Category: Davanagere

ಎಸ್ಸೆಸ್ಸೆಲ್ಸಿ ಪರೀಕ್ಷಾರ್ಥಿಗಳಿಗೆ ಧೈರ್ಯ ತುಂಬಿದ ಪಾಲಿಕೆ ಸದಸ್ಯರು

ಎಸ್ಸೆಸ್ಸೆಲ್ಸಿ ಪರೀಕ್ಷೆ ಇಂದು ಪ್ರಾರಂಭಗೊಳ್ಳುವ ಸಂದರ್ಭದಲ್ಲಿ ಸ್ಥಳೀಯ ವಿನೋಬನಗರದ ಸೇಂಟ್ ಮೇರಿಸ್ ಪದವಿ ಪೂರ್ವ ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ ಪಾಲಿಕೆಯ ವಿಪಕ್ಷ ನಾಯಕ ಎ.ನಾಗರಾಜ್ ನೇತೃತ್ವದಲ್ಲಿ ವಿದ್ಯಾರ್ಥಿಗಳಿಗೆ ಮಾನಸಿಕ ಸ್ಥೈರ್ಯ ತುಂಬುವ ಮೂಲಕ  ಶುಭಾಶಯ ಕೋರಿದರು.

ಎಸ್‌ಕೆಪಿ ದೇವಸ್ಥಾನದಲ್ಲಿ ಲಸಿಕೆ

ಹಿರಿಯ ಶಾಸಕ ಡಾ|| ಶಾಮನೂರು ಶಿವಶಂಕರಪ್ಪ,  ಮಾಜಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಅವರು ನಾಗರಿಕರಿಗೆ  ನೀಡುತ್ತಿರುವ ಉಚಿತ ಕೊರೊನಾ ಲಸಿಕಾ ಶಿಬಿರವು ಶ್ರೀ ಕನ್ನಕಾಪರಮೇಶ್ವರಿ ದೇವಸ್ಥಾನ ಸಂಘ, ವಾಸವಿ ಯುವಜನ ಸಂಘದ ಸಹಭಾಗಿತ್ವದಲ್ಲಿ  ಶ್ರೀ ಕನ್ನಕಾಪರಮೇಶ್ವರಿ ದೇವಸ್ಥಾನದಲ್ಲಿ ಇಂದು ನಡೆಯಿತು.

ವಿಕಲಚೇತನರಿಗೆ ತ್ರಿಚಕ್ರ ವಾಹನ ವಿತರಿಸಿದ ಶಾಸಕ ಎಸ್ಸೆಸ್

ರಾಜ್ಯ ಸರ್ಕಾರದ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯಿಂದ ವಿಕಲಚೇತನರಿಗೆ ನೀಡುವ ಯಂತ್ರಚಾಲಿತ ತ್ರಿಚಕ್ರ ವಾಹನಗಳನ್ನು ಹಿರಿಯ ಶಾಸಕ ಡಾ|| ಶಾಮನೂರು ಶಿವಶಂಕರಪ್ಪ ಅವರು ನಿನ್ನೆ ವಿತರಿಸಿದರು.

ಬೆಲೆ ಏರಿಕೆ ವಿರೋಧಿಸಿ ಎಐಎಂಎಸ್ಎಸ್ ಪ್ರತಿಭಟನೆ

ಬೆಲೆ ಏರಿಕೆಯನ್ನು ವಿರೋಧಿಸಿ ಅಖಿಲ ಭಾರತ ಪ್ರತಿಭಟನಾ ದಿನದ ಅಂಗವಾಗಿ ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆ ಜಿಲ್ಲಾ ಸಮಿತಿಯಿಂದ ನಗರದ ಉಪವಿಭಾಗಾಧಿಕಾರಿ ಕಚೇರಿ ಆವರ ಣದಲ್ಲಿ ಮೊನ್ನೆ ಪ್ರತಿಭಟನೆ ನಡೆಸಲಾಯಿತು.

ಮಹಾರಾಜಪೇಟೆ ವಿಠ್ಠಲ ಮಂದಿರದಲ್ಲಿ ವಿಶೇಷಾಲಂಕಾರ

ನಗರದ ಶ್ರೀ ಭಾವಸಾರ ಕ್ಷತ್ರಿಯ ಸಮಾಜ (ರಿ.ನಂ. 07)ದಿಂದ ಮಹಾರಾಜ ಪೇಟೆಯ ಶ್ರೀ ವಿಠ್ಠಲ ಮಂದಿರದಲ್ಲಿ ನಾಡಿದ್ದು ದಿನಾಂಕ 20ರ ಮಂಗಳ ವಾರ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ.

ಜಮೀನುಗಳಲ್ಲಿ ಹರಿವ ಕೊಳಚೆ ನೀರು : ರೈತರ ಕಣ್ಣೀರು

ಗ್ರಾಮದಲ್ಲಿನ ಕೊಳಚೆ ನೀರೆಲ್ಲವೂ ಜಮೀನು ಗಳಿಗೆ  ಹರಿದು ಬರುತ್ತಿರುವ ಹಿನ್ನೆಲೆಯಲ್ಲಿ ಜಮೀನಿನ ರೈತರಿಗೆ ಸಂಕಷ್ಟವನ್ನು ತರಿಸಿದ್ದು, ಇದರಿಂದ ಪಾರು ಮಾಡುವಂತೆ ಅಳಲು ಕೇಳಿ ಬರುತ್ತಿದೆ.

ಹೆಚ್.ಕೆ. ಲಿಂಗರಾಜ್ ಅವರ `ಶಿಕ್ಷಣ ಯೋಗಿ’ ಕೃತಿಯ ದ್ವಿತೀಯ ಮುದ್ರಣ ಬಿಡುಗಡೆ

ಡಯಟ್ ಪ್ರಾಂಶುಪಾಲ ಹೆಚ್.ಕೆ ಲಿಂಗರಾಜ್ ಅವರ ವ್ಯಕ್ತಿತ್ವ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಅವರು ಸಲ್ಲಿಸಿದ ಅನನ್ಯ ಸೇವೆ ಕುರಿತಂತೆ ಸ್ಥಳೀಯ ಸೌಹಾರ್ದ ಪ್ರಕಾಶನ ಪ್ರಕಟಿಸಿರುವ `ಶಿಕ್ಷಣ ಯೋಗಿ’ ಅಭಿನಂದನಾ ಗ್ರಂಥದ ದ್ವಿತೀಯ ಮುದ್ರಣದ ಕೃತಿ ನಿನ್ನೆ ಬಿಡುಗಡೆಗೊಂಡಿತು.

ಹಾಲಿ ಆಸ್ತಿ ತೆರಿಗೆ ಮುಂದುವರಿಕೆಗೆ ವಾಣಿಜ್ಯ ಮಹಾಸಂಸ್ಥೆ ಒತ್ತಾಯ

ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆ ಹೆಚ್ಚಳ ಮಾಡದೆ ಹಾಲಿ ದರದಲ್ಲಿಯೇ ತೆರಿಗೆ ಪಾವತಿಗೆ ಅವಕಾಶ ಮಾಡಿಕೊಡುವಂತೆ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆಯು ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ್‌ ಅವರಿಗೆ ಮನವಿ ಸಲ್ಲಿಸಿದೆ.

ಟಿಕೆಟ್‍ ನೀಡುವಂತೆ ಡಿಕೆಶಿಗೆ ದುಗ್ಗಪ್ಪ ಮನವಿ

ಕಳೆದ ನಾಲ್ಕು ದಶಕಗಳಿಂದ ಕಾಂಗ್ರೆಸ್ ಪಕ್ಷದಲ್ಲಿ ಸೇವೆ ಸಲ್ಲಿಸುತ್ತಿರುವ ತಮಗೆ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಮಾಯಕೊಂಡ ಕ್ಷೇತ್ರದಿಂದ ಸ್ಪರ್ಧಿಸಲು ಅವಕಾಶ ನೀಡುವಂತೆ ಕೆಪಿಸಿಸಿ ಸದಸ್ಯ ಹೆಚ್. ದುಗ್ಗಪ್ಪ ಅವರು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರಿಗೆ ಮನವಿ ಮಾಡಿದ್ದಾರೆ.

error: Content is protected !!