Category: ಸುದ್ದಿಗಳು

Home ಸುದ್ದಿಗಳು

ರಸ್ತೆ, ಚರಂಡಿ, ಸಿಸಿ ಕ್ಯಾಮೆರಾ, ಬೀದಿ ದೀಪ ಇತ್ಯಾದಿ…

ಹರಿಹರ : ಪಾದಚಾರಿಗಳಿಗೆ ಫುಟ್‍ಪಾತ್ ರಚನೆ, ಹರಿಹರೇಶ್ವರ ದೇವಸ್ಥಾನಕ್ಕೆ ಮೂಲ ಸೌಕರ್ಯ, ನಗರದ ರಸ್ತೆ, ಚರಂಡಿಗಳ ನಿರ್ಮಾಣ, ಕನ್ನಡ ಭವನ ನಿರ್ಮಾಣ, ಬೀದಿ ದೀಪ, ಸಿಸಿಟಿವಿ ಕ್ಯಾಮರಾ ಅಳವಡಿಕೆ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಕಲ್ಪಿಸುವ ಕುರಿತು ಬಜೆಟ್ ಪೂರ್ವಭಾವಿ ಸಮಾಲೋಚನಾ ಸಭೆಯಲ್ಲಿ ಸಾರ್ವಜನಿಕರಿಂದ ಹರಿದು ಬಂದ ಸಲಹೆಗಳಿವು.

ಬಂಜೆತನ ಶಾಪವಲ್ಲ : ಡಾ.ವರದಾ ಕಿರಣ್

ಹೊನ್ನಾಳಿ : ಬಂಜೆತನವು ಶಾಪವಲ್ಲ ಎಂಬ ಆತ್ಮಧೈರ್ಯ ತುಂಬುವ ಹಾಗೂ ಶಿಬಿರದ ಸದುಪಯೋಗ ಪಡೆದುಕೊಂಡು ಮಾನಸಿಕ ಒತ್ತಡದಿಂದ ಹೊರಬರುವಂತೆ ಅರಿವು ಮೂಡಿಸುವುದೇ ಶಿಬಿರದ ಮುಖ್ಯ ಉದ್ದೇಶ

ಗುರುಗಳ ಸ್ಥಾನಕ್ಕೆ ಶಿಷ್ಯನೂ ಆಯ್ಕೆ ಆದದ್ದು ಸಂತಸ ತಂದಿದೆ

ಹರಿಹರ : ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಇತಿಹಾಸದಲ್ಲೇ, ಗುರುಗಳು ಅಧ್ಯಕ್ಷರಾಗಿದ್ದ  ಸ್ಥಾನಕ್ಕೆ ಅವರ ಶಿಷ್ಯ  ಕೂಡ ಆಯ್ಕೆಯಾಗಿರುವುದು ಅತೀವ ಸಂತಸವನ್ನು ನೀಡಿದೆ

ಡಾ. ಎ.ಬಿ. ರಾಮಚಂದ್ರಪ್ಪ ಅವರಿಗೆ ರಾಜ್ಯಮಟ್ಟದ ಜೀವಮಾನ ಸಾಧನೆ ಪ್ರಶಸ್ತಿ

ರಾಜ್ಯ ಮಟ್ಟದ 4ನೇ ವೈಜ್ಞಾನಿಕ ಸಮ್ಮೇಳನದಲ್ಲಿ ಮಾನವ ಬಂಧುತ್ವ ವೇದಿಕೆಯ ರಾಜ್ಯ ಸಂಚಾಲಕರು, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯರೂ ಆದ ಡಾ. ಎ.ಬಿ. ರಾಮಚಂದ್ರಪ್ಪ ಅವರನ್ನು ಸಂಘಟನಾತ್ಮಕ ಸೇವೆಗಾಗಿ ರಾಜ್ಯಮಟ್ಟದ ಜೀವನ ಸಾಧನ ಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.

ಎಸ್ಸೆಸ್ಸೆಲ್ಸಿ ಉತ್ತಮ ಫಲಿತಾಂಶಕ್ಕೆ ಶಿಕ್ಷಕರು, ವಿದ್ಯಾರ್ಥಿಗಳು ಶ್ರಮಿಸಬೇಕು

ಮಲೇಬೆನ್ನೂರು : ಎಸ್‍ಎಸ್‍ಎಲ್‍ಸಿ ಫಲಿತಾಂಶದಲ್ಲಿ ದಾವಣಗೆರೆ ಜಿಲ್ಲೆಯು 23ನೇ ಸ್ಥಾನದಲ್ಲಿದೆ. ಅದನ್ನು 10ನೇ ಸ್ಥಾನದೊಳಗೆ ಬರುವಂಥಹ ಮಹತಕ್ಕಾರ್ಯಕ್ಕೆ ಶಿಕ್ಷಕರು, ವಿದ್ಯಾರ್ಥಿಗಳು ಶ್ರಮಿಸಬೇಕೆಂದು ಶಾಸಕ ಬಿ.ಪಿ. ಹರೀಶ್ ಹೇಳಿದರು. 

ಭಾನುವಳ್ಳಿಯಲ್ಲಿ ಅಕ್ಷರದವ್ವ ಸಾವಿತ್ರಿ ಬಾ ಪುಲೆ ಜಯಂತಿ ಆಚರಣೆ

ಮಲೇಬೆನ್ನೂರು : ಭಾನುವಳ್ಳಿ ಗ್ರಾಮದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಮಾನವ ಬಂಧುತ್ವ ವೇದಿಕೆ ವತಿಯಿಂದ ಮಹಿಳಾ ಶಿಕ್ಷಣದ ಹೋರಾಟಗಾರ್ತಿ ಹಾಗೂ ಭಾರತದ ಮೊದಲ ಮಹಿಳಾ ಶಿಕ್ಷಕಿ, ಅಕ್ಷರದವ್ವ ಸಾವಿತ್ರಿ ಬಾ ಪುಲೆ ಇವರ ಜಯಂತಿ ಕಾರ್ಯಕ್ರಮವನ್ನು ಆಚರಿಸಲಾಯಿತು.

ಸಂವಿಧಾನ ಉಳಿಸುವ ಕೆಲಸ ಪಕ್ಷಾತೀತವಾಗಲಿ

ಹರಪನಹಳ್ಳಿ : ಬಿಜೆಪಿ ಮತ್ತು ಆರ್ಎಸ್‌ಎಸ್ ದೇಶದಲ್ಲಿ ಕೋಮುವಾದ ಸೃಷ್ಟಿಸುವ ಕೆಲಸ ಮಾಡುತ್ತಿವೆ ಎಂದು ಕೆಪಿಸಿಸಿ ಎಸ್ಸಿ ಘಟಕದ ಜಿಲ್ಲಾಧ್ಯಕ್ಷ ಸೋಮಶೇಖರ್ ಬಣ್ಣದಮನೆ ಆರೋಪಿಸಿದರು.

ಕೋರೆಂಗಾವ್ ಮರ್ಯಾದೆಗಾಗಿ ನಡೆದ ಏಕೈಕ ಯುದ್ಧ

ಹೊನ್ನಾಳಿ : ಭೀಮ ಕೋರೆಂ ಗಾವ್ ಯುದ್ಧವು ಐದು ನೂರು ಜನರ ಒಗ್ಗ ಟ್ಟಿನಿಂದ ಕೂಡಿದ, ವಿಶ್ವದಲ್ಲೇ   ಮರ್ಯಾ ದೆಗಾಗಿ ನಡೆದ ಏಕೈಕ ಯುದ್ಧವಾಗಿದೆ ಎಂದು ಪ್ರಜಾ ಪರಿವರ್ತನಾ ವೇದಿಕೆ ರಾಜ್ಯ ಸಂಚಾಲಕ ಎ.ಡಿ ಈಶ್ವರಪ್ಪ ಹೇಳಿದರು.

ತೆಲಗಿ ವಿವಿಧೋದ್ಧೇಶ ಪ್ರಾ.ಕೃ.ಪ.ಸ. ಸಂಘದ ಅಧ್ಯಕ್ಷರಾಗಿ ಉಮಾಕಾಂತ್

ಹರಪನಹಳ್ಳಿ : ತಾಲ್ಲೂಕಿನ ತೆಲಗಿ ಗ್ರಾಮದ ವಿವಿಧೋದ್ಧೇಶ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಅಧ್ಯಕ್ಷರಾಗಿ ತಳವಾರ ಉಮಾಕಾಂತ್, ಉಪಾಧ್ಯಕ್ಷರಾಗಿ ಶೆಟ್ರು ಕುಬೇರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ವೆಂಕಟೇಶ್ವರಪುರದಲ್ಲಿ 10ರಂದು ವೈಕುಂಠ ಏಕಾದಶಿ ವೈಭವ

ಶ್ರೀ ವೆಂಕಟೇಶ್ವರ ಸ್ವಾಮಿ ದಿವ್ಯ ಸಾನ್ನಿಧ್ಯದಲ್ಲಿ ಧನುರ್ಮಾಸದ ಶುಕ್ಲ ಪಕ್ಷ ವೈಕುಂಠ ಏಕಾದಶಿ ಇದೇ ದಿನಾಂಕ 10ರ ಶುಕ್ರವಾರ ಬೆಳಗಿನ ಜಾವ 3.30 ರಿಂದ ಉತ್ತರ ದ್ವಾರ ದರ್ಶನ, ವಿಶೇಷ ಪಂಚಾಮೃತ ಅಭಿಷೇಕ, ದಿವ್ಯ ವಜ್ರ ಖಚಿತ ಆಭರಣ ಅಲಂಕಾರ ಸೇವೆಯನ್ನು ನಡೆಸಲಾಗುತ್ತದೆ. 

ಜಿಗಳಿ ಪಿಎಸಿಎಸ್ ಚುನಾವಣೆ : 11 ಜನ ಆಯ್ಕೆ

ಮಲೇಬೆನ್ನೂರು : ಜಿಗಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿ ನಿರ್ದೇಶಕ ಸ್ಥಾನಗಳಿಗೆ ಭಾನುವಾರ ನಡೆದ ಚುನಾವಣೆಯಲ್ಲಿ 11 ಜನ ಆಯ್ಕೆಯಾಗಿದ್ದಾರೆ.

ವಸಾಹತು ಕಾಲದಲ್ಲಿನ ಮಧ್ಯಕರ್ನಾಟಕ ಚರಿತ್ರೆ, ದಾಖಲೆಗಳು ರಾಷ್ಟ್ರ ಮಟ್ಟದ ವಿಚಾರ ಸಂಕಿರಣ

ಹರಿಹರ : ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಾಳೆ ದಿನಾಂಕ 6 ಮತ್ತು 7 ರಂದು ವಸಾಹತು ಕಾಲದಲ್ಲಿನ ಮಧ್ಯಕರ್ನಾಟಕದ ಚರಿತ್ರೆ ಮತ್ತು ದಾಖಲೆಗಳು ವಿಷಯ ಕುರಿತು ಎರಡು ದಿನಗಳ ರಾಷ್ಟ್ರ ಮಟ್ಟದ ವಿಚಾರ ಸಂಕಿರಣ ಆಯೋಜಿಸಿದೆ

error: Content is protected !!