Category: ಜಗಳೂರು

ಸಾಲ ಮರುಪಾವತಿ ತಡೆ ಹಿಡಿಯಲು ಆಗ್ರಹ

ಜಗಳೂರು : ರಾಷ್ಟ್ರೀಕೃತ ಬ್ಯಾಂಕುಗಳು ಹಾಗೂ ಮೈಕ್ರೋ ಫೈನಾನ್ಸ್‌ಗಳು  ಸಾಲ ಮರುಪಾವತಿಗೆ ರೈತರಿಗೆ ನೀಡುತ್ತಿರುವ ನೋಟೀಸ್ ತಡೆ ಹಿಡಿಯುವಂತೆ ನೋಟೀಸ್‌ ಗಳಿಗೆ ಬೆಂಕಿ ಹಚ್ಚಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಹುಚ್ಚವ್ವನಹಳ್ಳಿ ಮಂಜು ನಾಥ್ ಬಣದಿಂದ ಪ್ರತಿಭಟನೆ ನಡೆಸಲಾಯಿತು.

ಜಗಳೂರು : ರುದ್ರಭೂಮಿಯಲ್ಲಿ ಅಂಬೇಡ್ಕರ್ ಪರಿನಿರ್ವಾಣ, ಮೌಢ್ಯತೆ ಪರಿವರ್ತನಾ ಆಚರಣೆ

ಜಗಳೂರು : ಪಟ್ಟಣದ ರುದ್ರಭೂಮಿಯಲ್ಲಿ ಮಾನವ ಬಂಧುತ್ವ ವೇದಿಕೆ ವತಿಯಿಂದ ಉಪಹಾರ ಸೇವನೆಯೊಂದಿಗೆ  ಡಾ.ಬಿ.ಆರ್.ಅಂಬೇಡ್ಕರ್ ಅವರ ಪರಿನಿರ್ವಾಣ ಕಾರ್ಯಕ್ರಮ ಹಾಗೂ ಮೌಢ್ಯ ಪರಿವರ್ತನಾ ದಿನವನ್ನಾಗಿ ಆಚರಿಸಲಾಯಿತು.

ಜಗಳೂರನ್ನು ಚಿತ್ರದುರ್ಗಕ್ಕೆ ಮರುಸೇರ್ಪಡೆಗೆ ಮನವಿ

ಜಗಳೂರು ತಾಲ್ಲೂಕನ್ನು  ಪುನಃ ಚಿತ್ರದುರ್ಗ ಜಿಲ್ಲೆಗೆ ಮರುಸೇರ್ಪಡೆ ಗೊಳಿಸಲು ಒತ್ತಾಯಿಸಿ, ಹೋರಾಟ ಸಮಿತಿಯ ನಿಯೋಗದಲ್ಲಿ  ತೆರಳಿ ಇಂದು ಜಿಲ್ಲಾಧಿಕಾರಿಗಳಿಗೆ  ಲಿಖಿತ ಮನವಿ ಸಲ್ಲಿಸಲಾಯಿತು.

ಜಗಳೂರು : 23ರಂದು ಉದ್ಯೋಗ ಮೇಳ

ಜಗಳೂರು, ಡಿ. 6 – ಮಾಜಿ ಸಂಸದ ಜಿ. ಮಲ್ಲಿಕಾರ್ಜುನಪ್ಪ ಮತ್ತು ಹಾಲಮ್ಮ ಚಾರಿಟಿ ಫೌಂಡೇಶನ್ ವತಿಯಿಂದ ಇದೇ ದಿನಾಂಕ  23 ರ ಶನಿವಾರ ಪಟ್ಟಣದ ನಳಂದಾ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ  ಬೃಹತ್ ಉದ್ಯೋಗ ಮೇಳ ಹಮ್ಮಿಕೊಳ್ಳಲಾಗಿದೆ: ಮಾಜಿ ಸಂಸದ ಜಿ. ಮಲ್ಲಿಕಾರ್ಜುನಪ್ಪ ಮತ್ತು ಹಾಲಮ್ಮ ಚಾರಿಟಿ ಫೌಂಡೇಶನ್ ವತಿಯಿಂದ ಇದೇ ದಿನಾಂಕ  23 ರ ಶನಿವಾರ ಪಟ್ಟಣದ ನಳಂದಾ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ  ಬೃಹತ್ ಉದ್ಯೋಗ ಮೇಳ ಹಮ್ಮಿಕೊಳ್ಳಲಾಗಿದೆ

ಸಂವಿಧಾನ ಜಾರಿಯಿಂದ ಪ್ರತಿಯೊಬ್ಬರಿಗೂ ಸಮಾನತೆ ಸಿಕ್ಕಿದೆ

ಜಗಳೂರು : ಸಂವಿಧಾನ ಜಾರಿಯಿಂದ ದೇಶದ ಪ್ರತಿಯೊಬ್ಬರಿಗೂ ಸಮಾನತೆಯ ಅಧಿಕಾರ ಸಿಕ್ಕಿದೆ. ಸಾಮಾನ್ಯ ಪ್ರಜೆಗೂ ಆಡಳಿತದ ಅಧಿಕಾರ ಲಭಿಸಲು ಹಾಗೂ  ಪುರುಷ, ಮಹಿಳೆಯರಿಗೂ ಸೇರಿದಂತೆ ಪ್ರತಿಯೊಬ್ಬ ಪ್ರಜೆಗೂ ಮತದಾನದ ಹಕ್ಕು ಚಲಾಯಿಸಲು ಅವಕಾಶ ಸಿಕ್ಕಿರುವುದು ನಮ್ಮೆಲ್ಲರ ಸೌಭಾಗ್ಯ

ಬಿಜೆಪಿ ಮೂಲ ಕಾರ್ಯಕರ್ತರ ಸಭೆ; ಸಮಿತಿ ರಚನೆ

ಜಗಳೂರು : ಪಟ್ಟಣದ ಪ್ರವಾಸಿ ಮಂದಿರದಲ್ಲಿ ಬಿಜೆಪಿ ಮೂಲ ಕಾರ್ಯಕರ್ತರ ಸಭೆ ನಡೆಯಿತು, ಸಭೆಯಲ್ಲಿ ಹುಲಿಕುಂಟ ಶೆಟ್ಟಿ, ಮಂಜುನಾಥ ಸಾಹುಕಾರ್, ಓ. ಬಾಬುರೆಡ್ಡಿ ಕೃಷ್ಣಮೂರ್ತಿ, ಪುರುಷೋತ್ತಮ ನಾಯಕ್, ಹೆಚ್.ಎಂ.ನಾಗರಾಜ, ಬಿ.ಎಸ್. ಪ್ರಕಾಶ್, ಕೆ.ಎಂ.ನಾಗೇಂದ್ರಯ್ಯ, ಇ.ಎನ್.ಪ್ರಕಾಶ್,  ಲೋಕಣ್ಣ, ಕಲ್ಲಪ್ಪ ಕೆ.ಟಿ., ಇನ್ನೂ ಮುಂತಾದವರು ಪಾಲ್ಗೊಂಡಿದ್ದರು. 

ಪೊಲೀಸರ ಕರ್ತವ್ಯ ಲೋಪದ ವಿರುದ್ಧ ಲೋಕ ಸ್ಪಂದನಾ ತಂತ್ರಾಂಶದಲ್ಲಿ ಸ್ಕ್ಯಾನ್ ಮಾಡಿ, ದೂರು ದಾಖಲಿಸಲು ಅವಕಾಶ

ಜಗಳೂರು : ಪೊಲೀಸರ ಕರ್ತವ್ಯ ಲೋಪದ ಬಗ್ಗೆ ಲೋಕಸ್ಪಂದನಾ ತಂತ್ರಾಂಶದಲ್ಲಿ ಸ್ಕ್ಯಾನ್ ಮಾಡಿ ದೂರು ದಾಖಲಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ತಿಳಿಸಿದರು.

ಪತ್ರಕರ್ತರು ಜನರ ಜ್ವಲಂತ ಸಮಸ್ಯೆಗಳಿಗೆ ಧ್ವನಿಯಾಗಲಿ

ಜಗಳೂರು : ಪತ್ರಕರ್ತರು ಎಲ್ಲಾ ವರ್ಗದ ಜನರ ಜ್ವಲಂತ ಸಮಸ್ಯೆಗಳಿಗೆ ದ್ವನಿಯಾಗಿ ಕೆಲಸ ಮಾಡಬೇಕು ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ಕರೆ ನೀಡಿದರು.

ಜಗಳೂರು ತಾಲ್ಲೂಕಿನ ಗ್ರಾಮ ಪಂಚಾಯಿತಿಗಳ ಒಕ್ಕೂಟದ ಸಭೆ

ಜಗಳೂರು ತಾಲ್ಲೂಕಿನ ಗ್ರಾ.ಪಂ.ಗಳ ಒಕ್ಕೂಟದ ಸಭೆಯನ್ನು ಮಂಗಳವಾರ ನಡೆಸಲಾಯಿತು. ಸಭೆಯಲ್ಲಿ ತಾಲ್ಲೂಕು ಒಕ್ಕೂಟದ ಅಧ್ಯಕ್ಷ ಬಿ.ವಿ.ವೀರೇಶ್ ಅಧ್ಯಕ್ಷತೆ ವಹಿಸಿದ್ದರು. 

ಜಗಳೂರು ತಾ.ನಲ್ಲಿ ಬೆಳೆ ಹಾನಿ ಪರಿಶೀಲಿಸಿದ ಕೃಷಿ ಸಚಿವ

ಜಗಳೂರು : ರಾಜ್ಯ ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಅವರು ಬುಧವಾರ ಜಿಲ್ಲೆಯ ಜಗಳೂರು ತಾಲ್ಲೂಕಿನ ವಿವಿಧೆಡೆ ರೈತರ ಜಮೀನುಗಳಿಗೆ ಭೇಟಿ ನೀಡಿ, ಮಳೆ ಇಲ್ಲದೆ ಅನಾವೃಷ್ಟಿಯಿಂದ ಹಾಳಾಗಿರುವ ಬೆಳೆ ಹಾನಿ ಪರಿಶೀಲಿಸಿದರು.

ಸಿಪಿಐ ದಬ್ಬಾಳಿಕೆ: ಕಾನೂನು ಕ್ರಮಕ್ಕೆ ಒತ್ತಾಯಿಸಿ ವಕೀಲರ ಪ್ರತಿಭಟನೆ

ಜಗಳೂರು : ಕಕ್ಷಿದಾರರೊಂದಿಗೆ ಠಾಣೆಗೆ ತೆರಳಿದ್ದ ವಕೀಲರಾದ ಬಿ. ಕೊಟ್ರೇಶ್  ಅವರಿಗೆ ಸ್ಥಳೀಯ ಠಾಣೆಯ ಸರ್ಕಲ್ ಇನ್‌ಸ್ಪೆಕ್ಟರ್ ಶ್ರೀನಿವಾಸ್ ರಾವ್ ಅಗೌರವ ತೋರಿಸಿ, ದಬ್ಬಾಳಿಕೆ ನಡೆಸಿರುವುದನ್ನು ಖಂಡಿಸಿ ಮತ್ತು ಕಾನೂನು ಕ್ರಮಕ್ಕೆ ಆಗ್ರಹಿಸಿ ತಾಲ್ಲೂಕು ನ್ಯಾಯವಾದಿಗಳ ಸಂಘದಿಂದ ಪ್ರತಿಭಟನೆ ನಡೆಸಿ, ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಲಾಯಿತು.

ಕಾಡುಗೊಲ್ಲರನ್ನು ಎಸ್ಟಿಗೆ ಸೇರಿಸಲು ಒತ್ತಾಯಿಸಿ ಪ್ರತಿಭಟನೆ

ಜಗಳೂರು : ಕಾಡುಗೊಲ್ಲರನ್ನು ಎಸ್ಟಿ ಪಟ್ಟಿಗೆ ಸೇರಿಸಲು ಒತ್ತಾಯಿಸಿ ಕರ್ನಾಟಕ ರಾಜ್ಯ ಕಾಡುಗೊಲ್ಲರ ಸಂಘದ ತಾಲ್ಲೂಕು ಘಟಕದಿಂದ ತಾಲ್ಲೂಕು ಕಚೇರಿ ಮುಂದೆ ಸಾಂಕೇತಿಕ ಧರಣಿ ಹಾಗೂ ಬೃಹತ್ ಪ್ರತಿಭಟನೆ ನಡೆಸಿ, ತಹಶೀಲ್ದಾರರಿಗೆ ಮನವಿ ಸಲ್ಲಿಸಲಾಯಿತು.

error: Content is protected !!