Tag: ರಾಣೇಬೆನ್ನೂರು

Home ರಾಣೇಬೆನ್ನೂರು

ರೈತರನ್ನು ಕಡೆಗಣಿಸಿದ ಸರ್ಕಾರ

ರಾಣೇಬೆನ್ನೂರು : ರಾಜ್ಯದಲ್ಲಿ ಮುಂಗಾರು ಮಳೆ ರೈತನ ಮೇಲೆ ಕರುಣೆ ತೋರಿದ್ದು, ರೈತನಿಗೆ ಸಮರ್ಪಕ ಬಿತ್ತನೆ ಬೀಜ ಒದಗಿಸುವಲ್ಲಿ ಕಾಂಗ್ರೆಸ್‌ ಸರ್ಕಾರ ವಿಫಲವಾಗಿದೆ ಎಂದು ಬಿಜೆಪಿ ಮುಖಂಡ ಸಂತೋಷ ಪಾಟೀಲ್‌ ಆರೋಪಿಸಿದರು.

ವಿದ್ಯಾರ್ಥಿ ಜೀವನ ಸದುಪಯೋಗ ಪಡಿಸಿಕೊಂಡಲ್ಲಿ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯ

ರಾಣೇಬೆನ್ನೂರು : ವಿದ್ಯಾರ್ಥಿ ಜೀವನದಲ್ಲಿ ಸಿಗುವ ಅವಕಾಶಗಳನ್ನು ಸದುಪಯೋಗ ಮಾಡಿಕೊಂಡು ಎತ್ತರಕ್ಕೆ ಬೆಳೆದು,   ನಿಮ್ಮ ಆತ್ಮಬಲ ಹೆಚ್ಚಿಸಿಕೊಳ್ಳಿ. ಆಗ ಯಶಸ್ಸು ಸಹ ನಿಮ್ಮೊಟ್ಟಿಗೆ ಬರುತ್ತದೆ ಎಂದು ಎಸ್‌ಟಿಜೆ  ಪ್ರಾಧ್ಯಾಪಕ ಡಾ. ಎಂ. ಈ. ಶಿವಕುಮಾರ ಹೊನ್ನಾಳಿ ಹೇಳಿದರು.

ಯತ್ತಿನಹಳ್ಳಿ : ಎಸ್‍ಡಿಎಂಸಿ ಅಧ್ಯಕ್ಷರಾಗಿ ಮಹೇಶ್

ರಾಣೇಬೆನ್ನೂರು : ತಾಲ್ಲೂಕಿನ ಯತ್ತಿನಹಳ್ಳಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಎಸ್‍ಡಿಎಂಸಿ ಅಧ್ಯಕ್ಷರಾಗಿ ಮಹೇಶ ಚ. ಹೊಳಲು ಹಾಗೂ ಉಪಾಧ್ಯಕ್ಷರಾಗಿ ರೂಪಾ ಗ. ಮಾಚೇನಹಳ್ಳಿ ಅವರು ಅವಿರೋಧವಾಗಿ ಆಯ್ಕೆಯಾದರು. 

ಬಸ್ ನಿಲುಗಡೆಗೆ ರಾಣೇಬೆನ್ನೂರಿನಲ್ಲಿ ವಿದ್ಯಾರ್ಥಿಗಳ ಪ್ರತಿಭಟನೆ

ರಾಣೇಬೆನ್ನೂರು : ನಗರದ ಹೊರವಲಯ ಹಲಗೇರಿ ರಸ್ತೆಯ ಎಸ್ ಆರ್ ಕೆ ಬಡಾವಣೆಯಲ್ಲಿ ರಾಜ್ಯ ಸಾರಿಗೆ ಬಸ್ ನಿಲುಗಡೆಗೆ ಒತ್ತಾಯಿಸಿ ಎಸ್ಎಫ್ಐ ನೇತೃತ್ವದಲ್ಲಿ ವಿದ್ಯಾರ್ಥಿಗಳು ಇಂದು ದಿಢೀರಾಗಿ ರಸ್ತಾ ರೋಖೋ ನಡೆಸಿದರು.

ಕರ್ನಾಟಕದ ಖಜಾನೆಯೇ ಖಾಲಿಯಾಗಿದೆ

ರಾಣೇಬೆನ್ನೂರು : ಹಾಲು, ಆಲ್ಕೋಹಾಲು, ಕರೆಂಟ್, ಪೆಟ್ರೋಲಿಯಮ್ ಸಂಸ್ಕರಣೆ, ಡೀಸೆಲ್, ನೋಂದಣಿ ಶುಲ್ಕ, ಮುಂದೆ ಬಸ್  ಹೀಗೆ ದರಗಳನ್ನು ಕಾಂಗ್ರೆಸ್ ಸರ್ಕಾರ ಹೆಚ್ಚುಸುತ್ತಿದೆ. ಖಜಾನೆ ಖಾಲಿ ಆಗಿದ್ದರಿಂದ ಈ ಹೆಚ್ಚಳ ನಡೆದಿದೆ.

ರಾಣೇಬೆನ್ನೂರಿನಲ್ಲಿ ನಾಳೆ ಮಹಿಳಾ ಸಬಲೀಕರಣಕ್ಕಾಗಿ ಯೋಗ

ರಾಣೇಬೆನ್ನೂರು : ಮಹಿಳಾ ಸಬಲೀಕರಣಕ್ಕಾಗಿ ಪತಂಜಲಿ ಯೋಗ ಪೀಠವು ಕೆ.ಎಲ್. ಸಹಯೋಗದೊಂದಿಗೆ ರಾಣೇಬೆನ್ನೂರು ರಾಜರಾಜೇಶ್ವರಿ ಮಹಿಳಾ ಕಾಲೇಜು ಆವರಣದಲ್ಲಿ ನಾಡಿದ್ದು ದಿನಾಂಕ 21ರಂದು ಬೆಳಿಗ್ಗೆ ವಿವೇಕಾನಂದಾಶ್ರಮದ ಶ್ರೀ ಪ್ರಕಾಶಾನಂದ ಮಹಾರಾಜರ ಸಾನ್ನಿಧ್ಯದಲ್ಲಿ  ಅಂತರರಾಷ್ಟ್ರೀಯ ಯೋಗ ದಿನಾಚರಣೆ ಏರ್ಪಡಿಸಲಾಗಿದೆ.

`ಬಿಜೆಪಿಗೆ ಗೆದ್ದ ಹುಮ್ಮಸ್ಸಿಲ್ಲ, ಕಾಂಗ್ರೆಸ್‌ಗೆ ಸೋತ ನೋವಿಲ್ಲ’

ರಾಣೇಬೆನ್ನೂರು : ಕಳೆದ ನಾಲ್ಕು ಲೋಕಸಭೆ ಚುನಾವಣೆಗಳಲ್ಲಿ ಒಂದೂವರೆ ಲಕ್ಷದಿಂದ, ಎರಡೂವರೆ ಲಕ್ಷ ಮತಗಳ ಅಂತರದಿಂದ ನಾವು ಸೋಲುತ್ತಾ ಬಂದಿದ್ದೇವೆ. ಈ ಬಾರಿ ಕೇವಲ ನಲವತ್ತು ಸಾವಿರ ಅಂತರದಲ್ಲಿ ಸೋತಿದ್ದೇವೆ.

ಚುನಾವಣೆ ಸೋಲು : ನಾಳೆ ಕಾಂಗ್ರೆಸ್ ಆತ್ಮಾವಲೋಕನ ಸಭೆ

ರಾಣೇಬೆನ್ನೂರು : ಹಾವೇರಿ – ಗದಗ ಲೋಕಸಭೆ ಚುನಾವಣೆಯಲ್ಲಿ ಪಕ್ಷ ಅನುಭವಿಸಿದ ಸೋಲಿನ ಆತ್ಮಾವಲೋಕನ ಮಾಡಲು ರಾಣೇಬೆನ್ನೂರು ತಾಲ್ಲೂಕು ಕಾಂಗ್ರೆಸ್ ಪಕ್ಷದ ಸಭೆ ಮಂಗಳವಾರ ಬೆಳಿಗ್ಗೆ ನಡೆಯಲಿದೆ

ಆಣೂರು ಭರಮದೇವರ ಗುಡ್ಡದಲ್ಲಿ ಬೀಜದುಂಡೆ ಎಸೆದು ಸಂಭ್ರಮಿಸಿದ ವಿದ್ಯಾರ್ಥಿಗಳು

ರಾಣೇಬೆನ್ನೂರು : ಬ್ಯಾಡಗಿ ತಾಲ್ಲೂಕು  ಆಣೂರು ಗ್ರಾಮದಲ್ಲಿ   ಜೈವಿಕ ಇಂಧನ ಯೋಜನೆ ಕುರಿತು ಅರಿವು ಮೂಡಿಸುವ ಜಾಥಾ ಹಮ್ಮಿಕೊಳ್ಳುವ ಮೂಲಕ  ‘ವಿಶ್ವ ಪರಿಸರ’ ದಿನಾಚರಣೆಯನ್ನು ಆಚರಿಸಲಾಯಿತು.

ರಾಣೇಬೆನ್ನೂರಿನ ಮಾಜಿ ಶಾಸಕ ಹಲಗೇರಿ ಡಾಕ್ಟರ್ ಇನ್ನಿಲ್ಲ

ರಾಣೇಬೆನ್ನೂರು : ಇಲ್ಲಿನ ಮಾಜಿ ಶಾಸಕರೂ, ಧಾರವಾಡ ಜಿಲ್ಲಾ ಪರಿಷತ್ ಮಾಜಿ ಅಧ್ಯಕ್ಷರೂ ಆದ ಹೆಸರಾಂತ ವೈದ್ಯ ಹಲಗೇರಿಯ ಡಾ. ಬಿ.ಜಿ.ಪಾಟೀಲ  ಅವರು ಇಂದು ಬೆಳಿಗ್ಗೆ ಬೆಂಗಳೂರಿನಲ್ಲಿ ನಿಧನರಾದರು.

ದಾನ ಮಾಡಿ ಪ್ರತಿಭೆಗಳನ್ನು ಪ್ರೋತ್ಸಾಹಿಸಲು ಕರೆ

ರಾಣೇಬೆನ್ನೂರು : ಆರ್ಥಿಕವಾಗಿ ಹಿಂದುಳಿದ ಪ್ರತಿಭಾನ್ವಿತ ಮಕ್ಕಳ ಶಿಕ್ಷಣಕ್ಕೆ ನೆರವು ನೀಡಿದರೆ ಅವರ ಭವಿಷ್ಯ ಉಜ್ವಲವಾಗಲಿದೆ. ನಿಮ್ಮ ಗಳಿಕೆಯಲ್ಲಿ ಸ್ವಲ್ಪನ್ನು ಇಂತಹ ಕಾರ್ಯಗಳಿಗೆ ವಿನಿಯೋಗಿಸಿದರೆ ಅದರ ಪುಣ್ಯ ತಮಗೆ ಪ್ರಾಪ್ತಿಯಾಗಲಿದೆ ಎಂದು ಆವರಗೊಳ್ಳ ಹಿರೇಮಠದ ಓಂಕಾರ ಶಿವಾಚಾರ್ಯ ಶ್ರೀಗಳು ನುಡಿದರು.

ವಿದ್ಯಾರ್ಥಿಗಳ ಸ್ವಾವಲಂಬನೆಗೆ ಕೌಶಲ್ಯ ತರಬೇತಿ ಅಗತ್ಯ

ರಾಣೇಬೆನ್ನೂರು :  ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ಓದನ್ನು  ಬರೀ ಜ್ಞಾನಾರ್ಜನೆಗೆ ಸೀಮಿತಗೊಳಿಸದೇ ಕೌಶಲ್ಯ ತರಬೇತಿ, ಸ್ಪೋಕನ್ ಇಂಗ್ಲಿಷ್ ತರಬೇತಿಯನ್ನೂ ನೀಡಿ, ಅವರು ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು  ಶಿಕ್ಷಕರು ಸಹಾಯ ಮಾಡಬೇಕು ಎಂದು ಶಾಸಕ ಪ್ರಕಾಶ ಕೋಳಿವಾಡ ಹೇಳಿದರು.

error: Content is protected !!