Category: ಹರಿಹರ

ವೀರಭದ್ರೇಶ್ವರ ದೇವಸ್ಥಾನಕ್ಕೆ ಕಾಶಿ ಜಗದ್ಗುರುಗಳ ಭೇಟಿ

ಮಲೇಬೆನ್ನೂರು : ಪಟ್ಟಣದ ಹೊರವಲಯದಲ್ಲಿರುವ ಶ್ರೀ ಭದ್ರಾಕಾಳಿ ಸಮೇತ ಶ್ರೀ ವೀರಭದ್ರೇಶ್ವರ ದೇವಸ್ಥಾನಕ್ಕೆ ಕಾಶಿಪೀಠದ ನೂತನ ಜಗದ್ಗುರು ಡಾ. ಮಲ್ಲಿಕಾರ್ಜುನ ವಿಶ್ವಾರಾಧ್ಯ ಶಿವಾಚಾರ್ಯ ಭಗತ್ಪಾದರು ಭೇಟಿ ನೀಡಿ, ಶ್ರೀ ವೀರಭದ್ರೇಶ್ವರ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದರು.

ವಾಲ್ಮೀಕಿ ರಾಮಾಯಣದಿಂದಾಗಿ ಲೋಕ ಕಲ್ಯಾಣ

ಮಲೇಬೆನ್ನೂರು : ಆದಿಕವಿ ಮಹರ್ಷಿ ವಾಲ್ಮೀಕಿ ಅವರು ರಚಿಸಿದ ರಾಮಾಯಣ ಮಹಾ ಕಾವ್ಯದಿಂದಾಗಿ ಲೋಕಕಲ್ಯಾಣವಾಗಿದೆ ಎಂದು ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಶ್ರೀ ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿ ಸಂತಸ ವ್ಯಕ್ತಪಡಿಸಿದರು.

ಕೊಮಾರನಹಳ್ಳಿ ಕೆರೆಯಲ್ಲಿ ಅದ್ಧೂರಿ ತೆಪ್ಪೋತ್ಸವ

ಮಲೇಬೆನ್ನೂರು : ಭರ್ತಿಯಾಗಿ ಕೋಡಿ ಬಿದ್ದಿರುವ ಕೊಮಾರನಹಳ್ಳಿಯ ಹೆಳವನಕಟ್ಟೆ ಶ್ರೀ ಲಕ್ಷ್ಮಿ ರಂಗನಾಥ ಸ್ವಾಮಿಯ 97 ಎಕರೆ ವಿಸ್ತೀರ್ಣದ ಕೆರೆಗೆ ಶಾಸಕ ಬಿ.ಪಿ. ಹರೀಶ್‌ ಅವರು ಸೋಮವಾರ ಗ್ರಾಮಸ್ಥರ ಸಮ್ಮುಖದಲ್ಲಿ ಗಂಗೆ ಪೂಜೆ ಸಲ್ಲಿಸಿ ಬಾಗಿನ ಅರ್ಪಿಸಿದರು.

ಭಾರೀ ಮಳೆ : ತುಂಗಭದ್ರಾ ನದಿಯಲ್ಲಿ ನೀರಿನ ಮಟ್ಟ ಏರಿಕೆ, ಉಕ್ಕಡಗಾತ್ರಿಯಲ್ಲಿ ಸ್ನಾನಘಟ್ಟ, ಅಂಗಡಿಗಳು ಜಲಾವೃತ

ಮಲೇಬೆನ್ನೂರು : ಕಳೆದ 3-4 ದಿನಗಳಿಂದ ಸುರಿದ ಹಿಂಗಾರು ಮಳೆಯಿಂದಾಗಿ ತುಂಗಭದ್ರಾ ನದಿಯಲ್ಲಿ ನೀರಿನ ಮಟ್ಟ ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದ್ದು, ಸುಕ್ಷೇತ್ರ ಉಕ್ಕಡಗಾತ್ರಿಯಲ್ಲಿ ದೇವಸ್ಥಾನದ ಸ್ನಾನಘಟ್ಟ ಮತ್ತು ನದಿ ದಡದಲ್ಲಿದ್ದ ಅಂಗಡಿಗಳು ನದಿ ನೀರಿನಲ್ಲಿ ಮುಳುಗಡೆಯಾಗಿವೆ.

ಹರಿಹರಕ್ಕೆ ಊರಮ್ಮ ದೇವಿ ಆಗಮನ

ಹರಿಹರ : ನಗರದ ಕಸಬಾ ಊರಮ್ಮ ದೇವಿ ಮೂಲ ದೇವಸ್ಥಾನದಲ್ಲಿ ಕಳೆದ ಸಾಲಿನಲ್ಲಿ ನಡೆದ ಊರಮ್ಮ ದೇವಿ ಹಬ್ಬದ ಲೆಕ್ಕ ಪತ್ರ ಮಂಡನೆ ಮತ್ತು ಈ ಬಾರಿ ಊರಮ್ಮ ದೇವಿ ಹಬ್ಬದ ವಿಚಾರಕ್ಕೆ ಸಂಬಂಧಿಸಿದಂತೆ ಚರ್ಚಿಸಲು ಹಲವಾಗಲು ಗ್ರಾಮದಿಂದ ನಗರಕ್ಕೆ ಊರಮ್ಮ ದೇವಿಯನ್ನು ಬರಮಾಡಿಕೊಳ್ಳಲಾಯಿತು.

ಜಿಗಳಿಯಲ್ಲಿ ಆದಿಕವಿ ವಾಲ್ಮೀಕಿ ಜಯಂತಿ

ಮಲೇಬೆನ್ನೂರು : ಜಿಗಳಿ ಗ್ರಾ.ಪಂ. ಕಚೇರಿ ಮತ್ತು ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ವಾಲ್ಮೀಕಿ ವೃತ್ತದಲ್ಲಿ ಆದಿಕವಿ ಮಹರ್ಷಿ ವಾಲ್ಮೀಕಿ ಅವರ ಜಯಂತಿಯನ್ನು ಸಂಭ್ರಮದಿಂದ ಆಚರಿಸಲಾಯಿತು.

ಪೌರ ಕಾರ್ಮಿಕ ನಿವಾಸಿಗಳ ಬಡಾವಣೆಗೆ ಭೇಟಿ ಮಾಡಿ ಸಮಸ್ಯೆ ಆಲಿಸಿದ ಶಾಸಕ ಹರೀಶ್

ಹರಿಹರ : ನಗರದಲ್ಲಿ ಕಳೆದ ಗುರುವಾರ ರಾತ್ರಿ ಧಾರಾಕಾರವಾಗಿ ಸುರಿದ ಮಳೆಯಿಂದಾಗಿ ನಗರದ ಭಾರತ್ ಆಯಿಲ್ ಮಿಲ್ ಕಾಂಪೌಂಡ್ ಹತ್ತಿರದ ಪೌರ ಕಾರ್ಮಿಕ ನಿವಾಸಿಗಳ ಬಡಾವಣೆಗೆ ಶಾಸಕ ಬಿ.ಪಿ. ಹರೀಶ್ ಭೇಟಿಕೊಟ್ಟು ಸ್ಥಳ ಪರಿಶೀಲನೆ ನಡೆಸಿ ಸ್ಥಳಿಯ ನಿವಾಸಿಗಳಿಂದ ಸಮಸ್ಯೆಗಳನ್ನು ಆಲಿಸಿದರು.

ಮಲೇಬೆನ್ನೂರಿನಲ್ಲಿ ಸಂಭ್ರಮದ ದೊಡ್ಡಎಡೆ ಜಾತ್ರೆ

ಮಲೇಬೆನ್ನೂರು : ಇಲ್ಲಿನ ಶ್ರೀ ಬೀರಲಿಂಗೇಶ್ವರ ದೇವಸ್ಥಾನದಲ್ಲಿ ವಿಜಯದಶಮಿ ಹಾಗೂ ಮರಿಬನ್ನಿ ಅಂಗವಾಗಿ ಶುಕ್ರವಾರ  ದೊಡ್ಡಎಡೆ ಜಾತ್ರೆ ಸಂಭ್ರಮದಿಂದ ಜರುಗಿತು. 

ರೈತರಿಗೆ ತೊಂದರೆಯಾಗದಂತೆ ಅಧಿಕಾರಿಗಳು ಎಚ್ಚರ ವಹಿಸಿ

ಹರಿಹರ : ರೈತರು ಮತ್ತು ವಿದ್ಯಾರ್ಥಿಗಳಿಗೆ  ತೊಂದರೆಯಾಗ ದಂತೆ ತಾಲ್ಲೂಕು ಮಟ್ಟದ ಅಧಿಕಾರಿಗಳು ಎಚ್ಚರ ವಹಿಸಿ ಕರ್ತವ್ಯ ನಿರ್ವಹಿಸುವಂತೆ ತಾ.ಪಂ. ಇಓ ಎಸ್.ಪಿ. ಸುಮಲತ ತಿಳಿಸಿದರು.

ಆಪೆ ಆಟೋ – ಮಜ್ಡಾ ವಾಹನ ಡಿಕ್ಕಿ; ಹಲವರಿಗೆ ಗಾಯ

ಹರಿಹರ : ನಗರದ   ತರಳಬಾಳು ಶಾಲೆ ಮುಂಭಾಗದಲ್ಲಿ ಬೆಳಿಗ್ಗೆ 10 ಗಂಟೆಯ ಸಮಯದಲ್ಲಿ ಆಪೆ ಆಟೋ ಮತ್ತು ಇಟ್ಟಿಗೆ ತುಂಬಿರುವ ಮಜ್ಡಾ ವಾಹನಕ್ಕೆ ಡಿಕ್ಕಿ ಸಂಭವಿಸಿದ ಪರಿಣಾಮ ಹಲವರಿಗೆ ಗಾಯಗಳಾಗಿದ್ದು, ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿರುವ ಘಟನೆ ನಡೆದಿದೆ.

error: Content is protected !!