Category: ರಾಣೇಬೆನ್ನೂರು

Home ರಾಣೇಬೆನ್ನೂರು

ಗ್ಯಾರಂಟಿ ಪಡೆಯಲು ಸುಲಭ ಮಾರ್ಗ

ರಾಣೇಬೆನ್ನೂರು : ಚುನಾವಣೆ ಪೂರ್ವದಲ್ಲಿ ಹೇಳಿದ  ಕಾಂಗ್ರೆಸ್ ಪಕ್ಷದ ಗ್ಯಾರಂಟಿಗಳನ್ನು   ತಾಲ್ಲೂಕಿನ ಜನತೆ ಪಡೆದುಕೊಳ್ಳಲು ಅನುಕೂಲವಾಗ ಲೆಂದು ಪ್ರತಿ ಗ್ರಾ.ಪಂ ಗಳಲ್ಲಿ  ಶಾಸಕರ ಸಹಾಯ ಕೇಂದ್ರ ತೆರೆಯಲು ತೀರ್ಮಾನಿ ಸಿದ್ದು, ಇಂದು ಕರೂರು ಗ್ರಾಮದಲ್ಲಿ  ಚಾಲನೆ ನೀಡಲಾಯಿತು.

ವಿದ್ಯುತ್ ದರ ಹೆಚ್ಚಳ ; ರಾಣೇಬೆನ್ನೂರು ವರ್ತಕರ ಪ್ರತಿಭಟನೆ

ರಾಣೇಬೆನ್ನೂರು : ವಿದ್ಯುತ್ ದರ ಹೆಚ್ಚಿಸಿರುವುದನ್ನು ವಿರೋಧಿಸಿ ಹುಬ್ಬಳ್ಳಿ ವಾಣಿಜ್ಯ ಸಂಸ್ಥೆಯ ಕರೆಯ ಮೇರೆಗೆ ಇಲ್ಲಿನ ವರ್ತಕ ಸಂಘದವರು ಪ್ರತಿಭಟನೆ ನಡೆಸಿ, ಶಾಸಕ ಪ್ರಕಾಶ ಕೋಳಿವಾಡ ಅವರಿಗೆ, ಹೆಸ್ಕಾಂ ಅಧಿಕಾರಿಗಳಿಗೆ ಹಾಗೂ ತಹಶೀಲ್ದಾರರಿಗೆ ಮನವಿ ಸಲ್ಲಿಸಿದರು.

ಜುಲೈ ಮೊದಲ ವಾರ ಜಿಲ್ಲೆಯಲ್ಲಿ ಮೋಡ ಬಿತ್ತನೆ

ರಾಣೇಬೆನ್ನೂರು : ತಮ್ಮ ಪಿಕೆಕೆ ಸಂಸ್ಥೆಯಿಂದ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದ್ದು, ಅವರು ಪರವಾನಿಗೆ ಕೊಡುತ್ತಲೇ ದೆಹಲಿಯಲ್ಲಿರುವ ನಮ್ಮ ಪ್ರತಿನಿಧಿ ವಿಮಾನಯಾನ ಸಂಸ್ಥೆಯಲ್ಲಿ ಒಪ್ಪಿಗೆ ಪಡೆಯಲಿದ್ದಾರೆ.

ಸಿದ್ದಾರೂಢ ಪರಂಪರೆಯ ಮಠಗಳು ಸರ್ವ ಜನಾಂಗದ ಶಾಂತಿಯ ತೋಟವಿದ್ದಂತೆ

ರಾಣೇಬೆನ್ನೂರು : ಸಿದ್ದಾರೂಢ ಪರಂಪರೆಯ ಮಠಗಳು ಸರ್ವ ಜನಾಂಗದ ಶಾಂತಿಯ ತೋಟವಿದ್ದಂತೆ. ಇಲ್ಲಿ ನಡೆಯುವ ಸಮಾರಂಭಗಳಲ್ಲಿ ಎಲ್ಲಾ ಸಮಾ ಜಗಳ ಗುರುಗಳು, ಭಕ್ತರು ಪಾಲ್ಗೊಳ್ಳುತ್ತಾರೆ. ಇಲ್ಲಿ ಮದುವೆ ಆಗುವ ದಂಪತಿಗಳು ಪುಣ್ಯವಂತರು ಎಂದು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಪುತ್ರ ಕಾಂತೇಶ ಹೇಳಿದರು.

ಗುಟ್ಕಾ ಪ್ಯಾಕೇಟ್ ಕಳ್ಳತನ : ಅಂತರ್‌ರಾಜ್ಯ ಕಳ್ಳರ ಬಂಧನ

ರಾಣೇಬೆನ್ನೂರು : ಗೂಡ್ಸ್ ಗಾಡಿಯ ಸಮೇತ ಲಕ್ಷಾಂತರ ರೂ. ಮೌಲ್ಯದ ಗುಟ್ಕಾ ಪ್ಯಾಕೇಟ್‍ಗಳನ್ನು ಕಳ್ಳತನ ಮಾಡಿದ್ದ ಅಂತರ್‌ರಾಜ್ಯ ಕಳ್ಳರನ್ನು ಬಂಧಿಸುವಲ್ಲಿ ಶಹರ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ.

ಜಗತ್ತಿನಲ್ಲಿ ಅಹಿಂಸೆ ಪರಮ ಧರ್ಮವಾಗಬೇಕು

ರಾಣೇಬೆನ್ನೂರು : ಜಗತ್ತಿನಲ್ಲಿ ಹಿಂಸೆ ಹೆಚ್ಚಾಗು ತ್ತಿದ್ದು, ಮನುಷ್ಯರ ಬದುಕು ದುಸ್ತರವಾಗುತ್ತಿದೆ. ಕಾರಣ ಅಹಿಂಸೆ ನಮ್ಮೆಲ್ಲರ ಪರಮಧರ್ಮ ವಾಗಬೇಕು. ಎಲ್ಲರನ್ನೂ ಪ್ರೀತಿಸುವ ಗುಣ ಎಲ್ಲರಲ್ಲೂ ಬರಬೇಕು.

ಶ್ರೀ ಸ್ವಾಮಿ ಪುರುಷೋತ್ತಮಾನಂದಜೀ ಕನ್ನಡ ಸಾಹಿತ್ಯಕ್ಕೆ ಅದ್ಭುತ ಕೊಡುಗೆ ನೀಡಿದ್ದಾರೆ

ರಾಣೇಬೆನ್ನೂರು : ಶ್ರೀ ಸ್ವಾಮಿ ಪುರುಷೋತ್ತಮಾನಂದಜೀ  ಅವರು,  ವಿದ್ಯಾರ್ಥಿಗೊಂದು ಪತ್ರ, ಅಧ್ಯಾತ್ಮದಲ್ಲಿ ಏಕಾಗ್ರತೆ, ಧೀರತೆಯ ದುಂದುಬಿ, ಕಬೀರ ಬೀರಿದ ಬೆಳಕು, ತಪಸ್ಸು ಯಶಸ್ಸು ಮುಂತಾದ ಕೃತಿಗಳ ಮೂಲಕ ಕನ್ನಡ ಸಾಹಿತ್ಯಕ್ಕೆ ಅದ್ಭುತ ಕೊಡುಗೆ ನೀಡಿದ್ದಾರೆ

ರಾಣೇಬೆನ್ನೂರು : ಕುರಿಗಳ ಸಾವು, ಪರಿಹಾರಕ್ಕೆ ಸಿಎಂ ಬಳಿ ಮನವಿ

ರಾಣೇಬೆನ್ನೂರು : ತಾಲ್ಲೂಕಿನ ಮಾಗೋಡ ಗ್ರಾಮದಲ್ಲಿ ವಿಷಪೂರಿತ ಆಹಾರ ಸೇವಿಸಿ, ಅಸು ನೀಗಿದ 40 ಕುರಿಗಳಿಗೆ ಪರಿಹಾರದ ಹಣ ನೀಡುವಂತೆ ರಾಣೇಬೆನ್ನೂರು ಶಾಸಕ ಪ್ರಕಾಶ್ ಕೋಳಿವಾಡ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದರು.

ರಾಣೇಬೆನ್ನೂರು ಸರ್ಕಾರಿ ಹಾಸ್ಟೆಲ್‌ಗಳಲ್ಲಿ ಕಳಪೆ ಆಹಾರ : ವಿದ್ಯಾರ್ಥಿಗಳ ಪ್ರತಿಭಟನೆ

ರಾಣೇಬೆನ್ನೂರು : ಇಲ್ಲಿನ ಸರ್ಕಾರಿ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರ ವಸತಿ ಗೃಹಗಳಲ್ಲಿ ಕಳಪೆ ಗುಣಮಟ್ಟದ ಆಹಾರ ವಿತರಿಸಲಾಗುತ್ತದೆ ಎಂದು ಆರೋಪಿಸಿ ಭಾರತ ವಿದ್ಯಾರ್ಥಿ ಫೆಡರೇಷನ್ ವಿದ್ಯಾರ್ಥಿಗಳು  ಪ್ರತಿಭಟಿಸಿದ್ದಾರೆ. 

ವಾರದೊಳಗಾಗಿ 800 ರೈತರಿಗೆ ಓಟಿಎಸ್ ಜಾರಿ: ಆತಂಕ ಬೇಡ

ರಾಣೇಬೆನ್ನೂರು : ಒಂದು ವಾರದೊಳಗಾಗಿ ಸುಮಾರು 800 ರೈತರಿಗೆ 2 ನೇ ಹಂತದ ಓಟಿಎಸ್ ಜಾರಿ ಮಾಡುತ್ತೇವೆ. ಯಾವುದೇ ಆತಂಕ ಬೇಡ.  ನಿಮ್ಮ ಜೊತೆ ನಾವಿದ್ದೇವೆ. ಹೋರಾಟ ನಿಲ್ಲಿಸಿ ಮಾತುಕತೆಗೆ ಬನ್ನಿ ಎಂದು ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಹುಬ್ಬಳ್ಳಿ ವಲಯದ ಡಿ.ಜಿ.ಎಂ. ರಮಾನಂದ ಹೇಳಿದರು.

ರಾಣೇಬೆನ್ನೂರಿನಲ್ಲಿ `ಶಕ್ತಿ’ ಯೋಜನೆ ಜಾರಿ

ರಾಣೇಬೆನ್ನೂರು : ಕಾಂಗ್ರೆಸ್ ಪಕ್ಷದ ಸರ್ಕಾರ ಮುಖ್ಯ ಮಂತ್ರಿ ಸಿದ್ರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ನುಡಿದಂತೆ ನಡೆಯುತ್ತಿದ್ದಾರೆ. ಚುನಾವಣೆ ಪೂರ್ವದಲ್ಲಿ ರಾಜ್ಯದ ಜನತೆಗೆ ನೀಡಿದ ಗ್ಯಾರಂಟಿಗಳನ್ನು ಜಾರಿಗೆ ತರುತ್ತಿದ್ದಾರೆ ಎಂದು ಶಾಸಕ ಪ್ರಕಾಶ್ ಕೋಳಿವಾಡ ಹೇಳಿದರು.

error: Content is protected !!