Tag: ಹರಿಹರ

Home ಹರಿಹರ

ಹರಿಹರ : ಆತ್ಮಹತ್ಯೆಗೆ ಯತ್ನಿಸಿದವರ ರಕ್ಷಣೆ

ಹರಿಹರ : ಬಡತನದಿಂದ  ಮನನೊಂದು  ಆತ್ಮಹತ್ಯೆ ಮಾಡಿಕೊಳ್ಳಲು ಬಂದಿದ್ದರು ಎನ್ನಲಾದ ಐವರನ್ನು ನಗರದ ತುಂಗಾರತಿ ಸ್ಥಳದಲ್ಲಿ  ಪ್ರವಾಸೋದ್ಯಮ ಇಲಾಖೆಯ,  ಪ್ರವಾಸಿ ಮಿತ್ರರಾದ  ಹನುಮಂತರಾಜು  ಮತ್ತು ಸಾವಿತ್ರಮ್ಮ  ರಕ್ಷಿಸುವ ಕೆಲಸ ಮಾಡಿದ್ದಾರೆನ್ನಲಾಗಿದೆ.

ಹರಿಹರ ನಗರಸಭೆ: 5.40 ಲಕ್ಷ ರೂ. ಉಳಿತಾಯದ ಬಜೆಟ್ ಮಂಡನೆ

ಹರಿಹರ : ನಗರಸಭೆಯು 2025-26ನೇ ಸಾಲಿಗೆ 5.40 ಲಕ್ಷ ರೂಪಾಯಿಗಳ ಉಳಿತಾಯ ಬಜೆಟ್ ಮಂಡಿಸಿದ್ದು, ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ ಹಾಗೂ ನಗರಸಭೆಯ ಸ್ವಂತ ಆದಾಯದಿಂದ 59.25 ಕೋಟಿ ರೂಪಾಯಿಗಳ ಆದಾಯವನ್ನು ನಿರೀಕ್ಷಿಸಲಾಗಿದೆ ಎಂದು ನಗರಸಭೆ ಅಧ್ಯಕ್ಷೆ ಕವಿತಾ ಮಾರುತಿ ಬೇಡರ್ ತಿಳಿಸಿದರು.

ಸ್ವಯಂ ಉದ್ಯೋಗವಾಗಿ ಷೇರು ಮಾರುಕಟ್ಟೆಯಲ್ಲಿ ತೊಡಗಿಸಿಕೊಳ್ಳಿ

ಹರಿಹರ : ಷೇರು ಮಾರುಕಟ್ಟೆಯು ಷೇರುಗಳನ್ನು ಖರೀದಿಸಲು ಮತ್ತು ಮಾರಾಟ ಮಾಡಲು ಇರುವ ವೇದಿಕೆಯಾಗಿದ್ದು, ಹಣಕಾಸಿನ ಬೆಳವಣಿಗೆಯನ್ನು ಗುರಿಯಾಗಿಟ್ಟುಕೊಂಡು ಹೂಡಿಕೆದಾರರೊಂದಿಗೆ ಬಂಡವಾಳ ವನ್ನು ಹುಡುಕುವ ಕಂಪನಿಗಳಿಗೆ ಇದು ಸೇತುವೆಯಾಗಿದೆ.

ಮಲೇಬೆನ್ನೂರು ಬಳಿ 11 ಅಕ್ರಮ ಪಂಪ್‌ಸೆಟ್ ತೆರವು

ಮಲೇಬೆನ್ನೂರು : ಭದ್ರಾ ನಾಲೆಗೆ ಅಕ್ರಮವಾಗಿ ಅಳವಡಿಸಿದ್ದ ಪಂಪ್‌ಸೆಟ್‌ಗಳನ್ನು ಜಿಲ್ಲಾಧಿಕಾರಿಗಳು ರಚಿಸಿರುವ ಟಾಸ್ಕ್‌ಫೋರ್ಸ್‌ನವರು ಶನಿವಾರ ತೆರವು ಮಾಡಿಸಿದರು.

ಸ್ಪೀಕರ್ ನಡೆ ಪ್ರಜಾಪ್ರಭುತ್ವಕ್ಕೆ ಮಾರಕ

ಹರಿಹರ : ವಿಧಾನಸಭೆಯಲ್ಲಿ ನಿನ್ನೆ ಸಭಾಪತಿ ಯು.ಟಿ. ಖಾದರ್ ಅವರು ಬಿಜೆಪಿ ಶಾಸಕರನ್ನು ಪುಡಿ ರೌಡಿಗಳೆನ್ನುವ ರೀತಿಯಲ್ಲಿ ಹೊರಗಡೆ ಎತ್ತಿ  ಹಾಕಿಸಿ ರುವ ಪ್ರವೃತ್ತಿ ಖಂಡನೀಯವಾಗಿದೆ ಎಂದು ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ಹಿಂಡಸಗಟ್ಟೆ ಲಿಂಗರಾಜ್ ಹೇಳಿದರು.

ವಿದ್ಯಾವಂತರು ಸ್ವಾರ್ಥಿಗಳಾಗದೇ ಊರಿಗೆ, ಬಂಧು-ಮಿತ್ರರಿಗೆ ಆದ್ಯತೆ ಕೊಡಿ

ಮಲೇಬೆನ್ನೂರು : ಒಂದು ಊರು ಕೇವಲ ಆರ್ಥಿಕ ಅಭಿವೃದ್ಧಿ ಎಂದು ನಾವು ಹೇಳಲ್ಲ, ಆರ್ಥಿಕವಾಗಿ ಯಾರೂ ಬೇಕಾದರೂ ಅಭಿವೃದ್ಧಿ ಆಗಬಹುದು. ಆದರೆ, ಸಾಹಿತ್ಯಿಕವಾಗಿ, ಸಾಮಾಜಿಕವಾಗಿ, ರಾಜಕೀಯವಾಗಿ ಮತ್ತು ಸಾಂಸ್ಕೃತಿಕವಾಗಿ ಆ ಊರು ಪ್ರಗತಿ ಕಂಡರೆ ಅದನ್ನು ನಿಜವಾದ ಸಾಧನೆ ಎನ್ನುತ್ತೇವೆ

ಯಲವಟ್ಟಿಯಲ್ಲಿ ಸಂಭ್ರಮದ ರಥೋತ್ಸವ

ಮಲೇಬೆನ್ನೂರು : ಯಲವಟ್ಟಿ ಗ್ರಾಮದ ಆರಾಧ್ಯ ದೈವ ಶ್ರೀ ಆಂಜನೇಯ ಸ್ವಾಮಿಯ ರಥೋತ್ಸ ವವು ಭಾನುವಾರ ಬೆಳಿಗ್ಗೆ ಗ್ರಾಮಸ್ಥರ ಸಮ್ಮುಖದಲ್ಲಿ ಜಿಗಳಿ ರಂಗನಾಥ ಸ್ವಾಮಿ ಜೊತೆ ಗೂಡಿ ಸಂಭ್ರಮದಿಂದ ಜರುಗಿತು

ಯಲವಟ್ಟಿ : ನಾಳೆ ಆಂಜನೇಯ ಸ್ವಾಮಿ ರಥೋತ್ಸವ

ಮಲೇಬೆನ್ನೂರು : ಯಲವಟ್ಟಿ ಗ್ರಾಮದ ಶ್ರೀ ಆಂಜನೇಯ ಸ್ವಾಮಿ ರಥೋ ತ್ಸವವು ಜಿಗಳಿ ರಂಗನಾಥಸ್ವಾಮಿ ಜೊತೆಗೂಡಿ ನಾಡಿದ್ದು ದಿನಾಂಕ 23ರ ಭಾನುವಾರ ಬೆಳಿಗ್ಗೆ 7 ಗಂಟೆಗೆ  ಜರುಗಲಿದೆ.

ಹರಿಹರ ತಾ. ಶಿಕ್ಷಕರ ಪತ್ತಿನ ಸಹಕಾರ ಸಂಘಕ್ಕೆ ಆಯ್ಕೆ

ಮಲೇಬೆನ್ನೂರು : ಹರಿಹರ ತಾಲ್ಲೂಕಿನ ಪ್ರಾಥಮಿಕ ಶಾಲಾ ಶಿಕ್ಷಕರ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಸಿಆರ್‌ಪಿ ಕೆ.ಜಿ. ನಂಜುಂಡಪ್ಪ ಮತ್ತು ಉಪಾಧ್ಯಕ್ಷರಾಗಿ ಮಲೇಬೆನ್ನೂರಿನ ಲಯನ್ಸ್ ಶಾಲೆಯ ದೈಹಿಕ ಶಿಕ್ಷಕ ಎ.ಸಿ.ಹನುಮಗೌಡ ಅವರು ಶುಕ್ರವಾರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಹರಿಹರ ಜಾತ್ರೆಯಲ್ಲಿ ದುರಂತ

ಹರಿಹರ : ಊರಮ್ಮ ದೇವಿ ಜಾತ್ರಾ ಮಹೋತ್ಸವದ ಅಂಗವಾಗಿ ನಡೆದ ಬೆಲ್ಲದ ಬಂಡಿ ಮೆರವಣಿಗೆಯಲ್ಲಿ ಹೋರಿಯೊಂದು ಬೆದರಿ ಚಿನ್ನಾಟವಾಡಿ ದ್ದರಿಂದ ರಾಮತೀರ್ಥ ಗ್ರಾಮದ ವೀರಾಚಾರಿ (72) ಎಂಬ ವೃದ್ಧ ಮೃತಪಟ್ಟಿದ್ದಾರೆ.

ಪರೀಕ್ಷೆ : ವಿದ್ಯಾರ್ಥಿಗಳಿಗೆ ಹೂವು ನೀಡಿ ಶುಭ ಹಾರೈಕೆ

ಮಲೇಬೆನ್ನೂರು : ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಕಟ್ಟಡದಲ್ಲಿ ಶುಕ್ರವಾರ ನಡೆದ ಎಸ್ಸೆಸ್ಸೆಲ್ಸಿ ಪರೀಕ್ಷಾ ಕೇಂದ್ರದಲ್ಲಿ 7 ಪ್ರೌಢಶಾಲೆಗಳ ಎಲ್ಲಾ 264 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು.

error: Content is protected !!