Category: ಸುದ್ದಿಗಳು

Home ಸುದ್ದಿಗಳು

ಟ್ರ್ಯಾಕ್ಟರ್ ತೊಳೆಯುವ ವೇಳೆ ಸಂಭವಿಸಿದ ಅವಘಡದಲ್ಲಿ ಸಾವು : ಸ್ಥಳ ಪರಿಶೀಲನೆ

ಹರಿಹರ : ಗುತ್ತೂರು ಗ್ರಾಮದ ನದಿಯಲ್ಲಿ ಟ್ರ್ಯಾಕ್ಟರ್ ತೊಳೆಯುವ ವೇಳೆ ಅವಘಡ ಸಂಭವಿಸಿ ಇಬ್ಬರು ಮರಣ ಹೊಂದಿದ್ದ ಸ್ಥಳಕ್ಕೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿ ಕವಿತಾ ಹಾಗೂ ಸಿಪಿಐ ಸುರೇಶ್ ಸರಗಿ ಅವರು ಇಂದು ಭೇಟಿ ಕೊಟ್ಟು ಸ್ಥಳ ಪರಿಶೀಲನೆ ನಡೆಸಿದರು. 

ವಕ್ಫ್‌ಬೋರ್ಡ್‌ ಹೇಳಿಕೆ ವಿರೋಧಿಸಿ ಹರಿಹರದಲ್ಲಿ ಬಿಜೆಪಿ ವತಿಯಿಂದ ಪ್ರತಿಭಟನೆ

ಹರಿಹರ : ಸರ್ಕಾರಿ ಅಧೀನದಲ್ಲಿ ಇರುವ ಆಸ್ತಿಯನ್ನು ತನ್ನದೆಂದು ವಕ್ಫ್ ಬೋರ್ಡ್ ಹೇಳುತ್ತಿರುವುದನ್ನು ವಿರೋಧಿಸಿ ನಗರದಲ್ಲಿ ಬಿಜೆಪಿ ವತಿಯಿಂದ ಶಾಸಕ ಬಿ.ಪಿ. ಹರೀಶ್ ನೇತೃತ್ವದಲ್ಲಿ ಇಂದು ಬೃಹತ್ ಪ್ರತಿಭಟನೆ ನಡೆಸಿ, ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಲಾಯಿತು.

ಹರಪನಹಳ್ಳಿಯಲ್ಲಿ ಕೇಂದ್ರೀಯ ವಿ.ವಿ ಸ್ಥಾಪನೆಗೆ ಪ್ರಯತ್ನ

ಹರಪನಹಳ್ಳಿ : ಶೈಕ್ಷಣಿಕವಾಗಿ ಮುಂದು ವರೆದಿರುವ ತಾಲ್ಲೂಕಿನಲ್ಲಿ ಕೇಂದ್ರೀಯ ವಿಶ್ವವಿದ್ಯಾಲಯ ಸ್ಥಾಪನೆಗೆ ಪ್ರಯತ್ನಿಸಲಾಗುವುದು ಎಂದು ಶಾಸಕರಾದ ಶ್ರೀಮತಿ ಎಂ.ಪಿ.ಲತಾ ಮಲ್ಲಿಕಾರ್ಜುನ್ ಹೇಳಿದರು.

ಕೊಮಾರನಹಳ್ಳಿ : ಕೆರೆಯ ನಡುಗಡ್ಡೆಯಲ್ಲಿ ಧರ್ಮಧ್ವಜ ಸ್ಥಾಪನೆ

ಮಲೇಬೆನ್ನೂರು : ಇದೇ ದಿನಾಂಕ 29 ರಂದು ಹಮ್ಮಿಕೊಂಡಿರುವ ತೆಪ್ಪೋತ್ಸವ ಹಾಗೂ ದೀಪೋತ್ಸವದ ಹಿನ್ನೆಲೆಯಲ್ಲಿ ಸೋಮವಾರ ಕಂಕಣಧಾರಣೆ, ಧರ್ಮಧ್ವಜ ಸ್ಥಾಪನೆ ಕಾರ್ಯಕ್ರಮ ಸಂಭ್ರಮದಿಂದ ಜರುಗಿತು.

ಕುಷ್ಠರೋಗ ಪತ್ತೆ ಅಭಿಯಾನ

ಮಲೇಬೆನ್ನೂರು : ದೇವರಬೆಳಕೆರೆ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯ ಎರೆಬೂದಿಹಾಳ್ ಗ್ರಾಮದಲ್ಲಿ ಕುಷ್ಠರೋಗ ಪತ್ತೆ ಅಭಿಯಾನ ಕಾರ್ಯಕ್ರಮವನ್ನು ಸೋಮವಾರ ಹಮ್ಮಿಕೊಳ್ಳಲಾಗಿತ್ತು.

ಶಿಂಗ್ರಿಹಳ್ಳಿ : ಕನ್ನಡ ರಾಜ್ಯೋತ್ಸವ ಆಚರಣೆ

ಹರಪನಹಳ್ಳಿ : ತಾಲ್ಲೂಕಿನ ಸಿಂಗ್ರಿಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಯಿತು. ಮೆರವಣಿಗೆಯ ನಂತರ ಚಿಕ್ಕ ಮಕ್ಕಳ ನೃತ್ಯದೊಂದಿಗೆ ರಾಜ್ಯೋತ್ಸವವನ್ನು ಆಚರಿಸಲಾಯಿತು.

ಲಯನ್ಸ್‌ನಿಂದ ರೇಷನ್ ಕಿಟ್‌

ಮಲೇಬೆನ್ನೂರು : ಇಲ್ಲಿನ ಲಯನ್ಸ್ ಕ್ಲಬ್ ವತಿಯಿಂದ ದೀಪಾವಳಿ ಹಬ್ಬದ ಅಂಗವಾಗಿ 10 ಜನ ಕಡು ಬಡವರಿಗೆ ರೇಷನ್ ಕಿಟ್‌ಗಳನ್ನು ಲಯನ್ಸ್ ವಲ ಯಾಧ್ಯಕ್ಷ ಚಿಟ್ಟಕ್ಕಿ ನಾಗ ರಾಜ್, ಓ. ಜಿ. ರುದ್ರ ಗೌಡ್ರು, ಸಿರಿಗೆರೆ ಸಿದ್ದಣ್ಣ ಅವರು ವಿತರಿಸಿದರು.

ಮಲೇಬೆನ್ನೂರಿನ ವಿವಿಧೆಡೆ ಸಂಭ್ರಮದ ರಾಜ್ಯೋತ್ಸವ

ಮಲೇಬೆನ್ನೂರು : ಪಟ್ಟಣದ ವಿವಿಧೆಡೆ 69ನೇ ಕನ್ನಡ ರಾಜ್ಯೋತ್ಸವ ಮತ್ತು ದೀಪಾವಳಿ ಹಬ್ಬದ ಅಂಗವಾಗಿ ಲಕ್ಷ್ಮಿ ಪೂಜೆಗಳನ್ನು ಶುಕ್ರವಾರ ಸಂಭ್ರಮದಿಂದ ಆಚರಿಸಲಾಯಿತು.

ಕನ್ನಡ ನಾಡಿನ ಸೊಬಗು ವಿಶ್ವಕ್ಕೆ ಮಾದರಿ: ಕೆ.ಉಚ್ಚಂಗೆಪ್ಪ

ಹರಪನಹಳ್ಳಿ : ಕನ್ನಡ ನಾಡು ಸಂಪದ್ಭರಿತವಾದ ನಾಡು. ಇಲ್ಲಿನ ನೆಲ, ಜಲ, ನಾಡು-ನುಡಿ, ಭಾಷೆ, ಸಾಹಿತ್ಯ ಇಡಿ ವಿಶ್ವಕ್ಕೆ ಮಾದರಿಯಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಅಧ್ಯಕ್ಷ ಕೆ. ಉಚ್ಚೆಂಗೆಪ್ಪ ಹೇಳಿದರು.

ಪ್ರತಿಭೆ ಪ್ರದರ್ಶಿಸಿದ ಅಮೃತ ವರ್ಷಿಣಿ ಮಕ್ಕಳು

ಹರಿಹರ : ಕುಮಾರಪಟ್ಟಣಂನ ಅಮೃತ ವರ್ಷಿಣಿ ವಿದ್ಯಾಲಯದಲ್ಲಿ ಬುಧವಾರ ನಡೆದ ಪ್ರತಿಭಾ ಪ್ರದರ್ಶನದಲ್ಲಿ ಬಗೆ, ಬಗೆಯ ವೇಷಧಾರಣೆ ಮಾಡಿ ನಲಿದ ವಿದ್ಯಾರ್ಥಿಗಳು. ನೃತ್ಯ, ಗಾಯನ, ಮೂಕಾಭಿನಯ, ಶ್ಲೋಕ, ಭರತನಾಟ್ಯ, ಕೀರ್ತನೆ, ಮಣಿಕಟ್ಟು ಜೋಡಣೆ ಸೇರಿದಂತೆ ವಿವಿಧ ಚಟುವಟಿಕೆಗಳನ್ನು ನಡೆಸಲಾಯಿತು.

ಜಿಗಳಿಯಲ್ಲಿ ಸಂಭ್ರಮದ ರಾಜ್ಯೋತ್ಸವ

ಮಲೇಬೆನ್ನೂರು : ಜಿಗಳಿ ಗ್ರಾಮದ ಗ್ರಾ.ಪಂ. ಕಚೇರಿ ಮತ್ತು ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 69ನೇ ಕನ್ನಡ ರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು.

error: Content is protected !!