Category: ರಾಣೇಬೆನ್ನೂರು

Home ರಾಣೇಬೆನ್ನೂರು

ಹೋಮ, ಯಾಗದಿಂದ ಪರಿಸರ ಶುದ್ದಿ, ರೋಗಗಳು ದೂರ

ರಾಣೇಬೆನ್ನೂರು : ಸ್ಥಳೀಯ ಹಿರೇಮಠ ಶ್ರೀ ಶನೈಶ್ಚರ ಮಂದಿರದಲ್ಲಿ ಮಹಾಲಯ ಅಮಾವಾಸ್ಯೆ ಪ್ರಯುಕ್ತ ಲೋಕ ಕಲ್ಯಾಣಾರ್ಥವಾಗಿ ಹೋಮ, ಪೂರ್ಣಾಹುತಿ, ತೈಲಾಭಿಷೇಕ, ಮಹಾಮಂಗಳಾರತಿ ಸೇರಿದಂತೆ ವಿಶೇಷ ಪೂಜೆಗಳು ಮುಂಜಾನೆಯಿಂದ ರಾತ್ರಿಯವರೆಗೂ ನಿರಂತರವಾಗಿ ನೆರವೇರಿದವು.

ಉದ್ಯೋಗ ಖಾತ್ರಿ ಯೋಜನೆಯ ಮಾಹಿತಿ ಜಾಗೃತಿ ರಥಕ್ಕೆ ಚಾಲನೆ

ರಾಣೇಬೆನ್ನೂರು : ತಾಲ್ಲೂಕು ಪಂಚಾಯ್ತಿಯಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯ ಮಾಹಿತಿ ಜಾಗೃತಿ ರಥಕ್ಕೆ ತಾ.ಪಂ. ಕಾರ್ಯನಿರ್ವಾಹಕಿ ಸುಮಲತಾ ಚಾಲನೆ ನೀಡಿದರು.

ರಾಣೇಬೆನ್ನೂರು : ಅನುಮತಿ ಇಲ್ಲದೇ ರೈತರ ಜಮೀನಿನ ಫಲವತ್ತಾದ ಮಣ್ಣು ಅಕ್ರಮ ಸಾಗಾಟ

ರಾಣೇಬೆನ್ನೂರು : ಹಿಂದುಳಿದ ಎಸ್.ಸಿ., ಎಸ್.ಟಿ ಜನಾಂಗದವರಿಗೆ ಬದುಕು ಕಟ್ಟಿಕೊಳ್ಳಲೆಂದೇ 1888 ನೇ ಸಾಲಿನಲ್ಲಿ ಆಗಿನ ಮುಂಬೈ ಸರ್ಕಾರ   ನೀಡಿದ್ದ ಚಾಕರಿ ಜಮೀನಿನ ಫಲವತ್ತಾದ ಮಣ್ಣನ್ನು ಹಣದ ಆಮಿಷ ತೋರಿಸಿ ಇಟ್ಟಿಗೆ ಭಟ್ಟಿಯವರು ಕಳೆದ 5-6 ವರ್ಷಗಳಿಂದ  ಸಂಬಂಧಿಸಿದ ಇಲಾಖೆಗಳ ಯಾವುದೇ ಅನುಮತಿ ಇಲ್ಲದೇ ಅಕ್ರಮ ಮಣ್ಣು ಸಾಗಾಟ ಮಾಡುತ್ತಿದ್ದಾರೆ.

ಬೃಹತ್ ಮೆರವಣಿಗೆಯೊಂದಿಗೆ ರಾಣೇಬೆನ್ನೂರು ಕಾ ರಾಜಾ ವಿಸರ್ಜನೆ

ರಾಣೇಬೆನ್ನೂರು : ನಗರಸಭೆ ಕ್ರೀಡಾಂಗಣದಲ್ಲಿ ಪ್ರತಿಷ್ಠಾಪಿಸಲಾಗಿದ್ದ ವಂದೇಮಾತರಂ ಸ್ವಯಂಸೇವಾ ಸಂಸ್ಥೆಯ ರಾಣೇಬೆನ್ನೂರು ಕಾ ರಾಜಾ ಗಣಪತಿಯ ವಿಸರ್ಜನೆ ಬೃಹತ್ ಮೆರವಣಿಗೆಯೊಂದಿಗೆ ಇಂದು ವಿಸರ್ಜನೆ ಮಾಡಲಾಯಿತು.

ರಾಣೇಬೆನ್ನೂರು `ವಂದೇ ಮಾತರಂ’ ಸಂಘಟನೆಯಿಂದ ಅತಿ ಹೆಚ್ಚು ರಕ್ತದಾನ

ಜಿಲ್ಲಾ ರಕ್ತ ಕೇಂದ್ರ ಹಾಗೂ ದಾವಣಗೆರೆಯ ಚಿಗಟೇರಿ ಸಾರ್ವಜನಿಕ ಆಸ್ಪತ್ರೆಯ ರಕ್ತ ಕೇಂದ್ರದವರು ಸಂಯುಕ್ತವಾಗಿ ನಡೆಸಿದ ರಕ್ತದಾನ ಶಿಬಿರದಲ್ಲಿ ಸಂಘಟನೆಯ ಅಧ್ಯಕ್ಷ ಪ್ರಕಾಶ ಬುರಡಿಕಟ್ಟಿ, ವೀರೇಶ ಹೆದ್ದೇರಿ, ಪ್ರಮೋದ ಸೇರಿದಂತೆ ನೂರಾರು ಯುವಕರು  ರಕ್ತದಾನ ಮಾಡಿದರು.

ರಾಣೇಬೆನ್ನೂರು ಮಾರ್ಕಂಡೇಶ್ವರ ದೇವಸ್ಥಾನ ಜೀರ್ಣೋದ್ಧಾರಕ್ಕೆ ಧರ್ಮಸ್ಥಳದಿಂದ 1.5 ಲಕ್ಷ ನೆರವು

ರಾಣೇಬೆನ್ನೂರು : ಇಲ್ಲಿನ ಶ್ರೀ ಸಿದ್ದೇಶ್ವರ ನಗರದ ಶ್ರೀ ಗುರು ಮಾರ್ಕಂಡೇಶ್ವರ ಸ್ವಾಮಿ ದೇವಸ್ಥಾನದ ಜೀರ್ಣೋದ್ಧಾರ ಕಾಮಗಾರಿಗಳಿಗೆ ಧರ್ಮಸ್ಥಳದ ಶ್ರೀ ಮಂಜುನಾಥ ಸ್ವಾಮಿ  ಟ್ರಸ್ಟ್‌ನ ಅಧ್ಯಕ್ಷ ಡಾ.ವೀರೇಂದ್ರ ಹೆಗ್ಗಡೆ ಅವರು 1,50,000 ರೂ.ಗಳ ಧನ ಸಹಾಯ ನೀಡಿದ್ದಾರೆ.

ರಾಣೇಬೆನ್ನೂರಿನಲ್ಲಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರ

ರಾಣೇಬೆನ್ನೂರು : ರಕ್ತದಾನಕ್ಕೆ ಒಂದು ಜೀವ ಉಳಿಸುವ ಶಕ್ತಿಯಿದ್ದು, ಅದು ಎಲ್ಲಾ ದಾನಗಳಲ್ಲಿ ಅತ್ಯಂತ ಶ್ರೇಷ್ಠವಾಗಿದೆ ಎಂದು ಜಿ.ಪಂ. ಮಾಜಿ ಸದಸ್ಯ ಸಂತೋಷಕುಮಾರ ಪಾಟೀಲ ಹೇಳಿದರು.

ಸಹಕಾರ ಕ್ಷೇತ್ರ ಬೆಳೆದರೆ ದೇಶದ ಅಭಿವೃದ್ಧಿ

ರಾಣೇಬೆನ್ನೂರು : ಸಹಕಾರ ಕ್ಷೇತ್ರವನ್ನು ಬೆಳೆಸಿದಾಗ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ, ಇದಕ್ಕೆ ಸದಸ್ಯರ ಪಾತ್ರ ಬಹಳ ಮುಖ್ಯವಾಗಿರುತ್ತದೆ ಎಂದು ಜೇಸಿಸ್ ಕ್ಷೇಮಾಭಿವೃದ್ಧಿ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ಅಧ್ಯಕ್ಷ ಶ್ರೀನಿವಾಸ ಕಾಕಿ ಹೇಳಿದರು.

ದೇಶದ ಸಂಸ್ಕೃತಿ ಉಳಿಯಲು ಮಹಿಳೆಯರ ಪಾತ್ರ ಮುಖ್ಯ

ರಾಣೇಬೆನ್ನೂರು : ನಮ್ಮ ದೇಶದ ಧರ್ಮ, ಆಚಾರ-ವಿಚಾರಗಳು ಹಾಗೂ ಸಂಸ್ಕೃತಿ ಉಳಿಯಬೇಕಾದರೆ, ಮಹಿಳೆಯರ ಪಾತ್ರ ಬಹಳ ಮುಖ್ಯವಾಗಿದೆ  ಎಂದು ಮಾಜಿ ಶಾಸಕ ಅರುಣಕುಮಾರ ಪೂಜಾರ ಹೇಳಿದರು.

ಬಾಹ್ಯಾಕಾಶ ಮತ್ತು ಉದ್ಯಮಶೀಲತೆ ಸಾಧಿಸುವತ್ತ ಇಸ್ರೋ ಗಮನ

ರಾಣೇಬೆನ್ನೂರು : ಬಾಹ್ಯಾಕಾಶ ವಿಜ್ಞಾನ ಮತ್ತು ತಂತ್ರಜ್ಞಾನದ ಅಂತರರಾಷ್ಟ್ರೀಯ ಸಂಭ್ರಮಾಚರಣೆ ಸಮಯ ಬಂದಿದೆ. ಮಾನವಕುಲದ ಒಳಿತಿಗೆ ವಿಜ್ಞಾನ ನೀಡಿರುವ ಕೊಡುಗೆಗಳನ್ನು ಸ್ಮರಿಸಲು ಮತ್ತು ಗುರುತಿಸಲು ವರ್ಲ್ಡ್ ಸ್ಪೇಸ್ ವೀಕ್ ಅನ್ನು  `ಬಾಹ್ಯಾಕಾಶ ಮತ್ತು ಉದ್ಯಮಶೀಲತೆ’  ಎಂಬ ಥೀಮ್ ನೊಂದಿಗೆ ಆಚರಿಸಲಾಗುತ್ತಿದೆ.

error: Content is protected !!