Category: ಹರಿಹರ

ಹರಿಹರ : 19 ರಂದು ಶ್ರೀ ಕೊಟ್ಟೂರೇಶ್ವರ ಸ್ವಾಮಿ ನೂತನ ಪಂಚಲೋಹದ ಮೂರ್ತಿ ಪ್ರತಿಷ್ಠಾಪನೆ

ಹರಿಹರ : ನಗರದ ಶ್ರೀ ಕೊಟ್ಟೂರೇ ಶ್ವರ ದೇವಸ್ಥಾನದ ಆವರ ಣದಲ್ಲಿ  ಇದೇ ದಿನಾಂಕ 19ರಂದು ಕಾರ್ತಿಕೋತ್ಸವ ಮತ್ತು ಶ್ರೀ ಸ್ವಾಮಿಯ ನೂತನ ಪಂಚಲೋಹದ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮ ಆವರ ಗೊಳ್ಳದ ಹಿರೇಮಠದ ಶ್ರೀ ಓಂಕಾರೇಶ್ವರ ಶಿವಾ ಚಾರ್ಯ ಸ್ವಾಮೀಜಿಯವರಿಂದ ನೆರವೇರಲಿದೆ.

ಹೊಸಪಾಳ್ಯದಲ್ಲಿ ಮಳೆಯಿಂದ ಮನೆ ಹಾನಿ : ಧರ್ಮಸ್ಥಳ ಯೋಜನೆಯ ನೆರವು

ಮಲೇಬೆನ್ನೂರು : ಮಳೆ ಹಾನಿಯಿಂದ ಮನೆ ಕುಸಿತವಾಗಿರುವ ಕಾರಣದಿಂದ ಹೊಸಪಾಳ್ಯ ಗ್ರಾಮದ ಮೀನಾಕ್ಷಮ್ಮ ಹಾಗೂ ರೇಣುಕಮ್ಮ ಎಂಬ ಫಲಾನುಭವಿಗಳಿಗೆ ಸಹಾಯ ಧನದ ಚೆಕ್‌ ಅನ್ನು ಜಿಲ್ಲಾ ಜನಜಾಗೃತಿ ವೇದಿಕೆ ಉಪಾಧ್ಯಕ್ಷ ಸಿರಿಗೆರೆ ನಾಗನಗೌಡ್ರು ಮತ್ತು ಯೋಜನೆಯ ಹಿರಿಯ ನಿರ್ದೇಶಕ ಎಂ. ಲಕ್ಷ್ಮಣ್ ಅವರು ವಿತರಿಸಿದರು. 

ಸಂಭ್ರಮದ ಬೀರಲಿಂಗೇಶ್ವರ ದೇವರ ದೊಡ್ಡ ಎಡೆ ಜಾತ್ರೆ

ಮಲೇಬೆನ್ನೂರು : ಬೆಳ್ಳೂಡಿ ಗ್ರಾಮದ ಶ್ರೀ ಬೀರಲಿಂಗೇಶ್ವರ ದೇವಸ್ಥಾನದಲ್ಲಿ ಬೀರಪ್ಪನ ಕಾರ್ತಿಕೋತ್ಸವ ಮತ್ತು ದೊಡ್ಡ ಎಡೆ ಜಾತ್ರೆ ಸೋಮವಾರ ಅಪಾರ ಭಕ್ತರ ಸಮ್ಮುಖದಲ್ಲಿ ಸಂಭ್ರಮದಿಂದ ಜರುಗಿತು.

ಹರಿಹರ ಜೆಡಿಎಸ್ ಕಚೇರಿಯಲ್ಲಿ ಕುಮಾರಸ್ವಾಮಿ ಜನ್ಮದಿನ ಆಚರಣೆ

ಹರಿಹರ : ನಗರದ ಹೆಚ್. ಶಿವಪ್ಪ ವೃತ್ತದಲ್ಲಿರುವ ಜೆಡಿಎಸ್‌ ಕಚೇರಿಯಲ್ಲಿ   ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರ ಉಕ್ಕು ಹಾಗೂ ಬೃಹತ್ ಕೈಗಾರಿಕಾ ಸಚಿವ  ಹೆಚ್‌.ಡಿ‌ ಕುಮಾರಸ್ವಾಮಿ ಹುಟ್ಟು ಹಬ್ಬವನ್ನು ಕೇಕ್ ಕತ್ತರಿಸುವ ಮೂಲಕ ಆಚರಿಸಲಾಯಿತು. 

ದುರ್ಗಾ ಪಡೆಯಿಂದ ಕಾನೂನು ಅರಿವು

ಮಲೇಬೆನ್ನೂರು : ಪಟ್ಟಣದ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದಲ್ಲಿ ಮತ್ತು ಸರ್ಕಾರಿ ಪದವಿ ಪೂರ್ವ ಕಾಲೇಜು, ಪ್ರೌಢಶಾಲೆ ಹಾಗೂ ಬೀರಲಿಂಗೇಶ್ವರ ಕಾಲೇಜು, ಪ್ರೌಢಶಾಲೆ ಸೇರಿದಂತೆ ವಿವಿಧ ಶಾಲೆಗಳಲ್ಲಿ ದಾವಣಗೆರೆ ದುರ್ಗಾ ಪಡೆಯ ಪಿಎಸ್ಐ ಪ್ರಮೀಳ ಅವರು ಸಾರ್ವಜನಿಕರಿಗೆ ಹಾಗೂ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಕಾನೂನು ಮತ್ತು ಸುರಕ್ಷತೆ ಬಗ್ಗೆ ಅರಿವು ಮೂಡಿಸಿದರು.

ಹರಿಹರದಲ್ಲಿ ದತ್ತ ಜಯಂತಿ

ಹರಿಹರ : ನಗರದ ಕೋಟಿ ಬಡಾವಣೆಯ ಜಗದ್ಗುರು ಕೂಡಲಿ ಶೃಂಗೇರಿ ಮಹಾ ಸಂಸ್ಥಾನದ ಶ್ರೀ ದತ್ತ ಪಾದುಕಾ ಮಂದಿರದ ಆವರಣದಲ್ಲಿ ಶ್ರೀ ದತ್ತ ಜಯಂತಿ ಆಚರಣೆಯನ್ನು ಆಚರಿಸಲಾಗುತ್ತದೆ ಎಂದು ಉತ್ಸವ ಸಮಿತಿಯ ಗೌರವಾಧ್ಯಕ್ಷ ಡಾ. ನಾರಾಯಣ ಜೋಯಿಸರು ತಿಳಿಸಿದರು.

ಹರಿಹರ : ಮಂಡ್ಯ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮಾಂಸಹಾರ ಇರಲಿ

ಹರಿಹರ : ಮಂಡ್ಯದಲ್ಲಿ ಡಿ.20 ರಿಂದ ಆರಂಭವಾಗುವ 87ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಸ್ಯಾಹಾರ ಮತ್ತು ಮಾಂಸಾಹಾರ ಎರಡೂ ಬಗೆಯ ಆಹಾರ ವಿತರಿಸಬೇಕೆಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ (ಪ್ರೊ.ಬಿ. ಕೃಷ್ಣಪ್ಪ ಸ್ಥಾಪಿತ) ತಾಲ್ಲೂಕು ಸಂಚಾಲಕ ಪಿ.ಜೆ. ಮಹಾಂತೇಶ್ ಆಗ್ರಹಿಸಿದ್ದಾರೆ.

ಮಲೇಬೆನ್ನೂರು ಪುರಸಭೆ ಅಧ್ಯಕ್ಷರಾಗಿ ಜೆಡಿಎಸ್‌ನ ಟಿ. ಹನುಮಂತಪ್ಪ

ಮಲೇಬೆನ್ನೂರು : ಇಲ್ಲಿನ ಪುರಸಭೆಯ ನೂತನ ಅಧ್ಯಕ್ಷರಾಗಿ 23ನೇ ವಾರ್ಡಿನ ಜೆಡಿಎಸ್‌ ಸದಸ್ಯ ಟಿ. ಹನುಮಂತಪ್ಪ ಅವರು ಶುಕ್ರವಾರ ನಡೆದ ಚುನಾವಣಾ ಸಭೆಯಲ್ಲಿ ನಿರೀಕ್ಷೆಯಂತೆ ಅವಿರೋಧವಾಗಿ ಆಯ್ಕೆಯಾದರು.

ಹರಿಹರೇಶ್ವರ ಅರ್ಬನ್ ಬ್ಯಾಂಕ್ ಅಧ್ಯಕ್ಷರಾಗಿ ಮಲ್ಲಿಕಾರ್ಜುನ್

ಹರಿಹರ : ನಗರದ ಹರಿಹರೇಶ್ವರ ಅರ್ಬನ್ ಕೋ-ಆಪ್‌ ಬ್ಯಾಂಕ್  ಅಧ್ಯಕ್ಷರಾಗಿ ಜಿ.ಕೆ. ಮಲ್ಲಿಕಾರ್ಜುನ್ ಹಾಗೂ ಉಪಾಧ್ಯಕ್ಷರಾಗಿ ನಾಗೇಂದ್ರಸಾ ಕಾಟ್ವೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. 

ವಿದ್ಯಾರ್ಥಿಗಳು ಪತ್ರಿಕೆ ಓದುವ ಹವ್ಯಾಸ ರೂಢಿಸಿಕೊಳ್ಳಿ : ಡಿಸಿ

ಹರಿಹರ : ವಿದ್ಯಾರ್ಥಿಗಳು ಪ್ರತಿ ನಿತ್ಯ ದಿನ ಪತ್ರಿಕೆ ಓದುವ ಹವ್ಯಾಸ ರೂಢಿಸಿಕೊಂಡರೆ ಜ್ಞಾನಾರ್ಜನೆ ವೃದ್ಧಿಸಿಕೊಳ್ಳಬಹುದು ಎಂದು ಜಿಲ್ಲಾಧಿಕಾರಿ ಜಿ.ಎಂ ಗಂಗಾಧರಸ್ವಾಮಿ ಅವರು ಶಾಲಾ ಮಕ್ಕಳಿಗೆ ಕಿವಿಮಾತು ಹೇಳಿದರು.

ಆಮ್‌ ಆದ್ಮಿ ಸದಸ್ಯತ್ವಕ್ಕೆ ಚಾಲನೆ

ಹರಿಹರ : ನಗರದಲ್ಲಿ ಆಮ್‌ ಆದ್ಮಿ ಪಾರ್ಟಿ ವತಿಯಿಂದ ಸದಸ್ಯರನ್ನು ಗುರುತಿಸಲು ಆಪ್ ಪರಿವಾರ್ ಬಿಡುಗಡೆ ಮತ್ತು ಸದಸ್ಯತ್ವ ನೋಂದಣಿಗೆ ನೀಡಲಾಗುವುದು ಎಂದು ಆಮ್‌ ಆದ್ಮಿ ಪಾರ್ಟಿ ತಾಲ್ಲೂಕು ಅಧ್ಯಕ್ಷ ಜಿ.ಹೆಚ್. ಬಸವರಾಜ್ ಹಲಸಬಾಳ್ ಹೇಳಿದರು.

error: Content is protected !!