Category: ರಾಣೇಬೆನ್ನೂರು

Home ರಾಣೇಬೆನ್ನೂರು

ಪ್ರೀಮಿಯರ್ ಲೀಗ್ ಕ್ರಿಕೆಟ್ ರಾಣೇಬೆನ್ನೂರು ರಾಷ್ಟ್ರಕೂಟ ಪ್ರಥಮ

ರಾಣೇಬೆನ್ನೂರು : ಶ್ರೀ ತರಳಬಾಳು ಜಗದ್ಗುರು ತಾಂತ್ರಿಕ ಮಹಾವಿದ್ಯಾಲಯದ ಆವರಣದಲ್ಲಿ ಏರ್ಪಡಿಸಲಾಗಿದ್ದ  ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯದಲ್ಲಿ ರಾಷ್ಟ್ರಕೂಟ ತಂಡವು ಪ್ರಥಮ ಸ್ಥಾನ ಹಾಗೂ  ಕದಂಬ ತಂಡ ದ್ವಿತೀಯ ಸ್ಥಾನ ಪಡೆದುಕೊಂಡವು.

ರಾಣೇಬೆನ್ನೂರು : ಶೀಘ್ರ ನಗರ ಸಾರಿಗೆ ಪ್ರಾರಂಭ

ರಾಣೇಬೆನ್ನೂರು : ನಗರದ ಬಡ ಜನತೆಗೆ ನಗರ ಸಾರಿಗೆ ಅವಶ್ಯವಿದೆ. ಜೊತೆಗೆ ಆಟೋ ಓಡಿಸುವ ಬಡವರ ಹಿತ ಕಾಪಾಡುವುದೂ ಸಹ ಅವಶ್ಯವಿದೆ. ಹಾಗಾಗಿ ಅಧಿಕಾರಿಗಳು ಸೇರಿದಂತೆ ಎಲ್ಲರ ಜೊತೆ ಚರ್ಚಿಸಿ ಶೀಘ್ರದಲ್ಲಿ ನಗರ ಸಾರಿಗೆ ಪ್ರಾರಂಭಿಸುವ ಆಶಯ ನನ್ನದಾಗಿದೆ

ವಸತಿ ನಿಲಯಕ್ಕೆ ಬಸ್ ತಡೆಗೆ ಮನವಿ

ರಾಣೇಬೆನ್ನೂರು : ಸುಮಾರು ಎರಡು ಕಿ.ಮೀ ಗೂ ಹೆಚ್ಚು ದೂರದಲ್ಲಿರುವ ನಗರದ ಹೊರ ವಲಯ ಹಲಗೇರಿ ರಸ್ತೆಯ ಎಸ್ ಆರ್ ಕೆ ಬಡಾವಣೆಯಲ್ಲಿರುವ ಪರಿಶಿಷ್ಟ ಜಾತಿ ಸರ್ಕಾರಿ ವಸತಿ ನಿಲಯದ ಬಳಿ ಸರ್ಕಾರಿ ಬಸ್ ನಿಲುಗಡೆ ಮಾಡಿ ವಿದ್ಯಾರ್ಥಿಗಳಿಗೆ ಆಗುವ ತೊಂದರೆ ತಪ್ಪಿಸುವಂತೆ ಎಸ್‌ಎಫ್‌ಐ ನಿಂದ  ಸಾರಿಗೆ ಸಂಸ್ಥೆಗೆ ಇಂದು ಮನವಿ ಸಲ್ಲಿಸಲಾಯಿತು.

ಪರಿಸರ ರಕ್ಷಣೆ ಎಲ್ಲರ ಜವಾಬ್ದಾರಿ : ಕುಬೇರಪ್ಪ

ರಾಣೇಬೆನ್ನೂರು : ಮುಂದಿನ ಪೀಳಿಗೆಗೆ ಶುದ್ಧ ಗಾಳಿ, ನೀರು, ಆಹಾರ, ಉತ್ತಮ  ಪರಿಸರವನ್ನು ಕೊಡುವುದು ಎಲ್ಲರ ಜವಾಬ್ದಾರಿಯಾಗಿದೆ ಎಂದು   ಬಿ.ಎ.ಜೆ.ಎಸ್.ಎಸ್  ಸ್ವತಂತ್ರ ಪದವಿ-ಪೂರ್ವ ಮಹಿಳಾ ಕಾಲೇಜು ಆಡಳಿತಾಧಿಕಾರಿ ಡಾ.ಆರ್.ಎಮ್ ಕುಬೇರಪ್ಪ ತಿಳಿಸಿದರು. 

ದಕ್ಷಿಣ-ಉತ್ತರ ಕರ್ನಾಟಕದ ಶಾಲೆಗಳ ಶಿಕ್ಷಕರ ನೇಮಕದ ವ್ಯತ್ಯಾಸಕ್ಕೆ ಬೇಸರ

ರಾಣೇಬೆನ್ನೂರು : ದಕ್ಷಿಣ ಕರ್ನಾಟಕದಲ್ಲಿ 12 ವಿದ್ಯಾರ್ಥಿಗಳಿಗೆ ಒಬ್ಬ ಶಿಕ್ಷಕ, ಉತ್ತರ ಕರ್ನಾಟಕದಲ್ಲಿ  30 ವಿದ್ಯಾರ್ಥಿಗಳಿಗೆ ಒಬ್ಬರು. ಕಲ್ಯಾಣ ಕರ್ನಾಟಕದಲ್ಲಿ  50 ರಿಂದ 60 ವಿದ್ಯಾರ್ಥಿಗಳಿಗೊಬ್ಬ ಶಿಕ್ಷಕರು ಈ ರೀತಿಯ ಧೋರಣೆ ಸರಿಯಾದುದಲ್ಲ.

ಸುಖದ ಮೂಲ ಧರ್ಮ ಪಾಲನೆಯಲ್ಲಿದೆ : ರಂಭಾಪುರಿ ಶ್ರೀ

ರಾಣೇಬೆನ್ನೂರು : ಸುಖದ ಮೂಲ ಧರ್ಮದಲ್ಲಿದೆ. ಧರ್ಮಪಾಲನೆಯಿಂದ ಮನುಷ್ಯ ಸುಖವಾಗಿರಲು ಸಾಧ್ಯ. ಇದನ್ನರಿತು ನಡೆದರೆ   ಸುಖೀ ಜೀವನ ನಡೆಸಬಹುದು ಎಂದು ರಂಭಾಪುರಿ ಜಗದ್ಗುರು ವೀರಸೋಮೇಶ್ವರ ಶಿವಾಚಾರ್ಯ ಶ್ರೀ ಗಳು ನುಡಿದರು. 

ಗೋವಿನಜೋಳ ಒಣಗಿಸುವ ಯಂತ್ರ ಅಳವಡಿಸಲು ವರ್ತಕರ ಮನವಿ

ರಾಣೇಬೆನ್ನೂರು : ಇಲ್ಲಿನ ಎಪಿಎಂಸಿಯಲ್ಲಿ ಗೋವಿನಜೋಳ ಒಣಗಿಸುವ ಯಂತ್ರ ಅಳವಡಿಸಿ ರೈತರಿಗೆ ಆಗುವ ತೊಂದರೆ ಹಾಗೂ ನಷ್ಟ ತಪ್ಪಿಸುವಂತೆ ವರ್ತಕರು ಶಾಸಕ ಪ್ರಕಾಶ ಕೋಳಿವಾಡ ಅವರಿಗೆ ಮನವಿ ಸಲ್ಲಿಸಿದರು.

ಅಂಬಿಗರ ಚೌಡಯ್ಯನವರ ಐಕ್ಯ ಮಂಟಪಕ್ಕೆ ಪೂಜೆ

ನಿಜ ಶರಣ ಅಂಬಿಗರ ಚೌಡಯ್ಯ ನವರ ಐಕ್ಯ ಮಂಟ ಪಕ್ಕೆ ಶುಕ್ರವಾರ ಗೌರಿ ಹುಣ್ಣಿಮೆ ಪ್ರಯುಕ್ತ ಹಾವೇರಿ ನರಶೀಪುರದ ನಿಜಶರಣ ಅಂಬಿಗರ ಚೌಡಯ್ಯ ಪೀಠದ ಪೀಠಾಧಿಪತಿ ಶಾಂತಭೀಷ್ಮ ಚೌಡಯ್ಯ ಸ್ವಾಮೀಜಿ ಹಾಗೂ ದೊಡ್ಡಪೇಟೆಯ ವಿರಕ್ತಮಠದ ಗುರುಬಸವ ಸ್ವಾಮೀಜಿ ಪೂಜೆ ಸಲ್ಲಿಸಿದರು.

ಶಾಂತಿ, ನೆಮ್ಮದಿಗೆ ಧಾರ್ಮಿಕ ಪ್ರವಚನಗಳು ಅವಶ್ಯ

ರಾಣೇಬೆನ್ನೂರು : ವಿಶ್ವ ಶಾಂತಿಯ ಕಲ್ಯಾಣಾರ್ಥ ವಾಗಿ ನಗರದ ಶನೇಶ್ವರ ಮಂದಿರ ದಲ್ಲಿ ನಡೆಯುತ್ತಿರುವ ಅತಿರುದ್ರ ಮಹಾಯಾಗ ಕಾರ್ಯಕ್ರಮದಲ್ಲಿ ಹೆಚ್ಚೆಚ್ಚು ಭಕ್ತರು ಭಾಗವಹಿಸುವುದರ ಮೂಲಕ ಈ ವರ್ಷದ ಶನೇಶ್ವರ ಜಾತ್ರೋತ್ಸವವನ್ನು ಯಶಸ್ವಿಗೊಳಿಸಬೇಕು

ಸಾರ್ವಜನಿಕ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸಲು ಆಗ್ರಹ

ರಾಣೇಬೆನ್ನೂರು : ಈಗಿರುವ ನಗರದ ಸಾರ್ವಜನಿಕ ಆಸ್ಪತ್ರೆಯನ್ನು 300 ಹಾಸಿಗೆಗಳೊಂದಿಗೆ  ಮೇಲ್ದರ್ಜೆಗೇರಿಸುವಂತೆ ಶಾಸಕ ಪ್ರಕಾಶ ಕೋಳಿವಾಡ ಅವರು ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ಅವರಿಗೆ ಮನವಿ ಅರ್ಪಿಸಿದರು.

ರಾಣೇಬೆನ್ನೂರು : ಮಿನಿ ಓಲಂಪಿಕ್ಸ್ ಸ್ಪರ್ಧೆಗೆ ಆಯ್ಕೆ

ರಾಣೇಬೆನ್ನೂರು : ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ   ಕರ್ನಾಟಕ ರಾಜ್ಯ ಯುವ ಜನ ಸೇವಾ ಮತ್ತು ಕ್ರೀಡಾ ಇಲಾಖೆಯಿಂದ ನಡೆಯುತ್ತಿರುವ 3ನೇ ಆವೃತ್ತಿಯ ಮಿನಿ ಓಲಂಪಿಕ್ಸ್ ಫುಟ್‌ಬಾಲ್ ಸ್ಪರ್ಧೆಗೆ ನಗರದ ನ್ಯಾಷನಲ್ ಪಬ್ಲಿಕ್ ಶಾಲೆಯ 14 ಮಕ್ಕಳು ಆಯ್ಕೆಯಾಗಿದ್ದಾರೆ.

ಶಿಗ್ಗಾಂವಿ ಉಪಚುನಾವಣೆ ಇಂದು ಮತ ಎಣಿಕೆ ಸೋಲು-ಗೆಲುವು ಲೆಕ್ಕಾಚಾರ: `ಎತ್ತುಗಳ ಬೆಟ್ಟಿಂಗ್’

ಹಾವೇರಿ : ಇದೇ ದಿನಾಂಕ 13 ರಂದು ನಡೆದ ಶಿಗ್ಗಾಂವಿ- ಸವಣೂರು ವಿಧಾನಸಭಾ ಉಪಚುನಾವಣೆಯ ಮತ ಎಣಿಕೆ ಕಾರ್ಯ ಇಂದು ಬೆಳಿಗ್ಗೆ 8 ಗಂಟೆಯಿಂದ ಹಾವೇರಿ ಹತ್ತಿರದ ದೇವಗಿರಿ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ  ನಡೆಯಲಿದೆ. 

error: Content is protected !!