ನಗರದ ಹದಡಿ ರಸ್ತೆಯಲ್ಲಿರುವ ಶಾಮನೂರು ಶಿವಶಂಕರಪ್ಪ ಪಾರ್ವತಮ್ಮ ಕಲ್ಯಾಣ ಮಂಟಪದ ಪಕ್ಕ ಸ್ಮಾರ್ಟ್ ಸಿಟಿಯ ಬಸ್ ನಿಲ್ದಾಣ ರೂಪಿಸಲಾಗಿದೆ. ಆದರೂ, ಐಟಿಐ ಕಾಲೇಜಿನ ಎದುರು ಬಸ್ ನಿಲ್ಲಿಸಲಾಗುತ್ತಿದೆ. ಸಿಗ್ನಲ್ ಸಹ ಇಲ್ಲೇ ಇರುವ ಕಾರಣ ಸಂಚಾರಕ್ಕೆ ಅಡ್ಡಿ ಎದುರಾಗುತ್ತಿದೆ.
ಭರಮಸಾಗರದ ಏತ ನೀರಾವರಿ ಯೋಜನೆ ಕಾಮಗಾರಿಗೆ ಸಂಬಂಧಿಸಿ ದಂತೆ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ರೈಸಿಂಗ್ ಮೇನ್ ಪೈಪ್‍ಲೈನ್ ಅಳವಡಿಸುವ ಕುರಿತು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಅವರು ಸಂಬಂಧಿಸಿದ ಅಧಿಕಾರಿಗಳೊಂದಿಗೆ ಹದಡಿ ರಸ್ತೆಯ ಲೋಕಿಕೆರೆ ಬ್ರಿಡ್ಜ್ ಬಳಿ ಬುಧವಾರ ಸ್ಥಳ ವೀಕ್ಷಣೆ ಮಾಡಿದರು.