ಕಾಕನೂರು ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯ ಮಕ್ಕಳು ಅಸ್ವಸ್ಥ
ಸಂತೆಬೆನ್ನೂರು : ತಾಲ್ಲೂಕಿನ ಕಾಕನೂರಿನಲ್ಲಿರುವ ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಯ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯ ಸಿಬ್ಬಂದಿಗಳ ಬೇಜವಾಬ್ದಾರಿ, ಉದಾಸೀನದ ಫಲವಾಗಿ ವಸತಿ ಶಾಲೆಯ 23 ಮಕ್ಕಳು ಭಾನುವಾರ ರಾತ್ರಿಯ ಊಟ, ಸೋಮವಾರ ಬೆಳಗ್ಗೆ ತಿಂಡಿ ಸೇವಿಸಿದ 23 ಮಕ್ಕಳು ಅಸ್ವಸ್ಥಗೊಂಡಿದ್ದು, ಶಾಸಕ ಬಸವರಾಜು ವಿ ಶಿವಗಂಗಾ ಅವರು ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.