿದ್ಯಾರ್ಥಿನಿ ಕೆ.ವಿದ್ಯಾ ಆಯ್ಕೆಯಾಗಿದ್ದಾಳೆ.