Category: ರಾಣೇಬೆನ್ನೂರು

Home ರಾಣೇಬೆನ್ನೂರು

ರಾಣೇಬೆನ್ನೂರು : ದಲಿತ ಸಂಘರ್ಷ ಸಮಿತಿಯಿಂದ ವಿಜಯೋತ್ಸವ

ರಾಣೇಬೆನ್ನೂರು : ಒಳ ಮೀ ಸಲಾತಿ ವರ್ಗೀಕರಣದ ಪರವಾಗಿ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪು ಸ್ವಾಗತಿಸಿ ತಾಲ್ಲೂಕು ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ಶನಿವಾರ ನಗರದ ಸಂಗಮ ಸರ್ಕಲ್‍ನಲ್ಲಿ ಪಟಾಕಿ ಸಿಡಿಸಿ, ಸಿಹಿ ಹಂಚಿ ವಿಜಯೋತ್ಸವ ಆಚರಿಸಲಾಯಿತು.

ಎಲ್ಲೆಡೆ ಕೆರೆ-ಕೊಳ್ಳ ತುಂಬಿ ಹರಿದರೂ.. ರಾಣೇಬೆನ್ನೂರು ದೊಡ್ಡಕೆರೆಗಿಲ್ಲದ ಭಾಗ್ಯ.!

ರಾಣೇಬೆನ್ನೂರು : ನಾಡಿನಾದ್ಯಂತ  ಬೀಳುತ್ತಿರುವ ಮಳೆಯಿಂದ ಹೊಳೆ-ಹಳ್ಳಗಳು ಬೋರ್ಗರೆಯುತ್ತ ಹರಿದವು, ಕೆರೆ-ಕೊಳ್ಳ ತುಂಬಿ ತುಳುಕಾಡಿದವಾದರೂ ರಾಣೇಬೆನ್ನೂರು ದೊಡ್ಡಕೆರೆಗೆ ಆ ಭಾಗ್ಯವಿಲ್ಲ.

ಮಳೆಯಿಂದ ಅಲ್ಪ ಹಾನಿ ; ಶೀಘ್ರದಲ್ಲಿ ಪರಿಹಾರ

ರಾಣೇಬೆನ್ನೂರು : ಕಳೆದ ಒಂದು ವಾರದಿಂದ ಮಳೆ ಸುರಿದರೂ ಸಹ ನಮ್ಮ ತಾಲ್ಲೂಕಿನಲ್ಲಿ ದೊಡ್ಡ ಮಟ್ಟದ ಬೆಳೆ ಹಾನಿಯಾಗಲೀ ಹಾಗೂ ಹೆಚ್ಚು ಮನೆಗಳು ಬಿದ್ದ ದುರ್ಘಟನೆಗಳು ನಡೆದಿಲ್ಲ. ತುಂಗಭದ್ರಾ ಹಾಗೂ ಕುಮದ್ವತಿ ನದಿ ತೀರದ ನಾಲ್ಕಾರು ಗ್ರಾಮಗಳ  ಹತ್ತಾರು ಎಕರೆಗಳಲ್ಲಿನ ಬೆಳೆ ಹಾಳಾಗಿದೆ. 

ಪ್ಯಾನಿಕ್ ಬಟನ್, ಜಿಪಿಎಸ್ ವ್ಯವಸ್ಥೆ ಕೈಬಿಡಲು ಆಗ್ರಹಿಸಿ ಪ್ರತಿಭಟನೆ

ರಾಣೇಬೆನ್ನೂರು : ರಾಜ್ಯದಲ್ಲಿ ಟ್ಯಾಕ್ಸಿಗಳಿಗೆ ಅಳವಡಿಸಲು ಸೂಚಿಸಿರುವ ಪ್ಯಾನಿಕ್ ಬಟನ್ ಹಾಗೂ ಜಿಪಿಎಸ್ ವ್ಯವಸ್ಥೆ ಕೈಬಿಡುವಂತೆ ಆಗ್ರಹಿಸಿ ನಗರದ ಹಳೇ ಪಿ.ಬಿ.ರಸ್ತೆ ಶ್ರೀ ವಿನಾಯಕ ಕಾರು ಚಾಲಕರ ಮತ್ತು ಮಾಲೀಕರ ಸಂಘದ ಸದಸ್ಯರು ಗುರುವಾರ ನಗರದಲ್ಲಿ ಪ್ರತಿಭಟಿಸಿ, ಎ.ಆರ್.ಟಿ.ಓ ಕಛೇರಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. 

ಜಿಲ್ಲಾಡಳಿತದ ನಿರ್ಲಕ್ಷ್ಯ: ಕೃಷಿ ಸಾಮಗ್ರಿ ನೀರು ಪಾಲು

ರಾಣೇಬೆನ್ನೂರು : ತುಂಗಭದ್ರಾ ನದಿಯಲ್ಲಿ ನೀರು ಹೆಚ್ಚಳವಾಗುವ ಬಗ್ಗೆ ಹಾವೇರಿ ಜಿಲ್ಲಾಡಳಿತ ರೈತರಿಗೆ ಹಾಗೂ ನದಿ ತೀರದ ಜನರಿಗೆ ಮುನ್ನೆಚ್ಚರಿಕೆ ಕೊಡದಿದ್ದರಿಂದ ರೈತರ ಕೃಷಿ ಉಪಕರಣಗಳು ನದಿಯ ಪಾಲಾಗಿವೆ ಎಂದು ರಾಜ್ಯ ರೈತ ಸಂಘದ ಸಂಘಟನಾ ಕಾರ್ಯದರ್ಶಿ ರವೀಂದ್ರಗೌಡ ಎಫ್. ಪಾಟೀಲ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಾಜ್ಯ ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಹಾವೇರಿ ಘಟಕಕ್ಕೆ ಆಯ್ಕೆ

ರಾಣೇಬೆನ್ನೂರು : ಕರ್ನಾಟಕ ರಾಜ್ಯ ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಬೆಂಗಳೂರು ಜಿಲ್ಲಾ ಘಟಕ, ಹಾವೇರಿಯ ನೂತನ ಪದಾಧಿಕಾರಿಗಳ ಆಯ್ಕೆಗಾಗಿ ಈಚೆಗೆ ಚುನಾವಣೆ ನಡೆದಿದ್ದು,  ಜಿಲ್ಲಾಧ್ಯಕ್ಷರಾಗಿ ನಾಗರಾಜ ನಲವಾಗಲ, ಪ್ರಧಾನ ಕಾರ್ಯದರ್ಶಿಯಾಗಿ ಮಾಲತೇಶ ಮುದುಕಪ್ಪನವರ ಆಯ್ಕೆಯಾಗಿದ್ದಾರೆ.

ಮೈದುಂಬಿದ ಮದಗದ ಕೆರೆ ಕುಣಿದು ಕುಪ್ಪಳಿಸುತ್ತಿರುವ ಕುಮದ್ವತಿ..!

ರಾಣೇಬೆನ್ನೂರು : ಕಳೆದೆರಡು ದಿನಗಳಿಂದ ಶಿವಮೊಗ್ಗ ಮತ್ತು ಶಿಕಾರಿಪುರ ತಾಲ್ಲೂಕುಗಳಲ್ಲಿ  ಸುರಿಯುತ್ತಿರುವ ಮಳೆಯಿಂದಾಗಿ ಶಿಕಾರಿಪುರ ತಾಲ್ಲೂಕಿನ ಅಂಜನಾಪುರ ಜಲಾಶಯ ತುಂಬಿ ತುಳುಕಾಡುತ್ತಿದೆ. ಹಾಗಾಗಿ  ಕೆರೆಗೆ ಹಾರವಾದ ನೆರೆಯ ರಟ್ಟಿಹಳ್ಳಿ ತಾಲ್ಲೂಕಿನ  ಐತಿಹಾಸಿಕ ಮದಗದ ಕೆಂಚಮ್ಮನ ಕೆರೆ ಮೈದುಂಬಿಕೊಂಡಿದೆ. 

ನಗರದಾದ್ಯಂತ ಅಲಂಕಾರಿಕ ಗಿಡ ನೆಡುವ ಗೋ ಗ್ರೀನ್

ರಾಣೇಬೆನ್ನೂರು : ಇಲ್ಲಿನ ವರ್ತಕರ ಸಂಘ, ಇನ್ನರ್ ವ್ಹೀಲ್‌ ಹಾಗೂ ಗೋಗ್ರೀನ್ ಸಂಸ್ಥೆ ಸೇರಿ ನಗರ ಸೌಂದರ್ಯ ಹೆಚ್ಚಿಸಲು 5 ನೂರು ವಿವಿಧ ಬಣ್ಣಗಳ ಹೂವು ಬಿಡುವ ಹಾಗೂ ಇತರೆ ಅಲಂಕಾರಿಕ ಗಿಡಗಳು ಸೇರಿದಂತೆ ಒಟ್ಟು 1 ಸಾವಿರ ಗಿಡಗಳನ್ನು ನೆಡುವ ಕಾರ್ಯಕ್ರಮ ಯೋಜಿಸಿದ್ದು ,  ಪ್ರಕಾಶಾನಂದ ಸ್ವಾಮಿಗಳು ಚಾಲನೆ ನೀಡಿದರು.

ಶ್ರೀಗಳ ಆಷಾಡ ಮಾಸದ ಇಷ್ಟಲಿಂಗ ಮಹಾಪೂಜೆ

ರಾಣೇಬೆನ್ನೂರು : ಉಜ್ಜಯನಿ ಜಗದ್ಗುರು ಸಿದ್ದಲಿಂಗ ರಾಜದೇಶಿ ಕೇಂದ್ರ ಶ್ರೀಗಳ ಆಷಾಡ ಮಾಸದ ಇಷ್ಠಲಿಂಗ ಮಹಾಪೂಜೆ ಮೂರು ದಿನಗಳ  ಕಾರ್ಯಕ್ರಮ ಇಂದು ಉದ್ಘಾಟನೆ. ಆವರಗೊಳ್ಳದ ಓಂಕಾರ ಶ್ರೀ ಗಳಿಂದ ನಡೆಯಿತು. ಹೊನ್ನಾಳಿ ಹಿರೇಕಲ್ಮಠದ ಚನ್ನಮಲ್ಲಿಕಾರ್ಜುನ ಶ್ರೀ ನೇತೃತ್ವ ವಹಿಸಿದ್ದರು. 

ರಾಣೇಬೆನ್ನೂರು : ನಾಮದೇವ ಸಿಂಪಿ ಸಮಾಜದಿಂದ ಏಕಾದಶಿ

ರಾಣೇಬೆನ್ನೂರು : ಇಲ್ಲಿನ ನಾಮದೇವ ಸಿಂಪಿ ಸಮಾಜದವರು ವಿಠಲನ ಪ್ರಿಯ ದಿನವಾದ ಬುಧವಾರವೇ ಏಕಾದಶಿ ಬಂದಿದ್ದು, ಭಕ್ತರು ಅತ್ಯಂತ ಶ್ರದ್ಧಾಭಕ್ತಿಯಿಂದ ಪ್ರಥಮ ಆಷಾಢ ಕಾರ್ಯಕ್ರಮವನ್ನು ವಿಠಲ ರುಕ್ಮಾಯಿ ದೇವಸ್ಥಾನದಲ್ಲಿ  ಫಲ ಪಂಚಾಮೃತ ಅಭಿಷೇಕ ಮಾಡಿದರು.  

ದಾನ ಬದುಕನ್ನು ಸುಂದರಗೊಳಿಸುತ್ತದೆ

ರಾಣೇಬೆನ್ನೂರು : ದಾನ ಮಾಡುವುದು, ಸ್ವೀಕರಿಸುವುದು ಆರೋಗ್ಯಕರ ಸಮಾಜದ ಅವಿಭಾಜ್ಯ ಅಂಗ, ಅಲ್ಲಿ ಪ್ರೀತಿ, ಮಮಕಾರ, ಸಂತೃಪ್ತಿ, ನೆಮ್ಮದಿ ಎಲ್ಲ ಇದೆ. ದಾನ ಮಾಡುವುದರಿಂದ ಬದುಕು ಸುಂದರಮಯವಾಗಿ ರೂಪಗೊಳ್ಳಲಿದೆ

error: Content is protected !!