ತಾಪಮಾನದಿಂದ ಚಂಡಮಾರುತದ ತೀವ್ರತೆ ಏರಿಕೆ, ಸಂಖ್ಯೆಯಲ್ಲ
ಲಂಡನ್ : ಜಾಗತಿಕ ತಾಪಮಾನ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಚಂಡಮಾರುತಗಳ ಸಂಖ್ಯೆ ಹೆಚ್ಚಾಗದಿದ್ದರೂ ಅವುಗಳ ತೀವ್ರತೆ ಹೆಚ್ಚಾಗಲಿದೆ. ಇದರಿಂದ ದ್ವೀಪ ದೇಶಗಳು ಹಾಗೂ ಬಡ ದೇಶಗಳ ಮೇಲೆ ಗಂಭೀರ ಪರಿಣಾಮವಾಗಲಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.