Tag: ರಾಣೇಬೆನ್ನೂರು

Home ರಾಣೇಬೆನ್ನೂರು

ಧರ್ಮದ ಬಗ್ಗೆ ಜನರಲ್ಲಿ ಅಭಿಮಾನ ಹೆಚ್ಚಾಗಬೇಕು

ರಾಣೇಬೆನ್ನೂರು : ಹೆಚ್ಚುತ್ತಿರುವ ವಿದೇಶ ವ್ಯಾಮೋಹದಿಂದಾಗಿ ಇಂದು ಸಂಸ್ಕೃತಿ, ಸಂಸ್ಕಾರ, ಪರಂಪರೆ ಮತ್ತು  ಧರ್ಮದ ಬಗ್ಗೆ ಜನರಲ್ಲಿ ಅಭಿಮಾನ, ಗೌರವ ಕ್ಷೀಣಿಸುತ್ತಿದ್ದು, ಇದನ್ನು ಸಂರಕ್ಷಿಸಲು ಸರ್ವರೂ ಧರ್ಮಾಭಿಮಾನಿಗಳಾಗಿ, ಸಂಸ್ಕಾರವಂತರಾಗಿ ಸೇವೆಗೈಯ್ಯಲು ಮುಂದಾಗಬೇಕು

ರಾಣೇಬೆನ್ನೂರು : ರೈತರ ಸಾವಿಗೆ ಅಧಿಕಾರಿಗಳು, ಜನಪ್ರತಿನಿಧಿಗಳು ಕಾರಣರಾಗಬಾರದು

ರಾಣೇಬೆನ್ನೂರು : ಭಾರತ ಕೃಷಿ ಪ್ರಧಾನ ರಾಷ್ಟ್ರ, ರೈತನಿಗೆ ಸಮಯಕ್ಕೆ ಸರಿಯಾಗಿ ಬೀಜ, ಗೊಬ್ಬರ ಒದಗಿಸಬೇಕು. ರೈತ ಬೆಳೆದರೆ ನಮ್ಮ ದೇಶದ ಆರ್ಥಿಕ ಸ್ಥಿತಿ ಸುಧಾರಣೆ ಆಗಲಿದೆ ಎಂದು ಇಲ್ಲಿನ ಕಮಲಾ ನಗರದ ರೈತ ಸಂಪರ್ಕ ಕೇಂದ್ರದಲ್ಲಿ ಬೀಜ ವಿತರಿಸಿ ಮಾತನಾಡಿದ ಶಾಸಕ ಪ್ರಕಾಶ ಕೋಳಿವಾಡ ಹೇಳಿದರು.

ಅಡಿಕೆ ಬೆಳೆಯಿಂದ ದೂರ ಇರಲು ಸಲಹೆ

ರಾಣೇಬೆನ್ನೂರು : ಅಡಿಕೆ ಮಾರುಕಟ್ಟೆ ಕುಸಿದರೆ ರೈತ ಬಹಳಷ್ಟು ನೋವು ಅನುಭವಿಸುವಂತಾಗುತ್ತದೆ. ಹಿಂದೊಮ್ಮೆ  ರೈತರು ಅಡಿಕೆ ಮಾರುಕಟ್ಟೆ ಕುಸಿದಿದ್ದರಿಂದ ತೀವ್ರವಾದ ಸಂಕಷ್ಟಕ್ಕೆ ಸಿಲುಕಿದ್ದರು. ಕಾರಣ ಬಯಲುಸೀಮೆಯ ರೈತರು ಈ ದಿಶೆಯಲ್ಲಿ ಚಿಂತನೆ ಮಾಡಿ ಅಡಿಕೆ ಬೆಳೆಯತ್ತ ವಾಲಬೇಕು

ರಾಣೇಬೆನ್ನೂರು: ಮಾತಾ ಪಬ್ಲಿಕ್ ಶಾಲೆಯಲ್ಲಿ ಪ್ರಾರಂಭೋತ್ಸವ

ರಾಣೇಬೆನ್ನೂರು : ಇಲ್ಲಿನ ಜೋಳಮರಡೇಶ್ವರ ನಗರದಲ್ಲಿರುವ ಮಾತಾ ಪಬ್ಲಿಕ್ ಶಾಲೆಯಲ್ಲಿ 2023-24 ನೇ ಸಾಲಿನ ಶೈಕ್ಷಣಿಕ ವರ್ಷದ ಶಾಲಾ ಪ್ರಾರಂಭೋತ್ಸವವನ್ನು ವಿದ್ಯಾರ್ಥಿಗಳಿಗೆ ಹೂವು ಮತ್ತು ಸಿಹಿ ನೀಡುವ ಮೂಲಕ ಆಚರಿಸಲಾಯಿತು.

ರಾಣೇಬೆನ್ನೂರು : ವಿದ್ಯಾರ್ಥಿಗಳಿಗೆ ಪುಷ್ಪ‌ ನೀಡಿ ಶಾಲೆಗೆ ಸ್ವಾಗತ

ರಾಣೇಬೆನ್ನೂರು : ಭುವನೇಶ್ವರಿ ಆದರ್ಶ ಹಿರಿಯ ಪ್ರಾಥಮಿಕ ಶಾಲೆ ಕೊಡಿಯಾಲದಲ್ಲಿ ವಿದ್ಯಾರ್ಥಿಗಳಿಗೆ ಪುಷ್ಪ‌ ನೀಡುವುದರ ಮುಖಾಂತರ ಶಾಲೆಯ ಅಧ್ಯಕ್ಷರಾದ ಶೋಭಾ ಹಿರೇಮಠ ಮತ್ತು ಮುಖ್ಯೋಪಾಧ್ಯಾಯ ಮಲ್ಲಿಕಾರ್ಜುನ ಬಾವಿಕಟ್ಟಿ ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಓಸಿ, ಇಸ್ಪೀಟ್, ಜೂಜು ರಹಿತ ರಾಣೇಬೆನ್ನೂರು ನನ್ನ ಕನಸು

ರಾಣೇಬೆನ್ನೂರು : ಅನೇಕ ಬಡ ಕುಟುಂಬಗಳು ಓಸಿ, ಇಸ್ಪೀಟ್ ಆಟಗಳಿಂದ ನಲುಗಿಹೋಗಿವೆ. ಮನೆಗಳಲ್ಲಿನ ಪಾತ್ರೆ-ಪಡಗಗಳು, ಹೆಂಡಿರ ಕೊರಳೊಳಗಿನ ತಾಳಿಗಳನ್ನು ವತ್ತೆ ಇಟ್ಟ, ಮಾರಾಟ ಮಾಡಿದ ಸಾವಿರಾರು ಉದಾಹರಣೆಗಳು ಕಂಡುಬರುತ್ತಿವೆ.

ರಾಣೇಬೆನ್ನೂರು : ಮಂತ್ರಿಮಂಡಲದಲ್ಲಿ ಬಂಜಾರ ಸಮಾಜ ನಿರ್ಲಕ್ಷ್ಯ

ರಾಣೇಬೆನ್ನೂರು : ಕಾಂಗ್ರೆಸ್ ಪಕ್ಷದಿಂದ ಆಯ್ಕೆಯಾಗಿರುವ ಬಂಜಾರ ಸಮಾಜದ ಏಕೈಕ ಶಾಸಕರಾದ ಹಾವೇರಿಯ ರುದ್ರಪ್ಪ ಲಮಾಣಿ ಅವರಿಗೆ ಮಂತ್ರಿಗಿರಿ ತಪ್ಪಿಸಿ, ಸಿದ್ದರಾಮಯ್ಯ ಸರ್ಕಾರ ಬಂಜಾರ ಸಮಾಜಕ್ಕೆ ಬಹಳಷ್ಟು ಅನ್ಯಾಯ ಮಾಡಿದೆ

ಬೆಳೆ ವಿಮೆ ಹಣ ರೈತರ ಖಾತೆಗೆ ಜಮಾ ಮಾಡದಿದ್ದರೆ ಶಿಸ್ತು ಕ್ರಮ

ರಾಣೇಬೆನ್ನೂರು : ಬೆಳೆವಿಮೆ ಸೇರಿದಂತೆ ಸಂಧ್ಯಾ ಸುರಕ್ಷ, ವಿಧವಾ ವೇತನ, ಉದ್ಯೋಗ ಖಾತ್ರಿ ಸೇರಿದಂತೆ ಸರಕಾರದ ವಿವಿಧ ಯೋಜನೆಯ ಹಣವನ್ನು ರೈತರ ಸಾಲದ ಖಾತೆಗೆ ಜಮಾ ಮಾಡಿಕೊಂಡು ‘ಲಾಕ್’ ಮಾಡಿಕೊಂಡಿರುವುದು ಸಾಬೀತಾಗಿದೆ.

ಅಜಾಗರೂಕತೆ ಲಾರಿ ಚಾಲನೆ; ಡಿಕ್ಕಿ, ಸಾವು, ದಂಡ – ಶಿಕ್ಷೆ

ರಾಣೇಬೆನ್ನೂರು : ಅಜಾಗರೂಕತೆಯಿಂದ ಲಾರಿ ಚಾಲನೆ ಮಾಡಿ ಅಭಿಷೇಕ ಮಠದ ಸಾವಿಗೆ ಕಾರಣನಾದ ಆರೋಪಿ ಲಿಂಗದಹಳ್ಳಿಯ ಹನುಮಂತಪ್ಪ  ಬಾರ್ಕಿ ಅವನಿಗೆ ಇಲ್ಲಿನ ನ್ಯಾಯಾಲಯ ದಂಡ ಹಾಗೂ ಶಿಕ್ಷೆಯ ತೀರ್ಪು ನೀಡಿದೆ.

ದಾನ, ಧರ್ಮಗಳಿಂದ ಪುಣ್ಯ ಲಭಿಸುತ್ತದೆ

ರಾಣೇಬೆನ್ನೂರು : ಮನುಷ್ಯರಿಗೆ ಎಷ್ಟೇ ಮಾನಸಿಕವಾಗಿ ಜಂಜಾಟಗಳು ಇದ್ದರೂ ತಮ್ಮ ಭಕ್ತಿ ಮೂಲಕ ದೇವರ ಪ್ರತಿಷ್ಠಾಪನೆ, ದೇವಸ್ಥಾನ ಹಾಗೂ ಗೋಪುರ ನಿರ್ಮಾಣ ಮಾಡುವ ಮೂಲಕ ಬದುಕನ್ನು ಸುಂದರವಾಗಿ ರೂಪಿಸಿಕೊಳ್ಳುತ್ತಾರೆ

ನೂತನ ಶಾಸಕ ಪ್ರಕಾಶ ಕೋಳಿವಾಡಗೆ ತಾಲ್ಲೂಕು ರೆಡ್ಡಿ ಸಮಾಜದಿಂದ ಸನ್ಮಾನ

 ರಾಣೇಬೆನ್ನೂರು : ಕ್ಷೇತ್ರದ ಎಲ್ಲ ಸಮಾಜಗಳ ಮತದಾರರು ನನಗೆ ಮತ ನೀಡಿ ನನ್ನ ಜಯಕ್ಕೆ ಕಾರಣರಾಗಿದ್ದಾರೆ. ಎಲ್ಲ ಸಮಾಜಗಳ ಹಿರಿಯರು ಆಶೀರ್ವದಿಸಿದ್ದಾರೆ. ಕಿರಿಯರು ಪ್ರೀತಿ ತೋರಿಸಿದ್ದಾರೆ ಎಂದು ಶಾಸಕ ಪ್ರಕಾಶ್ ಕೋಳಿವಾಡ ಹೇಳಿದರು.

ರಾಣೇಬೆನ್ನೂರು ನಗರದೇವತೆ ದೇವಸ್ಥಾನದಲ್ಲಿಂದು ಕಳಸಾರೋಹಣ

ಚೌಡೇಶ್ವರಿ ದೇವಸ್ಥಾನದಲ್ಲಿ ನೂತನವಾಗಿ ನಿರ್ಮಿಸಿರುವ ಗೋಪುರಕ್ಕೆ ಹೊನ್ನಾಳಿ ಚನ್ನಮಲ್ಲಿಕಾರ್ಜುನ ಶ್ರೀ, ದಿಂಡದಹಳ್ಳಿ ಪಶುಪತಿ ಶ್ರೀ, ಲಿಂಗನಾಯ್ಕನಹಳ್ಳಿ ಚನ್ನವೀರ ಶ್ರೀ, ಶನೇಶ್ಚರ ಮಠದ ಶಿವಯೋಗಿ ಶ್ರೀ ಹಾಗೂ ವಿವೇಕಾನಂದಾಶ್ರಮ ಪ್ರಕಾಶಾನಂದ ಶ್ರೀಗಳ ಸಾನ್ನಿಧ್ಯದಲ್ಲಿ ಇಂದು ಕಳಸಾರೋಹಣ ನೆರವೇರಿಸಲಾಗುವುದು.