ಜಿಗಳಿಯಲ್ಲಿ ಭೂಮಿ ಸಂರಕ್ಷಣಾ ಅಭಿಯಾನ
ಜಿಗಳಿ ಗ್ರಾಮದ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಶರಣ ಮುದ್ದಣ್ಣ ಸಾವಯವ ಕೃಷಿ ಪರಿವಾರದ ರೈತರು ತಮ್ಮ ಹೊಲಗಳಿಂದ ತಂದಿದ್ದ ಮಣ್ಣನ್ನು ಒಂದು ಕಡೆ ಹಾಕಿ ವಿಶೇಷ ಪೂಜೆ ಸಲ್ಲಿಸಿದರು. ಹಾಗೂ ಮಣ್ಣಿನ ಮಹತ್ವ ಹಾಗೂ ಸಂರಕ್ಷಣೆ ಕುರಿತು ತಿಳಿಸಲಾಯಿತು.
ಜಿಗಳಿ ಗ್ರಾಮದ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಶರಣ ಮುದ್ದಣ್ಣ ಸಾವಯವ ಕೃಷಿ ಪರಿವಾರದ ರೈತರು ತಮ್ಮ ಹೊಲಗಳಿಂದ ತಂದಿದ್ದ ಮಣ್ಣನ್ನು ಒಂದು ಕಡೆ ಹಾಕಿ ವಿಶೇಷ ಪೂಜೆ ಸಲ್ಲಿಸಿದರು. ಹಾಗೂ ಮಣ್ಣಿನ ಮಹತ್ವ ಹಾಗೂ ಸಂರಕ್ಷಣೆ ಕುರಿತು ತಿಳಿಸಲಾಯಿತು.
ಮಲೇಬೆನ್ನೂರು : ಜಿಗಳಿ ಗ್ರಾಮದ ಗ್ರಾ.ಪಂ. ಕಚೇರಿಯಲ್ಲಿ ಸಂವಿಧಾನ ಶಿಲ್ಪಿ, ಭಾರತ ರತ್ನ ಡಾ. ಬಿ.ಆರ್. ಅಂಬೇಡ್ಕರ್ ಅವರ 130 ನೇ ಜಯಂತಿ ಆಚರಿಸಲಾಯಿತು.
ಮಲೇಬೆನ್ನೂರು : ಜಿಗಳಿ ಗ್ರಾಮದ ಆರಾಧ್ಯ ದೈವ ಶ್ರೀ ರಂಗನಾಥ ಸ್ವಾಮಿ ರಥೋತ್ಸವ ಶನಿವಾರ ಬೆಳಗಿನ ಜಾವ ಅಪಾರ ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಜರುಗಿತು.
ಮಲೇಬೆನ್ನೂರು : ಅಜ್ಞಾನ, ಅಂಧಕಾರವನ್ನು ಮನಸ್ಸಿನಿಂದ ದೂರ ಮಾಡಿಕೊಂಡು, ಜ್ಞಾನದ ದೀಪವನ್ನು ಬೆಳಗಿಸಿಕೊಂಡು ತಮ್ಮನ್ನು ತಾವು ಅರಿತುಕೊಳ್ಳುವುದೇ ಸತ್ಯ ಶಿವರಾತ್ರಿ ಆಚರಣೆಯ ಉದ್ದೇಶವಾಗಿದೆ ಎಂದು ರಾಜಯೋಗಿನಿ ಬಿ.ಕೆ. ಮಂಜುಳಾಜೀ ಹೇಳಿದರು.
ಮಲೇಬೆನ್ನೂರು : ಜಿಗಳಿ ಗ್ರಾಮದ ಆರಾಧ್ಯ ದೈವ ಶ್ರೀ ರಂಗನಾಥ ಸ್ವಾಮಿಯ ರಥೋತ್ಸವವು ಇದೇ ದಿನಾಂಕ 26 ಶುಕ್ರವಾರ ತಡರಾತ್ರಿ ಜರುಗಲಿದೆ.
ಮಲೇಬೆನ್ನೂರು : ಜಿಗಳಿ ಗ್ರಾಮದಲ್ಲಿ ಬಸವರಾಜ್ ಅವರಿಗೆ ಸೇರಿದ ಪಂಚರ್ ಹಾಕುವ ಅಂಗಡಿ ಕಿಡಿಗೇಡಿಗಳ ದುಷ್ಕೃತ್ಯಕ್ಕೆ ಸುಟ್ಟು ಭಸ್ಮವಾಗಿರುವ ಘಟನೆ ನಿನ್ನೆ ಬೆಳಗಿನ ಜಾವ ನಡೆದಿದೆ. ಪಂಚರ್ ಅಂಗಡಿಯಲ್ಲಿ ಹೊಸ ಟೈರ್, ಟ್ಯೂಬ್ಗಳು ಮತ್ತು ಬ್ಲೋ ಮಿಷನ್ ಇದ್ದು, ಬೆಂಕಿಯಲ್ಲಿ ಎಲ್ಲವೂ ಸುಟ್ಟುಹೋಗಿವೆ.
ವಿನಾಯಕ ನಗರ (ಜಿಗಳಿ ಕ್ಯಾಂಪ್) ಕ್ಯಾಂಪ್ ಸಮೀಪ ಇರುವ ಬಯಲು ಪ್ರದೇಶದಲ್ಲಿ ಜಿಗಳಿಯ ಮಿತ್ರ ಕ್ರಿಕೆಟರ್ ವತಿಯಿಂದ 3ನೇ ವರ್ಷದ ವಾಲ್ಮೀಕಿ ಜಾತ್ರೆ ಅಂಗವಾಗಿ ಹಮ್ಮಿಕೊಂಡಿದ್ದ ಗ್ರಾಮಾಂತರ ಮಟ್ಟದ ಟೆನ್ನಿಸ್ ಬಾಲ್ ಕ್ರಿಕೆಟ್ ಟೂರ್ನಿಯ ಸಮಾರೋಪ ಹಾಗೂ ಬಹುಮಾನ ವಿತರಣೆ ಕಾರ್ಯಕ್ರಮ ಗುರುವಾರ ರಾತ್ರಿ ನಡೆಯಿತು.
ಮಲೇಬೆನ್ನೂರು : ಜಿಗಳಿ ಗ್ರಾ.ಪಂ. ನೂತನ ಅಧ್ಯಕ್ಷರಾಗಿ ಶ್ರೀಮತಿ ಕರಿಯಮ್ಮ ಚಂದ್ರಶೇಖರ್ ಮತ್ತು ಉಪಾಧ್ಯಕ್ಷರಾಗಿ ಜಿ. ಬೇವಿನಹಳ್ಳಿಯ ಹೆಚ್. ಆನಂದಗೌಡ ಅವರು ಬುಧವಾರ ನಡೆದ ಚುನಾವಣೆಯಲ್ಲಿ ಆಯ್ಕೆಯಾಗಿದ್ದಾರೆ.