Category: ಸುದ್ದಿಗಳು

Home ಸುದ್ದಿಗಳು

ವಿಜಯನಗರ ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷರಾಗಿ ರಾಗಿಮಸಲವಾಡದ ರೇವಣ್ಣ

ಹರಪನಹಳ್ಳಿ : ವಿಜಯನಗರ ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ರಾಗಿ ರಾಗಿಮಸಲವಾಡದ ಕೊಂಡಜ್ಜಿ ರೇವಣಸಿದ್ದಪ್ಪ ಆಯ್ಕೆಯಾಗಿದ್ದಾರೆ.ಉಳಿದಂತೆ ಉಪಾಧ್ಯಕ್ಷರಾಗಿ ಹೊಸಪೇಟೆ ಶ್ರೀನಿವಾಸ, ರಾಜ್ಯ ಪ್ರತಿನಿಧಿಯಾಗಿ ಕಕ್ಕುಪ್ಪಿ ಬಸವರಾಜ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಪಾಂಡೋಮಟ್ಟಿ ವಿರಕ್ತ ಮಠದಲ್ಲಿ ನಾಳೆ ಸ್ಮರಣೋತ್ಸವ

ಚನ್ನಗಿರಿ : ತಾಲ್ಲೂಕಿನ ಪಾಂಡೋಮಟ್ಟಿ ವಿರಕ್ತಮಠದಲ್ಲಿ ನಾಡಿದ್ದು ದಿನಾಂಕ 17 ರಿಂದ 19ರವರೆಗೆ ಮೂರು ದಿನ ಲಿಂ. ಶ್ರೀ ಸಂಗಮನಾಥ ಮಹಾಸ್ವಾಮಿಗಳ 63ನೇ ಹಾಗೂ ಲಿಂ. ಶ್ರೀ ಚನ್ನಬಸವ ಮಹಾಸ್ವಾಮಿಗಳ 18ನೇ ವರ್ಷದ ಸ್ಮರಣೋತ್ಸವ ಮತ್ತು ಬಸವ ತತ್ವ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ

ತುಂಗಭದ್ರಾ ಕ್ರೆಡಿಟ್ ಕೋ-ಆಪ್ ಸೊಸೈಟಿಗೆ ಅವಿರೋಧ ಆಯ್ಕೆ

ಹರಿಹರ : ನಗರದ ತುಂಗಭದ್ರಾ ಕ್ರೆಡಿಟ್ ಕೋ- ಆಪರೇಟಿವ್ ಸೊಸೈಟಿ ಆಡಳಿತ ಮಂಡಳಿಗೆ ಮೊನ್ನೆ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ಎಂ. ಶಿವಾನಂದಪ್ಪ ಮತ್ತು ಹೇಮಂತರಾಜ್ `ಡಿ’ ಗುಂಪಿನ ಸದಸ್ಯರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಪಂಚಮಸಾಲಿ ಗುರುಪೀಠದ ಹರಜಾತ್ರೆಯಲ್ಲಿ ಕ್ಷುಲ್ಲಕ ಕಾರಣಕ್ಕೆ ಗಲಾಟೆ

ಹರಿಹರ : ನಗರದ ವೀರಶೈವ ಲಿಂಗಾಯತ ಪಂಚಮಸಾಲಿ ಗುರುಪೀಠದಲ್ಲಿ ಹರಜಾತ್ರೆ, ಕಿತ್ತೂರು ರಾಣಿ ಚೆನ್ನಮ್ಮ ದ್ವಿಶತಮಾನ ವಿಜಯೋತ್ಸವ ಮತ್ತು ವಚನಾನಂದ ಶ್ರೀಗಳ 7ನೇ ವರ್ಷದ ಪೀಠಾರೋಹಣ ಮಹೋತ್ಸವ ಕಾರ್ಯಕ್ರಮದಲ್ಲಿ ಕ್ಷುಲ್ಲಕ ಕಾರಣಕ್ಕೆ ಒಬ್ಬರಿಗೊಬ್ಬರು ಗಲಾಟೆ ನಡೆದಿದೆ.

ಅಂಬಿಗರ ಶರಣ ಸಂಸ್ಕೃತಿ ಉತ್ಸವಕ್ಕೆ ಮಲೇಬೆನ್ನೂರಿನಿಂದ 2 ಬಸ್

ಮಲೇಬೆನ್ನೂರು : ಸುಕ್ಷೇತ್ರ ನರಸೀಪುರದ ಶ್ರೀ ನಿಜಶರಣ ಅಂಬಿಗರ ಚೌಡಯ್ಯನವರ ಗುರುಪೀಠದಲ್ಲಿ ಬುಧವಾರ ಜರುಗಿದ ಅಂಬಿಗರ ಶರಣ ಸಂಸ್ಕೃತಿ ಉತ್ಸವ ಮತ್ತು ವಚನ ಗ್ರಂಥ ಮಹಾರಥೋತ್ಸವಕ್ಕೆ ಮಲೇಬೆನ್ನೂರು ಪಟ್ಟಣದಿಂದ 2 ಬಸ್‌ಗಳಲ್ಲಿ ನೂರಕ್ಕೂ ಹೆಚ್ಚು ಜನ ತೆರಳಿದ್ದರು.

ಹರಿಹರದಲ್ಲಿ ಸಂಭ್ರಮದ ಸಂಕ್ರಾಂತಿ ಹಬ್ಬ ಆಚರಣೆ

ಹರಿಹರ : ನಗರದ ತುಂಗಭದ್ರಾ ನದಿ ದಡದಲ್ಲಿ ಮಂಗಳವಾರ ಸಹಸ್ರಾರು ಜನರು ಸೇರಿ ಗಂಗಾ ಪೂಜೆ ನೆರೆವೇರಿಸಿ, ಸಹ ಭೋಜನ ಮಾಡಿ ಮಕರ ಸಂಕ್ರಾಂತಿಯನ್ನು ಸಡಗರ, ಸಂಭ್ರಮದಿಂದ ಆಚರಿಸಿದರು.

ಉಕ್ಕಡಗಾತ್ರಿ ಅಜ್ಜಯ್ಯನಿಗೆ ನೂತನ ಬೆಳ್ಳಿ ಮಂಟಪ ಅರ್ಪಣೆ

ಮಲೇಬೆನ್ನೂರು : ಸುಕ್ಷೇತ್ರ ಉಕ್ಕಡಗಾತ್ರಿಯಲ್ಲಿ ಪವಾಡ ಪುರುಷ ಶ್ರೀ ಗುರು ಕರಿಬಸವೇಶ್ವರ ಅಜ್ಜಯ್ಯನಿಗೆ ಭಕ್ತರು ನೀಡಿದ ಕಾಣಿಕೆ ಹಣದಲ್ಲಿ ಹೊಸದಾಗಿ ಮಾಡಿಸಿರುವ 25 ಕೆಜಿ ತೂಕದ ಬೆಳ್ಳಿ ಮಂಟಪವನ್ನು ಮಂಗಳವಾರ  ಲೋಕಾರ್ಪಣೆಗೊಳಿಸಲಾಯಿತು.

ಅಂಬಿಗರ ಚೌಡಯ್ಯ ಗುರುಪೀಠಕ್ಕೆ ಮಲೇಬೆನ್ನೂರಿನಿಂದ ಅಕ್ಕಿ

ಮಲೇಬೆನ್ನೂರು : ಸುಕ್ಷೇತ್ರ ನರಸೀಪುರದಲ್ಲಿರುವ ನಿಜಶರಣ ಅಂಬಿಗರ ಚೌಡಯ್ಯನವರ ಗುರುಪೀಠದಲ್ಲಿ ನಾಳೆ ದಿನಾಂಕ 15 ರಿಂದ ಜರುಗಲಿರುವ ಅಂಬಿಗರ ಶರಣ ಸಂಸ್ಕೃತಿ ಉತ್ಸವ-2025 ಮತ್ತು ವಚನ ಗ್ರಂಥ ಮಹಾರಥೋತ್ಸವ  ಸಮಾರಂಭಕ್ಕೆ ಮಲೇಬೆನ್ನೂರಿನ ಗಂಗಾಮತ ಸಮಾಜದವರು 101 ಪಾಕೇಟ್ ಅಕ್ಕಿಯನ್ನು ಸೋಮವಾರ ಕಳುಹಿಸಿಕೊಟ್ಟರು.

ನಭೋಮಂಡಲದಲ್ಲಿ ಸಂಭವಿಸುವ ಅಚ್ಚರಿಯ ಪ್ರತಿಫಲವೇ ಮಕರ ಸಂಕ್ರಾಂತಿ

ಹರಪನಹಳ್ಳಿ : ನಭೋಮಂಡಲದಲ್ಲಿ ಪ್ರತಿ ವರ್ಷ ನಿಗದಿತ ದಿನಕ್ಕೆ, ನಿಗದಿತ ಸಮಯಕ್ಕೆ ಸಂಭವಿಸುವ ಅಚ್ಚರಿಯ ಪ್ರತಿಫಲವೇ ಸಂಕ್ರಾಂತಿ. ಸೂರ್ಯ ತನ್ನ ಚಲನ ಮಾರ್ಗವನ್ನು ಉತ್ತರಾಯಣ ದಿಂದ ದಕ್ಷಿಣಾಯಣಕ್ಕೆ ಬದಲಾಯಿಸುತ್ತಾನೆ.

ಬುಡಕಟ್ಟು ಸಮುದಾಯದಲ್ಲಿ ಹೋರಾಟದ ಬದುಕು ಅಡಕ

ಜಗಳೂರು : ಬುಡಕಟ್ಟು ಸಮುದಾಯಗಳಲ್ಲಿ ವಿಶಿಷ್ಟ ಸಂಸ್ಕೃತಿ, ಹೋರಾಟದ ಬದುಕು ಅಡಗಿರುತ್ತದೆ ಎಂದು ನಿವೃತ್ತ ಪ್ರಾಚಾರ್ಯ ಹಾಗೂ ಸಾಹಿತಿ ಮಲ್ಲಿಕಾರ್ಜುನ್ ಕಲಮರಹಳ್ಳಿ ತಿಳಿಸಿದರು.

ಮಲೇಬೆನ್ನೂರಿನ ವೀರಭದ್ರೇಶ್ವರ ದೇವಸ್ಥಾನದಲ್ಲಿ ಅಪಾರ ಭಕ್ತರ ಸಮ್ಮುಖದಲ್ಲಿ ವಿಶೇಷ ಸಂಕ್ರಾಂತಿ

ಮಲೇಬೆನ್ನೂರು : ಪಟ್ಟಣದ ಹೊರವಲಯದಲ್ಲಿರುವ ಶ್ರೀ ಭದ್ರಕಾಳಿ ಸಮೇತ ಶ್ರೀ ವೀರಭದ್ರೇಶ್ವರ ದೇವಸ್ಥಾನದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಸಂಕ್ರಾಂತಿ ಆಚರಣೆಯಲ್ಲಿ ಸುಮಾರು 20 ಸಾವಿರಕ್ಕೂ ಹೆಚ್ಚು ಭಕ್ತರು ಪಾಲ್ಗೊಂಡು ದಾಖಲೆ ಬರೆದರು.

error: Content is protected !!