Tag: ರಾಣೇಬೆನ್ನೂರು

Home ರಾಣೇಬೆನ್ನೂರು

ಸ್ನೇಹದಿಂದ ಸಂಸ್ಥೆಯ ವಾರ್ಷಿಕೋತ್ಸವ

ರಾಣೇಬೆನ್ನೂರು : ಇಲ್ಲಿನ ಶ್ರೀರಾಮ ನಗರದ ಸ್ನೇಹದೀಪ ಅಂಧ ಅಂಗವಿಕಲರ ಸಂಸ್ಥೆಯಲ್ಲಿ ಶನಿವಾರ  ಸಂಸ್ಥೆಯ 8ನೇ ವರ್ಷದ ವಾರ್ಷಿಕೋತ್ಸವ ಸಮಾರಂಭವನ್ನು ಉಪಸಭಾಪತಿ ರುದ್ರಪ್ಪ ಲಮಾಣಿ ಉದ್ಘಾಟಿಸಿದರು.

ಪ್ಯಾನಿಕ್ ಬಟನ್, ಜಿಪಿಎಸ್ ವ್ಯವಸ್ಥೆ ಕೈಬಿಡಲು ಆಗ್ರಹಿಸಿ ಪ್ರತಿಭಟನೆ

ರಾಣೇಬೆನ್ನೂರು : ರಾಜ್ಯದಲ್ಲಿ ಟ್ಯಾಕ್ಸಿಗಳಿಗೆ ಅಳವಡಿಸಲು ಸೂಚಿಸಿರುವ ಪ್ಯಾನಿಕ್ ಬಟನ್ ಹಾಗೂ ಜಿಪಿಎಸ್ ವ್ಯವಸ್ಥೆ ಕೈಬಿಡುವಂತೆ ಆಗ್ರಹಿಸಿ ನಗರದ ಹಳೇ ಪಿ.ಬಿ.ರಸ್ತೆ ಶ್ರೀ ವಿನಾಯಕ ಕಾರು ಚಾಲಕರ ಮತ್ತು ಮಾಲೀಕರ ಸಂಘದ ಸದಸ್ಯರು ಗುರುವಾರ ನಗರದಲ್ಲಿ ಪ್ರತಿಭಟಿಸಿ, ಎ.ಆರ್.ಟಿ.ಓ ಕಛೇರಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. 

ಜಿಲ್ಲಾಡಳಿತದ ನಿರ್ಲಕ್ಷ್ಯ: ಕೃಷಿ ಸಾಮಗ್ರಿ ನೀರು ಪಾಲು

ರಾಣೇಬೆನ್ನೂರು : ತುಂಗಭದ್ರಾ ನದಿಯಲ್ಲಿ ನೀರು ಹೆಚ್ಚಳವಾಗುವ ಬಗ್ಗೆ ಹಾವೇರಿ ಜಿಲ್ಲಾಡಳಿತ ರೈತರಿಗೆ ಹಾಗೂ ನದಿ ತೀರದ ಜನರಿಗೆ ಮುನ್ನೆಚ್ಚರಿಕೆ ಕೊಡದಿದ್ದರಿಂದ ರೈತರ ಕೃಷಿ ಉಪಕರಣಗಳು ನದಿಯ ಪಾಲಾಗಿವೆ ಎಂದು ರಾಜ್ಯ ರೈತ ಸಂಘದ ಸಂಘಟನಾ ಕಾರ್ಯದರ್ಶಿ ರವೀಂದ್ರಗೌಡ ಎಫ್. ಪಾಟೀಲ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪುಸ್ತಕ, ಬ್ಯಾಗ್ ವಿತರಿಸುವ ಮೂಲಕ ಜನ್ಮ ದಿನ ಆಚರಿಸಲಿರುವ ಪರಮೇಶ್ವರಪ್ಪ

ರಾಣೇಬೆನ್ನೂರು : ಸರ್ಕಾರಿ ಹಾಗೂ ಅನುದಾನಿತ  5 ರಿಂದ 10 ನೇ ತರಗತಿಗಳ ವಿದ್ಯಾರ್ಥಿಗಳಿಗೆ ಉಚಿತ ನೋಟ್ ಪುಸ್ತಕ ಹಾಗೂ ಬ್ಯಾಗ್ ಕೊಡುವುದರೊಂದಿಗೆ ಬಿಜೆಪಿ ಗ್ರಾಮೀಣ ಮಂಡಲದ ಅಧ್ಯಕ್ಷ ಪರಮೇಶಪ್ಪ ಗೂಳಣ್ಣನವರ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ.

ಮೈದುಂಬಿದ ಮದಗದ ಕೆರೆ ಕುಣಿದು ಕುಪ್ಪಳಿಸುತ್ತಿರುವ ಕುಮದ್ವತಿ..!

ರಾಣೇಬೆನ್ನೂರು : ಕಳೆದೆರಡು ದಿನಗಳಿಂದ ಶಿವಮೊಗ್ಗ ಮತ್ತು ಶಿಕಾರಿಪುರ ತಾಲ್ಲೂಕುಗಳಲ್ಲಿ  ಸುರಿಯುತ್ತಿರುವ ಮಳೆಯಿಂದಾಗಿ ಶಿಕಾರಿಪುರ ತಾಲ್ಲೂಕಿನ ಅಂಜನಾಪುರ ಜಲಾಶಯ ತುಂಬಿ ತುಳುಕಾಡುತ್ತಿದೆ. ಹಾಗಾಗಿ  ಕೆರೆಗೆ ಹಾರವಾದ ನೆರೆಯ ರಟ್ಟಿಹಳ್ಳಿ ತಾಲ್ಲೂಕಿನ  ಐತಿಹಾಸಿಕ ಮದಗದ ಕೆಂಚಮ್ಮನ ಕೆರೆ ಮೈದುಂಬಿಕೊಂಡಿದೆ. 

ಶ್ರೀಗಳ ಆಷಾಡ ಮಾಸದ ಇಷ್ಟಲಿಂಗ ಮಹಾಪೂಜೆ

ರಾಣೇಬೆನ್ನೂರು : ಉಜ್ಜಯನಿ ಜಗದ್ಗುರು ಸಿದ್ದಲಿಂಗ ರಾಜದೇಶಿ ಕೇಂದ್ರ ಶ್ರೀಗಳ ಆಷಾಡ ಮಾಸದ ಇಷ್ಠಲಿಂಗ ಮಹಾಪೂಜೆ ಮೂರು ದಿನಗಳ  ಕಾರ್ಯಕ್ರಮ ಇಂದು ಉದ್ಘಾಟನೆ. ಆವರಗೊಳ್ಳದ ಓಂಕಾರ ಶ್ರೀ ಗಳಿಂದ ನಡೆಯಿತು. ಹೊನ್ನಾಳಿ ಹಿರೇಕಲ್ಮಠದ ಚನ್ನಮಲ್ಲಿಕಾರ್ಜುನ ಶ್ರೀ ನೇತೃತ್ವ ವಹಿಸಿದ್ದರು. 

ರಾಣೇಬೆನ್ನೂರು : ನಾಮದೇವ ಸಿಂಪಿ ಸಮಾಜದಿಂದ ಏಕಾದಶಿ

ರಾಣೇಬೆನ್ನೂರು : ಇಲ್ಲಿನ ನಾಮದೇವ ಸಿಂಪಿ ಸಮಾಜದವರು ವಿಠಲನ ಪ್ರಿಯ ದಿನವಾದ ಬುಧವಾರವೇ ಏಕಾದಶಿ ಬಂದಿದ್ದು, ಭಕ್ತರು ಅತ್ಯಂತ ಶ್ರದ್ಧಾಭಕ್ತಿಯಿಂದ ಪ್ರಥಮ ಆಷಾಢ ಕಾರ್ಯಕ್ರಮವನ್ನು ವಿಠಲ ರುಕ್ಮಾಯಿ ದೇವಸ್ಥಾನದಲ್ಲಿ  ಫಲ ಪಂಚಾಮೃತ ಅಭಿಷೇಕ ಮಾಡಿದರು.  

ದಾನ ಬದುಕನ್ನು ಸುಂದರಗೊಳಿಸುತ್ತದೆ

ರಾಣೇಬೆನ್ನೂರು : ದಾನ ಮಾಡುವುದು, ಸ್ವೀಕರಿಸುವುದು ಆರೋಗ್ಯಕರ ಸಮಾಜದ ಅವಿಭಾಜ್ಯ ಅಂಗ, ಅಲ್ಲಿ ಪ್ರೀತಿ, ಮಮಕಾರ, ಸಂತೃಪ್ತಿ, ನೆಮ್ಮದಿ ಎಲ್ಲ ಇದೆ. ದಾನ ಮಾಡುವುದರಿಂದ ಬದುಕು ಸುಂದರಮಯವಾಗಿ ರೂಪಗೊಳ್ಳಲಿದೆ

ಮತದಾರರಿಗೆ ಆಮಿಷ; ಉಪಸಭಾಪತಿ ರುದ್ರಪ್ಪ ಲಮಾಣಿ ವಿರುದ್ದ ಎಫ್‌ಐಆರ್

ರಾಣೇಬೆನ್ನೂರು : 2023ರ ವಿಧಾನಸಭೆ ಚುನಾವಣೆಗೆ  ನಾಮಪತ್ರ ಸಲ್ಲಿಕೆ ಸಮಯದಲ್ಲಿ ನಡೆಸಿದ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದವರಿಗೆ ಸಾವಿರಕ್ಕೂ ಅಧಿಕ ಟಿ-ಶರ್ಟ್ ನೀಡಿ, ನೀತಿ ಸಂಹಿತೆ ಉಲ್ಲಂಘನೆ ಮಾಡಿದ್ದ ಆರೋಪದಡಿ ಶಾಸಕ, ಇಂದಿನ ಉಪಸಭಾಪತಿ ರುದ್ರಪ್ಪ ಲಮಾಣಿ ವಿರುದ್ದ ಹಾವೇರಿ ಶಹರ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

ತುಂಬಿದ ತುಂಗಭದ್ರೆ, ಖಾಲಿ ಕುಮದ್ವತಿ…

ರಾಣೇಬೆನ್ನೂರು : ನಾಡಿನ ಎಲ್ಲೆಡೆ ವರುಣನ ಕೃಪೆಯಿಂದ ಹಳ್ಳ-ಕೊಳ್ಳಗಳು, ಕೆರೆ-ಕಟ್ಟೆಗಳು ತುಂಬಿದ್ದು  ಜೋಗವೂ ಸೇರಿದಂತೆ ವಿವಿಧ ಸಣ್ಣ-ಪುಟ್ಟ ಜಲಪಾತಗಳ ಭೋರ್ಗರೆತ ಕೇಳಿಬರುತ್ತಿದೆ. ಆದರೆ  ಹಾವೇರಿ ಜಿಲ್ಲೆಯಲ್ಲಿನ ಮದಗದ ಕೆರೆ ಬರಿದಾಗಿದ್ದು, ಕುಮದ್ವತಿ ನದಿ ಬತ್ತಿದೆ.

ರಾಣೇಬೆನ್ನೂರು ರೋಟರಿ ಪದಗ್ರಹಣ

ರಾಣೇಬೆನ್ನೂರು : ಇಲ್ಲಿನ ರೋಟರಿ ಹಾಗೂ ಇನ್ನರ್ ವ್ಹೀಲ್ ಸಂಸ್ಥೆಗಳ  2024-25ನೇ ಸಾಲಿಗೆ ಆಯ್ಕೆಯಾದ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ಇದೇ  ದಿನಾಂಕ 13 ರಂದು ಬೆಳಿಗ್ಗೆ ವರ್ತಕರ ಸಮುದಾಯ ಭವನದಲ್ಲಿ ನಡೆಯಲಿದೆ.

error: Content is protected !!