ಕೂಡ್ಲಿಗಿ : ನಿಷೇಧವಿದ್ದರೂ ಮಕ್ಕಳ ಹೋಳಿಗಿಲ್ಲ ತಡೆ
ಕೂಡ್ಲಿಗಿ ಪಟ್ಟಣದಲ್ಲಿ 2 ವಾರ್ಡ್‌ಗಳಿಗೆ ಚುನಾವಣೆ ಇದ್ದರೂ ಕೋವಿಡ್ ಹಿನ್ನೆಲೆಯಲ್ಲಿ ರಂಗಿನ ಹಬ್ಬ ಹೋಳಿ ನಿಷೇಧಿಸಲಾಗಿತ್ತು. ಆದರೂ ಮಕ್ಕಳು ಮಾತ್ರ ತಮ್ಮ ತಮ್ಮ ಬೀದಿಗಳಲ್ಲಿ ರಂಗು ರಂಗಿನ ಹೋಳಿ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು.
ಕೂಡ್ಲಿಗಿ ಪಟ್ಟಣದಲ್ಲಿ 2 ವಾರ್ಡ್‌ಗಳಿಗೆ ಚುನಾವಣೆ ಇದ್ದರೂ ಕೋವಿಡ್ ಹಿನ್ನೆಲೆಯಲ್ಲಿ ರಂಗಿನ ಹಬ್ಬ ಹೋಳಿ ನಿಷೇಧಿಸಲಾಗಿತ್ತು. ಆದರೂ ಮಕ್ಕಳು ಮಾತ್ರ ತಮ್ಮ ತಮ್ಮ ಬೀದಿಗಳಲ್ಲಿ ರಂಗು ರಂಗಿನ ಹೋಳಿ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು.
ಹರಿಹರ ನಗರದಲ್ಲಿ ಈ ಬಾರಿ ಹೋಳಿ ಹಬ್ಬವು ಡಿಜೆ ಸೌಂಡ್ ಸಿಸ್ಟಮ್ ಅಬ್ಬರವಿಲ್ಲದೆ ಮಡಿಕೆ, ಹೊಡೆಯದೆ, ಗುಂಪು ಗುಂಪಾಗಿ ಆಚರಣೆ ಮಾಡದೆ ಸರಳ ರಂಗು ರಂಗಿನ ಹೋಳಿ ಹಬ್ಬವನ್ನು ಆಚರಣೆ ಮಾಡಲಾಯಿತು.
ರಾಣೇಬೆನ್ನೂರು : ನಗರದಲ್ಲಿ ಇಂದು ನಡೆದ ಬಣ್ಣದ ಹಬ್ಬ ಹೋಳಿ, ಕೊರೊನಾ ಚಿಂತೆಯನ್ನು ದೂರ ಮಾಡಿದಂತೆ ಕಂಡುಬಂದಿತು.
ಹೋಳಿ ಹಬ್ಬದ ಮುನ್ನಾ ದಿನವಾದ ಇಂದು ರಾತ್ರಿ ಮಕ್ಕಳು, ಯುವಕರು ಸ್ಥಳೀಯವಾಗಿ ಕಾಮದಹನ ಮಾಡಿ ಸಂಭ್ರಮಿಸಿದರು. ಪುಟಾಣಿ ಮಕ್ಕಳು ಸೇರಿದಂತೆ ಯುವಕರು ತಮ್ಮ ಬಡಾವಣೆಗಳ ಖಾಲಿ ನಿವೇಶನಗಳಲ್ಲಿ ಕಾಮನ ಪ್ರತಿರೂಪ ರಚಿಸಿ, ಬೆಂಕಿ ಹಚ್ಚಿ ಸಂಭ್ರಮಿಸಿದರು.
ಕೊರೊನಾ ಹಿನ್ನೆಲೆಯಲ್ಲಿ ಹೋಳಿ ಹಬ್ಬ ವನ್ನು ಮನೆಗೆ ಸೀಮಿತಗೊಳಿಸಬೇಕು, ಸಾರ್ವಜನಿಕವಾಗಿ ಹೋಳಿ ಆಚರಿಸ ಬಾರದು. ಡಿ.ಜೆ. ಹಾಗೂ ಸಾರ್ವಜನಿ ಕರಿಗೆ ಹೋಳಿ ನೀರು ಸಿಂಪಡಿಸುವುದರ ಮೇಲೆ ಸಂಪೂರ್ಣ ನಿಷೇಧ ಇದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ತಿಳಿಸಿದ್ದಾರೆ.