Category: ಹರಪನಹಳ್ಳಿ

Home ಸುದ್ದಿಗಳು ಹರಪನಹಳ್ಳಿ

ವಕೀಲರು ಜ್ಞಾನ ಸಾಮರ್ಥ್ಯದ ಮೇಲೆ ಹಿಡಿತ ಸಾಧಿಸಬೇಕು

ಹರಪನಹಳ್ಳಿ : ವಕೀಲರು ಜ್ಞಾನ ಸಾಮರ್ಥ್ಯದ ಮೇಲೆ ಹಿಡಿತ ಸಾಧಿಸುವ ಮೂಲಕ ತಮ್ಮ ಪರಿಣಿತಿ ಹೆಚ್ಚಿಸಿಕೊಳ್ಳಬೇಕಿದೆ ಎಂದು ರಾಜ್ಯ ವಕೀಲರ ಪರಿಷತ್ತಿನ ಸದಸ್ಯ ಕೋಟೇಶ್ವರರಾವ್ ಹೇಳಿದರು.

ದಾವಣಗೆರೆ ಕ್ಷೇತ್ರ ಕೇವಲ ಎರಡು ಕುಟುಂಬಗಳ ಸ್ವತ್ತಾಗಿದೆ

ಹರಪನಹಳ್ಳಿ : ದಾವಣಗೆರೆ ಲೋಕಸಭಾ ಕ್ಷೇತ್ರ ಕೇವಲ ಎರಡು ಕುಟುಂಬಗಳ ಸ್ವತ್ತಾಗಿದೆ. ಇಲ್ಲಿ ಹಿಂದುಳಿದ ವರ್ಗದ ಜನರ ಧ್ವನಿಗೆ ಬೆಲೆ ಇಲ್ಲದಂತಾಗಿದೆ. ಹಾಗಾಗಿ ಇದರ ವಿರುದ್ಧ ನಾನು ಸ್ವಾಭಿಮಾನದ ಹೋರಾಟಕ್ಕೆ ಮುಂದಾಗಿದ್ದೇನೆ ಎಂದು ಕಾಂಗ್ರೆಸ್ ಟಿಕೆಟ್ ವಂಚಿತ ಜಿ.ಬಿ. ವಿನಯ್‍ಕುಮಾರ್ ಹೇಳಿದರು.

ಗಮಕ ತೋರಣ ಕಾರ್ಯಕ್ರಮ ಪ್ರತಿ ಹಳ್ಳಿಗೂ ಪಸರಿಸಿ

ಹರಪನಹಳ್ಳಿ : ವೇದವ್ಯಾಸರ ಉಪದೇಶದಂತೆ ಇಂದ್ರಕೀಲ ಪರ್ವತದಲ್ಲಿ ಬೀಜಾಕ್ಷರ ಮಂತ್ರ ಪಠಣೆಯಿಂದ ಅರ್ಜುನನು ಪಾಶುಪತಾಸ್ತ್ರವನ್ನು ವಶೀಕರಿಸಿದನು ಎಂದು ಶಿವಮೊಗ್ಗ ಜಿಲ್ಲಾ ಗಮಕ ಕಲಾ ಪರಿಷತ್‌ನ ಕಾರ್ಯದರ್ಶಿ ವಿನಾಯಕ್ ಹೇಳಿದರು.

ಇತಿಹಾಸ ನೆನಪಿಸಿದ ರಂಗ ಪ್ರಯೋಗಗಳು

ಹರಪನಹಳ್ಳಿ : ಸಮಸ್ತರು (ಹರಪನಹಳ್ಳಿ), ಆದರ್ಶ ಮಹಿಳಾ ಮಂಡಳಿ ಹಾಗೂ ಸಂಪ್ರದಾಯ ಟ್ರಸ್ಟ್ (ಹರಪನಹಳ್ಳಿ) ಇವರ ಸಂಯುಕ್ತ ಆಶ್ರಯದಲ್ಲಿ  ವಿಶ್ವ ರಂಗಭೂಮಿ ದಿನಾಚರಣೆ ಅಂಗವಾಗಿ ಕಾಶೀ ಮಠದ ಸಭಾಂಗಣದಲ್ಲಿ ಎರಡು ಅರ್ಥಪೂರ್ಣ ಪ್ರದರ್ಶನಗಳು ಉತ್ತಮ ಅಭಿನಯದಿಂದ ಪ್ರೇಕ್ಷಕರನ್ನು ಮೋಡಿ ಮಾಡಿದ ಹಾಗೆ ನಿಶ್ಯಬ್ಧವಾಗಿ ಚಿಂತನೆಗೆ ಹಚ್ಚಿಸಿದವು. 

ತಂಗಡಗಿ ಹೇಳಿಕೆ ಸತ್ಯ, ಅವರ ಬೆನ್ನಿಗೆ ಸಮಾಜವಿದೆ

ಹರಪನಹಳ್ಳಿ : ಸಚಿವ ಶಿವರಾಜ್ ತಂಗಡಗಿ  ಅವರು ಪ್ರಧಾನಿ ಮೋದಿಯವರ ಬಗ್ಗೆ ನೀಡಿದ್ದ ಹೇಳಿಕೆ ಸತ್ಯವಾಗಿದ್ದು, ಅದನ್ನು ಹಿಂಪಡೆಯುವ ಪ್ರಮೇಯವೇ ಇಲ್ಲ ಎಂದು ಕೆಪಿಸಿಸಿ ವಕ್ತಾರ ಡಿ. ಬಸವರಾಜ್ ಸಮರ್ಥನೆ ಮಾಡಿಕೊಂಡಿದ್ದಾರೆ.

ಹೆಣ್ಣು ಪ್ರಜಾಪ್ರಭುತ್ವ ಸಮಾಜದ ಕಣ್ಣು

ಹರಪನಹಳ್ಳಿ : ಹೆಣ್ಣು ಸಮಾಜದ ಕಣ್ಣು, ಸಮಾಜದಲ್ಲಿ ಮಹಿಳೆಯರ ಪಾತ್ರ ಬಹಳ ಮುಖ್ಯ. ಆದ್ದರಿಂದ ಸಮಾಜದಲ್ಲಿ ಹೆಣ್ಣು ಕೂಡ ಪುರುಷರಷ್ಟೇ ಸಮಾನಳು ಎಂದು ಹಿರಿಯ ಸಿವಿಲ್ ನ್ಯಾಯಾಧೀಶರಾದ ಶ್ರೀಮತಿ ಎಂ. ಭಾರತಿ ಹೇಳಿದರು.

ಹರಪನಹಳ್ಳಿ ಟಿಎಂಎಇಎಸ್ ಶಿಕ್ಷಣ ಕಾಲೇಜ್ ವಿದ್ಯಾರ್ಥಿ ಸಂಘದ ಉದ್ಘಾಟನೆ

ಹರಪನಹಳ್ಳಿ : ಇಲ್ಲಿನ ಟಿಎಂಎ ಇಎಸ್ ಶಿಕ್ಷಣ ಮಹಾ ವಿದ್ಯಾಲಯದಲ್ಲಿ  2023-24ನೇ ಸಾಲಿನ ವಿದ್ಯಾರ್ಥಿ ಸಂಘದ  ಉದ್ಘಾಟನಾ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು. 

ಮಕ್ಕಳಿಗೆ ಪಠ್ಯಕ್ರಮ ಎಷ್ಟು ಮುಖ್ಯವೋ ಪಠ್ಯೇತರ ಚಟುವಟಿಕೆಯೂ ಅಷ್ಟೇ ಮುಖ್ಯ

ಹರಪನಹಳ್ಳಿ : ತಾಲ್ಲೂಕಿನ ಕನ್ನನಾಯಕನ ಹಳ್ಳಿಯ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಶಾಲಾ ವಾರ್ಷಿಕೋತ್ಸವ ಹಾಗೂ ಎಸ್ ಎಸ್.ಎಲ್.ಸಿ. ಮಕ್ಕಳಿಗೆ ಹೃದಯ ಸ್ಪರ್ಷಿ ಬೀಳ್ಕೊಡುಗೆ ಸಮಾರಂಭ ನಡೆಯಿತು.

ಹರಪನಹಳ್ಳಿ : ಕ್ರೀಡೆಯಲ್ಲಿ ಸೋಲು-ಗೆಲುವು ಮುಖ್ಯವಲ್ಲ ಭಾಗವಹಿಸುವಿಕೆ ಮುಖ್ಯ

ಹರಪನಹಳ್ಳಿ : ಯಾವುದೇ ಕ್ರೀಡೆಗಳಲ್ಲಿ ಭಾಗವಹಿಸುವುದು ಮುಖ್ಯವೇ ಹೊರತು ಗೆಲುವು, ಸೋಲು ಮುಖ್ಯವಲ್ಲ. ಪ್ರತಿಯೊಬ್ಬರೂ ಕ್ರೀಡೆಗಳಲ್ಲಿ ಭಾಗವಹಿಸಿ ಯಶಸ್ಸು ತನ್ನಿ ಎಂದು ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ವೈ.ಡಿ. ಅಣ್ಣಪ್ಪ ಕರೆ ನೀಡಿದರು.

1.70 ಲಕ್ಷ ರೂ. ನಗದು ಅಧಿಕಾರಿಗಳ ವಶಕ್ಕೆ

ಹರಪನಹಳ್ಳಿ : ಸೂಕ್ತ ದಾಖಲೆ ಇಲ್ಲದೇ ಸಾಗಿಸುತ್ತಿದ್ದ 1.70 ಲಕ್ಷ ರೂ. ಹಣವನ್ನು ತಾಲ್ಲೂಕಿನ ಮತ್ತಿಹಳ್ಳಿ ಕ್ರಾಸ್ ಬಳಿಯಿರುವ ಚೆಕ್‌ಪೋಸ್ಟ್‌ನಲ್ಲಿ ಸೋಮವಾರ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

error: Content is protected !!