Category: ಹರಿಹರ

ಕ್ಷತ್ರಿಯ ಅಭಿವೃದ್ಧಿ ನಿಗಮ ಸ್ಥಾಪನೆಗೆ ಆಗ್ರಹ

ಹರಿಹರ : ಸೋಮವಂಶ ಸಹಸ್ರಾರ್ಜುನ ಕ್ಷತ್ರಿಯ ಸಮಾಜದ ಅಭಿವೃದ್ಧಿ ನಿಗಮ ಸ್ಥಾಪಿಸುವ ಹಾಗೂ ಎಸ್ಟಿ ಮೀಸಲಾತಿ ಸೌಲಭ್ಯ ನೀಡಲು ಬೆಳಗಾವಿ ಯಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ತೀರ್ಮಾನ ತೆಗೆದುಕೊಳ್ಳಲು ವಿಧಾನಸಭೆಯ ಎಲ್ಲಾ ಸದಸ್ಯರು ಬೆಂಬಲ ನೀಡುವಂತೆ ಎಸ್.ಎಸ್.ಕೆ ಸಮಾಜ ಅಭಿವೃದ್ಧಿ ಹೋರಾಟ ಸಮಿತಿ ಸರ್ಕಾರವನ್ನು ಆಗ್ರಹಿಸಿದೆ.

ಮತದಾರರ ಪಟ್ಟಿಗೆ ಸೇರುವಂತೆ ಯುವ ಮತದಾರರಿಗೆ ಜಾಗೃತಿ

ಮಲೇಬೆನ್ನೂರು : ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು ಮತ್ತು ಶ್ರೀ ಬೀರಲಿಂಗೇಶ್ವರ ಪದವ ಪೂರ್ವ ಕಾಲೇಜು ಹಾಗೂ ಶ್ರೀ ಬೀರಲಿಂಗೇಶ್ವರ ಪ್ರಥಮ ದರ್ಜೆ ಕಾಲೇಜಿನಲ್ಲಿ ಮುಖ್ಯ ಚುನಾವಣಾಧಿಕಾರಿಗಳ ನಿರ್ದೇಶನದ ಮೇರೆಗೆ ಮತದಾರರ ಪಟ್ಟಿಗೆ ಯುವ ಮತದಾರರ ಸೇರ್ಪಡೆ ಕುರಿತು ಉಪತಹಶೀಲ್ದಾರ್ ಆರ್. ರವಿ ಅವರು ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಿದರು.

ಕೃಷ್ಣ ನಿಧನಕ್ಕೆ ಶ್ರೀ ಬಸವಲಿಂಗ ಮಹಾಸ್ವಾಮಿಗಳ ಸಂತಾಪ

ಹರಿಹರ : ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರ ಅಗಲಿಕೆಯಿಂದ ರಾಜ್ಯವು ಒಬ್ಬ ದಕ್ಷತೆ ಮತ್ತು ಮುತ್ಸದ್ಧಿ ರಾಜಕೀಯ ವ್ಯಕ್ತಿ ಯನ್ನು ಕಳೆದುಕೊಂಡಂತಾಗಿದೆ ಎಂದು ನಗರದ ನೂರ ಎಂಟು ಲಿಂಗೇಶ್ವರ ದೇವಸ್ಥಾನದ ಶರಣ ಶ್ರೀ ಬಸವಲಿಂಗ ಮಹಾಸ್ವಾಮೀಜಿ ಸೊಲ್ಲಾಪುರ ಹೇಳಿದರು.

ಬೆಳ್ಳೂಡಿ ಮಠದಲ್ಲಿ ಸಂಭ್ರಮದ ಕಾರ್ತಿಕೋತ್ಸವ

ಮಲೇಬೆನ್ನೂರು : ಕಾಗಿನೆಲೆ ಕನಕ ಗುರು ಪೀಠದ ಬೆಳ್ಳೂಡಿ ಶಾಖಾ ಮಠದಲ್ಲಿ ಆದಿ ಜಗದ್ಗುರು ಶ್ರೀ ರೇವಣಸಿದ್ದೇಶ್ವರ ಸ್ವಾಮಿಯ ಕಾರ್ತಿಕೋತ್ಸವವು ಸೋಮವಾರ ರಾತ್ರಿ ಅಪಾರ ಭಕ್ತರ ಸಮ್ಮುಖದಲ್ಲಿ ಸಂಭ್ರಮದಿಂದ ಜರುಗಿತು.

ಹರಿಹರದಲ್ಲಿ ಪೌರ ಕಾರ್ಮಿಕರಿಗೆ ಸುರಕ್ಷಾ ವಸ್ತುಗಳ ವಿತರಣೆ

ಹರಿಹರ : ನಗರದ ಪೌರ ಕಾರ್ಮಿಕರಿಗೆ ಸುರಕ್ಷಾ ವಸ್ತುಗಳನ್ನು ನಗರಸಭೆ ಅಧ್ಯಕ್ಷೆ ಕವಿತಾ ಮಾರುತಿ ಬೇಡರ್ ಸದಸ್ಯ ಪಿ.ಎನ್. ವಿರುಪಾಕ್ಷ, ನಾಗರತ್ನ, ಅಬ್ದುಲ್ ಅಲಿಂ ವಿತರಣೆ ಮಾಡಿದರು.

ಉಕ್ಕಡಗಾತ್ರಿಯಲ್ಲಿ ವಿಜೃಂಭಣೆಯ ಬೆಳ್ಳಿ ರಥೋತ್ಸವ

ಮಲೇಬೆನ್ನೂರು : ಸುಕ್ಷೇತ್ರ ಉಕ್ಕಡಗಾತ್ರಿಯಲ್ಲಿ ಪವಾಡ ಪುರುಷ ಶ್ರೀ ಗುರು ಕರಿಬಸವೇಶ್ವರ ಅಜ್ಜಯ್ಯನ ಕಾರ್ತಿಕೋತ್ಸವವು ಸೋಮವಾರ ರಾತ್ರಿ ಸಂಭ್ರಮದಿಂದ ನಡೆಯಿತು.

ಉಕ್ಕಡಗಾತ್ರಿಯಲ್ಲಿ ತುಂಗಭದ್ರಾ ನದಿಗೆ ಸಂಭ್ರಮದ ಮಹಾಮಂಗಳಾರತಿ

ಮಲೇಬೆನ್ನೂರು : ಸುಕ್ಷೇತ್ರ ಉಕ್ಕಡಗಾತ್ರಿಯಲ್ಲಿ ಭಾನುವಾರ ಸಂಜೆ ತುಂಗಭದ್ರಾ ನದಿಗೆ ಮಹಾಮಂಗಳಾರತಿ ಪೂಜೆಯನ್ನು 2ನೇ ಬಾರಿಗೆ ಸಂಭ್ರಮದಿಂದ ಮಾಡಲಾಯಿತು.

`ಅಕ್ಕ ಕೆಫೆ’ ಸ್ಥಾಪನೆಗೆ ಹರಿಹರದಲ್ಲಿ ಸ್ಥಳ ಪರಿಶೀಲನೆ

ಹರಿಹರ : ಜಿ.ಪಂ. ಪ್ರಾಜೆಕ್ಟ್ ಡೈರೆಕ್ಟರ್ ರೇಷ್ಮಾ ಕೌಸರ್ ಸ್ಥಳ ಪರಿಶೀಲನೆ ನಡೆಸಿ, ಅಂತಿಮವಾಗಿ ನಗರದ ಡಿ.ಆರ್.ಎಂ. ಪದವಿ ಕಾಲೇಜು ಕ್ಯಾಂಪಸ್ ಆವರಣದಲ್ಲಿ `ಅಕ್ಕ ಕೆಫೆ’ ಸ್ಥಾಪನೆ ಮಾಡುವುದಕ್ಕೆ ಜಿಲ್ಲೆಯ ಹಿರಿಯ ಅಧಿಕಾರಿಗಳ ಗಮನಕ್ಕೆ ತರವುದಾಗಿ ಭರವಸೆ ನೀಡಿದರು.

ಕಾನೂನು, ಕಾಯ್ದೆಗಳಿಗೆ ಸಂವಿಧಾನವೇ ಅಡಿಪಾಯ

ಹರಿಹರ : ಪವಿತ್ರ ವಕೀಲ ವೃತ್ತಿಯ ಮೂಲಕ ಜನ ಸಾಮಾನ್ಯರ ಸಂಕಷ್ಟಗಳನ್ನು ನಿವಾರಿಸಲು ಸಾಧ್ಯವಿದೆ ಎಂದು ಇಲ್ಲಿನ ಹಿರಿಯ ಸಿವಿಲ್ ಕೋರ್ಟ್ ನ್ಯಾಯಾಧೀಶರಾದ ಪದ್ಮಶ್ರೀ ಮುನ್ನೋಳಿ ಹೇಳಿದರು.

ಮಲೇಬೆನ್ನೂರು ; ಅಂಬೇಡ್ಕರ್‌ ಮಹಾಪರಿನಿರ್ವಾಣ

ಮಲೇಬೆನ್ನೂರು : ಪಟ್ಟಣದ ಮುಖ್ಯ ವೃತ್ತದಲ್ಲಿ ಮತ್ತು ಎ.ಕೆ. ಕಾಲೋನಿಯಲ್ಲಿ ಸಂವಿಧಾನ ಶಿಲ್ಪಿ ಡಾ. ಬಿ.ಆರ್‌.ಅಂಬೇಡ್ಕರ್‌ ಅವರ 68ನೇ ಮಹಾಪರಿನಿರ್ವಾಣ ದಿನವನ್ನು ಎ.ಕೆ. ಕಾಲೋನಿಯ ಯುವಕರು ಶ್ರದ್ಧಾ-ಭಕ್ತಿಯಿಂದ ಆಚರಿಸಿದರು.

ಉಕ್ಕಡಗಾತ್ರಿ; ಮೌಢ್ಯ ವಿರೋಧಿ ದಿನ

ಮಲೇಬೆನ್ನೂರು : ಉಕ್ಕಡಗಾತ್ರಿ ಗ್ರಾಮದ ರುದ್ರಭೂಮಿಯಲ್ಲಿ ಮಾನವ ಬಂಧುತ್ವ ವೇದಿಕೆಯಿಂದ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ 86ನೇ ಪರಿನಿರ್ವಾಣ ದಿನದ ಪ್ರಯುಕ್ತ ಮೌಢ್ಯ ವಿರೋಧಿ ದಿನವನ್ನಾಗಿ ಆಚರಿಸಲಾಯಿತು. 

ಹರಿಹರ : ಕಳಚಿ ಬಿದ್ದ ಸ್ವಾಗತ ಕಮಾನಿನ ಆರ್‌ಸಿಸಿ

ಹರಿಹರ : ನಿರ್ಮಾಣ ಹಂತದಲ್ಲಿದ್ದ ಸ್ವಾಗತ ಕಮಾನಿನ ಆರ್‌ಸಿಸಿ ಕಳಚಿ ಬಿದ್ದ ಘಟನೆ ತಾಲ್ಲೂಕಿನ ದೀಟೂರು ಗ್ರಾಮದ ಬಳಿ ನಡೆದಿದೆ. ಬುಧವಾರ ನಡೆದ ಈ ಘಟನೆಯಲ್ಲಿ ಒಬ್ಬ ಕಾರ್ಮಿಕನಿಗೆ ಸಣ್ಣಪುಟ್ಟ ಗಾಯವಾಗಿದ್ದು, ಉಳಿದ ಕಾರ್ಮಿಕರು ಅಪಾಯದಿಂದ ಪಾರಾಗಿದ್ದಾರೆ.

error: Content is protected !!