ಸಿರಿಗೆರೆಯಲ್ಲಿಂದು ತರಳಬಾಳು ಹುಣ್ಣಿಮೆ ‘ಲೈವ್’
ಕೊರೊನಾ ಹಿನ್ನೆಲೆಯಲ್ಲಿ ತರಳಬಾಳು ಹುಣ್ಣಿಮೆ ಮಹೋತ್ಸವವನ್ನು ಸರಳವಾಗಿ ಆಚರಿಸಲು ಶ್ರೀ ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ತೆಗೆದುಕೊಂಡ ನಿರ್ಧಾರದಂತೆ ಸಿರಿಗೆರೆಯಲ್ಲಿ ಸರಳವಾಗಿ ಆನ್‌ಲೈನ್‌ನಲ್ಲಿ ಹಮ್ಮಿಕೊಳ್ಳಲಾಗಿದೆ.

ಈ ಬಾರಿ ಕೊರೊನಾ ಕಾರಣದಿಂದ ‘ತರಳಬಾಳು ಜಗದ್ಗುರು ನರ್ಸರಿ ಮತ್ತು ಪ್ರೈಮರಿ ಶಾಲೆ’ ಹಾಗೂ ‘ತರಳಬಾಳು ಸಿಬಿಎಸ್‍ಸಿ’ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಮಕ್ಕಳ ಪೋಷಕರಿಗೆ ಮಾತ್ರ ವಿವಿಧ ಸ್ಪರ್ಧೆಗಳಾದ ಚಿತ್ರಕಲೆ, ಜನಪದಗೀತೆ, ವೇಷಭೂಷಣ, ರಂಗೋಲಿ ಸ್ಪರ್ಧೆಗಳನ್ನು ಇಂದು ನಡೆಸಲಾಯಿತು.
ಈ ಬಾರಿ ಕೊಟ್ಟೂರಿನಲ್ಲಿ ನಾಡಿದ್ದು ದಿನಾಂಕ 19 ರಿಂದ 27 ರವರೆಗೆ `ತರಳಬಾಳು ಹುಣ್ಣಿಮೆ’ ಮಹೋತ್ಸವವನ್ನು ಕೊರೊನಾ ವೈರಾಣು ಕಾರಣದಿಂದಾಗಿ ಮುಂದೂಡಿದ್ದು, ಸರಳ ಹಾಗೂ ವಿಭಿನ್ನವಾಗಿ ಸಾಮಾಜಿಕ ಜಾಲತಾಣದ ಮೂಲಕ ಆಚರಿಸಲು ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಸಂಕಲ್ಪಿಸಿದ್ದಾರೆ.

ಬಳ್ಳಾರಿ ಜಿಲ್ಲೆ ಕೊಟ್ಟೂರು ಪಟ್ಟಣದಲ್ಲಿ ಇದೇ ಫೆಬ್ರವರಿ ಮಾಹೆಯಲ್ಲಿ ನಡೆಯಬೇಕಾಗಿದ್ದ ತರಳಬಾಳು ಜಗದ್ಗುರು ಬೃಹನ್ಮಠದ ಪ್ರಮುಖ ವಾರ್ಷಿಕ ಆಚರಣೆ ಯಾದ ತರಳಬಾಳು ಹುಣ್ಣಿಮೆ ಮಹೋತ್ಸವವನ್ನು ಮುಂದೂಡಲಾಗಿದೆ.