Category: ಜಗಳೂರು

ಈರುಳ್ಳಿ ಬೆಲೆ ಹೆಚ್ಚುವ ಸಾಧ್ಯತೆ

ಜಗಳೂರು : ಪ್ರಾಕೃತಿಕ ವಿಕೋಪದಿಂದ ಈ ವರ್ಷ ಈರುಳ್ಳಿ ಬೆಳೆಯ ಬೆಲೆ ಹೆಚ್ಚುವ ಸಾಧ್ಯತೆಯಿದೆ ಎಂದು ಐಸಿಎಆರ್-ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ತೋಟಗಾರಿಕೆ ವಿಜ್ಞಾನಿ ಎಂ.ಜಿ. ಬಸವನಗೌಡ ಅಭಿಪ್ರಾಯಪಟ್ಟರು.

ಜಗಳೂರು : ತೆರಿಗೆ ಬಾಕಿ ಉಳಿಸಿ ಕೊಂಡವರ ವಿರುದ್ದ ಕ್ರಮಕ್ಕೆ ಸೂಚನೆ

ಜಗಳೂರು : ಪಟ್ಟಣದಲ್ಲಿ ತಾಲ್ಲೂಕು ಪಂಚಾಯಿತಿಯ 29 ಮಳಿಗೆಗಳಿದ್ದು ತೆರಿಗೆ ಕಟ್ಟದೇ ಮೂರು ಬಾರಿ ನೋಟಿಸ್ ನೀಡಿದರೂ ಬಾಕಿ ಉಳಿಸಿಕೊಂಡಿರುವ ಮಾಲೀಕರಿಗೆ ತಕ್ಷಣವೇ ಪೊಲೀಸ್ ಮತ್ತು ತಹಶೀಲ್ದಾರ್ ಅವರ ನೆರವು ಪಡೆದು ಮಳಿಗೆ ಮಾಲೀಕರ ಅಂಗಡಿಗಳನ್ನು ಬಂದ್ ಮಾಡಿಸಿ. ಸ್ಥಳದಲ್ಲೇ ತೆರಿಗೆ ಕಟ್ಟಿದವರನ್ನು ಬಿಟ್ಟು ಉಳಿದವರನ್ನು ಖಾಲಿ ಮಾಡಿಸಿ.

ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ, ಜಲೋತ್ಸವ ಕಾರ್ಯಕ್ರಮದ ಯಶಸ್ಸಿಗೆ ಕೈಜೋಡಿಸಲು ಕರೆ

ಜಗಳೂರು : ಬರುವ ಜನವರಿ 11, 12, 13ರಂದು ಪಟ್ಟಣದಲ್ಲಿ ಮೂರು ದಿನಗಳ ಕಾಲ ನಡೆಯಲಿರುವ ಜಿಲ್ಲಾ ಸಾಹಿತ್ಯ ಸಮ್ಮೇಳನ‌ ಹಾಗೂ ಜಲೋತ್ಸವ ಕಾರ್ಯಕ್ರಮದ ಯಶಸ್ಸಿಗೆ ಎಲ್ಲರೂ ಸ್ವಯಂ ಪ್ರೇರಿತರಾಗಿ ಕೈಜೋಡಿಸಿ, ಸಹಕರಿಸಬೇಕು

ಜಗಳೂರಿನಲ್ಲಿ ಕಮ್ಯುನಿಸ್ಟ್ ಪ್ರತಿಭಟನೆ

ಜಗಳೂರು :  ಪಟ್ಟಣದ ತಾಲ್ಲೂಕು ಕಛೇರಿ ಮುಂಭಾಗ  ಇಂದು ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ಹಾಗೂ ಕೋಮುವಾದ, ಹಿಂಸಾಚಾರ ಖಂಡಿಸಿ ಭಾರತ ಕಮ್ಯುನಿಸ್ಟ್ ಪಕ್ಷದ ಕಾರ್ಯಕರ್ತರು ತಹಶೀಲ್ದಾರ್  ಅವರ ಮುಖಾಂತರ ರಾಷ್ಟ್ರಪತಿಗೆ ಮನವಿ ಸಲ್ಲಿಸಿದರು.

ಅನುದಾನ ತಾರತಮ್ಯಕ್ಕೆ ಆಕ್ಷೇಪ : ಸಭೆ ಮುಂದಕ್ಕೆ

ಜಗಳೂರು : ವಾರ್ಡ್‌ ಅಭಿವೃದ್ಧಿಗೆ ಅನುದಾನ ನೀಡುವಲ್ಲಿ  ತಾರತಮ್ಯ  ಮಾಡಲಾಗಿದೆ ಎಂದು ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದ್ದರಿಂದ‌ ಪಟ್ಟಣ ಪಂಚಾಯಿತಿಯಲ್ಲಿ ಇಂದು ನಡೆಯಬೇಕಿದ್ದ  ಸಾಮಾನ್ಯ ಸಭೆ ಸದಸ್ಯರ ವಾಗ್ವಾದ, ಗೊಂದಲದಿಂದ ಮುಂದೂಡಲಾಯಿತು.

ಗುಣಮಟ್ಟದ ಕಲಿಕೆಗೆ ಶಿಕ್ಷಕರು ಪ್ರಾಮಾಣಿಕ ಪ್ರಯತ್ನ ಮಾಡಬೇಕು

ಜಗಳೂರು : ಗುಣಮಟ್ಟದ ಕಲಿಕೆಗೆ ಸರ್ಕಾರ ಅನುಷ್ಟಾನಗೊಳಿಸಿರುವ ಯೋಜನೆ ಗಳನ್ನು ಸಾಕಾರ ಗೊಳಿಸಲು ಶಿಕ್ಷಕರು ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದು ಶಾಸಕ ಬಿ. ದೇವೇಂದ್ರಪ್ಪ ಸಲಹೆ ನೀಡಿದರು.

ಜಗಳೂರು ಪ.ಪಂ. ಉಪಚುನಾವಣೆ ಕಾಂಗ್ರೆಸ್ ಅಭ್ಯರ್ಥಿ ಗೆಲುವು

ಜಗಳೂರು : ಪಟ್ಟಣ ಪಂಚಾಯಿತಿ 9ನೇ ವಾರ್ಡ್ ಗೆ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎಂ. ಆದರ್ಶ 278 ಮತಗಳನ್ನು ಪಡೆದು ಭರ್ಜರಿ ಗೆಲುವು ಸಾಧಿಸಿದ್ದಾರೆ.

ಶೀಘ್ರ ಕೆಎಸ್‌ಆರ್‌ಟಿಸಿ ಡಿಪೋ ಆರಂಭಿಸಲು ಆಗ್ರಹ

ಜಗಳೂರು : ಕೆಎಸ್‌ಆರ್‌ಟಿಸಿ ಡಿಪೋ ಪ್ರಾರಂಭಿಸಲು ಒತ್ತಾಯಿಸಿ ಎಸ್‌ ಎಫ್‌ಐ ನೇತೃತ್ವದಲ್ಲಿ ಪ್ರಗತಿಪರ ಸಂಘಟನೆಗಳು  ಪ್ರತಿಭಟನೆ ನಡೆಸಿ ಗ್ರೇಡ್ -2 ತಹಶೀಲ್ದಾರ್ ಮಂಜಾನಂದ, ಕೆಎಸ್‌ಆರ್‌ಟಿಸಿ ಡಿಎಂ ಕುಮಾರ್ ಅವರಿಗೆ ಮನವಿ ಸಲ್ಲಿಸಲಾಯಿತು.

ಜಗಳೂರು ಉತ್ಸವ ; ಸಾಂಸ್ಕೃತಿಕ ಪರಂಪರೆಯ ಸಂಶೋಧನಾ ಕಿರು ಚಿತ್ರ ಪ್ರದರ್ಶನ

ಜಗಳೂರು : ಡಿಸೆಂಬರ್ 28 ರಿಂದ ಮೂರು ದಿನಗಳ ಕಾಲ ನಡೆಯಲಿರುವ ಜಿಲ್ಲಾ ಸಾಹಿತ್ಯ ಸಮ್ಮೇಳನ ಹಾಗೂ ಜಗಳೂರು ಉತ್ಸವ ಕಾರ್ಯಕ್ರಮದಲ್ಲಿ ಸ್ಥಳೀಯ ಐತಿಹಾಸಿಕ, ಸಾಂಸ್ಕೃತಿಕ ಪರಂಪರೆಯ ಮೆರಾಗಿನ ಕಿರುಚಿತ್ರ ಪ್ರದರ್ಶಿಸಲಾಗುವುದು

error: Content is protected !!