Category: ಸುದ್ದಿಗಳು

Home ಸುದ್ದಿಗಳು

ಹರಿಹರಕ್ಕೆ ಇಂದು ರಾಜ್ಯಪಾಲರು ಸ್ಥಳ ಪರಿಶೀಲಿಸಿದ ಎಸ್ಪಿ

ಹರಿಹರ : ನಗರದ ಸೇಂಟ್ ಅಲೋಶಿಯಸ್ ಕಾಲೇಜಿ ನಲ್ಲಿ ನೂತನವಾಗಿ ಅರಂಭಿಸಿರುವ ಸೇಂಟ್ ಅಲೋಶಿಯಸ್ ಇಂಟರ್ ನ್ಯಾಷನಲ್ ಸ್ಕೂಲ್ ಉದ್ಘಾಟನೆ ಹಾಗೂ ಸಂತ ಅಲೋಶಿಯಸ್ ಗೊಂಜಾಗ ಅವರ 457 ಜಯಂತಿ ಸಮಾರಂಭ ನಾಳೆ ಮಂಗಳವಾರ ನಡೆಯಲಿದ್ದು, ರಾಜ್ಯಪಾಲ ಥಾವರ ಚಂದ್ ಗೆಹ್ಲೋಟ್ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ.

ಜಾನುವಾರು ಅಭಿವೃದ್ಧಿ ಇಲಾಖೆಯ ಅಧಿಕಾರಿ ಭೂಮೇಶ್‌ಗೆ ಬೀಳ್ಕೊಡುಗೆ

ಹರಿಹರ : ಜಾನುವಾರು ಅಭಿವೃದ್ಧಿ ಇಲಾಖೆಯ ಅಧಿಕಾರಿ ಎ.ಕೆ. ಭೂಮೇಶ್ ಅವರು ವಯೋನಿವೃತ್ತಿ ಹೊಂದಿದ್ದು, ನಗರದ ಲಕ್ಷ್ಮಿ ಮಹಲ್ ಸಭಾಂಗಣದಲ್ಲಿ ಕಳೆದ ವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ಭೂಮೇಶ್ ಅವರನ್ನು ಆತ್ಮೀಯವಾಗಿ ಗೌರವಿಸುವುದರ ಮೂಲಕ ಬೀಳ್ಕೊಡಲಾಯಿತು.

ಯೋಗ ಬಲದಿಂದ ಸಮಸ್ಯೆ ಎದುರಿಸುವ ಶಕ್ತಿ

ಹರಪನಹಳ್ಳಿ : ಯೋಗ ಮಾಡುವವನು ಎಂತಹ ಸಮಸ್ಯೆ, ಸವಾಲುಗಳೇ ಬಂದರೂ ಎದುರಿಸುವ ಶಕ್ತಿ ಬರುತ್ತದೆ ಎಂದು ಎಸ್.ಯು.ಜೆ. ಎಂ. ಕಾಲೇಜಿನ ಕನ್ನಡ ಉಪನ್ಯಾಸಕ ಎಚ್. ಮಲ್ಲಿಕಾರ್ಜುನ ಅಭಿಪ್ರಾಯಪಟ್ಟರು.

ಹರಪನಹಳ್ಳಿ ವಾಲ್ಮೀಕಿ ಸಮಾಜದಿಂದ ಲೋಕಸಭಾ ಸದಸ್ಯೆ ಪ್ರಿಯಾಂಕಗೆ ಸನ್ಮಾನ

ಹರಪನಹಳ್ಳಿ : ರಾಜನಹಳ್ಳಿಯ ವಾಲ್ಮೀಕಿ ಗುರುಪೀಠಕ್ಕೆ ಆಗಮಿಸಿದ್ದ ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಸಂಸದರಾದ ಪ್ರಿಯಾಂಕ ಜಾರಕಿಹೊಳಿ ಅವರನ್ನು  ಹರಪನಹಳ್ಳಿ ವಾಲ್ಮೀಕಿ ನಾಯಕ ಸಮಾಜದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. 

ಉಪನ್ಯಾಸಕ ಶಿವಪ್ರಸಾದ್ ಅವರಿಗೆ ವಯೋನಿವೃತ್ತಿ : ಸನ್ಮಾನ

ಹರಿಹರ : ನಗರದ ಆದಿತ್ಯ ಬಿರ್ಲಾ ಕಾಲೇಜಿನ ಭೌತಶಾಸ್ತ್ರ ಉಪನ್ಯಾಸಕರಾಗಿ 34 ವರ್ಷಗಳ ಕಾಲ ಸುದೀರ್ಘ ಸೇವೆ ಸಲ್ಲಿಸಿ ಮೊನ್ನೆ ವಯೋನಿವೃತ್ತಿ ಹೊಂದಿರುವ ಶಿವಪ್ರಸಾದ್ ಅವರನ್ನು ಕಾಲೇಜು ಅಡಳಿತ ಮಂಡಳಿ ಮತ್ತು ಉಪನ್ಯಾಸಕ ವೃಂದದವರು ಸನ್ಮಾನಿಸುವ ಮೂಲಕ ಬೀಳ್ಕೊಟ್ಟರು.

ಯಲವಟ್ಟಿ : ಮುಖ್ಯಶಿಕ್ಷಕ ರವೀಂದ್ರಚಾರಿ ವಯೋನಿವೃತ್ತಿ

ಮಲೇಬೆನ್ನೂರು : ಯಲವಟ್ಟಿ ಗ್ರಾಮದ ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಜಿಗಳಿಯ ರವೀಂದ್ರಚಾರಿ ಅವರು ಸೇವೆಯಿಂದ ವಯೋನಿವೃತ್ತಿ ಹೊಂದಿದರು.

ಸದೃಢ ಸಮಾಜಕ್ಕಾಗಿ ಸದೃಢ ಆರೋಗ್ಯ ಮುಖ್ಯ

ಮಲೇಬೆನ್ನೂರು : ಪಟ್ಟಣದ ಶ್ರೀ ಬೀರಲಿಂಗೇಶ್ವರ ದೇವಸ್ಥಾನದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮಹಿಳಾ ಜ್ಞಾನವಿಕಾಸ ಕಾರ್ಯಕ್ರಮದಡಿಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಶ್ರೀಮತಿ ವಿಜಯಲಕ್ಷ್ಮಿ ಗಂಗಾಧರ್ ಅವರು ದೀಪ ಬೆಳಗಿಸಿ ಉದ್ಘಾಟಿಸಿದರು.

ವಿದ್ಯಾರ್ಥಿಗಳು ವಿವೇಕಾನಂದರ ಆದರ್ಶ ಪಾಲಿಸಿ

ಹರಿಹರ : ತಾಲ್ಲೂಕಿನ ಬನ್ನಿಕೋಡು ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲೆಯ (ಪ್ರೌಢ ಶಾಲೆ ವಿಭಾಗ) 8, 9 ಹಾಗೂ 10ನೇ ತರಗತಿಯ ಮಕ್ಕಳಿಗೆ ದಾವಣಗೆರೆಯ ರಾಮಕೃಷ್ಣ ಆಶ್ರಮದ ತ್ಯಾಗೇಶ್ವರಾನಂದ ಶ್ರೀಗಳು ಸುಮಾರು 65 ಸಾವಿರ ರೂ. ಮೌಲ್ಯದ ಕಲಿಕಾ ಸಾಮಗ್ರಿ ವಿತರಿಸಿದರು. 

error: Content is protected !!