Category: ಹರಿಹರ

ಹರಿಹರ : ಎಂ.ಕೆ.ಇ.ಟಿ, ಸಿ.ಬಿ.ಎಸ್.ಇ ಶಾಲೆಗೆ ಶೇ.100 ಫಲಿತಾಂಶ

ಹರಿಹರ : ನಗರದ ಎಂ.ಕೆ.ಇ.ಟಿ, ಸಿ.ಬಿ.ಎಸ್.ಇ ಶಾಲೆಯ ವಿದ್ಯಾರ್ಥಿಗಳು 2023-24ನೇ ಸಾಲಿನ ಫೆಬ್ರವರಿ ಮತ್ತು ಮಾರ್ಚ್ ತಿಂಗಳಲ್ಲಿ ನಡೆದ ಸಿ.ಬಿ.ಎಸ್.ಇ ಪರೀಕ್ಷೆಯ ಫಲಿ ತಾಂಶ ಪ್ರಕಟವಾಗಿದ್ದು, ಶೇ.100ರಷ್ಟು ಫಲಿತಾಂಶ ಬಂದಿರುತ್ತದೆ ಎಂದು ಆಡಳಿತ ಮಂಡಳಿಯ ಅಧ್ಯಕ್ಷರು ತಿಳಿಸಿದ್ದಾರೆ.

ಹರಿಹರದಲ್ಲಿ ದೈವಿ ಉಪಾಸಕ ನಾಗೇಂದ್ರಕುಮಾರ್ ಗುರೂಜಿ ಸತ್ಸಂಗ

ಹರಿಹರ : ನಗರದ ಹೊರವಲಯದ ಶ್ರೀ ಎಲ್ಲಮ್ಮ ತುಳಜಾ ಸಾ ಭೂತೆ ಮೆಮೋರಿಯಲ್ ಹಾಲ್‌ನಲ್ಲಿ ಶ್ರೀ ಮಾತಾ ಅಪ್ಪಾಜಿ ವರ್ಧಂತಿ ಪ್ರಯುಕ್ತ ಸತ್ಸಂಗ, ವಿವಿಧ ಪೂಜಾ ಕಾರ್ಯಕ್ರಮವನ್ನು ದೈವೀ ಉಪಾಸಕ ನಾಗೇಂದ್ರ ಕುಮಾರ್ ಗುರೂಜಿ ನೆರವೇರಿಸಿದರು.

ನಿಟ್ಟೂರಿನಲ್ಲಿ ಟ್ರಾಫಿಕ್ ಜಾಮ್

ಮಲೇಬೆನ್ನೂರು : ನಿಟ್ಟೂರು ಗ್ರಾಮದಲ್ಲಿ ಜರುಗಿದ ಗ್ರಾಮದೇವತೆ ಶ್ರೀ ಮಾರಿಕಾಂಭ ದೇವಿ ಹಬ್ಬದ ಅಂಗವಾಗಿ ಬುಧವಾರ ಸಂಜೆ ಬಾಡೂಟಕ್ಕೆ ಆಗಮಿಸಿದ್ದ ಬಂಧು ಮಿತ್ರರಿಂದಾಗಿ ಗ್ರಾಮದಲ್ಲಿ ಟ್ರಾಫಿಕ್ ಜಾಮ್ ಉಂಟಾಗಿತ್ತು. 

ಬಸವಣ್ಣ ಕಂಡ ಕನಸು ನನಸಾಗಿಸಲು ಬೀರದೇವರ ಸಹೋದರತ್ವ ಭಾವನೆ ಮಾದರಿ

ಮಲೇಬೆನ್ನೂರು : ಬಸವಣ್ಣ ಕಂಡ ಕನಸು ನನಸಾಗಿಸಲು ಬೀರದೇವರ ಸಹೋದರತ್ವ ಭಾವನೆ ಮಾದರಿಯಾಗಿದೆ ಎಂದು ಕಾಗಿನೆಲೆ ಕನಕ ಗುರುಪೀಠದ ಹೊಸದುರ್ಗ ಶಾಖಾ ಮಠದ ಶ್ರೀ ಈಶ್ವರಾನಂದ ಪುರಿ ಸ್ವಾಮೀಜಿ ಹೇಳಿದರು.

ಕುಣೆಬೆಳಕೆರೆಯಲ್ಲಿ ಇಂದು ಬೀರಲಿಂಗೇಶ್ವರ ಸಮುದಾಯ ಭವನ ಲೋಕಾರ್ಪಣೆ

ಮಲೇಬೆನ್ನೂರು ಸಮೀಪದ ಕುಣೆಬೆಳಕೆರೆ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಶ್ರೀ ಬೀರಲಿಂಗೇಶ್ವರ ಬೃಹತ್ ಸಮುದಾಯ ಭವನ ಲೋಕಾರ್ಪಣೆ ಮತ್ತು ಶ್ರೀ ಗಣಪತಿ, ಶ್ರೀ ರೇವಣಸಿದ್ದೇಶ್ವರ, ಶ್ರೀ ಆಂಜನೇಯ ಸ್ವಾಮಿ ನೂತನ ಶಿಲಾಮೂರ್ತಿಗಳ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮಗಳು ಇಂದು ನಡೆಯಲಿವೆ

ನಿಟ್ಟೂರಿನಲ್ಲಿ ಸಂಭ್ರಮದ ಉತ್ಸವ

ಮಲೇಬೆನ್ನೂರು : ನಿಟ್ಟೂರು ಗ್ರಾಮದಲ್ಲಿ 16 ವರ್ಷಗಳ ನಂತರ ಜರುಗಿದ ಗ್ರಾಮದೇವತೆ ಶ್ರೀ ಮಾರಿಕಾಂಬದೇವಿ ಜಾತ್ರೆಯ ಅಂಗವಾಗಿ ಮಂಗಳವಾರ ರಾತ್ರಿ ದೇವಿಯ ಮೆರವಣಿಗೆ ವೈಭವದೊಂದಿಗೆ ನಡೆಯಿತು.

ಕುಣೆಬೆಳಕೆರೆಯಲ್ಲಿ ನಾಳೆ ಸಮುದಾಯ ಭವನ ಲೋಕಾರ್ಪಣೆ

ಮಲೇಬೆನ್ನೂರು ಸಮೀಪದ ಕುಣೆಬೆಳಕೆರೆ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಶ್ರೀ ಬೀರಲಿಂಗೇಶ್ವರ ಬೃಹತ್ ಸಮುದಾಯ ಭವನ ಲೋಕಾರ್ಪಣೆ ಮತ್ತು ಶ್ರೀ ಗಣಪತಿ, ಶ್ರೀ ರೇವಣಸಿದ್ದೇಶ್ವರ, ಶ್ರೀ ಆಂಜನೇಯ ಸ್ವಾಮಿ ನೂತನ ಶಿಲಾಮೂರ್ತಿಗಳ
ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮಗಳು ಇಂದು ಮತ್ತು ನಾಳೆ ನಡೆಯಲಿವೆ

ಸರ್ಕಾರ ಉಚಿತ ಕೊಡುಗೆ ನೀಡುವ ಬದಲಿಗೆ ಜನರಿಗೆ ದುಡಿಮೆಯ ಮಾರ್ಗ ತೋರಿಸಬೇಕು

ಮಲೇಬೆನ್ನೂರು : ಆರ್ಥಿಕ ಹೊರೆ ತಗ್ಗಿಸುವ ಸಾಮೂಹಿಕ ವಿವಾಹಗಳು ಸಮಾಜದಲ್ಲಿ ಹೆಚ್ಚಾಗಬೇಕು. ಆ ಮೂಲಕ ದುಂದು ವೆಚ್ಚದ ಅದ್ಧೂರಿ ಮದುವೆಗಳಿಗೆ ಕಡಿವಾಣ ಹಾಕಬೇಕೆಂದು ರಟ್ಟಿಹಳ್ಳಿ ಕಬ್ಬಿಣ ಕಂಥಿ ಮಠದ ಶ್ರೀ ಶಿವಲಿಂಗ ಶಿವಾಚಾರ್ಯ ಸ್ವಾಮೀಜಿ ಅಭಿಪ್ರಾಯಪಟ್ಟರು.

ಕೊಪ್ಪದಲ್ಲಿ ಸಂಭ್ರಮದ ಉಚ್ಛಾಯ

ಮಲೇಬೆನ್ನೂರು : ಕೊಪ್ಪ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಶ್ರೀ ಆಂಜನೇಯ ಸ್ವಾಮಿಯ ಉಚ್ಛಾಯದ (ಸಣ್ಣ ರಥ)  ರಥೋತ್ಸವವು ಶುಕ್ರವಾರ ಬೆಳಿಗ್ಗೆ ಸಂಭ್ರಮದಿಂದ ಜರುಗಿತು. 

ಬಸವಣ್ಣ ಅನೇಕರಿಗೆ ಸ್ಫೂರ್ತಿದಾಯಕ

ಹರಿಹರ : ಮಾನವ ಕಲ್ಯಾಣ ಬಯಸುವ ಅನೇಕರಿಗೆ ಸಾಂಸ್ಕೃತಿಕ ನಾಯಕ ಬಸವಣ್ಣ ಸ್ಪೂರ್ತಿ ದಾಯಕ ಎಂದು ಬಸವೇಶ್ವರ ಸೇವಾ ಸಮಿತಿಯ ಅಧ್ಯಕ್ಷ ಟಿ.ಜೆ. ಮುರುಗೇಶಪ್ಪ ಹೇಳಿದರು.ನಗರದ ಬಸವೇಶ್ವರ ಸೇವಾ ಸಮಿತಿಯಿಂದ ಶುಕ್ರವಾರ ಆಯೋಜಿಸಿದ್ದ `ಬಸವ ಜಯಂತಿ’ಯ ಪಲ್ಲಕ್ಕಿ ಉತ್ಸವಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

error: Content is protected !!