ದಾವಣಗೆರೆ ಜಿಲ್ಲೆಯಲ್ಲಿ ಭತ್ತದ ಬೆಳೆಯು ವಿವಿಧ ಹಂತಗಳಲ್ಲಿದ್ದು, ಅಲ್ಲಲ್ಲಿ ಎಲೆ ಕವಚ ಒಣಗುವ ರೋಗವು ಕಾಣಿಸಿ ಕೊಂಡಿದೆ. ರೈತರು ಬಾಂಧವರು ತಕ್ಷಣವೇ ಸಂರಕ್ಷಣಾ ಕ್ರಮಗಳನ್ನು ಕೈಗೊಳ್ಳುವುದು ಸೂಕ್ತ ಎಂದು ಜಂಟಿ ಕೃಷಿ ನಿರ್ದೇಶಕರು ತಿಳಿಸಿದ್ದಾರೆ.
ಈ ಬಾರಿ ಅಡಿಕೆ ಬೆಳೆಯಲು ಹೆಚ್ಚಿನ ರೈತರು ಉತ್ಸುಕರಾಗಿರುವು ದರಿಂದ ದಾವಣಗೆರೆ ತಾಲ್ಲೂಕೊಂದರಲ್ಲಿಯೇ ಸುಮಾರು 2 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಭತ್ತದ ಬೆಳೆ ಕಡಿಮೆಯಾಗಿದೆ ಎಂದು ಸಹಾಯಕ ಕೃಷಿ ನಿರ್ದೇಶಕ ರೇವಣಸಿದ್ದನಗೌಡ ತಿಳಿಸಿದರು.