Category: ಸುದ್ದಿಗಳು

Home ಸುದ್ದಿಗಳು

ಸಭೆ ಕರೆಯಲು ಜಿಲ್ಲಾಧಿಕಾರಿಗಳಿಗೆ ಹರಿಹರ ನಗರಸಭಾ ಸದಸ್ಯರ ಮನವಿ

ಹರಿಹರ : ಇಲ್ಲಿನ ನಗರಸಭೆಯಿಂದ ತುರ್ತು ಕೆಲಸಗಳು ಮತ್ತು ಕಾಮಗಾರಿಗಳು ನಡೆಯದೇ ಸಾರ್ವಜನಿಕರಿಗೆ ತೊಂದರೆ ಆಗುತ್ತಿದ್ದು, ಕೂಡಲೇ ಕೌನ್ಸಿಲ್ ಸಾಮಾನ್ಯ ಸಭೆಯನ್ನು ಕರೆಯುವಂತೆ,    ನಗರಸಭೆ ಆಡಳಿತಾಧಿಕಾರಿಗಳೂ ಆಗಿರುವ ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ಅವರಿಗೆ ನಗರಸಭೆ ಸದಸ್ಯರ ನಿಯೋಗವು ಮನವಿ ಸಲ್ಲಿಸಿತು.

ಮೋದಿ ಮೂರನೇ ಬಾರಿಗೆ ಪ್ರಧಾನಿ ದೇವರಿಗೆ ಹರಕೆ ಸಲ್ಲಿಸಿದ ಅಭಿಮಾನಿ

ಹರಪನಹಳ್ಳಿ : ನರೇಂದ್ರ ಮೋದಿಯವರು ಮೂರನೇ ಬಾರಿಗೆ ಪ್ರಧಾನ ಮಂತ್ರಿಯಾಗಲಿ ಎಂದು ದೇವರಿಗೆ ಹರಕೆ ಹೊತ್ತು ಅಭಿಮಾನ ಮೆರೆದಿದ್ದ ತಾಲ್ಲೂಕಿನ ಹಿರೇಮೇಗಳಗೆರೆ ಗ್ರಾಮದ ದಾನಪ್ಪರ್ ಮಲ್ಲಿಕಾರ್ಜುನ ಅವರ ನಿವಾಸಕ್ಕೆ ಮಾಜಿ ಸಚಿವ ಜಿ. ಕರುಣಾಕರ ರೆಡ್ಡಿ ಭಾನುವಾರ ಭೇಟಿ ನೀಡಿ ಅವರನ್ನು ಸನ್ಮಾನಿಸಿ, ಗೌರವಿಸಿದರು.

ಶಾಂತಿ, ಸೌಹಾರ್ದಯುತವಾಗಿ ಬಕ್ರೀದ್‌ ಆಚರಿಸಿ

ಮಲೇಬೆನ್ನೂರು : ನಾಳೆ ಸೋಮವಾರ ಜರುಗುವ ಬಕ್ರೀದ್‌ ಹಬ್ಬವನ್ನು ಶಾಂತಿಯುತವಾಗಿ, ಸೌಹಾರ್ದಯುತವಾಗಿ ಕಾನೂನಿನ ಚೌಕಟ್ಟಿನಲ್ಲಿ ಆಚರಿಸಿ ಎಂದು ಪಿಎಸ್‌ಐ ಪ್ರಭು ಕೆಳಗಿನಮನಿ ಪಟ್ಟಣದ ಮುಸ್ಲಿಂ ಜನತೆಗೆ ಮನವಿ ಮಾಡಿದರು.

ಹೊನ್ನಾಳಿ ತಾಲ್ಲೂಕು ಸೊರಟೂರು ಗ್ರಾ.ಪಂ ಅಧ್ಯಕ್ಷರಾಗಿ ಪರಶುರಾಮ್ ಆಯ್ಕೆ

ಹೊನ್ನಾಳಿ : ತಾಲ್ಲೂಕಿನ ಸೊರಟೂರು ಗ್ರಾ.ಪಂ ಅಧ್ಯಕ್ಷರಾಗಿ ಎಂ.ಹೆಚ್.ಪರಶುರಾಮ್ ಇವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಡಾ. ವಿಶ್ವನಟೇಶ್ ಘೋಷಿಸಿದರು.

ಸ್ವಾಸ್ಥ್ಯ ಸಮಾಜ ನಿರ್ಮಾಣದಲ್ಲಿ ಗೃಹರಕ್ಷಕರ ಪಾತ್ರ ದೊಡ್ಡದು

ಹರಪನಹಳ್ಳಿ : ಸ್ವಾಸ್ಥ್ಯ ಸಮಾಜ ನಿರ್ಮಾಣದಲ್ಲಿ ಗೃಹರಕ್ಷಕ ದಳದ ಪಾತ್ರ ಮುಖ್ಯವಾಗಿದೆ. ಕಾನೂನು ರಕ್ಷಣೆಯ ಜೊತೆಗೆ ಪರಿಸರ ಸಂರಕ್ಷಣೆಯ ಹೊಣೆ ಹೊತ್ತಿರುವುದು ಅತ್ಯಂತ ಶ್ಲ್ಯಾಘನೀಯ ಎಂದು ಎಸ್.ಯು.ಜೆ.ಎಂ. ಕಾಲೇಜಿನ ಕನ್ನಡ ಉಪನ್ಯಾಸಕ ಹೆಚ್.ಮಲ್ಲಿಕಾರ್ಜುನ್‌ ಅಭಿಪ್ರಾಯಪಟ್ಟರು.  

ಹರಿಹರ: ಹೆಡ್ ಕಾನ್‌ಸ್ಟೇಬಲ್ ಮಲ್ಲಿಕಾರ್ಜುನ ನಿಧನ

ಹರಿಹರ : ನಗರದ ಪೊಲೀಸ್ ಠಾಣೆಯ‌ ಹೆಡ್ ಕಾನ್‌ಸ್ಟೇಬಲ್  ಮಲ್ಲಿಕಾರ್ಜುನ ಅವರು, ಶುಕ್ರವಾರ ಬೆಳಗ್ಗೆ ನಿಧನ  ಹೊಂದಿದರು.   ಮೃತರ ಪಾರ್ಥಿವ ಶರೀರದ  ಅಂತಿಮ ದರ್ಶನದ  ವ್ಯವಸ್ಥೆಯನ್ನು ಶನಿವಾರ ಬೆಳಗ್ಗೆ ಠಾಣೆಯ ಆವರಣದಲ್ಲಿ  ಮಾಡಲಾಗಿತ್ತು.

ಹರಿಹರದಲ್ಲಿ ರಕ್ಷಣಾ ವೇದಿಕೆ ಪ್ರತಿಭಟನೆ ನಟ ದರ್ಶನ್ ಪೋಸ್ಟರ್‌ಗೆ ಬೆಂಕಿ

ಹರಿಹರ : ಚಿತ್ರದುರ್ಗದ ರೇಣುಕಾ ಸ್ವಾಮಿ  ಹತ್ಯೆಯನ್ನು ಖಂಡಿಸಿ,  ನಗರದ  ರಕ್ಷಣಾ ವೇದಿಕೆ (ಪ್ರವೀಣ್ ಶೆಟ್ಟಿ ಬಣ)  ಕಾರ್ಯಕರ್ತರು   ನಟ ದರ್ಶನ್‌ ಪೋಸ್ಟರ್‌ಗಳಿಗೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಿದರು.   

ಹೊನ್ನಾಳಿ ಡಿಪೋದಿಂದ 2 ಕೆಎಸ್ಆರ್‌ಟಿಸಿ ಬಸ್ಸು ಬಿಡುಗಡೆ

ಹೊನ್ನಾಳಿ : ಹೊನ್ನಾಳಿ – ನ್ಯಾಮತಿ ಅವಳಿ ತಾಲ್ಲೂಕಿನ ಪ್ರಯಾಣಿಕರ ಅನುಕೂಲಕ್ಕಾಗಿ ಇಂದು ಎರಡು ಸರ್ಕಾರಿ ಬಸ್ಸುಗಳನ್ನು ಬಿಡುಗಡೆ ಮಾಡಲಾಗುತ್ತಿದೆ ಎಂದು ಶಾಸಕ ಶಾಂತನಗೌಡರು ಹೇಳಿದರು. 

ಮೋದಿ ಜಯ: 12 ಕಿ.ಮೀ ದೀಡು ನಮಸ್ಕಾರ ಹಾಕಿದ ಮಲ್ಲೇಶಪ್ಪ

ಹರಪನಹಳ್ಳಿ : ನರೇಂದ್ರ ಮೋದಿ ಅವರು ಲೋಕಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿ, ಮೂರನೇ ಬಾರಿಗೆ ಪ್ರಧಾನ ಮಂತ್ರಿಯಾಗಲಿ ಎಂದು ಹರಕೆ ಹೊತ್ತಿದ್ದ ತಾಲ್ಲೂಕಿನ ಹಿರೇಮೇಗಳಗೆರೆ ಗ್ರಾಮದ ಅಭಿಮಾನಿಯೊಬ್ಬ ಶುಕ್ರವಾರ ಉಚ್ಚಂಗಿದುರ್ಗದ ಉಚ್ಚಂಗೆಮ್ಮ ದೇವಸ್ಥಾನದವರೆಗೆ 12 ಕಿ.ಮೀ ದೀಡು ನಮಸ್ಕಾರ ಹಾಕಿ ಹರಕೆ ತೀರಿಸಿದರು.

error: Content is protected !!