ಮಾರ್ಚ್ 3 ರಂದು ಆವರಗೊಳ್ಳದ ಶ್ರೀ ವೀರಭದ್ರೇಶ್ವರ ಸ್ವಾಮಿ ರಥೋತ್ಸವ
ಸಮೀಪದ ಆವರಗೊಳ್ಳದ ಶ್ರೀ ವೀರಭದ್ರೇಶ್ವರ ಸ್ವಾಮಿಯ ಜಾತ್ರಾ ಮಹೋತ್ಸವವು ಇದೇ ದಿನಾಂಕ 26 ರ ಭರತ ಹುಣ್ಣಿಮೆಯಿಂದ ವಿವಿಧ ವಾಹನಾದಿ ಉತ್ಸವದೊಂದಿಗೆ ಆರಂಭವಾಗಲಿದ್ದು, ಮಾರ್ಚ್ 3 ರಂದು ಮಹಾ ರಥೋತ್ಸವ ಜರುಗಲಿದೆ.
ಸಮೀಪದ ಆವರಗೊಳ್ಳದ ಶ್ರೀ ವೀರಭದ್ರೇಶ್ವರ ಸ್ವಾಮಿಯ ಜಾತ್ರಾ ಮಹೋತ್ಸವವು ಇದೇ ದಿನಾಂಕ 26 ರ ಭರತ ಹುಣ್ಣಿಮೆಯಿಂದ ವಿವಿಧ ವಾಹನಾದಿ ಉತ್ಸವದೊಂದಿಗೆ ಆರಂಭವಾಗಲಿದ್ದು, ಮಾರ್ಚ್ 3 ರಂದು ಮಹಾ ರಥೋತ್ಸವ ಜರುಗಲಿದೆ.
ಮಲೇಬೆನ್ನೂರು : ಇಲ್ಲಿನ ಹೊರ ವಲಯದಲ್ಲಿ ನಿರ್ಮಾಣಗೊಂಡು ಲೋಕಾರ್ಪಣೆಗೆ ಸಜ್ಜಾಗುತ್ತಿರುವ ಶ್ರೀ ವೀರಭದ್ರೇಶ್ವರ ದೇವಸ್ಥಾನಕ್ಕೆ ಮಾಜಿ ಸಚಿವ ಹಾಗೂ ಹೊಳೆನರಸೀಪುರದ ಶಾಸಕ ಹೆಚ್.ಡಿ. ರೇವಣ್ಣ ನಿನ್ನೆ ಭೇಟಿ ನೀಡಿದ್ದರು.
ಮಲೇಬೆನ್ನೂರು ಪಟ್ಟಣದ ಹೊರವಲಯದಲ್ಲಿ ನಿರ್ಮಾಣಗೊಂಡು ಲೋಕಾರ್ಪಣೆಗೆ ಸಿದ್ದಗೊಳ್ಳುತ್ತಿರುವ ಶ್ರೀ ವೀರಭದ್ರೇಶ್ವರ ದೇವಸ್ಥಾನಕ್ಕೆ ಮಂಗಳವಾರ ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ್, ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಭೇಟಿ ನೀಡಿ ವೀಕ್ಷಿಸಿದರು.
ತಾಲ್ಲೂಕಿನ ಸೋಗಿ ಗ್ರಾಮದಲ್ಲಿ ಶ್ರೀ ವೀರಭದ್ರೇಶ್ವರ ಸ್ವಾಮಿಯ ರಥೋತ್ಸವವು ಇಂದು ಸಂಜೆ ನಡೆದ ಸಂದರ್ಭದಲ್ಲಿ ಸರಳವಾಗಿ ಕೋವಿಡ್ ನಿಯಮದಂತೆ ಸರ್ಕಾರ ನಿಗದಿಪಡಿಸಿದ ಸ್ಥಳದ ಬದಲು ರಥವನ್ನು ಮುಂದೆ ಎಳೆದ ಕಾರಣ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದರು.