Tag: ದಾವಣಗೆರೆ

Home ದಾವಣಗೆರೆ

ಯೂರಿಯಾ ಗೊಬ್ಬರ ಮಿತವಾಗಿ ಬಳಸಿ

ಜಿಲ್ಲೆಯಾದ್ಯಂತ ಉತ್ತಮ ಮಳೆಯಾಗುತ್ತಿದ್ದು, ರೈತರು ಯೂರಿಯಾ ಗೊಬ್ಬರ ಬಳಸುವಾಗ ಸೂಕ್ತ ಎಚ್ಚರಿಕೆ ಪಾಲಿಸಬೇಕು. ಪ್ರತಿ ಎಕರೆ ಖುಷ್ಕಿ ಮುಸುಕಿನ ಜೋಳಕ್ಕೆ 25 ಕೆ.ಜಿ ಯೂರಿಯಾ ಬಳಸಬೇಕು.

ಮುಡಾ ಹಗರಣ : ಸಿಎಂ ರಾಜೀನಾಮೆ, ಸಿಬಿಐ ತನಿಖೆಗೆ ಆಗ್ರಹ

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರವಾದ ಮುಡಾ ಹಗರಣದಲ್ಲಿ ಸಿಲುಕಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕು ಹಾಗೂ ಹಗರಣವನ್ನು ಸಿ.ಬಿ.ಐ. ತನಿಖೆಗೆ ವಹಿಸಬೇಕು ಎಂದು ಮಾಜಿ ಸಂಸದ ಜಿ.ಎಂ. ಸಿದ್ದೇಶ್ವರ ಒತ್ತಾಯಿಸಿದ್ದಾರೆ.

7ನೇ ವೇತನ ಆಯೋಗ ಜಾರಿಗಾಗಿ ಆಗ್ರಹ

ಸರ್ಕಾರಿ ನೌಕರರಿಗೆ ಸಂಬಂಧಿಸಿದ ಏಳನೇ ವೇತನ ಆಯೋಗದ ವರದಿಯನ್ನು ರಾಜ್ಯ ಸರ್ಕಾರ ಯಥಾವತ್ತಾಗಿ ಜಾರಿಗೊಳಿಸುವುದೂ ಸೇರಿದಂತೆ ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸಲು ಮನವಿ ಸಲ್ಲಿಸಲಾಯಿತು.

ಸಿಎ ಪರೀಕ್ಷೆ: ಪ್ರಥಮ ಹಂತದಲ್ಲೇ ನಗರದ ಭಾವನಾ ಶೇಟ್ ಉತ್ತೀರ್ಣ

ಭಾರತೀಯ ಲೆಕ್ಕಪರಿಶೋಧಕರ ಸಂಸ್ಥೆ ನಡೆಸುವ ದೇಶದ ಪ್ರಮುಖ ಪರೀಕ್ಷೆಗಳಲ್ಲೊಂದಾದ `ಚಾರ್ಟರ್ಡ್ ಅಕೌಂಟೆಂಟ್’ (C.A.) ಅಂತಿಮ ಪರೀಕ್ಷೆಯಲ್ಲಿ  ನಗರದ ಕು. ಭಾವನಾ ಶೇಟ್ ಪ್ರಥಮ ಹಂತದಲ್ಲೇ  ಉತ್ತೀರ್ಣರಾಗಿದ್ದಾರೆ.

ನಗರದಲ್ಲಿ ಇಂದು ಮಾಜಿ ಸಂಸದ ಜಿ.ಎಂ. ಸಿದ್ದೇಶ್ವರ ಜನ್ಮ ದಿನಾಚರಣೆ

ಲೋಕಸಭೆಯ ಮಾಜಿ ಸದಸ್ಯ ಜಿ.ಎಂ. ಸಿದ್ದೇಶ್ವರ ಅವರ ಜನ್ಮ ದಿನ ಸಮಾರಂಭವನ್ನು ಶ್ರೀ ಅಭಿನವ ರೇಣುಕ ಮಂದಿರದಲ್ಲಿ ಇಂದು ಬೆಳಿಗ್ಗೆ 10.30ಕ್ಕೆ ಆಯೋಜಿಸಲಾಗಿದೆ.

ಪ್ರಭುದೇವ್, ವಿದ್ಯಾನಗರ ಲಯನ್ಸ್ ಅಧ್ಯಕ್ಷ

ಸ್ಥಳೀಯ ವಿದ್ಯಾನಗರ ಲಯನ್ಸ್ ಕ್ಲಬ್ಬಿನ 2024-25ನೇ ಸಾಲಿನ ಅಧ್ಯಕ್ಷರಾಗಿ ತಾಲ್ಲೂಕು ಪಂಚಾಯ್ತಿಯ ನಿವೃತ್ತ ಮುಖ್ಯ ಕಾರ್ಯನಿರ್ವಹಣಾಧಕಾರಿ ಎಲ್.ಎಸ್. ಪ್ರಭುದೇವ್ ಆಯ್ಕೆಯಾಗಿದ್ದಾರೆ.

ಮೈತ್ರಿವನದಲ್ಲಿ ಇಂದು ಮತ್ತು ನಾಳೆ ಕಾರ್ಯಾಗಾರ

ಹರಿಹರ ತಾಲ್ಲೂಕು ಹನಗವಾಡಿ ಸಮೀಪದ ಪ್ರೊ. ಬಿ. ಕೃಷ್ಣಪ್ಪ ಟ್ರಸ್ಟ್ ಮೈತ್ರಿವನದಲ್ಲಿ ಸತೀಶ್ ಜಾರಕಿಹೊಳಿ ಫೌಂಡೇಶನ್ ಹಾಗೂ ಮಾನವ ಬಂಧುತ್ವ ಮಹಿಳಾ ವೇದಿಕೆ ಸಂಯುಕ್ತಾಶ್ರಯದಲ್ಲಿ ಇಂದು ಮತ್ತು ನಾಳೆ ಮಹಿಳಾ ಬಂಧುತ್ವ ವೇದಿಕೆಯ ಎಲ್ಲಾ ಜಿಲ್ಲಾ ಸಂಚಾಲಕರು ಮತ್ತು ಸಹ ಸಂಚಾಲಕರಿಗೆ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ.

ನಗರದಲ್ಲಿ ಇಂದು ಅಲರ್ಜಿ ತಪಾಸಣೆ

ಮೋತಿ ವೀರಪ್ಪ ಕಾಲೇಜು ಹಿಂಭಾಗದಲ್ಲಿರುವ ಎನ್.ಹೆಚ್. ಕೃಷ್ಣ ಅವರ ಆಸ್ಪತ್ರೆಯಲ್ಲಿ ವೈದ್ಯರ ದಿನಾಚರಣೆಯ ತಿಂಗಳ ಅಂಗವಾಗಿ ಅಸ್ತಮಾ, ಅಲರ್ಜಿ ಹಾಗೂ ಇತರೆ ಉಸಿರಾಟದ ಕಾಯಿಲೆಗಳಿಗಾಗಿ ಕಂಪ್ಯೂಟರ್ ಮೂಲಕ ಉಚಿತ ಶ್ವಾಸಕೋಶ ತಪಾಸಣೆ (ಸ್ಪೆರೋಮೀಟರ್) ಹಾಗೂ ಉಚಿತ ವೈದ್ಯರ ಸಲಹಾ ಶಿಬಿರ ಇಂದು ಬೆಳಿಗ್ಗೆ 11 ರಿಂದ ಮಧ್ಯಾಹ್ನ 2 ರವರೆಗೆ ನಡೆಯಲಿದೆ

ನಗರದಲ್ಲಿ ಇಂದು ಪ್ರತಿಭಾವಂತ ಬಡ ವಿದ್ಯಾರ್ಥಿಗಳಿಗೆ ಪುರಸ್ಕಾರ

ಲಯನ್ಸ್ ಕ್ಲಬ್ ದಾವಣಗೆರೆ ಮತ್ತು ಸಂಕಲ್ಪ ಸೇವಾ ಫೌಂಡೇಷನ್ ಮತ್ತು ಶ್ರೀ ಕೊಂಡಜ್ಜಿ ಬಸಪ್ಪ ವಿದ್ಯಾವರ್ಧಕ ಸಂಘ ಇವರುಗಳ ಸಂಯುಕ್ತಾಶ್ರಯದಲ್ಲಿ   5, 6, 7ನೇ ತರಗತಿಯ ಪ್ರತಿಭಾವಂತ ಬಡ ವಿದ್ಯಾರ್ಥಿಗಳಿಗೆ ನಗರ ಮತ್ತು ಗ್ರಾಮಾಂತರ ಮಟ್ಟದಲ್ಲಿ ಪುರಸ್ಕಾರ ಸಮಾರಂಭವನ್ನು ಇಂದು ಬೆಳಗ್ಗೆ 11ಕ್ಕೆ ಲಯನ್ಸ್ ಕ್ಲಬ್ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ.

ಭರಮಸಾಗರ-ಚಿತ್ರದುರ್ಗ ರೈಲ್ವೆ ಕಾಮಗಾರಿಗೆ ಶೀಘ್ರ ಭೂಮಿ ಪೂಜೆ

ದಾವಣಗೆರೆ-ಚಿತ್ರದುರ್ಗ-ತುಮಕೂರು ನೇರ ರೈಲ್ವೆ ಯೋಜನೆಗೆ ಸಂಬಂ ಧಿಸಿದಂತೆ ಜಿಲ್ಲೆ ವ್ಯಾಪ್ತಿಯ ಭರಮ ಸಾಗರ-ಚಿತ್ರದುರ್ಗ ಮಧ್ಯದ ಕಾಮ ಗಾರಿ ಚಾಲನೆಗೆ ಶೀಘ್ರ ಭೂಮಿ ಪೂಜೆ ನೆರವೇರಿಸಲಾಗುವುದು ಎಂದು ಸಂಸದ ಗೋವಿಂದ ಎಂ. ಕಾರಜೋಳ ಹೇಳಿದ್ದಾರೆ.

ನಗರದಲ್ಲಿ ಇಂದು ಕೆಪಿಟಿಸಿಎಲ್ ನಿವೃತ್ತ ನೌಕರರಿಗೆ ಸನ್ಮಾನ

ಕೆಪಿಟಿಸಿಎಲ್‌ನಲ್ಲಿ ಕೆಲಸ ಮಾಡಿ ನಿವೃತ್ತಿ ಹೊಂದಿರುವ 80 ವರ್ಷ ಮೇಲ್ಪಟ್ಟವರಿಗೆ ಸನ್ಮಾನ ಸಮಾರಂಭ ಇಂದು ಬೆಳಿಗ್ಗೆ 11ಕ್ಕೆ ಕೆಇಬಿ ಸಮುದಾಯ ಭವನದಲ್ಲಿ ನಡೆಯಲಿದೆ.

error: Content is protected !!