Category: ಸುದ್ದಿಗಳು

Home ಸುದ್ದಿಗಳು

ಹೊನ್ನಾಳಿ: ವಿಜಯೋತ್ಸವಕ್ಕೆ ಮೆರಗು ತಂದ ಕೇಂದ್ರ ಸರ್ಕಾರ

ಹೊನ್ನಾಳಿ : ಮಹಿಳೆಯರಿಗೆ ಸದಾ ಸ್ಫೂರ್ತಿ ಹಾಗೂ ಪ್ರೇರಣೆಯಾಗಿರುವ ಕಿತ್ತೂರು ರಾಣಿ ಚೆನ್ನಮ್ಮ ಬ್ರಿಟೀಷರ ವಿರುದ್ಧ ಹೋರಾಡಿ ಗೆದ್ದ ವಿಜಯೋತ್ಸವ ಸಂಭ್ರಮಾಚರಣೆ ದಿನವನ್ನು ನಾವೆಲ್ಲರೂ ಆಚರಿಸುವುದೇ ಒಂದು ಸಂಭ್ರಮದ ದಿನವಾಗಿದೆ

ಹರಪನಹಳ್ಳಿ : ಕನ್ನಡ ಜ್ಯೋತಿ ರಥಕ್ಕೆ ಸ್ವಾಗತ

ಹರಪನಹಳ್ಳಿ : ಮಂಡ್ಯದಲ್ಲಿ ಬರುವ ಡಿಸೆಂಬರ್ 20ರಿಂದ ಮೂರು ದಿನಗಳವರೆಗೆ ನಡೆಯಲಿ ರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ನಿಮಿತ್ತ್ಯ ರಾಜ್ಯದಾದ್ಯಂತ ಸಂಚರಿಸುತ್ತಿರುವ ಕನ್ನಡ ಜ್ಯೋತಿ ರಥವು ಇಂದು ಹರಪನಹಳ್ಳಿಗೆ ಆಗಮಿಸಿತು.

ಹೆಚ್ಚು ಮಳೆ: ಎಚ್ಚರಿಕೆಯಿಂದ ಕೆಲಸ ಮಾಡಬೇಕು

ಹರಿಹರ : ತಾಲ್ಲೂಕಿನಲ್ಲಿ  ನಿರೀಕ್ಷೆಗೂ ಮೀರಿ ಮಳೆ ಆಗಿರುವುದರಿಂದ ಜನ ಮತ್ತು ಜಾನುವಾರುಗಳಿಗೆ ತೊಂದರೆ ಆಗದಂತೆ ನೋಡಿ ಕೊಳ್ಳಿ ಎಂದು ವಿವಿಧ ಇಲಾಖೆಯ ಅಧಿಕಾರಿ ಗಳಿಗೆ ಶಾಸಕ ಬಿ.ಪಿ.ಹರೀಶ್ ಸೂಚಿಸಿದರು.

ಕಸಾಪ ಹೆಸರಿಗೆ ಕಚೇರಿ : ಮನವಿ

ಹರಪನಹಳ್ಳಿ : ಪಟ್ಟಣದ ಪುರಸಭೆ ವ್ಯಾಪ್ತಿಯ ಪ್ರವಾಸಿ ಮಂದಿರದ ಬಳಿ ಇರುವ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಕಚೇರಿಯನ್ನು  ಕನ್ನಡ ಸಾಹಿತ್ಯ ಪರಿಷತ್ತು ಹೆಸರಿಗೆ ಮಾಡಿಕೊಡುವಂತೆ ವಿಜಯನಗರ ಜಿಲ್ಲೆಯ ಅಪರ ಜಿಲ್ಲಾಧಿಕಾರಿಯವರಿಗೆ ಮನವಿ ಸಲ್ಲಿಸಲಾಯಿತು.

ನ.29ಕ್ಕೆ ಹೆಳವನಕಟ್ಟೆ ಲಕ್ಷ್ಮಿ ರಂಗನಾಥ ಸ್ವಾಮಿ ಕೆರೆಯಲ್ಲಿ ತೆಪ್ಪೋತ್ಸವ

ಮಲೇಬೆನ್ನೂರು : ಭರ್ತಿಯಾಗಿ ಕೋಡಿ ಬಿದ್ದಿರುವ ಕೊಮಾರನಹಳ್ಳಿಯ ಹೆಳವನಕಟ್ಟೆ ಶ್ರೀ ಲಕ್ಷ್ಮಿ ರಂಗನಾಥ ಸ್ವಾಮಿಯ ಐತಿಹಾಸಿಕ ಕೆರೆಯಲ್ಲಿ ಬರುವ ನವೆಂಬರ್ 29 ರಂದು ಅದ್ಧೂರಿಯಾಗಿ ತೆಪ್ಪೋತ್ಸವ ಆಚರಿಸಲು ಬುಧವಾರ ನಡೆದ ಪೂರ್ವಭಾವಿ ಸಭೆಯಲ್ಲಿ ನಿರ್ಧರಿಸಲಾಯಿತು.

ಜಿಗಳಿಯಲ್ಲಿ ರಾಣಿ ಚೆನ್ನಮ್ಮ ಜಯಂತಿ

ಮಲೇಬೆನ್ನೂರು : ಜಿಗಳಿ ಗ್ರಾ.ಪಂ. ಕಚೇರಿ ಮತ್ತು ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವೀರರಾಣಿ ಕಿತ್ತೂರು ರಾಣಿ ಚೆನ್ನಮ್ಮನ ಜಯಂತಿ ಹಾಗೂ 200ನೇ ವಿಜಯೋತ್ಸವವನ್ನು ಆಚರಿಸಲಾಯಿತು.

ಕೊಕ್ಕನೂರು ಗ್ರಾ.ಪಂ. ಅಧ್ಯಕ್ಷರಾಗಿ ಹಳ್ಳಿಹಾಳ್‌ ಗೌರಮ್ಮ ಧರ್ಮರಾಜ್‌

ಮಲೇಬೆನ್ನೂರು : ಕೊಕ್ಕನೂರು ಗ್ರಾಮ ಪಂಚಾಯ್ತಿ ಅಧ್ಯಕ್ಷರಾಗಿ ಹಳ್ಳಿಹಾಳ್‌ ಗ್ರಾಮದ ಶ್ರೀಮತಿ ಗೌರಮ್ಮ ಟಿ.ಎಂ. ಧರ್ಮರಾಜ್‌ ಅವರು ಬುಧವಾರ ನಡೆದ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾದರು.

ಶಿಸ್ತು ಬದ್ದವಾಗಿ ರಾಜ್ಯೋತ್ಸವ ಆಚರಿಸಲು ಸಲಹೆ

ಹರಿಹರ : ನವೆಂಬರ್ 1ರಂದು  ಕನ್ನಡ ರಾಜ್ಯೋತ್ಸವವನ್ನು ಎಲ್ಲಾ ಇಲಾಖೆ  ಅಧಿ ಕಾರಿಗಳು, ಜವಾಬ್ದಾರಿಯಿಂದ, ಶಿಸ್ತು ಬದ್ದವಾಗಿ ಮತ್ತು ಸಡಗರ, ಸಂಭ್ರಮದಿಂದ ಆಚರಣೆ ಮಾಡುವಂತೆ ಶಾಸಕ ಬಿ.ಪಿ. ಹರೀಶ್ ಹೇಳಿದರು.

ಭವಿಷ್ಯದ ಮಕ್ಕಳಿಗೆ ರಾಣಿ ಚೆನ್ನಮ್ಮನ ಇತಿಹಾಸದ ಅರಿವು ಮೂಡಿಸಲು ಕರೆ

ಹರಿಹರ : ಚೆನ್ನಮ್ಮನನ್ನು ಒಂದು ಜಾತಿಗೆ ಸೀಮಿತ ಮಾಡುವುದು ಸರಿಯಲ್ಲ, ಅವರ ಆಡಳಿತಾವಧಿಯಲ್ಲಿ ಸಮಾಜದ ನಿರ್ಮಾಣಕ್ಕೆ ಶ್ರಮಿಸಿರುವ ಅನೇಕ ಉದಾಹರಣೆಗಳು ಇತಿಹಾಸದಲ್ಲಿ ಉಲ್ಲೇಖವಾಗಿವೆ ಎಂದು ತಹಶೀಲ್ದಾರ್ ಕೆ.ಎಂ. ಗುರುಬಸವರಾಜ್ ಹೇಳಿದರು. 

ಮನುಕುಲ ಇರುವವರೆಗೂ ವಾಲ್ಮೀಕಿ ಚಿಂತನೆ ಜೀವಂತ

ಹರಪನಹಳ್ಳಿ : ಮಹರ್ಷಿ ವಾಲ್ಮೀಕಿ ಯವರ ಕೊಡುಗೆಗಳು  ಧಾರ್ಮಿಕ ಕ್ಷೇತ್ರವನ್ನು ಮೀರಿ, ಭಾರತದ ಕಲೆ, ಸಂಸ್ಕೃತಿ ಮತ್ತು ಸಾಮಾಜಿಕ ಮೌಲ್ಯಗಳನ್ನು ಆಳವಾಗಿ ಪ್ರಭಾವಿಸುತ್ತವೆ.  ಭಾರತಕ್ಕೆ ಸಂಸ್ಕೃತಿ ಕೊಟ್ಟ ಏಕಮೇವ ಕವಿ ವಾಲ್ಮೀಕಿ ಆಗಿದ್ದಾರೆ.

ಒಳ ಮೀಸಲಾತಿಗಾಗಿ ಆಗ್ರಹಿಸಿ ಇಂದಿನ ಪ್ರತಿಭಟನೆಯ ಯಶಸ್ವಿಗೆ ಹರಿಹರದ ಸಮುದಾಯ ಕರೆ

ಹರಿಹರ : ದಾವಣಗೆರೆ ನಗರದಲ್ಲಿ ಜಿಲ್ಲಾ ಮಾದಿಗ ಮತ್ತು ಛಲವಾದಿ ಸಮುದಾಯಗಳ ಒಕ್ಕೂಟದ ವತಿಯಿಂದ ಸುಪ್ರೀಂ ಕೋರ್ಟ್ ಒಳ ಮೀಸಲಾತಿ ತೀರ್ಪನ್ನು ಜಾರಿಗೊಳಿಸಲು ಆಗ್ರಹಿಸಿ ನಾಳೆ ದಿನಾಂಕ 23 ರ ಬುಧವಾರ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.

ವೀರಭದ್ರೇಶ್ವರ ದೇವಸ್ಥಾನಕ್ಕೆ ಕಾಶಿ ಜಗದ್ಗುರುಗಳ ಭೇಟಿ

ಮಲೇಬೆನ್ನೂರು : ಪಟ್ಟಣದ ಹೊರವಲಯದಲ್ಲಿರುವ ಶ್ರೀ ಭದ್ರಾಕಾಳಿ ಸಮೇತ ಶ್ರೀ ವೀರಭದ್ರೇಶ್ವರ ದೇವಸ್ಥಾನಕ್ಕೆ ಕಾಶಿಪೀಠದ ನೂತನ ಜಗದ್ಗುರು ಡಾ. ಮಲ್ಲಿಕಾರ್ಜುನ ವಿಶ್ವಾರಾಧ್ಯ ಶಿವಾಚಾರ್ಯ ಭಗತ್ಪಾದರು ಭೇಟಿ ನೀಡಿ, ಶ್ರೀ ವೀರಭದ್ರೇಶ್ವರ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದರು.

error: Content is protected !!