Category: ಹರಿಹರ

ಪೌರ ಕಾರ್ಮಿಕ ನಿವಾಸಿಗಳ ಬಡಾವಣೆಗೆ ಭೇಟಿ ಮಾಡಿ ಸಮಸ್ಯೆ ಆಲಿಸಿದ ಶಾಸಕ ಹರೀಶ್

ಹರಿಹರ : ನಗರದಲ್ಲಿ ಕಳೆದ ಗುರುವಾರ ರಾತ್ರಿ ಧಾರಾಕಾರವಾಗಿ ಸುರಿದ ಮಳೆಯಿಂದಾಗಿ ನಗರದ ಭಾರತ್ ಆಯಿಲ್ ಮಿಲ್ ಕಾಂಪೌಂಡ್ ಹತ್ತಿರದ ಪೌರ ಕಾರ್ಮಿಕ ನಿವಾಸಿಗಳ ಬಡಾವಣೆಗೆ ಶಾಸಕ ಬಿ.ಪಿ. ಹರೀಶ್ ಭೇಟಿಕೊಟ್ಟು ಸ್ಥಳ ಪರಿಶೀಲನೆ ನಡೆಸಿ ಸ್ಥಳಿಯ ನಿವಾಸಿಗಳಿಂದ ಸಮಸ್ಯೆಗಳನ್ನು ಆಲಿಸಿದರು.

ಮಲೇಬೆನ್ನೂರಿನಲ್ಲಿ ಸಂಭ್ರಮದ ದೊಡ್ಡಎಡೆ ಜಾತ್ರೆ

ಮಲೇಬೆನ್ನೂರು : ಇಲ್ಲಿನ ಶ್ರೀ ಬೀರಲಿಂಗೇಶ್ವರ ದೇವಸ್ಥಾನದಲ್ಲಿ ವಿಜಯದಶಮಿ ಹಾಗೂ ಮರಿಬನ್ನಿ ಅಂಗವಾಗಿ ಶುಕ್ರವಾರ  ದೊಡ್ಡಎಡೆ ಜಾತ್ರೆ ಸಂಭ್ರಮದಿಂದ ಜರುಗಿತು. 

ರೈತರಿಗೆ ತೊಂದರೆಯಾಗದಂತೆ ಅಧಿಕಾರಿಗಳು ಎಚ್ಚರ ವಹಿಸಿ

ಹರಿಹರ : ರೈತರು ಮತ್ತು ವಿದ್ಯಾರ್ಥಿಗಳಿಗೆ  ತೊಂದರೆಯಾಗ ದಂತೆ ತಾಲ್ಲೂಕು ಮಟ್ಟದ ಅಧಿಕಾರಿಗಳು ಎಚ್ಚರ ವಹಿಸಿ ಕರ್ತವ್ಯ ನಿರ್ವಹಿಸುವಂತೆ ತಾ.ಪಂ. ಇಓ ಎಸ್.ಪಿ. ಸುಮಲತ ತಿಳಿಸಿದರು.

ಆಪೆ ಆಟೋ – ಮಜ್ಡಾ ವಾಹನ ಡಿಕ್ಕಿ; ಹಲವರಿಗೆ ಗಾಯ

ಹರಿಹರ : ನಗರದ   ತರಳಬಾಳು ಶಾಲೆ ಮುಂಭಾಗದಲ್ಲಿ ಬೆಳಿಗ್ಗೆ 10 ಗಂಟೆಯ ಸಮಯದಲ್ಲಿ ಆಪೆ ಆಟೋ ಮತ್ತು ಇಟ್ಟಿಗೆ ತುಂಬಿರುವ ಮಜ್ಡಾ ವಾಹನಕ್ಕೆ ಡಿಕ್ಕಿ ಸಂಭವಿಸಿದ ಪರಿಣಾಮ ಹಲವರಿಗೆ ಗಾಯಗಳಾಗಿದ್ದು, ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿರುವ ಘಟನೆ ನಡೆದಿದೆ.

ಕ್ರೀಡಾಕೂಟದಲ್ಲಿ ಜಿಲ್ಲಾ, ರಾಜ್ಯ ಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಸನ್ಮಾನ

ಗಾಂಧೀಜಿ ಮತ್ತು ಶಾಸ್ತ್ರೀಜಿ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಕ್ರೀಡಾಕೂಟದಲ್ಲಿ ಜಿಲ್ಲಾ ಮತ್ತು ರಾಜ್ಯ ಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳಾದ ಲೋಹಿತ್, ಭಾಗ್ಯ ಮತ್ತು ಮೆಹಬೂಬಿ ಅವರನ್ನು  ಕಾಲೇಜು ಮತ್ತು ಪ್ರೌಢಶಾಲೆ ಎಸ್.ಡಿ.ಎಂ.ಸಿ. ಮತ್ತು ಉಪನ್ಯಾಸಕರು ಹಾಗೂ ಶಿಕ್ಷಕರ ವತಿಯಿಂದ ಸನ್ಮಾನಿಸಲಾಯಿತು.

ದಸರಾ ಕ್ರೀಡಾಕೂಟ : ವರ್ಷಿಣಿ ತೃತೀಯ

ಮಲೇಬೆನ್ನೂರು : ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಬಿ.ಎಂ. ವರ್ಷಿಣಿ ಅವರು ಆರ್ಚರಿ ದಸರಾ ಕ್ರೀಡಾಕೂಟದಲ್ಲಿ ಭಾಗವಹಿಸಿ ತೃತೀಯ ಸ್ಥಾನ ಪಡೆದಿದ್ದಾರೆ.

ಮುಸ್ಲಿಂ ಧರ್ಮಗುರುಗಳ ಪ್ರತಿಭಟನೆ

ಹರಿಹರ : ಮುಸ್ಲಿಂ ಸಮುದಾಯದ ಭಾವನೆಗಳಿಗೆ ಧಕ್ಕೆ ಆಗುವಂತಹ ಭಾಷಣ ಮಾಡಿರುವ ಉತ್ತರ ಪ್ರದೇಶದ ಗೌಜಿಯಾಬಾದ್‌ ನಿವಾಸಿ ಯತಿ ನರಸಿಂಗಾನಂದ ಮಹಾರಾಜರ  ವಿರುದ್ದ ಕೂಡಲೇ   ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ನಗರದ ಅಂಜುಮನ್ ಇಸ್ಲಾಮಿಯಾ ಸಮಿತಿ ವತಿಯಿಂದ ಪ್ರತಿಭಟನೆ ಮಾಡಿ ತಹಶೀಲ್ದಾರ್‌ಗೆ ಮನವಿ ಸಲ್ಲಿಸಲಾಯಿತು. 

ಹರಿಹರ : 25ರಂದು ಗ್ರಾಮ ದೇವತೆ ಹಬ್ಬದ ಲೆಕ್ಕಪತ್ರ ಮಂಡನೆ

ಹರಿಹರ : ನಗರದ ಶಿಬಾರ ವೃತ್ತದಲ್ಲಿರುವ ಮೂಲ ಗ್ರಾಮದೇವತೆ ಊರಮ್ಮ ದೇವಿ ದೇವಸ್ಥಾನದಲ್ಲಿ ಇದೇ ದಿನಾಂಕ 25 ರ ಶುಕ್ರವಾರ 10.30ಕ್ಕೆ  ಕಳೆದ ಬಾರಿ ನಡೆದ ಗ್ರಾಮ ದೇವತೆ ಹಬ್ಬದ ಲೆಕ್ಕಪತ್ರ ಮಂಡನೆ ಮತ್ತು  ಇತರೆ ವಿಚಾರಕ್ಕೆ ಸಂಬಂಧಿಸಿದಂತೆ ಸಭೆಯನ್ನು ಆಯೋಜಿಸಲಾಗಿದೆ

ಮಲೇಬೆನ್ನೂರು ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಮಂಜುನಾಥ್

ಮಲೇಬೆನ್ನೂರು : ಇಲ್ಲಿನ ಪುರಸಭೆ ಸ್ಥಾಯಿ ಸಮಿತಿಯ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಬಿ. ಮಂಜುನಾಥ್ ಅವರು ಸೋಮವಾರ ಸ್ಥಾಯಿ ಸಮಿತಿ ಅಧ್ಯಕ್ಷರ ನೂತನ ಕೊಠಡಿಯಲ್ಲಿ ಅಧಿಕಾರ ವಹಿಸಿಕೊಂಡರು. 

ಗುರಿ, ಕನಸು ಇಲ್ಲದಿದ್ದರೆ ಸಾಧನೆ ಸಾಧ್ಯವಿಲ್ಲ

ಮಲೇಬೆನ್ನೂರು : ವಿದ್ಯಾರ್ಥಿ ಜೀವ ನದಲ್ಲಿ ನೀವು ಕನಸು ಕಾಣದಿದ್ದರೆ, ಸಾಧಿಸಲು ಸಾಧ್ಯವಿಲ್ಲ. ಹಾಗಾಗಿ ನಿಮ್ಮ ಗುರಿ ಮತ್ತು ಕನಸು ದೊಡ್ಡದಾಗಿರಲಿ ಎಂದು ದಾವಣಗೆರೆಯ ವಾಣಿಜ್ಯ ತೆರಿಗೆ ಇಲಾಖೆಯ ಉಪ ಆಯುಕ್ತ ಹೆಚ್‌.ಎಸ್‌. ಮಂಜುನಾಥ್‌ ಹೇಳಿದರು.

error: Content is protected !!