Category: ಓದುಗರ ಪತ್ರ

Home ಓದುಗರ ಪತ್ರ

ತಹಶೀಲ್ದಾರ್‌ ಕಚೇರಿಯ ಕಟ್ಟಡ ಅಪಾಯದಲ್ಲಿ?

ದಾವಣಗೆರೆ ನಗರದಲ್ಲಿ ಇರುವ ತಹಶೀಲ್ದಾರ್‌ ಕಚೇರಿಯ ಇಡೀ ಕಟ್ಟಡವನ್ನು ಕಂಡಾಗ ತುಂಬಾ ಭಯವನ್ನುಂಟು ಮಾಡುತ್ತದೆ. ಈ ಕಟ್ಟಡವು ಶಿಥಿಲಗೊಂಡು ಇದರ ಕೆಲವು ಭಾಗಗಳು ಯಾವುದೇ ಕ್ಷಣದಲ್ಲಿ ಬಿದ್ದರೂ ಅಚ್ಚರಿ ಇಲ್ಲ ಎಂಬಂತೆ ಇವೆ.

ಮತ್ತೆ ಹಂದಿಗಳ ಸಂಖ್ಯೆ ಹೆಚ್ಚುತ್ತಿದೆ

ದಾವಣಗೆರೆ ಸ್ಮಾರ್ಟ್ ಸಿಟಿಯಲ್ಲಿ ಹಂದಿಗಳ ಹಾವಳಿ ಮತ್ತೆ ಆರಂಭವಾಯಿತೇ? ನಗರದಲ್ಲಿ ಸಂಪೂರ್ಣವಾಗಿ ಹಂದಿಗಳು ಕಣ್ಮರೆಯಾಗಿದ್ದವು. ಆದರೆ ಇತ್ತೀಚಿನ ಕೆಲ ದಿನಗಳಿಂದ ಹಿಂದಿನಂತೆಯೇ ಹಂದಿಗಳು ಕಾಣಸಿಗುತ್ತಿವೆ

ಫುಟ್‌ಪಾತ್‌ ಒತ್ತುವರಿ ಸರಿಪಡಿಸಿ, ಸುಗಮ ಸಂಚಾರ ಕಲ್ಪಿಸಿ

ದಾವಣಗೆರೆ ನಗರದ ವಿಜಯಲಕ್ಷ್ಮಿ ರಸ್ತೆಯಲ್ಲಿ ಬೀದಿ ಬದಿ ವ್ಯಾಪಾರಿಗಳು ಪಾದಚಾರಿ ರಸ್ತೆಯನ್ನು ಅಕ್ರಮವಾಗಿ  ಒತ್ತುವರಿ ಮಾಡಿಕೊಂಡಿದ್ದರಿಂದ ಪಾದಚಾರಿಗಳಿಗೆ, ವಾಹನ ಸಂಚಾರಿಗಳಿಗೆ ಮತ್ತು ವಾಹನ ನಿಲುಗಡೆಗೆ ಸಂಕಷ್ಟ ಎದುರಾಗಿದೆ.

ಕಸ ತುಂಬಿರುವ ದಾವಣಗೆರೆ

ದಾವಣಗೆರೆ ನಗರವು ಯಾವಾಗ ಸ್ವಚ್ಛ ನಗರವಾಗುತ್ತದೆ? ಯಾಕೆ ನಮ್ಮಲ್ಲಿ ನಾಗರಿಕ ಪ್ರಜ್ಞೆಯೇ ಸತ್ತುಹೋಗಿದೆ…ಎಲ್ಲಿ ನೋಡಿದರೂ ಕಸ. ನಾವು ಆಂಜನೇಯ ಬಡಾವಣೆಯ ಹಿತರಕ್ಷಣಾ ಸಮಿತಿಯಿಂದ ಒಂದಾರು ಜನ  ಪ್ರತಿ ಭಾನುವಾರ ಒಂದು ಗಂಟೆ ಸ್ವಚ್ಛತಾ ಕಾರ್ಯಕ್ರಮವನ್ನು ಕೈಗೊಳ್ಳುತ್ತೇವೆ.

ಮಾನವ ಹತ್ಯೆ : ಅಂತರರಾಷ್ಟ್ರೀಯ ಮಾನವ ಹಕ್ಕುಗಳ ಸಂಸ್ಥೆ ಮತ್ತು ವಿಶ್ವ ಸಂಸ್ಥೆ ಮೌನವೇಕೆ ?

ನಮ್ಮ ಭವ್ಯ ರಾಷ್ಟ್ರ ಭಾರತ ದೇಶದ ಸಹೋದರ ರಾಷ್ಟ್ರವಾದ ಬಾಂಗ್ಲಾದೇಶದಲ್ಲಿ ಕಳೆದ 1 ತಿಂಗಳಿಂದ ಅಮಾನುಷವಾಗಿ ಮಾನವ ಹತ್ಯೆ ನಡೆಯುತ್ತಿದ್ದು, ಅವುಗಳನ್ನು ಮೌನ ತುಂಬಿದ / ದುಃಖಿತ ಹೃದಯದಿಂದ ಸುದ್ಧಿ ಪ್ರಸಾರ ನೋಡುತ್ತಿದ್ದು, ತುಂಬಾ ಅಮಾನುಷವಾಗಿ ನಾಗರಿಕರನ್ನು ಕೊಲ್ಲಲಾಗುತ್ತಿದೆ.

ರಸ್ತೆಗೆ ಹಾಕಿದ ಚರಂಡಿ ಹೊದಿಕೆ ಕಲ್ಲು ಸರಿಪಡಿಸಿ

ವಿನೋಬ ನಗರದ 1ನೇ ಮುಖ್ಯ ರಸ್ತೆ, 11ನೇ ಅಡ್ಡ ರಸ್ತೆಯಲ್ಲಿನ ಚರಂಡಿಯ ಮೇಲೆ ಹೊದಿಸಿದ ಕಲ್ಲುಗಳನ್ನು ಪಾಲಿಕೆಯವರು ತೆಗೆದು ರಸ್ತೆಗೆ ಹಾಕಿದ್ದು, 3-4 ತಿಂಗಳು ಕಳೆದರೂ ಅದನ್ನು ಸರಿಪಡಿಸಲು ಪಾಲಿಕೆ ಮುಂದಾಗಿಲ್ಲ.

ಅನೈತಿಕ, ಅಡ್ಡದಾರಿ ಹಿಡಿದು ದೇವಿಯರ ಮೊರೆ ಹೋಗುವುದು ಭ್ರಮೆ

ಚಿತ್ರನಟ ದರ್ಶನ್ ಹೆಂಡತಿ ವಿಜಯಲಕ್ಷ್ಮಿ ಹಾಗೂ ಸಹೋದರ ದಿನಕರ್ ದರ್ಶನ್ ಗೆ ಜೈಲಿನಲ್ಲಿ ಮನೆ ಊಟಕ್ಕಾಗಿ ಕೊಲ್ಲೂರಿನ ಮೂಕಾಂಬಿಕಾ ದೇವಿಗೆ ಮಹಾಚಂಡಿಕಾ ಯಾಗ ಮತ್ತು ಮೈಸೂರಿನಲ್ಲಿ ಚಾಮುಂಡೇಶ್ವರಿಗೆ ಪೂಜೆ ಮಾಡಿಸಿ, ದೇವತೆಗಳ ಮೊರೆ ಹೋಗಿರುವುದು ವಿರೋಧಾಭಾಸವಾಗಿದೆ.  

ಗುಂಡಿ ಮುಚ್ಚಿಸಿ ಅಪಘಾತ ತಪ್ಪಿಸಿ.!

ನಗರದ ಹೃದಯ ಭಾಗ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಜನನಿಬಿಡ ಪ್ರದೇಶ, ಗಾಂಧಿ ವೃತ್ತದ ಬಳಿ ಬಿದ್ದಿರುವ ಗುಂಡಿಗಳನ್ನು ಮುಚ್ಚಿಸಿ ದಿನಂಪ್ರತಿ ನಡೆಯುವ ಅಪಘಾತಗಳನ್ನು ತಪ್ಪಿಸಿ ಮಹಾಸ್ವಾಮಿಗಳೇ ಎಂಬುದು ಇಲ್ಲಿ ಸಂಚರಿಸುವ ವಾಹನ ಸವಾರರ ಮನವಿಯಾಗಿದೆ.

ಟ್ರಾಫಿಕ್‌ ಪೊಲೀಸ್‌ ನಿಯೋಜಿಸಿ..!

ನಗರದ ಹದಡಿ ರಸ್ತೆಯಲ್ಲಿರುವ ಸರ್‌.ಎಂ.ವಿ ಪಿಯು ಕಾಲೇಜಿನ ಆರಂಭ ಮತ್ತು ಮುಕ್ತಾಯದ ಸಮಯದಲ್ಲಿ ಹೆಚ್ಚು ವಾಹನ ದಟ್ಟನೆ ಆಗುತ್ತಿದ್ದು, ಈ ಸಮಯದಲ್ಲೇ ಅಲ್ಲಿ ವಾಹನ ಅಪಘಾತಗಳು ಹೆಚ್ಚು ಕಂಡು ಬರುತ್ತಿವೆ.

ಡ್ರೈನೇಜ್‌ ಸರಿಪಡಿಸಿ, ಡೆಂಗ್ಯೂ ರೋಗದಿಂದ ರಕ್ಷಿಸಿ..!

ನಗರದ ಸಿ.ಜಿ. ಆಸ್ಪತ್ರೆ ರಸ್ತೆಯ ಕಾಫಿ ಬಾರ್‌ ಮುಂಭಾಗದಲ್ಲಿನ ಡ್ರೈನೇಜ್‌ ಸೋರಿಕೆ ನಿತ್ಯವೂ ಆಗುತ್ತಿದ್ದು, ಸೋರಿಕೆಯಿಂದ ಬರುವ ತ್ಯಾಜ್ಯ ರಸ್ತೆಯಲ್ಲಿ ಹರಿದು ಸಾರ್ವಜನಿಕರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ.

ಗ್ರೀನ್‌ ಸಿಗ್ನಲ್‌ 30 ಸೆಕೆಂಡ್‌ಗೆ ವಿಸ್ತರಿಸಿ..!

ನಗರದ ಗುಂಡಿ ವೃತ್ತದಲ್ಲಿ ವಾಹನ ಸವಾರರು ಸಂಚಾರಿ ನಿಯಮ ಉಲ್ಲಂಘಿಸುತ್ತಿರುವುದಕ್ಕೆ ಸಂಚಾರಿ ಹಸಿರು ಸೂಚಕದ ಸಮಯವನ್ನು 15 ಸೆಕೆಂಡಿಗೆ ನಿಗದಿ ಪಡಿಸಿರುವುದೇ ಮುಖ್ಯ ಕಾರಣವಾಗಿದೆ.

ಕಂದಾಯ ಕಟ್ಟೇವಿ, ರಸ್ತೆ ಸೌಲಭ್ಯ ಕೊಡಿ

ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿನ ಬಾಲಾಜಿ ನಗರದ ರಸ್ತೆಗಳು ಅಧಿಕ ಮಳೆಯಿಂದಾಗಿ ಕೆಸರು ಗದ್ದೆಯ ಸ್ವರೂಪ ತಾಳಿವೆ. ತಪ್ಪದೇ ಕಂದಾಯ ಕಟ್ಟಿಸಿಕೊಳ್ಳುವ ಪಾಲಿಕೆಯು, ರಸ್ತೆ ಸೌಲಭ್ಯ ಕಲ್ಪಿಸಲು ಕಣ್ಮುಚ್ಚಿ ಕುಳಿತಿದೆ.

error: Content is protected !!