ನಗರದ ವೃತ್ತಗಳ ಬಳಿಯ ಗುಂಡಿ ಮುಚ್ಚಿಸಿ..
ಎಸ್. ನಿಜಲಿಂಗಪ್ಪ ಬಡಾವಣೆಯಲ್ಲಿರುವ ಕರ್ನಲ್ ರವೀಂದ್ರನಾಥ ಸರ್ಕಲ್ನಲ್ಲಿ ಯಾವುದೋ ಲೈನ್ ಎಳೆಯಲು ರಸ್ತೆಗೆ ಅಡ್ಡಲಾಗಿ ಗುಂಡಿ ತೋಡಿ ಸರಿಯಾಗಿ ರಿಪೇರಿ ಮಾಡದ ಕಾರಣ ವಾಹನ ಸವಾರರು ಜೀವ ಕೈಯಲ್ಲಿಡಿದು ಗಾಡಿ ಓಡಿಸಬೇಕಾಗಿದೆ.
ಎಸ್. ನಿಜಲಿಂಗಪ್ಪ ಬಡಾವಣೆಯಲ್ಲಿರುವ ಕರ್ನಲ್ ರವೀಂದ್ರನಾಥ ಸರ್ಕಲ್ನಲ್ಲಿ ಯಾವುದೋ ಲೈನ್ ಎಳೆಯಲು ರಸ್ತೆಗೆ ಅಡ್ಡಲಾಗಿ ಗುಂಡಿ ತೋಡಿ ಸರಿಯಾಗಿ ರಿಪೇರಿ ಮಾಡದ ಕಾರಣ ವಾಹನ ಸವಾರರು ಜೀವ ಕೈಯಲ್ಲಿಡಿದು ಗಾಡಿ ಓಡಿಸಬೇಕಾಗಿದೆ.
ಇಂದು ಬೆಳಿಗ್ಗೆ 10 ಗಂಟೆಗೆ ಜಿಲ್ಲಾಡಳಿತ ಭವನದಲ್ಲಿರುವ ಕೊಠಡಿ ಸಂಖ್ಯೆ-51ರಲ್ಲಿ ನೇರ ಆಯ್ಕೆ ಸಂದರ್ಶನ ಆಯೋಜಿಸಲಾಗಿದೆ ಎಂದು ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದ ಉದ್ಯೋಗಾಧಿಕಾರಿ ರವೀಂದ್ರ. ಡಿ ತಿಳಿಸಿದ್ದಾರೆ.
ಆಗಸ್ಟ್ 15 ರಂದು ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಕಾರ್ಯಕ್ರಮ ಆಯೋಜನೆಯಾಗಿರುತ್ತದೆ. ಶಾಲಾ- ಕಾಲೇಜಿನ ಮಕ್ಕಳು ನಗರದ ವಿವಿಧ ಭಾಗಗಳಿಂದ ಕ್ರೀಡಾಂಗಣದ ಪೂರ್ವ ಮತ್ತು ಉತ್ತರ ಗೇಟಿನಿಂದ ಒಳ ಬರುತ್ತಾರೆ.
ಇತ್ತೀಚಿಗೆ ದಾವಣಗೆರೆ ಮಹಾನಗರದಲ್ಲಿ ನೂತನವಾಗಿ ನಿರ್ಮಿಸಿರುವ ಶಾಮನೂರು ಶಿವಶಂಕರಪ್ಪ ಖಾಸಗಿ ಬಸ್ ನಿಲ್ದಾಣ ಪೂರ್ಣವಾಗಿ 3 ತಿಂಗಳು ಕಳೆದರೂ ಸೇವೆಗೆ ಇನ್ನೂ ಮುಕ್ತವಾಗಿಲ್ಲ.
ದಾವಣಗೆರೆ ನಗರದಲ್ಲಿ `ಗಾಂಧಿ ನಗರ’ ಎಂಬ ದಲಿತರೇ ಪ್ರಮುಖವಾಗಿ ವಾಸಿಸುವ ಪ್ರದೇಶವೊಂದನ್ನು ಬಿಟ್ಟರೆ, ಗಾಂಧಿ ಯವರ ಹೆಸರಿನ ಪ್ರಮುಖ ಸ್ಥಳವೊಂದು (ಗಾಂಧೀಜಿ ಹೆಸರಲ್ಲಿ ಎರಡು ಶಾಲೆಗಳಿವೆ) ಈ ನಗರದಲ್ಲಿದೆ ಎಂಬುದೇ ಬಹುತೇಕರಿಗೆ ಗೊತ್ತೇ ಇರಲಿಲ್ಲ!
ದಾವಣಗೆರೆಯ ಪಿ.ಜೆ. ಬಡಾವಣೆಯು ಪ್ರತಿಷ್ಠಿತ ಏರಿಯಾಗಳಲ್ಲಿ ಒಂದಾಗಿದೆ. ನಗರದ ಹೃದಯ ಭಾಗದಲ್ಲಿ ನೆಲೆ ಆಗಿರುವ ಈ ಏರಿಯಾದ 3ನೇ ಮುಖ್ಯ ರಸ್ತೆಯಲ್ಲಿ ಹೊಂಡಗಳು ಬಿದ್ದು ರಸ್ತೆಗಳನ್ನು ಹುಡುಕಿಕೊಳ್ಳುವ ದುಸ್ಥಿತಿ ಇದೆ.
ದೇಶದಲ್ಲಿ ಪ್ರತಿದಿನ ಸಾವಿರಾರು ಸಂಖ್ಯೆಯಲ್ಲಿ ರೈಲುಗಳು ಪ್ರಯಾಣಿಕರನ್ನು ಹೊತ್ತು ಸಂಚರಿಸುತ್ತವೆ. ಇದೊಂದು ರೀತಿ ಜನಸ್ನೇಹಿ ಸಾರಿಗೆ ವ್ಯವಸ್ಥೆ, ಆದರೆ ನಮ್ಮ ರೈಲ್ವೆಗೆ ಆಧುನಿಕ ಸ್ಪರ್ಶ ಬೇಕಾಗಿದೆ.
ನಮ್ಮ ರಾಜ್ಯದಲ್ಲಿ ಮೊದಲು ಮುಖ್ಯ ಕಂದಾಯ ವಿಭಾಗಗಳಿರುವ ಬೆಂಗಳೂರು, ಮಂಗಳೂರು, ಗುಲ್ಬರ್ಗ ಮತ್ತು ಬೆಳಗಾವಿ ಮಹಾನಗರಗಳಲ್ಲಿ ಮಾತ್ರ ವಿಶ್ವ ವಿದ್ಯಾನಿಲಯಗಳು ಇರುತ್ತಿದ್ದವು.
ಹರಿಹರ ರಾಜ್ಯ ಹೆದ್ದಾರಿಯಿಂದ ಬೆಳ್ಳೂಡಿ ಗ್ರಾಮ ಸಂಪೂರ್ಣವಾಗಿ ಕೆಸರು ಗದ್ದೆಯಾಗಿದ್ದು, ಸಂಬಂಧಿಸಿದ ಅಧಿಕಾರಿಗಳು ಗ್ರಾಮಸ್ಥರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ನಗರದ ಪಿ.ಬಿ. ರಸ್ತೆಯ ಆರ್.ಎಚ್.ಧರ್ಮಶಾಲೆ ಸಮೀಪದ ಬಿಎಸ್ಎನ್ಎಲ್ ಕಲ್ಲಿನ ಬಿಲ್ಡಿಂಗ್ ಮುಂಭಾಗ ಇರುವ ವೃತ್ತದಲ್ಲಿ ದೊಡ್ಡ ಗುಂಡಿಯಾಗಿದ್ದು ಬಹಳ ತೊಂದರೆಯಾಗಿದೆ.
ಮಧ್ಯ ಕರ್ನಾಟಕದಲ್ಲಿಯೇ ಪ್ರಸಿದ್ಧಿ ಹೊಂದಿದ ಕೈಗಾರಿಕಾ ನಗರ ಮತ್ತು ಐತಿಹಾಸಿಕ ಹಿನ್ನೆಲೆ ಇರುವ ಶ್ರೀ ಹರಿಹರೇಶ್ವರ ಭವ್ಯ ದೇವಾಲಯ ಇರುವ ಕ್ಷೇತ್ರ ಎಂದು ಗುರುತಿಸಿಕೊಂಡ ಹರಿಹರದ ಸರ್ಕಾರಿ ಬಸ್ ನಿಲ್ದಾಣವು ಮಳೆಯ ನೀರಿನಿಂದ ಕೆರೆಯಂತಾಗಿದೆ.
ಯಲಬುರ್ಗಾ ವಿಧಾನಸಭಾ ಕ್ಷೇತ್ರದ ಶಾಸಕ ಬಸವರಾಜ ರಾಯರೆಡ್ಡಿಯವರು ತಮ್ಮ ಶಾಸಕ ಸ್ಥಾನದ ಪ್ರತಿ ತಿಂಗಳ ವೇತನವನ್ನು ಗೃಹಲಕ್ಷ್ಮಿ ಯೋಜನೆಗೆ ಬಿಟ್ಟುಕೊಟ್ಟು ಇತರರಿಗೆ ಮಾದರಿಯಾಗಿರುವುದು ಕರುಣಾಮಯ ಹೃದಯದ ಸಂಕೇತ.