ಸದಸ್ಯತ್ವ ಸಂಖ್ಯೆ ಹೆಚ್ಚಿಸಿ, ಪಕ್ಷವನ್ನು ಬಲ ಪಡಿಸಿ
ಹೊನ್ನಾಳಿ : ಬಿಜೆಪಿ ಪಕ್ಷವನ್ನು ಸದೃಢಗೊಳಿಸಲು ಮತ್ತು ಪ್ರಧಾನಿ ಮೋದಿ ಅವರ ಕೈ ಬಲಪಡಿಸಲು, ಕಾರ್ಯಕರ್ತರು ಪಕ್ಷದ ಸದಸ್ಯತ್ವ ಸಂಖ್ಯೆ ಹೆಚ್ಚಿಸಬೇಕಿದೆ ಎಂದು ಬಿಜೆಪಿಯ ಪರಾಜಿತ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ತಿಳಿಸಿದರು.
ಹೊನ್ನಾಳಿ : ಬಿಜೆಪಿ ಪಕ್ಷವನ್ನು ಸದೃಢಗೊಳಿಸಲು ಮತ್ತು ಪ್ರಧಾನಿ ಮೋದಿ ಅವರ ಕೈ ಬಲಪಡಿಸಲು, ಕಾರ್ಯಕರ್ತರು ಪಕ್ಷದ ಸದಸ್ಯತ್ವ ಸಂಖ್ಯೆ ಹೆಚ್ಚಿಸಬೇಕಿದೆ ಎಂದು ಬಿಜೆಪಿಯ ಪರಾಜಿತ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ತಿಳಿಸಿದರು.
ಹೊನ್ನಾಳಿ : ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಹಿಂದುಳಿದ ವರ್ಗಗಳ ವಿಭಾಗದ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಹೊನ್ನಾಳಿಯ ಹೆಚ್ ಬಿ. ಪ್ರಶಾಂತ್ ಬಣ್ಣಜ್ಜಿ ಅವರನ್ನು ಆಯ್ಕೆ ಮಾಡಿರುವುದಾಗಿ ಸಮಿತಿಯ ರಾಜ್ಯಾಧ್ಯಕ್ಷ ಎಸ್. ಮಧು ಬಂಗಾರಪ್ಪ ತಿಳಿಸಿದ್ದಾರೆ.
ಹೊನ್ನಾಳಿ : ಚನ್ನಪ್ಪಸ್ವಾಮಿ ವಿದ್ಯಾಪೀಠದ ಅಡಿಯಲ್ಲಿ ನಡೆಯುತ್ತಿರುವ ಸಂಸ್ಥೆಯ ವಿದ್ಯಾರ್ಥಿಗಳಿಂದ ಭರತ ನಾಟ್ಯ, ನೃತ್ಯ ಸೇರಿದಂತೆ ಇತರೆಡೆಯಿಂದ ಬಂದಿದ್ದ ಕಲಾವಿದರ ತಂಡದವರಿಂದ ಡೊಳ್ಳು ಕುಣಿತ, ಕೀಲು ಕುದುರೆ, ನಂದಿ ಕುಣಿತದ ನಡುವೆ ಹಿರೇಕಲ್ಮಠದ ಶ್ರೀ ಚನ್ನಪ್ಪಸ್ವಾಮಿ ರಥೋತ್ಸವವು ನಿನ್ನೆ ವಿಜೃಂಭಣೆಯಿಂದ ಜರುಗಿತು.
ಹೊನ್ನಾಳಿ : ಅರ್ಹ ಕಟ್ಟಡ ನಿರ್ಮಾಣ ಕಾರ್ಮಿಕರು ಮಾತ್ರವೇ ಕಾರ್ಮಿಕ ಇಲಾಖೆಯಿಂದ ಸಿಗುತ್ತಿರುವ ಸೌಲಭ್ಯಗಳನ್ನು ಪಡೆದುಕೊಳ್ಳಬೇಕೆಂದು ಶಾಸಕ ಡಿ.ಜಿ.ಶಾಂತನಗೌಡ ಅವರು ಕರೆ ನೀಡಿದರು.
ಹೊನ್ನಾಳಿ, ನ್ಯಾಮತಿ ಅವಳಿ ತಾಲ್ಲೂಕು ಅಹಿಂದ ಒಕ್ಕೂಟ ಹಾಗೂ ಸಿದ್ದರಾಮಯ್ಯ ಅಭಿಮಾನಿ ಬಳಗದಿಂದ ನಾಳೆ ದಿನಾಂಕ 23ರ ಶುಕ್ರವಾರ ಬೆಳಿಗ್ಗೆ 11ಕ್ಕೆ `ರಾಜ್ಯಪಾಲರೇ ಕರ್ನಾಟಕ ಬಿಟ್ಟು ತೊಲಗಿ ಎಂಬ ಎಚ್ಚರಿಕೆ ಸಂದೇಶದೊಂದಿಗೆ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ
ಹೊನ್ನಾಳಿ : ನಿನ್ನೆ ಸುರಿದ ಸುಂಟರಗಾಳಿ ಸಮೇತ ಭಾರೀ ಮಳೆಗೆ ಹೊನ್ನಾಳಿ ತಾಲ್ಲೂಕಿನ ಕೆಲವು ಗ್ರಾಮಗಳಲ್ಲಿ ಬೆಳೆ ಹಾನಿಯುಂಟಾಗಿದೆ ಎಂದು ತಹಶೀಲ್ದಾರ್ ಪಟ್ಟರಾಜೇಗೌಡ ತಿಳಿಸಿದರು.
ಹೊನ್ನಾಳಿ, ಆ.20- ತಾಲ್ಲೂಕಿನ ಅರಕೆರೆ, ಕೋಟೆ ಮಲ್ಲೂರು, ಬೇಲಿಮಲ್ಲೂರು, ಹಿರೇಗೋಣಿಗೆರೆ, ಹೊನ್ನೂರು, ವಡ್ಡರಹಟ್ಟಿ ಸುತ್ತ ಮುತ್ತಲಿನ ಗ್ರಾಮದ ರೈತರಿಗೆ, ಸಾಕು ಪ್ರಾಣಿಗಳಿಗೆ ಹಾಗೂ ಸಾರ್ವ ಜನಿಕರಲ್ಲಿ ಭಯದ ವಾತಾವರಣ ಮೂಡಿಸಿದ್ದ ಚಿರತೆಯನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದು ಕಂಡು ಬಂದಿದೆ.
ಹೊನ್ನಾಳಿ : ಮುಡಾ ಹಗರಣ ಸಿದ್ದರಾಮಯ್ಯ ಅವರ ಕಾಲದಲ್ಲಿ ನಡೆದಿಲ್ಲ. ಬಿಜೆಪಿ ಅಧಿಕಾರವಧಿಯಲ್ಲಿ ನಡೆದ ಪ್ರಕರಣ. ಎಲ್ಲರಂತೆಯೇ ಸಿಎಂ ಸಿದ್ದರಾಮಯ್ಯ ಅವರ ಪತ್ನಿಗೆ ಮುಡಾ ನಿವೇಶನ ಹಂಚಿಕೆಯಾಗಿದ್ದು, ಇದರಲ್ಲಿ ಸಿದ್ದರಾಮಯ್ಯ ಅವರ ಪಾತ್ರವೇನೂ ಇಲ್ಲ.
ಹೊನ್ನಾಳಿ : ಬಿಸಿಯೂಟ ಯೋಜನೆಯ ಯಶಸ್ವಿಗೆ ಅಧಿಕಾರಿಗಳಿಗಿಂತ ಶಿಕ್ಷಕರ ಪಾತ್ರ ಹಾಗೂ ಅವರ ಕಾಳಜಿ ಬಹುದೊಡ್ಡದು ಎಂದು ವರ್ಗಾವಣೆಗೊಂಡ ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ರುದ್ರಪ್ಪ ಹೇಳಿದರು.
ಹೊನ್ನಾಳಿ : ಸೊಸೈಟಿ ನಿರ್ದೇಶಕರಿಗೆ ಕನಿಷ್ಠ ಠೇವಣಿಯ ನಿರ್ಬಂಧ, ಸೂಚಿಸುವ ಸಾಲಗಾರರು ಸಾಲ ಮರುಪಾವತಿಸದಿದ್ದರೆ ಠೇವಣಿ ಹಣ ಪಾವತಿಸಿಕೊಳ್ಳುವ ಕಠಿಣ ನಿರ್ಧಾರದಿಂದ ಸೊಸೈಟಿ ಲಾಭದಾಯಕವಾಗುವ ಜೊತೆಗೆ ಬೆಳ್ಳಿ ಹಬ್ಬದ ಆಚರಣೆಗೆ ಮುಂದಾಗಿರುವುದು ಸಂತಸದ ವಿಚಾರ
ಹೊನ್ನಾಳಿ : ಇಲ್ಲಿನ ಶಿವ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ 25ನೇ ವರ್ಷದ ಬೆಳ್ಳಿ ಹಬ್ಬದ ಆಚರಣಾ ಮಹೋತ್ಸವ ಕಾರ್ಯಕ್ರಮವನ್ನು ನಾಳೆ ದಿನಾಂಕ 2ರ ಶುಕ್ರವಾರ ಬೆಳಿಗ್ಗೆ 11ಕ್ಕೆ ಗೊಲ್ಲರ ಹಳ್ಳಿಯ ಶ್ರೀ ತರಳಬಾಳು ಸಮುದಾಯ ಭವನದಲ್ಲಿ ಆಯೋಜಿಸಲಾಗಿದೆ
ಹೊನ್ನಾಳಿ : ಪಟ್ಟಣದ ಬಾಲರಾಜ ಘಾಟ್ ಹತ್ತಿರದ ತುಂಗಭದ್ರಾ ನದಿಯಲ್ಲಿ ಮಂಗಳವಾರ ಮಧ್ಯಾಹ್ನ ನೀರಿನಲ್ಲಿ ತೇಲಿ ಹೋದ ವ್ಯಕ್ತಿಯೊಬ್ಬನ ಸುಳಿವು ಇದುವರೆಗೂ ದೊರೆಯದೇ ಇರುವ ಬಗ್ಗೆ ವರದಿಯಾಗಿದೆ.